ಶೀರ್ಷಿಕೆ : news and photo date: 15-09-2017
ಲಿಂಕ್ : news and photo date: 15-09-2017
news and photo date: 15-09-2017
ನೀರು ನುಗ್ಗಿದ ಮನೆಗಳಿಗೆ ಪಾಲಿಕೆಯಿಂದ ಊಟ ಸರಬರಾಜು ಮಾಡಲು ಸೂಚನೆ
*********************************************************************
ಕಲಬುರಗಿ,ಸೆ.14.(ಕ.ವಾ.)-ಕಲಬುರಗಿ ನಗರದಾದ್ಯಂತ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಕೆಲವು ಮನೆಗಳಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹ ಮನೆಗಳಿಗೆ ಮಹಾನಗರ ಪಾಲಿಕೆಯಿಂದ ಊಟದ ಪ್ಯಾಕೇಟ್‍ಗಳನ್ನು ಒದಗಿಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ಅವರು ಗುರುವಾರ ನಗರ ಪ್ರದಕ್ಷಿಣಿ ಕೈಗೊಂಡು ಮಳೆ ನೀರು ನಿಂತು ಹಾನಿಗೊಳಗಾದ ತಗ್ಗು ಪ್ರದೇಶಗಳನ್ನು ಪರಿಶೀಲಿಸಿದರು. ಕಲಬುರಗಿ ನಗರದಲ್ಲಿ ಬುಧವಾರ ರಾತ್ರಿ ಕೇವಲ 3 ಗಂಟೆಗಳಲ್ಲಿ 111 ಮಿ.ಮೀ. ಮಳೆಯಾಗಿರುವ ಕುರಿತು ನಗರದಲ್ಲಿರುವ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದರು.
ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ನಗರದ ತಗ್ಗು ಪ್ರದೇಶಗಳಾದ ದರ್ಗಾ, ಜಲಾಲವಾಡಿ, ಸಿ.ಐ.ಬಿ. ಕಾಲೋನಿ, ಶಾಂತಿ ನಗರ, ಜೆ.ಆರ್. ನಗರಗಳಲ್ಲಿ ಮನೆಗೆ ನೀರು ನುಗ್ಗಿದೆ. ಬಕ್ಸೆ ಹವೆಲಿ, ನೂರ ಬಾಗ್ ಕಾರ್ನರ್ ಹಾಗೂ ಜಲಾಲವಾಡಿಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿರುವ ವರದಿಗಳಿವೆ. ಈ ಎಲ್ಲ ಪ್ರದೇಶಗಳಲ್ಲಿ ನಿಖರವಾದ ಸಮೀಕ್ಷೆ ಕೈಗೊಂಡು ಮಾಹಿತಿ ನೀಡಲು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಾನಿಗೊಳಗಾಗಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಮಹಾನಗರ ಪಾಲಿಕೆಯಿಂದ ನಗರದಾದ್ಯಂತಹ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಸ್ಟಾರ್ಮ ವಾಟರ್ ಡ್ರೇನ್ ಹಾಗೂ ಒಳಚರಂಡಿಗಳನ್ನು ನಿರ್ಮಿಸಲಾಗಿದ್ದು, ಯಾವುದೇ ಪ್ರದೇಶದಲ್ಲಿ ಚರಂಡಿ ಬ್ಲಾಕ್ ಆಗಿಲ್ಲ. ಆದರೆ ಹೆಚ್ಚಿನ ನೀರಿನಿಂದಾಗಿ ಓವರ್ ಫ್ಲೋ ಆಗುತ್ತಿವೆ. ಕೆಲವೊಂದು ಪ್ರದೇಶಗಳಲ್ಲಿ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಿಸಿದ್ದು, ಅವುಗಳನ್ನು ಮಹಾನಗರಪಾಲಿಕೆಯಿಂದ ಸ್ವಚ್ಛಗೊಳಿಸಲಾಗುತ್ತಿದೆ ಎಂದರು. ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿ ಮನೆಗಳಲ್ಲಿ ನುಗ್ಗುತ್ತದೆ. ಇಂತಹ ಪ್ರದೇಶಗಳನ್ನು ಗುರುತಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕು. ಸಧ್ಯ ನೀರು ನಿಂತ ಮನೆಗಳಲ್ಲಿ ಮತ್ತು ಮಳಿಗೆಗಳಲ್ಲಿ ಸಕ್ಷನ್ ಯಂತ್ರದ ಮೂಲಕ ನೀರು ಖಾಲಿ ಮಾಡಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಾದ್ಯಂತ ಸಹಿತ ಉತ್ತಮ ಮಳೆಯಾಗಿದ್ದು, ಆಳಂದ, ಜೇವರ್ಗಿ, ಸೇಡಂ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಈ ಪ್ರದೇಶದ ಕೃಷಿ ಜಮೀನಿನಲ್ಲಿ ನೀರು ನಿಂತಿರುವ ಕುರಿತ ವರದಿಗಳಿವೆ. ರೈತರು ತಮ್ಮ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗುವ ಸಂಭವಗಳಿದ್ದರೆ ಕೂಡಲೇ 24 ಗಂಟೆಗಳಲ್ಲಿ ಕೃಷಿ ಇಲಾಖೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಸಂಬಂಧಿಸಿದ ಬ್ಯಾಂಕಿನ ಗಮನಕ್ಕೆ ತಂದರೆ ವಿಮಾ ಕಂಪನಿಯವರು ಬೆಳೆ ಹಾನಿ ಕುರಿತು ಸಮೀಕ್ಷೆ ಕೈಗೊಳ್ಳುವರು. ರೈತರು ತಮ್ಮ ಹೊಲಗಳಲ್ಲಿ ನೀರು ನಿಲ್ಲದಂತೆ ಮುಂಜಾಗೃತೆ ವಹಿಸಲು ತಿಳಿಸಿದರು.
ಜಿಲ್ಲಾಧಿಕಾರಿಗಳು ಜಲಾಲವಾಡಿ, ಬಕ್ಸೆ ಹವೆಲಿ, ಖಾದರಿ ಚೌಕ್, ಜೆ.ಆರ್. ನಗರ, ಮಾಣಿಕೇಶ್ವರಿ ಕಾಲೋನಿ, ಶಾಂತಿ ನಗರ, ಕುಸನೂರ ವಿಭೂತಿನಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಆಯುಕ್ತ ಪಿ. ಸುನೀಲಕುಮಾರ, ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಪಿ. ಜಾಧವ, ಪರಿಸರ ಅಧಿಕಾರಿಗಳು, ಉಪಸ್ಥಿತರಿದ್ದರು.
ದಸರಾ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
******************************************
ಕಲಬುರಗಿ,ಸೆ.14.(ಕ.ವಾ.)-ನಗರದ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುವ 2017-18ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಚಿಂಚೋಳಿ ಶಾಸಕ ಡಾ|| ಉಮೇಶ ಜಾಧವ ಅವರು ಮಾತನಾಡಿ ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ, ಕ್ರೀಡಾ ಮನೋಭಾವನೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಸುವಂತಾಗಲಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕಳೆದ ಬಾರಿ ಕ್ರೀಡಾಕೂಟದ ಚಿನ್ನ ಪದಕ ವಿಜೇತ ಪರಶುರಾಮ ಅವರು ಕ್ರೀಡಾಳುಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ, ಮುನೀರ್, ಬಂಡೆಪ್ಪ ಭಾಗವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ಬಡಿಗೇರ್ ಸ್ವಾಗತಿಸಿದರೆ ನಾಗರಾಜ ಬಿ.ಮಾಳಗೆ ವಂದಿಸಿದರು.
ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್, ರಿಲೇ, ವಾಲಿಬಾಲ್, ಕಬ್ಬಡ್ಡಿ, ಖೋ-ಖೋ, ಬಾಲ್ ಬ್ಯಾಡ್ಮಿಂಟನ್, ಫುಟ್ಬಾಲ್, ಹಾಕಿ, ಬಾಸ್ಕೆಟ್ ಬಾಲ್, ಟೇಬಲ್ ಟೆನಿಸ್, ಥ್ರೋಬಾಲ್, ಬ್ಯಾಡ್ಮಿಂಟನ್ ಸೇರಿದಂತೆ ಒಟ್ಟು 19 ಸ್ಪರ್ಧೆಗಳು ನಡೆಯಲಿದ್ದು, ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಫುಟಬಾಲ್, ಹಾಕಿ, ಸ್ವಿಮ್ಮಿಂಗ್ ಮತ್ತು ಬ್ಯಾಡಮಿಂಟನ್ ಸ್ಪರ್ಧೆಗಳು ಬಳ್ಳಾರಿಯಲ್ಲಿ ಹಾಗೂ ಉಳಿದ ಸ್ಪರ್ಧೆಗಳು ಕಲಬುರಗಿಯಲ್ಲಿ ನಡೆಯಲಿವೆ.
ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಣೆ
*********************************************
ಕಲಬುರಗಿ,ಸೆ.14.(ಕ.ವಾ.)-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ವಿಶ್ವಕರ್ಮ ಪೂಜಾ ಮಹೋತ್ಸವ ಸಮನ್ವಯ ಸಮಿತಿಯ ಸಹಯೋಗದಲ್ಲಿ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾದ ವಿಶ್ವಕರ್ಮ ಜಯಂತಿ ಆಚರಣೆಯ ಸಮಾರಂಭವನ್ನು ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಸೆಪ್ಟೆಂಬರ್ 17ರಂದು ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸಲಿದ್ದಾರೆ.
ಯಾದಗಿರಿ/ಕಲಬುರಗಿ ವಿಶ್ವಕರ್ಮ ಏಕದಂಡಿಗಿ ಮಠದ ಶ್ರೀಮದ್ ಆನೇಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶರಾದ ಪೂಜ್ಯ ಶ್ರೀ ಗುರುನಾಥೇಂದ್ರ ಸರಸ್ವತಿ ಮಹಾಸ್ವಾಮಿಗಳು ಸಾನಿಧ್ಯವಹಿಸುವ ಈ ಸಮಾರಂಭದಲ್ಲಿ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ. ಖಮರುಲ್ ಇಸ್ಲಾಂ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಆಲೋಕ ಕುಮಾರ, ಕಲಬುರಗಿ ವಿಶ್ವಕರ್ಮ ಪೂಜಾ ಮಹೋತ್ಸವ ಸಮನ್ವಯ ಸಮಿತಿ ಅಧ್ಯಕ್ಷ ಮೋಹನ್ ಎಸ್.ಪಂಡಿತ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲಬುರಗಿ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಶೋಕ ಪೋದ್ದಾರ್ ಹರಸೂರ ವಿಶೇಷ ಆಹ್ವಾನಿತರಾಗಿ ಉಪನ್ಯಾಸ ನೀಡುವರು.
ದಿನಾಚರಣೆಯ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಸಂತ್ರಾಸವಾಡಿ ಕಾಳಿಕಾ ಮಂದಿರದಿಂದ ಸರಾಫ ಬಜಾರ, ಕಪಡಾ ಬಜಾರ, ಚೌಕ್ ಪೊಲೀಸ್ ಸ್ಟೇಶನ್, ಸುಪರ ಮಾರ್ಕೇಟ್, ಜಗತ್ ವೃತ್ತದಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ವಿಶ್ವಕರ್ಮ ಭಾವಚಿತ್ರದ ಮತ್ತು ವಿವಿಧ ಕಲಾ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಜರುಗುವುದು.
ಸೆಪ್ಟೆಂಬರ್ 16ರಂದು ತೆಲ್ಲೂರ ಗ್ರಾಮದಲ್ಲಿ ಜನಪರ ಉತ್ಸವ
****************************************************
ಕಲಬುರಗಿ,ಸೆ.14.(ಕ.ವಾ.)-ಕಲಬುರಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಅಫಜಲಪುರ ತಾಲೂಕಿನ ತೆಲ್ಲೂರ ಗ್ರಾಮದಲ್ಲಿ ಏರ್ಪಡಿಸಲಾದ ಜನಪರ ಉತ್ಸವ-2017ನ್ನು ಸಮಾರಂಭವನ್ನು ಸೆಪ್ಟೆಂಬರ್ 16ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸುವರು. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರು ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ತೆಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾಂತಪ್ಪ ಹುಮ್ಮನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ ವ್ಹಿ.ಗುತ್ತೇದಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಫರಹತಾಬಾದ್ ಜಿಲ್ಲಾ ಪಂಚಾಯಿತಿ ಸದಸ್ಯ ದಿಲೀಪ ಆರ್. ಪಾಟೀಲ, ಅಫಜಲಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ರುಕ್ಮೀಣಿ ಬಾಬು ಜಮಾದಾರ, ಬಡದಾಳ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನವ್ವ ಆರ್. ಕಲ್ಲೂರ, ಫರಹತಾಬಾದ್ ಮುಖಂಡ ರಿತೀಶ ಎಂ. ಗುತ್ತೇದಾರ್, ಮಾಶಾಳ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ತೆಲ್ಲೂರ ತಾಲೂಕು ಪಂಚಾಯಿತಿ ಸದಸ್ಯೆ ಪಾರ್ವತಿ ಶಂಕರ ಕಣ್ಣೆ, ಅಫಜಲಪುರ ಜೆಸ್ಕಾಂ ನಿರ್ದೇಶಕ ಪಪ್ಪು ಪಟೇಲ್, ಬೆಂಗಳೂರಿನ ರಾಜ್ಯ ತೊಗರಿ ಮಂಡಳಿ ನಿರ್ದೇಶಕ ಸಾವಿರಪ್ಪ ಜೆ. ಅವರಳ್ಳಿ, ಅಫಜಲಪುರ ಮುಖಂಡ ವಿಶ್ವನಾಥ ರೇವೂರ್, ಅಫಜಲಪುರ ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಂಕರ ಮೇತ್ರೆ, ತೆಲ್ಲೂರಿನ ದೇವೆಗೌಡ ಪೊಲೀಸ್ ಪಾಟೀಲ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಬಿ. ಗುತ್ತೇದಾರ್, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಲ್ಲುಗೌಡ ಪಾಟೀಲ ಚಿಣಮಗೇರಾ ಹಾಗೂ ಅಪಜಲಪುರ ಟಿ.ಎ. ಪಿ.ಸಿ.ಎಂ. ಅಧ್ಯಕ್ಷ ನಬೀಲಾಲ ಮಶಾಳಕರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಈ ಜನಪರ ಉತ್ಸವ ಕಾರ್ಯಕ್ರಮದ ಅಂಗವಾಗಿ ಜಾನಪದ ಗೀತೆ, ಸುಗಮ ಸಂಗೀತ, ತತ್ವಪದ, ರಂಗ ಗೀತೆಗಳು, ವಚನಗಾಯನ, ಗೀಗೀ ಪದ, ದೀಪ ನೃತ್ಯ, ಜೋಗತಿ ಕುಣಿತ, ಸುಗ್ಗಿ ಕುಣಿತ, ಚಿಟ್ಟಲಗೆ ಮೇಳ, ಲಂಬಾಣಿ ನೃತ್ಯ, ಹಲಿಗೆ ವಾದನ, ಪೂಜಾ ಕುಣಿತ, ಪಟ ಕುಣಿತ, ನಂದಿ ಧ್ವಜ, ಕರಡಿ ಮಜಲು ಹಾಗೂ ವಿಶೇಷ ಘಟಕ ಸ್ಥಳೀಯ ಪ್ರಾಯೋಜಿತ ಗಾರೂಡಿ ಗೊಂಬೆ, ಕೀಲು ಕುದುರೆ, ನಾಸಿಕ ಡೋಲು ಮತ್ತು ಡೊಳ್ಳು ಕುಣಿತ ವೇದಿಕೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ತಾಡಪತ್ರಿಗಾಗಿ ರೈತರಿಂದ ಅರ್ಜಿ ಆಹ್ವಾನ
*************************************
ಕಲಬುರಗಿ,ಸೆ.14.(ಕ.ವಾ.)-ಕೃಷಿ ಇಲಾಖೆಯಿಂದ ಕೃಷಿ ಸಂಸ್ಕರಣೆ ಯೋಜನೆಯಡಿ 2017-18ನೇ ಸಾಲಿನ ತಾಡಪ್ರತಿಗಳನ್ನು ಲಾಟರಿ ಮುಖಾಂತರ ಫಲಾನುಭವಿಗಳ ಆಯ್ಕೆ ಮಾಡಲು ಕಲಬುರಗಿ ತಾಲೂಕಿನ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.
ಆಸಕ್ತಿಯುಳ್ಳ ರೈತರು ಸಂಬಂಧÀಪಟ್ಟ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಸೆಪ್ಟೆಂಬರ್ 25ರೊಳಗಾಗಿ ಸೂಕ್ತ ದಾಖಲಾತಿಗಳಾದ ಪಹಣೆ, ಆಧಾರ ಕಾರ್ಡ ಝರಾಕ್ಸ ಪ್ರತಿ, ಭಾವಚಿತ್ರದೊಂದಿಗೆ ಹಾಗೂ ಪರಿಶಿಷ್ಟ ಜಾತಿ ರೈತರಿಗೆ ಮಾತ್ರ ಜಾತಿ ಪ್ರಮಾಣಪತ್ರ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ 27ರಂದು ಬೆಳಗಿನ 11 ಗಂಟೆಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
*****************************************************
ಕಲಬುರಗಿ,ಸೆ.14.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ಮೆಟ್ರಿಕ್ ಪೂರ್ವ (9 ಮತ್ತು 10ನೇ ತರಗತಿ) ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಮಂಜೂರಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ನೈಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ http://ift.tt/1LVAmq7 ವೆಬ್‍ಸೈಟ್‍ನಲ್ಲಿ ಸಲ್ಲಿಸಬೇಕು. ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ ಮತ್ತು ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಬೇಕು. 2017-18ನೇ ಸಾಲಿನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವವರು ಮತ್ತು 2016-17ನೇ ಸಾಲಿನಲ್ಲಿ ಈಗಾಗಲೇ ಎನ್.ಎಸ್.ಪಿ. ಅಡಿಯಲ್ಲಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದಿರುವ ನವೀಕರಣ ವಿದ್ಯಾರ್ಥಿಗಳು ಸಹ ಹೊಸದಾಗಿ new user ? Register now’’ ’’ ಎಂದು ಗುಂಡಿಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸುವುದು.
ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಹಾಯವಾಣಿ 01206619540 ಮತ್ತು nspdirectorst@gmail.com ಅಥವಾ stwelfare@gmail.com ನ್ನು ಸಂಪರ್ಕಿಸುವುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಹಾಗೂ ಸಂಬಂಧಪಟ್ಟ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗೆ ಸಂಪರ್ಕಿಸಲು ಕೋರಲಾಗಿದೆ.
ಡೇ ನಲ್ಮ್ ಯೋಜನೆಯಡಿ ಅರ್ಜಿ ಆಹ್ವಾನ
ಕಲಬುರಗಿ,ಸೆ.14.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ 2017-18ನೇ ಸಾಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ ನಲ್ಮ್) ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗದ ವೈಯಕ್ತಿಕ ಹಾಗೂ ಗುಂಪು ಸಾಲಕ್ಕಾಗಿ ಪಾಲಿಕೆಯ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪಾಲಿಕೆಯ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಸದರಿ ಯೋಜನೆಯಡಿ ಒಟ್ಟು 128 ಗುರಿಯನ್ನು ಹೊಂದಿದ್ದು. ಸಿ.ಎಲ್.ಎಫ್.ಉತ್ತರಕ್ಕೆ 64 ಇರುತ್ತದೆ. ಮಹಾನಗರ ಪಾಲಿಕೆಯ ಡೇ-ನಲ್ಮ್‍ನ ದಕ್ಷಿಣ ಶಾಖೆಯಿಂದ ಸೆಪ್ಟೆಂಬರ್ 20 ರಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅಕ್ಟೋಬರ್ 10 ರೊಳಗಾಗಿ ಇದೇ ಶಾಖೆಗೆ ಸಲ್ಲಿಸಬೇಕು.
ಅರ್ಹತೆ: ಅಭ್ಯರ್ಥಿಗಳ ವಯಸ್ಸು 18 ರಿಂದ 45 ವರ್ಷ ಒಳಗಿರಬೇಕು. ಬಿ.ಪಿ.ಎಲ್. ಕಾರ್ಡ್ ಹೊಂದಿರಬೇಕು. ಅರ್ಜಿದಾರರ ಕುಟುಂಬದಲ್ಲಿ ಸ್ವ-ಸಹಾಯ ಗುಂಪಿನ ಸದಸ್ಯರಾಗಿರಬೇಕು. ಬೀದಿ ವ್ಯಾಪಾರಿಗಳು, ಅಂಗವಿಕಲರು, ಮುಂಗಳಮುಖಿಯರಿಗೆ ಮತ್ತು ವಿಧವೆಯರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೆ. 16ರಂದು ಆಳಂದ ಪಟ್ಟಣದಲ್ಲಿ ಜನಸಂಪರ್ಕ ಸಭೆ
ಕಲಬುರಗಿ,ಸೆ.14.(ಕ.ವಾ.)-ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ 11.30 ಗಂಟೆಗೆ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಆಲೋಕ ಕುಮಾರ ಅವರ ನೇತೃತ್ವದಲ್ಲಿ ಮೊಟ್ಟಮೊದಲ ಬಾರಿಗೆ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ಕಲಬುರಗಿ ಪೊಲೀಸ್ ಅಧೀಕ್ಷಕ ಎನ್. ಶಶಿಕುಮಾರ ಅವರು ಸಹ ಈ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು. ಈ ಸಂದರ್ಭದಲ್ಲಿ ಪೊಲೀಸ್ ಮಹಾನಿರೀಕ್ಷಕರು ತಾಲೂಕಿನ ಸಾರ್ವಜನಿಕರ ಅಹವಾಲು ಆಲಿಸಿ ಪರಿಹಾರ ನೀಡಲಿದ್ದಾರೆ. ಸಾರ್ವಜನಿಕರು, ಫಿರ್ಯಾದಿದಾರರು ಮತ್ತು ಪ್ರಕರಣಗಳಲ್ಲಿನ ಸಾಕ್ಷಿದಾರರು ಈ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ತಾಲೂಕಿನಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ/ಮಾರಾಟ ಮಾಡುವವರ, ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಣಿಕೆ, ಒಂದಂಕಿ ಲಾಟರಿ, ಮಟಕಾ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಯನ್ನು ನಿರ್ಭಯವಾಗಿ ನೀಡಬಹುದಾಗಿದೆ. ಮಾಹಿತಿ ನೀಡುವವರ ಹೆಸರು ಮತ್ತು ವಿಳಾಸ ಗೌಪ್ಯವಾಗಿಡಲಾಗುವುದು.
ವರದಿಯಾದ ಪ್ರಕರಣಗಳಲ್ಲಿನ ಫಿರ್ಯಾದಿಯು ತಾನು ನೀಡಿದ ದೂರಿಗೆ ಪೊಲೀಸರ ಸ್ಪಂದನೆ, ಆ ಪ್ರಕರಣದ ತನಿಖೆಯ ಹಂತ ಹಾಗೂ ನ್ಯಾಯಾಲಯದಲ್ಲಿ ಸಲ್ಲಿಸಿದ ಕೊಲೆ, ಸುಲಿಗೆ, ಅತ್ಯಾಚಾರ ಮತ್ತು ದಲಿತ ದೌರ್ಜನ್ಯ ಪ್ರಕರಣಗಳ ದೋಷಾರೋಪಣೆಯಲ್ಲಿನ ನ್ಯಾಯಾಂಗ ವಿಚಾರಣೆ ಮತ್ತು ಆರೋಪಿತರಿಗೆ ಶಿಕ್ಷೆ ವಿಧಿಸುವುದಕ್ಕಾಗಿ ಫಿರ್ಯಾದಿ ಮತ್ತು ಸಾಕ್ಷಿದಾರರ ಪೂರಕ ಸಾಕ್ಷಿ ಹೇಳಿಕೆಗೆ ಪ್ರೇರಣೆ ಮತ್ತು ನೋಂದವರಿಗೆ ಪೊಲೀಸರಿಂದ ರಕ್ಷಣೆ ನೀಡುವುದೇ ಈ ಜನಸಂಪರ್ಕ ಸಭೆಯ ಮೂಲ ಉದ್ದೇಶವಾಗಿದೆ. ತಾಲೂಕಿನ ಸಾರ್ವಜನಿಕರು ಈ ಜನಸಂಪರ್ಕ ಸಭೆಯಲ್ಲಿ ಮುಕ್ತ ಮನಸ್ಸಿನಿಂದ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟು ಪರಿಹಾರ ಕಂಡುಕೊಳ್ಳಲು ಕೋರಲಾಗಿದೆ.
ಸೆಪ್ಟೆಂಬರ್ 17ರಂದು ಜಿ.ಪಂ. ಕಚೇರಿಯಲ್ಲಿ ಧ್ವಜಾರೋಹಣ
***************************************************
ಕಲಬುರಗಿ,ಸೆ.14.(ಕ.ವಾ.)-ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಕಲಬುರಗಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ 17ರಂದು ಬೆಳಿಗ್ಗೆ 7.45ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
*****************************
ಕಲಬುರಗಿ,ಸೆ.14.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ 2017-18ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು karepass.cgg.gov.in ಹಾಗೂ http://ift.tt/1pXtg5j ವೆಬ್ ಸೈಟ್‍ಗಳಿಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಸೆಪ್ಟೆಂಬರ್ 20ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ http://ift.tt/1pXtg5j ವೆಬ್‍ಸೈಟ್‍ನ್ನು ಅಥವಾ ಸಹಾಯವಾಣಿ ಸಂಖ್ಯೆ 080-65970005, 65970006ಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 23ರಂದು ವಾಹನಗಳ ಬಹಿರಂಗ ಹರಾಜು
**********************************************
ಕಲಬುರಗಿ,ಸೆ.14.(ಕ.ವಾ.)-ಕಲಬುರಗಿ ತಾಜ್‍ಸುಲ್ತಾನಪುರ ಕೆ.ಎಸ್.ಆರ್.ಪಿ. ಕಮಾಂಡೆಂಟ್ 6ನೇ ಪಡೆಯ ಕಲಬುರಗಿ ಘಟಕಕ್ಕೆ ಸೇರಿದ ವಿವಿಧ ಮಾದರಿಯ 05 ನಿರುಪಯುಕ್ತಗೊಳಿಸಿದ ಹಳೆಯ ವಾಹನಗಳನ್ನು ಸೆಪ್ಟೆಂಬರ್ 23ರಂದು ಬೆಳಗಿನ 11.30 ಗಂಟೆಗೆ ಕೆ.ಎಸ್.ಆರ್.ಪಿ. 6ನೇ ಪಡೆಯ ತಾಜ್ ಸುಲ್ತಾನಪುರದ ಘಟಕದ ವಾಹನ ಸಾರಿಗೆ ವಿಭಾಗದ ಆವರಣದಲ್ಲಿ ಟೆಂಡರ್ ಕಂ ಬಹಿರಂಗ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಕೆ.ಎಸ್.ಆರ್.ಪಿ. ಕಮಾಂಡೆÉಂಟ್ ತಿಳಿಸಿದ್ದಾರೆ.
ಅನುಪಯುಕ್ತ ವಾಹನ ಖರೀದಿಗಾಗಿ ಟೆಂಡರ್ ಎಂದು ಲಕೋಟೆಯ ಮೇಲೆ ನಮೂದಿಸಿ ಸೀಲ್ಡ್ ಕವರ ಲಕೋಟೆಯನ್ನು ಕಮಾಂಡೆÉಂಟ್, 6ನೇ ಪಡೆ, ಕೆಎಸ್‍ಆರ್‍ಪಿ. ತಾಜ್ ಸುಲ್ತಾನಪುರ ಕಲಬುರಗಿ ಕಚೇರಿಗೆ ಸೆಪ್ಟೆಂಬರ್ 21ರಂದು ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಮಾಂಡೆಂಟ್‍ರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನ
**************************************************************
ಕಲಬುರಗಿ,ಸೆ.14.(ಕ.ವಾ.)-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ, ಪಿ.ಜಿ. ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅರ್ಜಿ ನಮೂನೆಯನ್ನು ಪಡೆಯಬಹುದು. ಇಲ್ಲವೆ ಇಲಾಖೆಯ ವೆಬ್‍ಸೈಟ್ http://ift.tt/2wEs18b ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಅಭ್ಯರ್ಥಿ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ, ಶೇಕಡಾವಾರು ಅಂಕ, ಉದ್ಯೋಗ ವಿವರ ಈ ಹಿಂದೆ ಯಾವುದಾದರು ತರಬೇತಿ ಪಡೆದ ವಿವರ ಹಾಗೂ ವಿಶೇಷ ಸಾಧನೆಗಳನ್ನೊಳಗೊಂಡ ಸ್ವ ವಿವರಗಳ ಮಾಹಿತಿಗಳನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ಧೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ದಿನಾಂಕ: 21-9-2017 ರ ಸಂಜೆ 5-00 ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು 560 001 ಇವರಿಗೆ ಸಲ್ಲಿಸಬೇಕು.
ಲಕೋಟೆಯ ಮೇಲ್ಬಾಗದಲ್ಲಿ "ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ)" ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಮತ್ತು ಪತ್ರಿಕಾ ವಿಭಾಗದ, ಉಪ ನಿರ್ದೇಶಕರು ಇವರನ್ನು ದೂರವಾಣಿ ಸಂಖ್ಯೆ 080- 22028037/87 ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೀಡಿಯಾ ಕಿಟ್‍ಗಾಗಿ ನೋಂದಾಯಿತ ಪತ್ರಕರ್ತರಿಂದ ಅರ್ಜಿ ಆಹ್ವಾನ
*************************************************************
ಕಲಬುರಗಿ,ಸೆ.14(ಕ.ವಾ.)-ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದು, ಇದಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಇಲಾಖೆಯ ನಿರ್ದೇಶಕ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾನ್ಯತೆ ಪಡೆದ ಪತ್ರಕರ್ತರು ಅರ್ಜಿ ನಮೂನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅಥವಾ ಇಲಾಖೆಯ ವೆಬ್‍ಸೈಟ್ karnatakainformation.gov.in ನಿಂದ ಪಡೆಯಬೇಕು.
ನೋಂದಾಯಿತ ಪತ್ರಕರ್ತರ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ), ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾನುಭವ, ವೇತನ ವಿವರಗಳನ್ನೊಳಗೊಂಡ ಮಾಹಿತಿಯನ್ನು ಭರ್ತಿ ಮಾಡಿ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ಸದರಿ ಅರ್ಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ವಿವರ, ಪ್ರಸಾರ ಸಂಖ್ಯೆ, ಪತ್ರಿಕೆಯ ಮಾಧ್ಯಮ ಪಟ್ಟಿಯ ವಿವರ, ಜಾತಿ ಪ್ರಮಾಣಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಸೆಪ್ಟೆಂಬರ್ 27ರ ಸಂಜೆ 5 ಗಂಟೆಯೊಳಗಾಗಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, # ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬೇಕು. ಸದರಿ ಲಕೋಟೆಯ ಮೇಲ್ಭಾಗದಲ್ಲಿ “ನೋಂದಾಯಿತ ಪತ್ರಕರ್ತರಿಗೆ ಮೀಡಿಯಾ ಕಿಟ್‍ಗಾಗಿ ಅರ್ಜಿ” ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದ ಉಪ ನಿರ್ದೇಶಕರನ್ನು ಹಾಗೂ ದೂರವಾಣಿ ಸಂಖ್ಯೆ 080-22028037/87 ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಧಮ್ಮಚಕ್ರ ಪ್ರವರ್ತನ ದಿನಾಚರಣೆ: ಅಗತ್ಯ ಸಿದ್ಧತೆಗೆ ಸೂಚನೆ
****************************************************
ಕಲಬುರಗಿ,ಸೆ.14.(ಕ.ವಾ.)-ಕಲಬುರಗಿ-ಸೇಡಂ ರಸ್ತೆಯಲ್ಲಿರುವ ಬುದ್ಧ ವಿಹಾರದಲ್ಲಿ ಸೆಪ್ಟೆಂಬರ್ 30 ರಂದು ನಡೆಯಲಿರುವ 61ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆಯ ಯಶಸ್ವಿಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅಧಿಕಾರಿಗಳಿಗೆ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 61ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆಯ ಕುರಿತು ಪೂರೌಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದು ಬೆಳಿಗ್ಗೆ 10 ಗಂಟೆಗೆ ಬುದ್ಧ ವಂದನೆ ಹಾಗೂ ಸಆಯಂಕಾಲ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಬುದ್ದ ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಆರೋಗ್ಯ ಶಿಬಿರ ಏರ್ಪಡಿಸುವುದು, ಅಂದು ನಡೆಯುವ ರ್ಯಾಲಿಗೆ ಸೂಕ್ತ ಪೋಲೀಸ್ ಬಂದೋಬಸ್ತ್ ಒದಗಿಸುವುದು, ವಿದ್ಯುತ್ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಾಯಂಕಾಲ ಜರುಗುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬುದ್ಧನ ನಾಟಕ ಮತ್ತು ಸಮೂಹ ನೃತ್ಯ ಏರ್ಪಡಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಕಠಿಣ ಪರಿಶ್ರಮದಿಂದ ಮುಂದೆ ಬರಲು ಕರೆ
*************************************
ಕಲಬುರಗಿ,ಸೆ.14.(ಕ.ವಾ.)- ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿನಿಯರು ನಿರಂತರ ಪರಿಶ್ರಮದಿಂದ ಮುಂದೆ ಬಂದು ಕಾಲೇಜಿಗೆ ಹಾಗೂ ನಾಡಿಗೆ ಕೀರ್ತಿ ತರಬೇಕೆಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ಸಿ. ರೇವೂರ ಹೇಳಿದರು.
ಅವರು ಇತ್ತೀಚೆಗೆ ಜೇವರ್ಗಿ ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ 2017-18ನೇ ಶೈಕ್ಷಣಿಕ ಸಾಲಿನ ಸಾಂಸ್ಕøತಿಕ, ಕ್ರೀಡಾ, ಯುವ ರೆಡ್‍ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಬುದ್ಧ, ಬಸವ ಮತ್ತು ಡಾ.ಬಿ.ಆರ್. ಅಂಬೇಡ್ಕರ ವೇದಿಕೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಎ ಹಾಗೂ ಬಿ. ಮತ್ತು ಪಿ.ಜಿ. ಘಟಕಗಳ ಶೈಕ್ಷಣಿಕ ಚಟುವಟಿಕೆಗಳ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಕಟ್ಟಡಗಳು ಪ್ರಗತಿಯಲ್ಲಿವೆ. ತಾವು ಕಾಲೇಜಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ವಿಜಯಪುರ ಅಕ್ಕಮಹಾದೇವಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ವಿ.ವಿ. ಮಳಗಿ ಮಾತನಾಡಿ, ಮಹಿಳೆ ಹುಟ್ಟಿದ ಊರಿಗೆ, ಓದಿದ ಕಾಲೇಜಿಗೆ ಹೆಸರು ತರಬೇಕು. ಈ ಕಾಲೇಜಿನಲ್ಲಿ ಉತ್ತಮ ಅಂಕಗಳು ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ಮಹಿಳಾ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ನಕಲು ತಡೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ನಕಲು ಮಾಡುವಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗೆ ಹಾಗೂ ಕೋಣೆಯ ಮೇಲ್ವಿಚಾರಕರಿಗೆ 2000ರೂ.ದಂಡ ಹಾಕುವ ಕುರಿತು ವಿಶ್ವವಿದ್ಯಾಲಯ ಚಿಂತನೆ ಮಾಡುತ್ತಿದೆ ಎಂದು ತಿಳಿಸಿದರು.
ಬಿ.ಸಿ.ಎಂ. ಇಲಾಖೆಯ ವಿಸ್ತರಣಾಧಿಕಾರಿ ಡಾ. ಕರಬಸಮ್ಮ ಪೂಜಾರಿ, ಮಾತನಾಡಿದರು. ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಖಂಡೇರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿ.ಡಿ.ಸಿ. ಸದಸ್ಯರಾದ ಭೀಮರಾವ ಕುಲಕರ್ಣಿ, ಪ್ರೊ. ಸೂಗಯ್ಯ ಹಿರೇಮಠ, ಡಾ. ಆರ್.ಪಿ. ಶಂಕರ, ವಿವಿಧ ಘಟಕಗಳ ಸಂಚಾಲಕರಾದ ಪ್ರೊ. ಪ್ರಕಾಶ ಪಾಟೀಲ, ಪ್ರೊ. ಮೀನಾಕ್ಷಿ ವಿಜಯಕುಮಾರ, ಪ್ರೊ. ಜ್ಯೋತಿ ರೆಡ್ಡಿ, ಡಾ. ಹಾಜಿ ಬೇಗಂ, ಡಾ. ರೂಪಾಲಿ ರಾಠೋಡ ಮತ್ತಿತರು ಪಾಲ್ಗೊಂಡಿದ್ದರು. ಪ್ರೊ. ಬಿ.ಎಸ್.ಬಿರಾದಾರ ಸ್ವಾಗತಿಸಿದರು. ರೆಡ್‍ಕ್ರಾಸ್ ಸಂಚಾಲಕ ಡಾ. ಪದ್ಮಣ್ಣ ರಾಸಣಗಿ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಮಲಿಂಗ ಭೋಸಲೆ ವಂದಿಸಿದರು.
ಹೆಚ್.ಐ.ವಿ. ಸೋಂಕಿತರಿಗೆ ಎ.ಆರ್.ಟಿ. ಕೇಂದ್ರಗಳಲ್ಲಿ ಕಾನೂನು ಸಲಹಾ ಕೇಂದ್ರ
**********************************************************************
ಕಲಬುರಗಿ,ಸೆ.14.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯು ಹೆಚ್.ಐ.ವ್ಹಿ. ಸೋಂಕಿತ ವ್ಯಕ್ತಿಗಳಿಗೆ ಕಾನೂನಾತ್ಮಕ ನೆರವು ನೀಡುವ ಉದ್ದೇಶದಿಂದ ಎ.ಆರ್.ಟಿ. ಕೇಂದ್ರಗಳಲ್ಲಿ ಒಂದು ಉಚಿತ ಕಾನೂನು ಸಲಹಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ತಿಳಿಸಿದರು.
ಅವರು ಜೇವರ್ಗಿಯ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಜೇವರ್ಗಿ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಿವ್ಯ ಚೇತನ ನೆಟ್‍ವರ್ಕ್, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಏಡ್ಸ ಪ್ರಿವೆನ್‍ಶನ್ ಸೊಸೈಟಿ, ಏ.ಆರ್.ಟಿ. ಕೇಂದ್ರ ಜೇವರ್ಗಿ ಹಾಗೂ ಶ್ರೀ ಗುರು ವಿದ್ಯಾಪೀಠ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಲಹಾ ಕೇಂದ್ರದಲ್ಲಿ ನುರಿತ ವಕೀಲರು ಪ್ರತಿ ಶನಿವಾರ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಸೋಂಕಿತರು ತಮ್ಮ ಸಮಸ್ಯೆಗಳಿಗೆ ಕಾನೂನಿನ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಹೆಚ್.ಐ.ವ್ಹಿ. ಸೋಂಕಿತರು ಸೋಂಕು ತಗಲಿರುವುದನ್ನು ಗೌಪ್ಯತೆ ಇಡದೆ ವೈದ್ಯರ ಬಳಿ
ಹೋಗಿ ಸೂಕ್ತ ಚಿಕಿತ್ಸೆ ಪಡೆದು ಜೀವನ ನಿರ್ವಹಣೆ ಭರವಸೆ ಹೊಂದಿ ಜೀವನ ಸಾಗಿಸಬೇಕಾಗಿದೆ. ಹೆಚ್.ಐ.ವಿ. ಪೀಡಿತರಿಗೆ ಹಕ್ಕುಗಳಿಗೆ ಚ್ಯುತಿಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಹೋಗಿ ಸೂಕ್ತ ಚಿಕಿತ್ಸೆ ಪಡೆದು ಜೀವನ ನಿರ್ವಹಣೆ ಭರವಸೆ ಹೊಂದಿ ಜೀವನ ಸಾಗಿಸಬೇಕಾಗಿದೆ. ಹೆಚ್.ಐ.ವಿ. ಪೀಡಿತರಿಗೆ ಹಕ್ಕುಗಳಿಗೆ ಚ್ಯುತಿಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಜೇವರ್ಗಿ ಸಿವಿಲ್ ನ್ಯಾಯಾಧೀಶ ಶಿವರಾಜ ವಿ. ಸಿದ್ದೇಶ್ವರ ಮಾತನಾಡಿ, ಕೇವಲ ಹೆಚ್.ಐ.ವ್ಹಿ. ಪೀಡಿತರಾಗಿದ್ದಾರೆಂಬ ಕಾರಣಕ್ಕಾಗಿ ಅವರ ಹಕ್ಕುಗಳನ್ನು ಮೊಟಕಗೊಳಿಸಲು ಅವಕಾಶವಿಲ್ಲ. ಅವರನ್ನು ಕಡೆಗಣಿಸುವ ಬದಲಾಗಿ ಅವರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಹೆಚ್.ಐ.ವ್ಹಿ. ಸೋಂಕಿತರು ಯಾವುದೇ ಕೀಳರಿಮೆ ಇಲ್ಲದೇ ತಮ್ಮ ಜೀವನವನ್ನು ಸಾಗಿಸಬೇಕು. ತಾಲೂಕು ಕಾನೂನು ಸೇವೆಗಳ ಸಮಿತಿಯು ಇದಕ್ಕೆ ಬೇಕಾಗುವ ಎಲ್ಲ ಸಹಾಯವನ್ನು ನೀಡುವುದಾಗಿ ತಿಳಿಸಿದರು.
ಜೇವರ್ಗಿ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ಸಿದ್ದು ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೇವರ್ಗಿ ಹಿರಿಯ ಸಿವಿಲ್ ನ್ಯಾಯಾಧೀಶ ಜಿ. ಕುಮಾರ, ಸಿವಿಲ್ ನ್ಯಾಯಾಧೀಶ ಶಿವರಾಜ ವಿ. ಸಿದ್ಧೇಶ್ವರ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ|| ಶರಣಬಸಪ್ಪ ಗಣಜಲಖೇಡ, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ರವಿಕುಮಾರ ಬಿರಾದಾರ್, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ವಿಜಯಕುಮಾರ ಭಗತ, ಕೆ.ಹೆಚ್.ಪಿ.ಟಿ. ಕಾರ್ಯಕ್ರಮ ಅಧಿಕಾರಿ ಶ್ರೀದೇವಿ ಪಿ., ದಿವ್ಯ ಜೇವನ ನೆಟ್‍ವರ್ಕ್ ಅಧ್ಯಕ್ಷೆ ಶಾಂತಾಬಾಯಿ ಟೇಲರ್, ಕೆ.ಹೆಚ್.ಪಿ.ಟಿ. ಕಾರ್ಯಕ್ರಮ ಅಧಿಕಾರಿ ಸುಬ್ಬಯ್ಯ ಗುತ್ತೇದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಅವರು ಹೆಚ್.ಐ.ವ್ಹಿ. ಸೋಂಕಿನಿಂದ ಬಳಲುತ್ತಿರುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇರುವ ಹಕ್ಕುಗಳ ವಿಷಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಹೆಚ್.ಐ.ವ್ಹಿ. ಸೋಂಕಿತ ವ್ಯಕ್ತಿಗಳು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದರು.
ಹೀಗಾಗಿ ಲೇಖನಗಳು news and photo date: 15-09-2017
ಎಲ್ಲಾ ಲೇಖನಗಳು ಆಗಿದೆ news and photo date: 15-09-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 15-09-2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-15-09-2017.html
0 Response to "news and photo date: 15-09-2017"
ಕಾಮೆಂಟ್ ಪೋಸ್ಟ್ ಮಾಡಿ