ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ

ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ
ಲಿಂಕ್ : ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ

ಓದಿ


ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ):  ರೈತ ಬೆಳೆಯುವ ಬೆಳೆಯನ್ನು ಸೂಕ್ತ ಸಮಯದೊಳಗೆ ನಿಗದಿತ ಸ್ಥಳ ತಲುಪುವಂತಾಗಲು, ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸಲು ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಬಹಳಷ್ಟು ಸುಧಾರಿಸಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕರು, ವಿಷಯ ತಜ್ಞರಿಂದ ವ್ಯಕ್ತವಾಯಿತು.
     ಕರ್ನಾಟಕ ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಅಭಿವೃದ್ಧಿಗಾಗಿ ಜನರ ಅಭಿಪ್ರಾಯ ಸಂಗ್ರಹಣೆ ಕುರಿತು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಇಂತಹ ಅಭಿಪ್ರಾಯ ವ್ಯಕ್ತಗೊಂಡವು.
    “ಮಿಷನ್-2025” ಈ ಯೋಜನೆ ಕೊಪ್ಪಳ ಜಿಲ್ಲೆಗೆ ಬಹಳ ಮಹತ್ವದ್ದಾಗಿದ್ದು, ಇದಕ್ಕೆ ಮುಖ್ಯವಾಗಿ ಸಾರಿಗೆ ಸಂಪರ್ಕಕ್ಕೆ ರಸ್ತೆಯು ಅತ್ಯವಶ್ಯಕವಾಗಿ ಬೇಕು.  ಉತ್ತಮವಾದ ರಸ್ತೆಯಿಂದಾಗಿ ರೈತರು ಬೆಳಿಯುವ ಬೆಳೆಗಳನ್ನು (ಫಸಲನ್ನು) ಹಳ್ಳಿಯಿಂದ ಪಟ್ಟಣಕ್ಕೆ ಪಟ್ಟಣಗಳಿಂದ ಜಿಲ್ಲೆಗಳಿಗೆ, ಜಿಲ್ಲೆಗಳಿಂದ ರಾಜ್ಯಕ್ಕೆ, ರಾಜ್ಯಗಳಿಂದ ರಾಷ್ಟ್ರಮಟ್ಟಕ್ಕೆ.  ಅಲ್ಲದೇ ವಿದೇಶಗಳಿಗೂ ರಫ್ತು ಮಾಡಲು ಉತ್ತಮ ರಸ್ತೆಗಳು ಸಹಕಾರಿಯಾಗಲಿವೆ.   ನೈಸರ್ಗೀಕ ಸಂಪತ್ತು ಕೊಪ್ಪಳ ಜಿಲ್ಲೆಯಲ್ಲಿ ಅಧಿಕವಾಗಿದ್ದು, ರಸ್ತೆ ಸಂಪರ್ಕಕ್ಕೆ ಹೆಚ್ಚಿನ ಆಧ್ಯತೆಯನ್ನು ಕೊಡಬೇಕು.  ಜನ ಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕು.   ರಸ್ತೆಗಳ ಬಗ್ಗೆ ಅರಿವು ಮೂಡಿಸಬೇಕು.  ಧೂಳು ಮುಕ್ತ ಪ್ರದೇಶವಾಗಬೇಕಾದರೆ ರಸ್ತೆ ಪಕ್ಕದಲ್ಲಿ ಗಿಡ-ಮರಗಳನ್ನು ಹೆಚ್ಚು-ಹೆಚ್ಚಾಗಿ ನೆಡುವುದು ಬಹುಮುಖ್ಯ.  ರಸ್ತೆಗಳು ಕೇವಲ ವಾಹನಗಳಿಗಲ್ಲದೇ, ಪಾದಚಾರಿಗಳಿಗೂ ಅವಕಾಶ ಇದೆ.  ಅದಕ್ಕಾಗಿ ಫುಟ್‍ಪಾತ್ ನಿರ್ಮಾಣ, ಬೀದಿ ದೀಪಗಳ ಅಳವಡಿಕೆಯಾಗಬೇಕು.  ನಗರ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ನಿರ್ಮಾಣವಾಗಬೇಕಾದರೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಸೌಹಾರ್ಧ ಚರ್ಚೆಯಾಗಬೇಕು.  ಒಳ ಚರಂಡಿ ವ್ಯವಸ್ಥೆ, ವಿದ್ಯುತ್ ಇತ್ಯಾಧಿಗಳ ಬಗ್ಗೆ ಚರ್ಚೆಯಾಗಬೇಕು.  ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಿದ್ದು, ಸರ್ಕಾರದ ಅನುದಾನ ಪೋಲಾಗದಂತೆ ಕ್ರಮ ವಹಿಸಬೇಕು. ಉತ್ತಮ ಗುಣಮಟ್ಟದ ರಸ್ತೆಗಳಾಗಬೇಕಾದರೆ ಸಿ.ಸಿ ರೋಡ್‍ಗಳನ್ನೆ ಮಾಡಬೇಕು.  ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಬದಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಬೇಕು   ವಾಹನಗಳಿಗೆ ತಕ್ಕಂತೆ ಪ್ರತ್ಯೆಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು.  ನಗರದ ಹೊರವಲಯದಲ್ಲಿ ಅಟೋ ಟರ್ಮಿನಲ್, ಅಟೋ ನಗರ ನಿರ್ಮಿಸಿ ಭಾರಿ ವಾಹನಗಳ ದುರಸ್ಥಿ, ಇತರೆ ಸೇವೆಗಳಿಗಾಗಿ ಅನುಕೂಲ ಮಾಡಿಕೊಡಬೇಕು ಎಂಬ ಅಭಿಪ್ರಾಯ ವ್ಯಕ್ತವಾದವು.
     ಭಾನಾಪುರ ಮಾರ್ಗದ ಗದಗ-ವಾಡಿ ರೈಲು ಮಾರ್ಗ ಕಾಮಗಾರಿ ಶೀಘ್ರ ಪ್ರಾರಂಭವಾಗಿ, ತ್ವರಿತವಾಗಿ ಪೂರ್ಣಗೊಳ್ಳಬೇಕು.  ಗಿಣಿಗೇರ - ಹರಿಹರ ಹೊಸ ರೈಲು ಮಾರ್ಗವನ್ನು ನಿರ್ಮಾಣ ಮಾಡಬೇಕು  ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ, ಕಾನೂನು ವ್ಯವಸ್ಥೆ ಕಲ್ಪಿಸುವುದು.  ಕೊಪ್ಪಳ ಜಿಲ್ಲಾ ಕೇಂದ್ರದಿಂದ ರಾಜ್ಯದ ರಾಜಧಾನಿಗೆ ವಿಮಾನದ ಮೂಲಕ ಹೋಗಲು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದ್ದು, ಇದನ್ನು ಜಾರಿಗೊಳಿಸಬಹುದಾಗಿದೆ.   ಜಿಲ್ಲೆಯಲ್ಲಿ ಪೂರ್ವ-ಪಶ್ಚಿಮ ಹಾಗೂ ಉತ್ತರ-ದಕ್ಷಿಣದಲ್ಲಿ ಪ್ರವಾಸ ಕಾರಿಡಾರ್ ನಿರ್ಮಾಣ ಮಾಡಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು.  ಜಿಲ್ಲೆಯ ಪ್ರತಿ ಹೋಬಳಿಗೆ ಒಂದರಂತೆ ಶೀತಲೀಕರಣ ಘಟಕಗಳನ್ನು ನಿರ್ಮಾಣ ಮಾಡಬೇಕು.  ಹೂ, ಹಣ್ಣು, ತರಕಾರಿ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಸರಬರಾಜು ಮಾಡಲು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ವಾಗಬೇಕು.  ರೈಲ್ವೆ ಮೂಲಕವೂ ಸಹ ರೈತರ ಬೆಳೆಗಳು ಸಾಗಾಣಿಕೆಯಾಗುತ್ತಿದ್ದು, ರೈಲ್ವೆಯಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆ ಮಾಡಬೇಕು.  ಎಲ್ಲಾ ರೈತರು ಸುಗ್ಗಿ ಸಮಯದಲ್ಲಿ ರಸ್ತೆಗಳನ್ನು ಕಣಗಳನ್ನಾಗಿ ಬಳಕೆ ಮಾಡುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ.  ಇದಕ್ಕಾಗಿ ಎಲ್ಲಾ ರೈತರು ತಮ್ಮ ಕಣಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡವುದು.  ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕು.  ಕುಡಿಯುವ ನೀರನ್ನು ಶಾಶ್ವತವಾಗಿ ಬಳಕೆ ಮಾಡಲು ಮಳೆ ನೀರನ್ನು ಸಂಗ್ರಹಿಸಿ, ಮಳೆ ನೀರಿನ ಕೊಯ್ಲುಗಳ ಮುಖಾಂತರ ಬೋರ್‍ವೆಲ್‍ಗಳಿಗೆ ಇಂಗಿಸುವಂತೆ ಮಾಡಬೇಕು.  ಪ್ರತಿ ಗ್ರಾಮಕ್ಕೆ ಒಂದರಂತೆ ಕೆರೆಗಳನ್ನು ಪುನರ್ಜಿವಗೊಳಿಸುವುದು ಅತ್ಯವಶ್ಯಕ.  ಪ್ರತಿ ಪಟ್ಟಣ, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಬೋರ್‍ವೆಲ್‍ಗಳ ನಿರ್ಮಾಣವನ್ನು ಕಾನೂನಾತ್ಮಕವಾಗಿ ಮಿತಿಗೊಳಿಸಬೇಕು.  ನೀರಿನ ಮಹತ್ವ ಹಾಗೂ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆಗಳನ್ನು ಮೂಡಿಸಬೇಕು.  ಪ್ರತಿಯೊಂದು ಮನೆ ನಿರ್ಮಾಣ ಮಾಡುವಾಗ ಮಳೆ ನೀರು ಇಂಗು ಗುಂಡಿಯನ್ನು ಕಡ್ಡಾಯವಾಗಿ ನಿರ್ಮಾಣ ಮಾಡಬೇಕು.   ಬಸ್ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ಕಲ್ಪಿಸುವುದು.  ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನಗಳ ಬಳಕೆ.  ಸ್ವಚ್ಛವಾದ ವಾತಾವರಣ ನಿರ್ಮಾಣಕ್ಕೆ ಆಧ್ಯತೆ ನೀಡಬೇಕು.   ಶೌಚಾಲಯಗಳ ನಿರ್ಮಾಣ, ಒಳ ಚರಂಡಿ ವ್ಯವಸ್ಥೆ, ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಸಲಹೆಗಳು ಮೂಡಿಬಂದವು. 
     ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್ ಸೇರಿದಂತೆ ಹಲವು ಅಧಿಕಾರಿಗಳು, ವಿಷಯ ತಜ್ಞರು, ಸಾರ್ವಜನಿಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ

ಎಲ್ಲಾ ಲೇಖನಗಳು ಆಗಿದೆ ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಲಿಂಕ್ ವಿಳಾಸ https://dekalungi.blogspot.com/2017/10/2025_13.html

Subscribe to receive free email updates:

0 Response to "ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ