ಶೀರ್ಷಿಕೆ : NEWS AND PHOTOS DATE: 26--09-2017
ಲಿಂಕ್ : NEWS AND PHOTOS DATE: 26--09-2017
NEWS AND PHOTOS DATE: 26--09-2017
ಸರ್ಕಾರದ ಯೋಜನೆಯಿಂದ ತಿಂಗಳಿಗೆ 30 ಸಾವಿರ ಲಾಭ
***************************************************
ಕಲಬುರಗಿ,ಸೆ.26(ಕ.ವಾ.)-ನಮ್ಮ ಜಮೀನಿನ್ಯಾಗ ಮದಲ ವರ್ಸಕ್ಕ 2-3 ಚೀಲ ಕಾಳ ಬರತಿತ್ತರಿ ಅದರಿಂದ 4-5ಸಾವಿರ ಸಿಗತಿತ್ತು. ದೇವರಂಥ ಅಧಿಕಾರಿಗಳು ನಮಗ ಸಿಕ್ಕಾರ ಅವರು ಸರಕಾರದ ಯೋಜನೆ ನಮಗ್ ತಿಳಿಸಿದ್ದಕ್ಕ ಈಗ ತಿಂಗಳೀಗಿ 30 ಸಾವಿರ ರೂಪಾಯಿ ಕೈಗಿ ಬರುವಂಗ ಆಗೈತ್ರಿ ಎಂದು ಓಕಳಿ ಗ್ರಾಮದ ರೈತ ಶಿವರಾಜ ಮುಗಳಿ ತಮ್ಮ ಸಂತೋಷವನ್ನು ಹಂಚಿಕೊಂಡರು.
ಅವರು ಮಂಗಳವಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಓಕಳಿ ಸಮಿತಿಯ ರೈತರು ಕೃಷಿ ಇಲಾಖೆಯ ತೋಟಗಾರಿಕೆ ಘಟಕದಿಂದ ತೋಟಗಾರಿಕೆ ಪ್ರಯೋಜನ ಪಡೆದ ರೈತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾರಾಣಿ ಕೋರ್ಲಪಾಟಿ ಅವರೊಂದಿಗೆ ಶಿವರಾಜ ಮುಗಳಿ ಮಾತನಾಡುತ್ತ ಹೇಳಿದರು.
ಇದೇ ಗ್ರಾಮದ ಮತ್ತೋರ್ವ ರೈತ ಶರಣಪ್ಪ ಕಲ್ಲಪ್ಪ ಮಿರಗಕಲ್ ತನ್ನ ಒಟ್ಟು 6 ಎಕರೆ ಜಮೀನಿನ ಪೈಕಿ 1.5 ಎಕರೆ ಜಮೀನಿನಲ್ಲಿ ಸುಗಂಧರಾಜ ಪುಷ್ಪ ಬೆಳೆದಿದ್ದಾರೆ. ಈ ಪೈಕಿ ಒಂದು ವರ್ಷದಿಂದ 30 ಗುಂಟೆ ಪ್ರದೇಶದಲ್ಲಿ ಸುಗಂಧರಾಜ ಪುಷ್ಪ ಕಟಾವು ಮಾಡಲಾಗುತ್ತಿದ್ದು, ಪ್ರತಿ ದಿನ ಸುಮಾರು 12 ಕಿಲೋ ಗ್ರಾಂ ಹೂವು ದೊರೆಯುತ್ತದೆ. ಇದರಿಂದ ಎಲ್ಲಾ ಖರ್ಚು ಕಳೆದು ಪ್ರತಿ ದಿನ 1000 ರೂ ನಿವ್ವಳ ಲಾಭ ಪಡೆಯುತ್ತಿರುವ ಅವರು ಕೃಷಿ ಇಲಾಖೆಯಿಂದ 10 ಸಾವಿರ ಸುಗಂಧರಾಜ ಗಡ್ಡೆಗಳನ್ನು ನಾಟಿ ಮಾಡಲು ಉಚಿತವಾಗಿ ನೀಡಿದ್ದಾರೆ. ಅದಕ್ಕೆ ಕಾಲ ಕಾಲಕ್ಕೆ ಬೇಕಾಗುವ ತಾಂತ್ರಿಕ ಸಹಾಯ ಸಹ ಅಧಿಕಾರಿಗಳು ನೀಡುತ್ತಾರೆ. ಇದರಿಂದ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರವೇ ನೇರ ಕಾರಣವಾಗಿದೆ. ಸಧ್ಯ ನಾನು ತಿಂಗಳಿಗೆ ಸುಮಾರು 34000 ರೂ.ಗಳ ಆದಾಯ ಪಡೆಯುತ್ತಿದ್ದೇನೆ ಎಂದು ತಿಳಿಸಿದರು.
ಬಸವರಾಜ ಮಾಲಿಪಾಟೀಲ ಗುಲಾಬಿ ಹೂವಿನ ಕೃಷಿ ಕೈಗೊಂಡಿದ್ದು, ಸರ್ಕಾರದ ಯೋಜನೆಯ ಸಹಾಯ ಪಡೆದು ತಮ್ಮ ಕೈಯಿಂದ 8000 ರೂ. ಖರ್ಚು ಮಾಡಿ 30 ಗುಂಟೆ ಪ್ರದೇಶದಲ್ಲಿ ಬಟನ್, ತಾಜಮಹಲ ಹಾಗೂ ರೆಡ್ ರೂಬಿ ತಳಿಯ ಗುಲಾಬಿ ಬೆಳೆದಿದ್ದಾರೆ. ಸಧ್ಯ 45 ದಿನದ ಗುಲಾಬಿ ಬೆಳೆಯನ್ನು ಕಟಾವು ಮಾಡಲಾಗುತ್ತಿದೆ. ಎರಡು ದಿನಗಳಿಗೊಮ್ಮೆ 5 ಕೆ.ಜಿ. ಹೂವು ದೊರೆಯುತ್ತಿದ್ದು, ಕಮಲಾಪೂರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 150 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂದೆ ಗುಲಾಬಿ ಹೂವಿನ ಗಿಡಗಳು ದೊಡ್ಡವಾದರೆ ಪ್ರತಿ ದಿನ ಸುಮಾರು 40-50 ಕೆ.ಜಿ. ಹೂವು ಕಟಾವಿಗೆ ಬರುತ್ತದೆ ಎಂದು ಹರ್ಷ ವ್ಯಕ್ತ ಪಡಿಸುತ್ತಾರೆ. ನನಗೆ ಒಟ್ಟು 4 ಎಕರೆ ಜಮೀನಿದ್ದು ಅದರಲ್ಲಿ ಸುಗಂಧರಾಜ, ಸೇವಂತಿ, ಚೆಂಡು ಹೂ ಬೆಳೆಯಲಾಗುತ್ತಿದೆ ಎಂದರು.
ಓಕಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಓಕಳಿ ಸಮಿತಿಗೆ ಒಳಪಟ್ಟಿರುವ ಸುಮಾರು 900 ಹೆಕ್ಟರ್ ಪ್ರದೇಶದ ಪೈಕಿ 100 ಹೆಕ್ಟೇರ್ ಪ್ರದೇಶವನ್ನು ಕೃಷಿ ಇಲಾಖೆಯಿಂದ ತೋಟಗಾರಿಕೆಗೆ ಒಳಪಡಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಗುಲಾಬಿ, ಸುಗಂಧರಾಜ, ಸೀಬೆ, ಮಾವು, ನಿಂಬೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದೇ ರೀತಿ ಜಿಲ್ಲೆಯ ಒಟ್ಟು 900 ಹೆಕ್ಟೇರ್ ಪ್ರದೇಶವನ್ನು ತೋಟಗಾರಿಕೆಗೆ ಪರಿವರ್ತಿಸಲಾಗಿದ್ದು ಅಲ್ಲಿ ಸೀಬೆ, ಮಾವು, ನಿಂಬೆ, ಸೀತಾಫಲ ಬೆಳೆಯನ್ನು ಬೆಳೆಯಲಾಗುತ್ತಿದೆ. ರೈತರಿಗೆ ಈ ಬೆಳೆಗಳನ್ನು ಬೆಳೆಯಲು ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಯನ್ನು ಕೃಷಿ ಇಲಾಖೆಯಿಂದ ಕಾಲ-ಕಾಲಕ್ಕೆ ಒದಗಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ ತಿಳಿಸಿದರು.
ಓಕಳಿ ಗ್ರಾಮ ಪಂಚಾಯತಿಯು ಜಲಾನಯನ ಅಭಿವೃದ್ಧಿ ಪ್ರದೇಶÀಕ್ಕೆ ಒಳಪಟ್ಟಿರುವುದರಿಂದ ಈ ಭಾಗದ ರೈತರಿಗೆ ಮಣ್ಣು-ನೀರು ಸಂರಕ್ಷಣೆ ಜೊತೆಗೆ ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ಪಶುಸಂಗೋಪನೆ ಘಟಕಗಳ ಅನುಷ್ಠಾನಕ್ಕಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ 3ನೇ ಹಂತದಡಿ 20 ರೈತರ 5 ಎಕರೆ ಪ್ರದೇಶದಲ್ಲಿ ಸುಗಂಧರಾಜ, 22 ರೈತರ 20 ಎಕರೆ ಪ್ರದೇಶದಲ್ಲಿ ಗುಲಾಬಿ, 23 ರೈತರಿಗೆ 5000 ಮಾವಿನ ಸಸಿ, 18 ರೈತರಿಗೆ ತಲಾ 5000 ಪೇರಲ ಹಾಗೂ ನಿಂಬೆ ಸಸಿ, 2 ರೈತರಿಗೆ 500 ನೇರಳೆ ಸಸಿಗಳನ್ನು ನೀಡಿ ಅವರ ಹೊಲಗಳಲ್ಲಿ ಫಲ ಮತ್ತು ಪುಷ್ಪ ಕೃಷಿಗೆ ಉತ್ತೇಜನ ನೀಡಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಒಳ್ಳೆಯ ಗುಣಮಟ್ಟದ ಸುಗಂಧರಾಜ, ಗುಲಾಬಿ ಹೂವಿನ ಸಸಿಗಳನ್ನು ಉಚಿತವಾಗಿ ನೀಡಿ ತಾಂತ್ರಿಕ ಸಹಾಯ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಸಮದ ಪಟೇಲ ಮತ್ತು ಕೃಷಿ ಇಲಾಖೆ ತೋಟಕಾರಿಕೆ ಘಟಕದ ಹಿರಿಯ ಸಹಾಯಕ ನಿರ್ದೇಶಕ ಹೆಚ್.ರವಿಕುಮಾರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾರಾಣಿ ಕೋರ್ಲಪಾಟಿ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ಅಧಿಕಾರಿ ಹಣಮಂತ ಮುಗಳಿ, ಓಕಳಿ ಗ್ರಾಮದ ರೈತರು ಹಾಜರಿದ್ದರು.

ಪುಷ್ಪ ಕೃಷಿಯಿಂದ ರೈತರ ಮೊಗದಲ್ಲಿ ಸಂತೋಷ
*******************************************
ಕಲಬುರಗಿ,ಸೆ.26(ಕ.ವಾ.)-ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪ್ರಯೋಜನ ಪಡೆದು ಫಲ-ಪುಷ್ಪ ಕೃಷಿ ಕೈಗೊಂಡಿರುವ ಈ ಭಾಗದ ರೈತರು ಪ್ರತಿವರ್ಷ ಸುಮಾರು 3 ಲಕ್ಷ ರೂ.ಗಳ ಆದಾಯ ಪಡೆಯುತ್ತಿದ್ದಾರೆ. ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದರಿಂದ ಅವರು ಸಂತೋಷವಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದರು.
ಅವರು ಮಂಗಳವಾರ ಓಕಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಇದೇ ಮಾದರಿಯ ಕೃಷಿ ಪದ್ದತಿಯನ್ನು ಬೇರೆ ತಾಲೂಕಿನ ರೈತರಿಗೂ ವಿಸ್ತರಿಸಲು ಜಾಗೃತಿ ಮೂಡಿಸಲಾಗುವುದು. ರೈತರ ಜೀವನೋಪಾಯ ಅಭಿವೃದ್ಧಿಗೆ ನೂತನ ಕೃಷಿ ವಿಧಾನಗಳ ತಿಳುವಳಿಕೆ ನೀಡಲಾಗುತ್ತಿದೆ. ರೈತರು ಸುಗಂಧರಾಜ, ಗುಲಾಬಿ ಹೂವುಗಳನ್ನು ಬೆಳೆದು ತಿಂಗಳಿಗೆ ಸುಮಾರು 25 ಸಾವಿರ ಆದಾಯ ಪಡೆಯುತ್ತಿದ್ದಾರೆ. ಈ ಭಾಗದ ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿರುವುದರಿಂದ ಅವರಿಗೆ ಕೆಲಸದ ಶೆಡ್ ಹಾಗೂ ಜಾನುವಾರು ಶೆಡ್ ನಿರ್ಮಿಸಿಕೊಡಲಾಗುವುದು ಹಾಗು ಹೂವು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಜಿಲ್ಲೆಯ ರೈತರು ಸುಸ್ಥಿರ ಕೃಷಿ ಪದ್ದತಿ ಅಳವಡಿಸಿಕೊಂಡು ಸಿರಿ ಧಾನ್ಯಗಳನ್ನು ಬೆಳೆಯಲು ಉತ್ತೇಜಿಸಲು ಪ್ರತಿ ಹೆಕ್ಟೇರ್‍ಗೆ ಸುಮಾರು 3000 ರೂ.ಗಳವರೆಗೆ ನೇರ ಲಾಭ ವರ್ಗಾವಣೆ ಮಾಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಿಷನ್ ಅಂತ್ಯೋದಯ ಎಂಬ ಯೋಜನೆಯನ್ನು ಅಕ್ಟೋಬರ್ 2 ರಿಂದ 19 ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಬಡ ರೈತರನ್ನು ಗುರುತಿಸಿ ಅವರಿಗೆ ಸುಮಾರು 1.5 ಲಕ್ಷ ರೂ.ಗಳ ವರೆಗೆ ಪ್ರಯೋಜನ ದೊರಕಿಸಲಾಗುವುದು. ರೈತರು ಈ ಯೋಜನೆಗಳ ಲಾಭ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜಿವಣಗಿ, ಕೃಷಿ ಇಲಾಖೆ ಉಪನಿರ್ದೇಶಕ ಸಮದ ಪಟೇಲ ಮತ್ತು ಕೃಷಿ ಇಲಾಖೆ ತೋಟಕಾರಿಕೆ ಘಟಕದ ಹಿರಿಯ ಸಹಾಯಕ ನಿರ್ದೇಶಕ ಹೆಚ್.ರವಿಕುಮಾರ, ಸಹಾಯಕ ಕೃಷಿ ಅಧಿಕಾರಿ ಹಣಮಂತ ಮುಗಳಿ, ಓಕಳಿ ಗ್ರಾಮದ ರೈತರು ಹಾಜರಿದ್ದರು.

ಅಪೌಷ್ಠಿಕತೆ ನಿವಾರಣೆಗೆ ಮಾತೃಪೂರ್ಣ ಯೋಜನೆ ಜಾರಿ
************************************************
ಕಲಬುರಗಿ,ಸೆ.26(ಕ.ವಾ.)- ಅಪೌಷ್ಠಿಕತೆಯಿಂದ ಆಗುತ್ತಿರುವ ಶಿಶುಗಳ ಮರಣ ಪ್ರಮಾಣವನ್ನು ತಡೆಗಟ್ಟಲು ಹಾಗೂ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ನೀಡುವ ಮೂಲಕ ಅವರ ಆರೋಗ್ಯವನ್ನು ಸುಧಾರಿಸುವುದಲ್ಲದೆ ಕಡಿಮೆ ತೂಕದ ಶಿಶುಗಳ ಜನನವನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು “ಮಾತೃ ಪೂರ್ಣ” ಎಂಬ ವಿಶೇಷ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೊಳಿಸಲು ಸಜ್ಜಾಗಿದೆ.
ಅದರಂತೆ ಅಕ್ಟೋಬರ್-2 ಗಾಂಧಿ ಜಯಂತಿ ದಿನದಂದು ಕಲಬುರಗಿ ಜಿಲ್ಲೆಯಲ್ಲಿಯೂ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಈ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರದಲ್ಲಿಯೆ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಅವರಿಗೆ ಅಗತ್ಯವಿರುವ ಸಮತೋಲಿತ ಹಾಗೂ ಪೌಷ್ಟಿಕ ಆಹಾರವನ್ನು ಪೂರೈಸುವ ವೈಶಿಷ್ಠಪೂರ್ಣ ಯೋಜನೆ ಇದಾಗಿದೆ.
ಕಲಬುರಗಿ ಜಿಲ್ಲೆಯ 7 ತಾಲೂಕಿನ 9 ಶಿಶು ಅಭಿವೃದ್ಧಿ ಯೋಜನೆಗಳ 3098 ಅಂಗನವಾಡಿ ಕೇಂದ್ರಗಳಲ್ಲಿ ಈಗಾಗಲೇ ಗುರುತಿಸಲಾದ 27440 ಗರ್ಭಿಣಿಯರಿಗೆ ಹಾಗೂ 27695 ಹಾಲುಣಿಸುವ ತಾಯಂದಿರಿಗೆ ಸೇರಿದಂತೆ ಒಟ್ಟು 55135 ಜನರಿಗೆ ಈ ಸೌಲಭ್ಯ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲಬುರಗಿ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಿಳಿಸಿದ್ದಾರೆ.
ಊಟದಲ್ಲಿ ಏನೇನಿದೆ:-
ಒಂದು ಪೂರ್ಣ ಪೌಷ್ಟಿಕ ಊಟವು ಅನ್ನ, ಸಾಂಬಾರ್, ಪಲ್ಯ ಜೊತೆಗೆ ಬೇಯಿಸಿದ ಒಂದು ಮೊಟ್ಟೆ, ಬೆಲ್ಲ ಮತ್ತು ಕಡಲೆ ಬೀಜದಿಂದ ಮಾಡಿದ ಚಿಕ್ಕಿ, 200 ಮಿ.ಲಿ. ಹಾಲನ್ನು ಒಳಗೊಂಡಿರುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ಕೊಡಲಾಗುವುದು. ಇನ್ನು ಆಹಾರದಲ್ಲಿನ ಪ್ರಮಾಣ ನೋಡಿದಾಗ ಅಕ್ಕಿ-150 ಗ್ರಾಮ, ತೊಗರಿ ಬೇಳೆ-30 ಗ್ರಾಂ, ಎಣ್ಣೆ-16ಗ್ರಾಂ, ತರಕಾರಿ-50 ಗ್ರಾಂ ಮತ್ತು ಅಗತ್ಯಾನುಸಾರ ಮಸಾಲಾ ಪದಾರ್ಥಗಳ ಸೇರಿದೆ. ಗರ್ಭಿಣಿಯಿಂದ ಹಿಡಿದು ಬಾಣಂತಿಯಾದ ನಂತರ ಮಗುವಿನ ಆರೈಕೆಯ ದಿನಗಳು ಸೇರಿದಂತೆ ತಿಂಗಳಿಗೆ 25 ದಿನಗಳು, ವಾರ್ಷಿಕ 300 ದಿನಗಳು ಸೇರಿದಂತೆ ಒಟ್ಟು 1000 ದಿನ ಆಹಾರ ನೀಡುವ ಯೋಜನೆ ಇದಾಗಿದೆ. ಈ ಒಂದು ಊಟದಿಂದ 1342 ಕ್ಯಾಲೊರೀಸ್, 41 ಗ್ರಾಂ ಪ್ರೊಟೀನ್, 578 ಎಂ.ಜಿ. ಕ್ಯಾಲ್ಶಿಯಂ ಲಭ್ಯವಾಗಲಿದೆ. ಇದಲ್ಲದೇ ಊಟದ ನಂತರ ಕಬ್ಬೀಣಾಂಶದ ಮಾತ್ರೆ ಸಹ ನೀಡಲಾಗುತ್ತದೆ.
ಯೋಜನೆಯ ವೈಶಿಷ್ಟ್ಯ:
ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಮಧ್ಯಾಹ್ನ ಹೊತ್ತಿನ ಒಂದು ಪೂರ್ಣ ಪ್ರಮಾಣದ ಊಟ ನೀಡುವುದಲ್ಲದೆ ಕಾಲಕಾಲಕ್ಕೆ ಐಎಫ್‍ಎ ಟ್ಯಾಬ್ಲೆಟ್ ವಿತರಿಸುವ ಹಾಗೂ ತೂಕ ಪರೀಕ್ಷಿಸುವ ಕಾರ್ಯ ಹಾಗೂ ಆಹಾರ ಪದ್ಧತಿಗಳ ನಿರ್ವಹಣೆ ಚುಚ್ಚು ಮದ್ದು ಮತ್ತು ಎ.ಎನ್.ಸಿ. ಸಹಾಯ ಪಡೆಯುವ ಬಗ್ಗೆಯೂ ಆಪ್ತ ಸಮಾಲೋಚನೆ ನಡೆಯಲಿದ್ದು, ಅಂಗನವಾಡಿ ಕಾರ್ಯಕರ್ತರು ಇದರ ಸೂಕ್ತ ನಿರ್ವಹಣೆ ಜವಾಬ್ದಾರಿ ಹೊಂದಿರುತ್ತಾರೆ.
ಯೋಜನೆಯ ಉದ್ದೇಶ:-
ಗರ್ಭಿಣಿ ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿಯೇ ಹೆಚ್ಚು ಪೌಷ್ಠಿಕತೆಯಿಂದ ಕೂಡಿರುವ ಆಹಾರ ಒದಗಿಸುವ ಮೂಲಕ ಅವರ ಪೌಷ್ಠಿಕಾಂಶದ ಪ್ರಮಾಣ ಹೆಚ್ಚಿಸುವುದಲ್ಲದೆ ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ತಗ್ಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಗರ್ಭಿಣಿಯಾದ ಕೂಡಲೆ ಅಂಗನವಾಡಿ ಕೇಂದ್ರದಲ್ಲಿ ನೋಂದಾವಣಿ ಮಾಡುವ ಮೂಲಕ ಪ್ರಸವ ಪೂರ್ವ ಆರೈಕೆ ಸೇವೆಗಳನ್ನು ಪಡೆಯಬಹುದಾಗಿದೆ.
ಕಡಿಮೆ ತೂಕದ ಮಕ್ಕಳ ಜನನ ಹಾಗೂ ಮಕ್ಕಳಿನ ಅಪೌಷ್ಠಿಕತೆ ಪ್ರಮಾಣ ಕಡಿಮೆಗೊಳಿಸುವುದು, ಗರ್ಭಿಣಿಯರು 100 ಕಬ್ಬಿಣಾಂಶದ ಮಾತ್ರೆ ಸೇವಿಸುವುದನ್ನು ಖಚಿತ ಮಾಡಿಕೊಳ್ಳುವುದು, ಗರ್ಭಿಣಿ-ಬಾಣಂತಿಯರಲ್ಲಿನ ರಕ್ತಹೀನತೆ ಮತ್ತು ಅಅಪೌಷ್ಠಿಕತೆ ಕಡಿಮೆಗೊಳಿಸುವುದು, ಗರ್ಭಿಣಿ-ಬಾಣಂತಿಯರಿಗೆ ನೀಡುತ್ತಿರುವ ನೀಡುವ ಆಹಾರವನ್ನು ಸ್ವತ ಸೇವಿಸುವಂತೆ ನೋಡಿಕೊಳ್ಳಲಾಗುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ತಾಯಂದಿನ ನೋಂದಣಿಯನ್ನು ಹೆಚ್ಚಿಸುವುದು, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಹಾಗೂ ಚುಚ್ಚುಮದ್ದು ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಪ್ರತಿ ದಿನ ನಿಗದಿಪಡಿಸಿರುವ ಪೌಷ್ಠಿಕಾಂಶದ ಆಹಾರ ಪ್ರಮಾಣ ಮತ್ತು ಸಾಮಾನ್ಯವಾಗಿ ಪ್ರತಿ ದಿನ ಅವರು ತೆಗೆದುಕೊಳ್ಳುವ ಆಹಾರ ಪ್ರಮಾಣದಲ್ಲಿನ ಅಂತರ ಕಡಿಮೆಗೊಳಿಸುವುದು ಯೋಜನೆಯ ಸದಾಶಯವಾಗಿದೆ.
ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜಾ ಪ್ರವಾಸ
ಕಲಬುರಗಿ,ಸೆ.26.(ಕ.ವಾ.)-ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಐವನ್ ಡಿ’ಸೋಜಾ ಅವರು ಬೆಂಗಳೂರಿನಿಂದ ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಅಕ್ಟೋಬರ್ 3ರಂದು ಬೆಳಗಿನ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಬೆಳಿಗ್ಗೆ 9.45 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಲ್ಲಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಾಯೋಜಿಸಿರುವ ವಿವಿಧ ಯೋಜನಾ ಕಾರ್ಯಕ್ರಮಗಳ ಮತ್ತು ಈ ಪೈಕಿ ಕ್ರೈಸ್ತ ಸಮುದಾಯಕ್ಕೆ ಸಂಬಂಧಪಟ್ಟಂತೆ ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯಡಿ ಇರುವ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳೊಡನೆ ಸಮಾಲೋಚನೆ ನಡೆಸುವರು.
ಅಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೋಸ್ಕರ ಪ್ರಾಯೋಜಿಸಿರುವ ವಿವಿಧ ಯೋಜನಾ ಕಾರ್ಯಕ್ರಮಗಳ ಮತ್ತು ಈ ಪೈಕಿ ಕ್ರೈಸ್ತ ಸಮುದಾಯಕ್ಕೆ ಸಂಬಂಧಪಟ್ಟಂತೆ ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯಡಿ ಇರುವ ಯೋಜನೆಗಳ ಕುರಿತು ಕಲಬುರಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಚೇರಿಗಳಲ್ಲಿ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸುವರು.
ಅಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೊಷ್ಠಿ ನಡೆಸುವರು. ಬೆಳಿಗ್ಗೆ 11.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರ ಜಿಲ್ಲೆಯ ಬಸವಕಲ್ಯಾಣಗೆ ಪ್ರಯಾಣಿಸುವರು. ಬಸವಕಲ್ಯಾಣದಿಂದ ಕಲಬುರಗಿಗೆ ಸಂಜೆ 5 ಗಂಟೆಗೆ ಆಗಮಿಸಿ, ಕಲಬುರಗಿ ಜಿಲ್ಲಾ ಪಕ್ಷದ ಕಚೇರಿಗೆ ಭೇಟಿ ನೀಡುವರು. ಸಂಜೆ 6.40 ಗಂಟೆಗೆ ಉದ್ಯಾನ್ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

ಸೆ. 27ರಂದು ವಿಕಲಚೇತನ ವಿದ್ಯಾರ್ಥಿಗಳ ಕಲಬುರಗಿ ದರ್ಶನ ಉಚಿತ ಪ್ರವಾಸ
*********************************************************************
ಉದ್ಘಾಟನೆ
**********
ಕಲಬುರಗಿ,ಸೆ.26.(ಕ.ವಾ.)-ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2017ರ ಅಂಗವಾಗಿ ವಿಕಲಚೇತನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ “ಕಲಬುರಗಿ ದರ್ಶನ” ಉಚಿತ ಪ್ರವಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್ 27ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸುವರು.
ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ, ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಹಾಗೂ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕಕುಮಾರ ಅವರು ವಿಶೇಷ ಅತಿಥಿಗಳಾಗಿ ಆಗಮಿಸುವರು.

ಸೆಪ್ಟೆಂಬರ್ 27ರಂದು ಟಾಯಲೆಟ್ ಏಕ್ ಪ್ರೇಮಕಥಾ ಚಲನಚಿತ್ರ ಪ್ರದರ್ಶನ
******************************************************************
ಕಲಬುರಗಿ,ಸೆ.26.(ಕ.ವಾ.)-ಸ್ವಚ್ಛ ಭಾರತ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಹಾಗೂ ಕಲಬುರಗಿ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಸ್ವಚ್ಛತೆ ಮತ್ತು ಶೌಚಾಲಯ ನಿರ್ಮಾಣ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27ರಂದು ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಕಲಬುರಗಿಯ ಬಿಗ್ ಬಜಾರ್‍ನ ಮೇರಾಜ್ ಸಿನೆಮಾಸ್‍ನಲ್ಲಿ “ಟಾಯಿಲೆಟ್ ಏಕ ಪ್ರೇಮ ಕಥಾ” ಎಂಬ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. 1220 ಪೌರ ಕಾರ್ಮಿಕರು ಮತ್ತು ಪಾಲಿಕೆಯ ಸ್ವಚ್ಛತೆಗೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಚಲನಚಿತ್ರವನ್ನು ವೀಕ್ಷಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಪೌರ ಕಾರ್ಮಿಕರು ಈ ಚಿತ್ರವನ್ನು ವೀಕ್ಷಿಸಿ ನಗರ ಸಾರ್ವಜಿಕರಲ್ಲಿ ಜಾಗೃತಿ ಮೂಡಿಸಿ ಸ್ವಚ್ಛ ಭಾರತ ಯೋಜನೆ ಅನುಷ್ಠಾನಗೊಳಿಸಲು ಸಹಾಯವಾಗುವ ನಿಟ್ಟಿನಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಒಂದು ವಿನೂತನ ಪ್ರಯೋಗ ಮಾಡಲಾಗುತ್ತಿದೆ. ಈ ವಿನೂತನ ಪ್ರಯೋಗದ ಸಂಪೂರ್ಣ ಖರ್ಚನ್ನು ಮಹಾನಗರ ಪಾಲಿಕೆಯ ನೈರ್ಮಲ್ಯ ಗುತ್ತಿಗೆದಾರರು ವಹಿಸಿಕೊಂಡಿರುತ್ತಾರೆ.
ಇತ್ತೀಚೆಗೆ ಸೆಪ್ಟೆಂಬರ್ 23ರಂದು ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ದೃಢÀಸಂಕಲ್ಪ ತೊಟ್ಟು ಎಲ್ಲ ಪೌರ ಕಾರ್ಮಿಕರು ಮತ್ತು ನೈರ್ಮಲೀಕರಣದ ಸಂಘಟನೆಗಳು ಸ್ವ ಇಚ್ಛೆಯಿಮದ ಮುಂದೆ ಬಂದಿದ್ದಾರೆ. ಈಗಾಗಲೇ ಕಲಬುರಗಿ ಮಹಾನಗರ ಪಾಲಿಕೆಗೆ ರಾಷ್ಟ್ರೀಯ ಮಟ್ಟದ ಸ್ಕೋಚ್ ಆರ್ಡರ್ ಆಪ್ ದಿ ಮೆರಿಟ್ (Skoch order-of-the merit) ಪ್ರಶಸ್ತಿ ಲಭಿಸಿದೆ ಎಂದು ಅವರು ತಿಳಿಸಿದ್ದಾರೆ.

ಕಿತ್ತೂರ ರಾಣಿ ಚೆನ್ನಮ್ಮ-ವೀರ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
**********************************************************
ಕಲಬುರಗಿ,ಸೆ.26.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನೀಡುವ 2017-18ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗಳಿಗಾಗಿ ಕಲಬುರಗಿ ಜಿಲ್ಲೆಯ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಿಳಿಸಿದ್ದಾರೆ.
ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ಹಾಗೂ ಅರ್ಹ ವ್ಯಕ್ತಿಗಳಿಗೆ ಮತ್ತು ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಲಾಗುವುದು. ಇದಲ್ಲದೇ ಸರ್ಕಾರದ ಆದೇಶದಂತೆ ಈ ವಿವಿಧ ಕ್ಷೇತ್ರಗಳಲ್ಲದೇ, ಸಾಹಸ ಪ್ರದರ್ಶಿಸಿ ಹೋರಾಡಿದ ಮಹಿಳೆಗೆ ವೀರ ಮಹಿಳೆ ಪ್ರಶಸ್ತಿಯನ್ನು ಸಹ ನೀಡಲಾಗುತ್ತಿದೆ. ಪ್ರಚಲಿತ ವಿದ್ಯಮಾನಗಳಿಂದ ಮಹಿಳಾ ಕ್ಷೇತ್ರದಲ್ಲಿ ಗುರುತಿಸಿಕೊಂಡಂತಹ ಹಾಗೂ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡಂತಹ ಮತ್ತು ಕಳೆದ 5 ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರೆ 5 ಕ್ಷೇತ್ರಗಳಾದ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರಬೇಕು.
ಅರ್ಹ ಮಹಿಳೆಯರು ನಿಗದಿತ ನಮೂನೆಗಳನ್ನು ಕಲಬುರಗಿ ಚಂದ್ರಶೇಖರ ಪಾಟೀಲ್ ಕ್ರ್ರೀಡಾಂಗಣ ಎದುರುಗಡೆಯಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸದರಿ ಕಚೇರಿಗೆ ಅಕ್ಟೋಬರ್ 9ರ ಸಾಯಂಕಾಲ 4 ಗಂಟೆಯೊಳಗಾಗಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಗಾಂಧಿ ಜಯಂತಿ: ಮಾಂಸ ಮಾರಾಟ ನಿಷೇಧ
*****************************************
ಕಲಬುರಗಿ,ಸೆ.26.(ಕ.ವಾ.)-ಕಲಬುರಗಿ ನಗರದಾದ್ಯಂತ ಅಕ್ಟೋಬರ್ 2ರಂದು ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಜಯಂತಿಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ನಗರದಲ್ಲಿ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ್ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಹಾಗೂ ಕಸಾಯಿ ಖಾನೆ ಮಾಲೀಕರು ಈ ಆದೇಶವÀನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸೂಚಿಸಿದ್ದಾರೆ.

ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
*****************************
ಕಲಬುರಗಿ,ಸೆ.26.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ 2017-18ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು karepass.cgg.gov.in ಹಾಗೂ http://ift.tt/1pXtg5j ವೆಬ್ ಸೈಟ್‍ಗಳಿಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಸೆಪ್ಟೆಂಬರ್ 30ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ http://ift.tt/2xIA5pc ಅಥವಾ ಸಹಾಯವಾಣಿ ಸಂಖ್ಯೆ 080-65970005, 65970006ಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು NEWS AND PHOTOS DATE: 26--09-2017
ಎಲ್ಲಾ ಲೇಖನಗಳು ಆಗಿದೆ NEWS AND PHOTOS DATE: 26--09-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTOS DATE: 26--09-2017 ಲಿಂಕ್ ವಿಳಾಸ https://dekalungi.blogspot.com/2017/09/news-and-photos-date-26-09-2017.html
0 Response to "NEWS AND PHOTOS DATE: 26--09-2017"
ಕಾಮೆಂಟ್ ಪೋಸ್ಟ್ ಮಾಡಿ