NEWS DATE: 13-09-2017

NEWS DATE: 13-09-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS DATE: 13-09-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS DATE: 13-09-2017
ಲಿಂಕ್ : NEWS DATE: 13-09-2017

ಓದಿ


NEWS DATE: 13-09-2017

“ಸಿರಿ” ಯಶಸ್ವಿ ಅನುಷ್ಠಾನಕ್ಕೆ ರೇಡಿಯೋ ಕಾರ್ಯಕ್ರಮ
*************************************************
ಕಲಬುರಗಿ,ಸೆ.13.(ಕ.ವಾ.)-ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಸಿರಿ ಕಾರ್ಯಕ್ರಮದ ಮೂಲಕ ಸೆಪ್ಟೆಂಬರ್ ಮಾಹೆಯವರೆಗೆ 50,000 ಶೌಚಾಲಯಗಳ ನಿರ್ಮಾಣದ ಗುರಿಯನ್ನು ಹೊಂದಲಾಗಿದ್ದು,. ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಪ್ರತಿ ಶುಕ್ರವಾರ ಬೆಳಗಿನ 9.30 ರಿಂದ 10.30 ಗಂಟೆಯವರೆಗೆ ಕಲಬುರಗಿ ಆಕಾಶವಾಣಿಯಿಂದ ರೇಡಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಸಾರ್ವಜನಿಕರು ರೇಡಿಯೋ ಕಾರ್ಯಕ್ರಮದಲ್ಲಿ ಕಲಬುರಗಿ ಆಕಾಶವಾಣಿ ದೂರವಾಣಿ ಸಂಖ್ಯೆ 08472-241853, 241854, 241855 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿರುವ ಎಲ್ಲ ವಿದ್ಯಾರ್ಥಿನಿಯರ ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಮತ್ತು ವಿದ್ಯಾರ್ಥಿನಿಯರಿಗೆ ಸಾಮಾಜಿಕ ಪ್ರೇರಣೆ ಹಾಗೂ ಆರೋಗ್ಯ ಭದ್ರತೆ ಒದಗಿಸುವ ದೃಷ್ಟಿಯಿಂದ “ಸಿರಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ: ಅಭ್ಯರ್ಥಿಗಳ ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟ
ಕಲಬುರಗಿ,ಸೆ.13.(ಕ.ವಾ.)-ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿ ಸಹಾಯಧನ ಯೋಜನೆಯಡಿ 2016-17ನೇ ಸಾಲಿನಲ್ಲಿ ಹಿಂದುಳಿದ/ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಯೋಜನೆಯಡಿ ಸಹಾಯಧನ ಒದಗಿಸಲು ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿಯನ್ನು ಸೆಪ್ಟೆಂಬರ್ 14ರಂದು ಕಲಬುರಗಿಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸೂಚನಾ ಫÀಲಕದಲ್ಲಿ ಪ್ರಕಟಿಸಲಾಗುವುದೆಂದು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಅಭ್ಯರ್ಥಿಗಳ ಸ್ವೀಕೃತವಾದ ಅರ್ಜಿ ಮತ್ತು ದಾಖಲೆಗಳನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪರಿಶೀಲಿಸಿ, ಗರಿಷ್ಠ ವಯೋಮಿತಿಗೆ ಅನುಗುಣವಾಗಿ ಇಳಿಕೆ ಕ್ರಮದಲ್ಲಿ ತಾಲೂಕುವಾರು ಗುರಿ ಹಂಚಿಕೆಗೆ ಅನುಗುಣವಾಗಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳು ಅನುಮೋದಿಸಿದ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಇದನ್ನು ಗಮನಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-277848ನ್ನು ಸಂಪರ್ಕಿಸಲು ಕೋರಲಾಗಿದೆ.
ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ
****************************************
ಕಲಬುರಗಿ,ಸೆ.13.(ಕ.ವಾ.)-ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ತಾಂಡಾ ಜನರ ಭೌತಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕøತಿಕ, ಭಾಷೆ ಇತ್ಯಾದಿಗಳ ಅಭಿವೃದ್ಧಿಪಡಿಸುವ ಉದ್ದೇಶದಿಂದ 2017-18ನೇ ಸಾಲಿಗೆ ಲಂಬಾಣಿ ಜನಾಂಗದ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಪಡೆಯಲು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಕೋರ್ಸುಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದ್ದು, ಕಲಬುರಗಿ ಜಿಲ್ಲೆಯ ಅರ್ಹ ಲಂಬಾಣಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಕಲಬುರಗಿ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 03 ತಿಂಗಳ ಅವಧಿಗೆ 4500ರೂ.ಗಳ ಶಿಷ್ಯವೇತನದೊಂದಿಗೆ ಗಣಕಯಂತ್ರ ಮತ್ತು ಡಿ.ಟಿ.ಪಿ. ತರಬೇತಿ, ಬಿ.ಕಾಂ. ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 03 ತಿಂಗಳ ಅವಧಿಗೆ 4500ರೂ.ಗಳ ಶಿಷ್ಯವೇತನದೊಂದಿಗೆ ಗಣಕಯಂತ್ರ ಮತ್ತು ಟ್ಯಾಲಿ ತರಬೇತಿ, ಎಸ್.ಎಸ್.ಎಲ್.ಸಿ. ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 1500ರೂ. ಶಿಷ್ಯ ವೇತನದೊಂದಿಗೆ 01 ತಿಂಗಳ ಅವಧಿಗೆ ಲಘು ವಾಹನ ತರಬೇತಿ ಹಾಗೂ ಎಸ್.ಎಸ್.ಎಲ್.ಸಿ. ಪಾಸಾದವರಿಗೆ ಜಿಲ್ಲಾಮಟ್ಟದಲ್ಲಿ 01 ತಿಂಗಳ ಅವಧಿಗೆ 1500ರೂ. ಶಿಷ್ಯವೇತನದೊಂದಿಗೆ ಸಭೆ-ಸಮಾರಂಭದಲ್ಲಿ ಪುಷ್ಪ ಅಲಂಕಾರ ಕುರಿತು ತರಬೇತಿ ನೀಡಲಾಗುತ್ತದೆ.
ಎಸ್.ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ 01 ತಿಂಗಳ ಅವಧಿಗೆ ಹೌಸ್ ಕೀಪಿಂಗ್ ತರಬೇತಿ (ವಸತಿಯುತ), ಎಸ್.ಎಸ್.ಎಲ್.ಸಿ./ಪಿ.ಯು.ಸಿ. ಪಾಸಾದ ವಿದ್ಯಾರ್ಥಿಗಳಿಗೆ 03 ತಿಂಗಳ ಅವಧಿಗೆ ರಾಜ್ಯಮಟ್ಟದಲ್ಲಿ ಮಿಲಿಟರಿಗೆ ಸೇರಲು ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ತರಬೇತಿ (ವಸತಿಯುತ), ಪಿ.ಯು.ಸಿ./ ಪದವಿ ಪಾಸಾದವರಿಗೆ ರಾಜ್ಯಮಟ್ಟದಲ್ಲಿ 02 ತಿಂಗಳ ಅವಧಿಗೆ ಸ್ಪರ್ಧಾತ್ಮಕ ವೃತ್ತಿ ವಿಕಸನ ಉನ್ನತೀಕರಣ (ವಸತಿಯುತ) ತರಬೇತಿ ಹಾಗೂ ಎಸ್.ಎಸ್.ಎಲ್.ಸಿ. ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 01 ತಿಂಗಳ ಅವಧಿಗೆ 1500ರೂ. ಶಿಷ್ಯವೇತನದೊಂದಿಗೆ ಟ್ರ್ಯಾಕ್ಟರ್/ಮೋಟಾರ ಸೈಕಲ್ ದುರಸ್ತಿ ತರಬೇತಿ ನೀಡಲಾಗುತ್ತದೆ.
ಎಸ್.ಎಸ್.ಎಲ್.ಸಿ. ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 3000ರೂ. ಶಿಷ್ಯವೇತನದೊಂದಿಗೆ 02 ತಿಂಗಳ ಅವಧಿಗೆ ಗೃಹಪಯೋಗಿ ಮತ್ತು ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿ, ಎಸ್.ಎಸ್.ಎಲ್.ಸಿ. ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 1500ರೂ. ಶಿಷ್ಯವೇತನದೊಂದಿಗೆ 01 ತಿಂಗಳ ಅವಧಿಗೆ ಎಲೆಕ್ಟ್ರಿಶಿಯನ್ ತರಬೇತಿ, ಹೋಬಳಿ ಮಟ್ಟದಲ್ಲಿ 1500ರೂ. ಶಿಷ್ಯವೇತನದೊಂದಿಗೆ 3 ತಿಂಗಳ ಅವಧಿಗೆ ಲಂಬಾಣಿ ಕಸೂತಿ ಕಲೆ ತರಬೇತಿ ಹಾಗೂ ಎಂಟನೇ ತರಗತಿ ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 1500ರೂ. ಶಿಷ್ಯವೇತನದೊಂದಿಗೆ 01 ತಿಂಗಳ ಅವಧಿಗೆ ಮೋಟಾರ್ ರಿವೈಡಿಂಗ್ ತರಬೇತಿ ನೀಡಲಾಗುತ್ತದೆ.
ಎಸ್.ಎಸ್.ಎಲ್.ಸಿ. ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 1500ರೂ. ಶಿಷ್ಯವೇತನದೊಂದಿಗೆ 01 ತಿಂಗಳ ಅವಧಿಗೆ ಎಲೆಕ್ಟ್ರಾನಿಕ್ಸ್ (ಮೊಬೈಲ್, ಲ್ಯಾಪ್‍ಟಾಪ್ ದುರಸ್ತಿ) ತರಬೇತಿ, ಪದವಿ ಪಾಸಾದವರಿಗೆ ರಾಜ್ಯಮಟ್ಟದಲ್ಲಿ 4500ರೂ. ಶಿಷ್ಯವೇತನದೊಂದಿಗೆ 3 ತಿಂಗಳ ಅವಧಿಗೆ ಕಾರ್ಯಕ್ರಮ ಸಂಯೋಜನಾ ನಿರ್ವಹಣಾ ತರಬೇತಿ (ವಸತಿಯುತ) ಹಾಗೂ ಎಂಟನೇ ತರಗತಿ ಪಾಸಾದವರಿಗೆ ತಾಲೂಕು ಮಟ್ಟದಲ್ಲಿ 1500ರೂ. ಶಿಷ್ಯವೇತನದೊಂದಿಗೆ 01 ತಿಂಗಳ ಅವಧಿಗೆ ಬ್ಯೂಟಿ ಪಾರ್ಲರ್ ತರಬೇತಿ ನೀಡಲಾಗುತ್ತದೆ.
ಲಂಬಾಣಿ ಯುವಕ/ ಯುವತಿಯರು ಮೇಲ್ಕಂಡ ತರಬೇತಿ ಪಡೆಯಲು ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಸೆಪ್ಟೆಂಬರ್ 22ರೊಳಗಾಗಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ನಂ. 6, ಜಿಪಿಆರ್ ಟವರ್, 1ನೇ ಮಹಡಿ, ಪಾರ್ಕ್ ರಸ್ತೆ, ಟಸ್ಕರ್ ಟೌನ್, ಶಿವಾಜಿನಗರ ಬೆಂಗಳೂರು ವಿಳಾಸಕ್ಕೆ ಅಥವಾ ಇಮೇಲ್ ಞಣಜಛಿಟiಣ@gmಚಿiಟ.ಛಿom ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 080-22865561, 22865562, 22865563ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹೊಯ್ಸಳ ಮತ್ತು ಕೆಳದಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
********************************************
ಕಲಬುರಗಿ,ಸೆ.13.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ 2017-18ನೇ ಸಾಲಿನ ಹೊಯ್ಸಳ ಪ್ರಶಸ್ತಿ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಲು ಅರ್ಹ ಬಾಲಕ-ಬಾಲಕೀಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲಬುರಗಿ ಜಿಲ್ಲಾ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಿಳಿಸಿದ್ದಾರೆ.
ಮಕ್ಕಳ ದಿನಾಚರಣೆಯ ದಿನದಂದು ಈ ಪ್ರಶಸ್ತಿಗಳನ್ನು ಪ್ರದಾನ ಮÁಡಲಾಗುವುದು. ಪ್ರಕರಣವು 2016ರ ಆಗಸ್ಟ್ ತಿಂಗಳಿನಿಂದ 2017ರ ಜುಲೈ ಮಾಹೆಯೊಳಗೆ ನಡೆದಿರಬೇಕು. 1999ರ ಆಗಸ್ಟ್ 1ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರು. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ 10,000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 18 ಇರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಎದುರುಗಡೆ, ಕಲಬುರಗಿ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-278659ನ್ನು ಸಂಪರ್ಕಿಸಲು ಕೋರಿದÉ.
ಆರ್.ಎಸ್.ಐ.-ಎಸ್.ಐ. ನೇಮಕಾತಿಯ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ
ಕಲಬುರಗಿ,ಸೆ.13.(ಕ.ವಾ.)-ಆರ್.ಎಸ್.ಐ.(ಸಿ.ಎ.ಆರ್./ಡಿ.ಎ.ಆರ್.) ಪುರುಷ, ಎಸ್.ಐ. (ಕೆಎಸ್‍ಐಎಸ್‍ಎಫ್) ಪುರುಷ ಮತ್ತು ಮಹಿಳೆ ಮತ್ತು ವಿಶೇಷ ಆರ್.ಎಸ್.ಐ. (ಕೆಎಸ್‍ಆರ್‍ಪಿ) ಪುರುಷ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.)ಯನ್ನು ಸೆಪ್ಟೆಂಬರ್ 18, 20, 21 ಹಾಗೂ 22 ರಂದು ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಡೆಯಲಿದೆ ಎಂದು ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಆಲೋಕ ಕುಮಾರ್ ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಈಗಾಗಲೇ ಹಾಜರಾತಿ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಬೆಂಗಳೂರಿನ ಹೆಚ್ಚುವರಿ ಪೊಲಿಸ್ ಮಹಾನಿರ್ದೇಶಕರು ನೇಮಕಾತಿ ಹಾಗೂ ತರಬೇತಿ ಕಚೇರಿಯಿಂದ ಸಂದೇಶವನ್ನು ರವಾನಿಸಲಾಗಿದೆ. ಅಭ್ಯರ್ಥಿಗಳು ತಮಗೆ ಹಾಜರಾತಿ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಜೇವರ್ಗಿ-ಆಳಂದದಲ್ಲಿ ಗಣೇಶ ವಿಸರ್ಜನೆ: ಮದ್ಯ ಮಾರಾಟ ನಿಷೇಧ
**********************************************************
ಕಲಬುರಗಿ,ಸೆ.13.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ ಹಾಗೂ ಆಳಂದ ತಾಲೂಕಿನಲ್ಲಿ ಸೆಪ್ಟೆಂಬರ್ 14ರಂದು (21ದಿನಗಳ) ಗಣೇಶ ವಿಗ್ರಹಗಳ ವಿಸರ್ಜನೆ ನಡೆಯಲಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೆಪ್ಟೆಂಬರ್ 13ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 15ರ ಬೆಳಗಿನ 6 ಗಂಟೆಯವರೆಗೆ ಜೇವರ್ಗಿ ಮತ್ತು ಆಳಂದ ತಾಲೂಕಿನಾದ್ಯಂತ ಎಲ್ಲ ತರಹದ ಮದ್ಯ ಮರಾಟವನ್ನು ನಿಷೇಧಿಸಿ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಈ ಆದೇಶ ಹೊರಡಿಸಿದ್ದು, ಸರಾಯಿ, ಸೇಂದಿ, ಸ್ವದೇಶಿ ಹಾಗೂ ವಿದೇಶಿ ಮದ್ಯ ಹಾಗೂ ಎಲ್ಲ ತರಹದ ಮಾದಕ ವಸ್ತುಗಳ ಮಾರಾಟವನ್ನು ಸಹ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 15ರಂದು ಪಿಕಾರ್ಡ್ ಬ್ಯಾಂಕಿನ ವಾರ್ಷಿಕ ಮಹಾಸಭೆ
********************************************************
ಕಲಬುರಗಿ,ಸೆ.13.(ಕ.ವಾ.)-ಕಲಬುರಗಿಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ 2016-17ನೇ ಸಾಲಿನ 57ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 15ರಂದು ಶುಕ್ರವಾರ ಬೆಳಗಿನ 11.30 ಗಂಟೆಗೆ ಬ್ಯಾಂಕಿನ ಸಭಾಂಗಣದಲ್ಲಿ ಜರುಗಲಿದೆ. ಬ್ಯಾಂಕಿನ ಸದಸ್ಯರು ವಾರ್ಷಿಕ ಮಹಾಸಭೆಗೆ ಆಗಮಿಸಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಪಿಕಾರ್ಡ್ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ರಣವೀರ ಸಿಂಗ್ ಠಾಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 15ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಸೆ.13.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1ದಿಂದ 110/11 ಕೆ.ವಿ. ಫರತಾಬಾದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ 11 ಕೆ.ವಿ. ಫೀಡರಿನ ಮಾರ್ಗಗಳಲ್ಲಿ ಸುಧಾರಣೆ ಕೆಲಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
110/11 ಕೆ.ವಿ. ಫರತಾಬಾದ ವಿದ್ಯುತ್ ವಿತರಣಾ ವಿತರಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂದು ಬೆಳಗಿನ 8 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ವ್ಯತ್ಯಯವಾಗುವ ಫೀಡರ್ ಹಾಗೂ ಅದರ ವ್ಯಾಪ್ತಿಯ ಗ್ರಾಮಗಳ ವಿವರ ಇಂತಿದೆ:- ಎಫ್-10 ಸಿರನೂರ, ಪಾಣೆಗಾಂವ, ಸಿತನೂರ, ಖಣದಾಳ, ಇಟಗಾ(ಕೆ), ಶಿವಾಜಿ ತಾಂಡಾ, ಬಸವನ ತಾಂಡಾ. ಎಫ್-1: ಸರಡಗಿ ವಾಟರ ಸಪ್ಲೈ, ಎಫ್-2 ಫೀರೋಜಾಬಾದ ಐ.ಪಿ., ಎಫ್-4 ಫರತಾಬಾದ ಎನ್‍ಜೆವಾಯ್., ಎಫ್-9 ಹೊನ್ನಕಿರಣಗಿ, ತಿಳಗುಳ, ಎಫ್-12 ಹಾಗರಗುಂಡಗಿ, ಹೇರೂರ ಮತ್ತು ಜೋಗುರ.


ಹೀಗಾಗಿ ಲೇಖನಗಳು NEWS DATE: 13-09-2017

ಎಲ್ಲಾ ಲೇಖನಗಳು ಆಗಿದೆ NEWS DATE: 13-09-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS DATE: 13-09-2017 ಲಿಂಕ್ ವಿಳಾಸ https://dekalungi.blogspot.com/2017/09/news-date-13-09-2017.html

Subscribe to receive free email updates:

0 Response to "NEWS DATE: 13-09-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ