ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ

ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ
ಲಿಂಕ್ : ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ

ಓದಿ


ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ


ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು, ವಿಷನ್ 2025 ಡಾಕ್ಯುಮೆಂಟ್ ತಯಾರಿಕೆಗಾಗಿ ವಿಷಯ ತಜ್ಞರು, ಸಾರ್ವಜನಿಕರು ನೀಡುವ ಸಲಹೆ, ಸೂಚನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ವಿಷನ್ 2025 ಡಾಕ್ಯುಮೆಂಟ್ ಸಿದ್ಧಪಡಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಈಗಾಗಲೆ ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್‍ಗಾಗಿ ಹಲವು ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು, ಒಟ್ಟು 05 ವಲಯಗಳನ್ನಾಗಿ ರಚನೆ ಮಾಡಲಾಗಿದ್ದು, ಪ್ರತಿಯೊಂದು ವಲಯ ಹಾಗೂ ಕ್ಷೇತ್ರಗಳಿಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.  ನಗರ, ಮೂಲಭೂತ ಸೌಕರ್ಯ ಹಾಗೂ ಸ್ಮಾರ್ಟ್ ಸಿಟಿ ರಚನೆ ಸೇರಿದಂತೆ ಒಂದು ವಲಯ.  ಹೀಗೆ, ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ.  ಕೃಷಿ ಹಾಗೂ ಕೃಷಿಯಾಧಾರಿತ ಚಟುವಟಿಕೆಗಳು ಮತ್ತು ಗ್ರಾಮೀಣಾಭಿವೃದ್ಧಿ.  ಕೈಗಾರಿಕಾ ಅಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ.  ಆಡಳಿತ, ಕಾನೂನು ಮತ್ತು ನ್ಯಾಯ ಹೀಗೆ ಒಟ್ಟು 05 ವಲಯಗಳನ್ನಾಗಿ ರಚನೆ ಮಾಡಲಾಗಿದ್ದು, ಪ್ರತಿಯೊಂದು ವಲಯಗಳಿಗೂ ವಿಷಯ ತಜ್ಞರು, ಮಾಧ್ಯಮದವರು, ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಪಡೆಯಲಾಗುವುದು.  ಅಲ್ಲದೆ ಇವರು ನೀಡುವ ಸಲಹೆಗಳಿಗೇ ಅಧಿಕಾರಿಗಳು ಮನ್ನಣೆ ನೀಡಬೇಕು.  ಪ್ರತಿ ವಲಯದ ಚರ್ಚೆ ಸಂದರ್ಭದಲ್ಲಿ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ನಗರಸಭೆ, ಪುರಸಭೆ ಅಲ್ಲದೆ ಎಪಿಎಂಸಿಗಳ ಅಧ್ಯಕ್ಷರುಗಳನ್ನೂ ಆಹ್ವಾನಿಸಬೇಕು.  ವಿಷಯಾಧಾರಿತ ಚರ್ಚೆಗಾಗಿ ಶಿಕ್ಷಣ ತಜ್ಞರು, ನೀರಾವರಿ ತಜ್ಞರು, ಕಾಲೇಜು ವಿದ್ಯಾರ್ಥಿಗಳು, ಹೋಟೆಲ್ ಮಾಲೀಕರ ಸಂಘಗಳು, ವರ್ತಕರ ಸಂಘ, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ರೈಲ್ವೆ ಹೋರಾಟ ಸಮಿತಿಗಳು, ಮಹಿಳಾ ಸಂಘಟನೆ, ವಿವಿಧ ಸಂಘ ಸಂಸ್ಥೆಗಳು, ವಕೀಲರು, ರೋಟರಿ-ಲಯನ್ಸ್ ಕ್ಲಬ್, ಆರೋಗ್ಯ ಕ್ಷೇತ್ರದ ತಜ್ಞರು, ಸಿಂಡಿಕೇಟ್ ಸದಸ್ಯರು, ಮಾಧ್ಯಮದವರು ಮುಂತಾದವರು ಪಾಲ್ಗೊಳ್ಳುವಂತಾಗಲು ಆಯಾ ನೋಡಲ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
     ವಿಷನ್-2025 ಡಾಕ್ಯುಮೆಂಟ್ ಸಿದ್ಧಪಡಿಸುವ ಸಂಬಂಧ ಅ. 28 ರಂದು ಕೊಪ್ಪಳದಲ್ಲಿ ಕಾರ್ಯಗಾರ ಜರುಗಲಿದ್ದು, ವಿಷನ್ 2025 ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರೇಣುಕಾ ಚಿದಂಬರಂ ಅವರು ಅಂದು ಕೊಪ್ಪಳಕ್ಕೆ ಆಗಮಿಸುವರು.  ಅಂದು ಐದೂ ವಲಯಗಳ ವಿಷಯಾಧಾರಿತ ಚರ್ಚೆಯನ್ನು ನಡೆಸಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗುವುದು.  ಒಟ್ಟಾರೆ ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟುಕೊಂಡು, ವಿಷನ್-2025 ಡಾಕ್ಯುಮೆಂಟ್ ತಯಾರಿಕೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ತೊಡಗಿಸಿಕೊಂಡು, ಅಗತ್ಯ ಸಲಹೆ-ಸೂಚನೆಗಳನ್ನು ದಾಖಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ

ಎಲ್ಲಾ ಲೇಖನಗಳು ಆಗಿದೆ ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2017/10/2025_25.html

Subscribe to receive free email updates:

0 Response to "ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ