ಶೀರ್ಷಿಕೆ : news and photos Date: 16--09--2017
ಲಿಂಕ್ : news and photos Date: 16--09--2017
news and photos Date: 16--09--2017
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
ಕಲಬುರಗಿ,ಸೆ.16.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ್ ಅವರು ಬೆಂಗಳೂರಿನಿಂದ ಕೆ.ಕೆ.ಎಕ್ಸ್‍ಪ್ರೆಸ್ ರೈಲಿನ ಮೂಲಕ ಸೆಪ್ಟೆಂಬರ್ 17ರಂದು ಬೆಳಿಗ್ಗೆ 5.40 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಬೆಳಿಗ್ಗೆ 8 ಗಂಟೆಗೆ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಪ್ರಯುಕ್ತ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ 8.30 ಗಂಟೆಗೆ ಎಸ್.ವಿ.ಪಿ. ವೃತ್ತದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ 9 ಗಂಟೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿರುವ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗಲಿರುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಹಾಗೂ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 18 ರಂದು ಕಲಬುರಗಿ ಮತ್ತು ಸೇಡಂ ಪಟ್ಟಣದ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಸೆಪ್ಟೆಂಬರ್ 19 ರಂದು ಕಲಬುರಗಿ ಮತ್ತು ಸೇಡಂ ಪಟ್ಟಣದ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಮಹಾರಾಷ್ಟ್ರ ರಾಜ್ಯದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಪ್ರವಾಸ
ಕಲಬುರಗಿ,ಸೆ.16.(ಕ.ವಾ.)-ಮಹಾರಾಷ್ಟ್ರ ರಾಜ್ಯದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರು ಸೆಪ್ಟೆಂಬರ್ 17ರಂದು ಹೈದ್ರಾಬಾದ್‍ದಿಂದ ರಸ್ತೆ ಮೂಲಕ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 18ರಂದು ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು. ಸೆಪ್ಟೆಂಬರ್ 19ರಂದು ಬೆಳಗಿನ 8 ಗಂಟೆಗೆ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
ಕಚೇರಿ ಸ್ಥಳದಲ್ಲಿ ಆಂತರಿಕ ದೂರು ಸಮಿತಿ ರಚಿಸಿ
ಅವರು ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಮತ್ತು ನಿಯಂತ್ರಣ ಕಾಯ್ದೆ 2013 ಕುರಿತು ಏರ್ಪಡಿಸಲಾದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕಚೇರಿಯಲ್ಲಿನ ಹಿರಿಯ ಮಹಿಳೆಯ ಅಧ್ಯಕ್ಷತೆಯಲ್ಲಿ ಮಹಿಳಾ ಸದಸ್ಯರು ಹಾಗೂ ಸ್ವಯಂ ಸೇವಾ ಸಂಘಗಳ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ಆಂತರಿಕ ದೂರು ಸಮಿತಿ ರಚಿಸುವುದು ಆಯಾ ಕಚೇರಿ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಕೆಲಸ ಮಾಡುವ ಸ್ಥಳದಲ್ಲಿನ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅಶ್ಲೀಲ ಸಂದೇಶ ಕಳುಹಿಸುವುದು, ಪ್ರತ್ಯೇಕ ಹಾಗೂ ಪರೋಕ್ಷವಾಗಿ ಲೈಂಗಿಕ ಕಿರುಕುಳಕ್ಕೆ ಪ್ರಚೋದನೆ ನೀಡಿದ್ದಲ್ಲಿ ನೊಂದ ಮಹಿಳಾ ನೌಕರರು ಸಮಿತಿಗೆ ಲಿಖಿತ ದೂರು ನೀಡಬಹುದಾಗಿದೆ. ಖಾಯಂ, ತಾತ್ಕಾಲಿಕ ಅಥವಾ ಹೊರಗುತ್ತಿಗೆ ಅಥವಾ ಮೂರನೇ ವ್ಯಕ್ತಿ ಎಂಬ ಯಾವುದೇ ಬೇಧಭಾವವಿಲ್ಲದೇ ನೊಂದ ಮಹಿಳಾ ನೌಕರರು ಸಮಿತಿಗೆ ದೂರು ನೀಡಬಹುದಾಗಿದೆ. ಸಮಿತಿಯು ದೂರನ್ನು ಕುಲಂಕೂಷವಾಗಿ ಪರಿಶೀಲಿಸಿ 90 ದಿನದೊಳಗೆ ಉದ್ಯೋಗದಾತ ಸಂಸ್ಥೆಯ ಮುಖ್ಯಸ್ಥರಿಗೆ ವರದಿ ನೀಡಬೇಕು. ಉದ್ಯೋಗದಾತ ಸಂಸ್ಥೆಯು 60 ದಿನದೊಳಗಾಗಿ ಆರೋಪಿತ ನೌಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಶಿಕ್ಷಣ ಸಂಸ್ಥೆ, ಹೊಟೇಲ್, ಅಂಗಡಿಗಳು, ಕಾರ್ಖಾನೆ, ಧಾರ್ಮಿಕ ಸಂಸ್ಥೆ, ಕ್ರೀಡಾ ಸಂಸ್ಥೆಗಳು, ಆಸ್ಪತ್ರೆ, ನರ್ಸಿಂಗ್ ಹೋಂ, ಖಾಸಗಿ ಕಚೇರಿ, ಅಸಂಘಟಿಕ ವಲಯದ ಬೀದಿ ವ್ಯಾಪಾರಿಗಳಲ್ಲಿಯೂ ಹತ್ತು ಸಂಖ್ಯೆಗಿಂತ ಹೆಚ್ಚಿನ ನೌಕರರು ಇದ್ದಲ್ಲಿ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯವಾಗಿರುತ್ತದೆ ಎಂದರು.
ಹತ್ತು ನೌಕರರಿಗಿಂತ ಕಡಿಮೆಯಿರುವ ಕರ್ತವ್ಯನಿರತ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ನೌಕರರು ಕಾಯ್ದೆಯ ಕಲಂ 6(1) ರನ್ವಯ ಜಿಲ್ಲಾಧಿಕಾರಿಗಳಿಂದ ಜಿಲ್ಲಾ ಮಟ್ಟದಲ್ಲಿ ನೇಮಿಸಿ ರಚಿಸಲ್ಪಟ್ಟ ಸ್ಥಳೀಯ ದೂರು ಸಮಿತಿಗೆ ದೂರು ನೀಡಬಹುದಾಗಿದೆ. ಒಂದು ವೇಳೆ ಉದ್ಯೋಗದಾತ ಸಂಸ್ಥೆಯ ಮುಖ್ಯಸ್ಥರ ಮೇಲೆಯೇ ಲೈಂಗಿಕ ಕಿರುಕುಳ ಆರೋಪವಿದ್ದರೆ ಅಂತಹ ದೂರನ್ನು ಈ ಸಮಿತಿಗೆ ನೀಡಬಹುದಾಗಿದೆ. ಒಂದು ವೇಳೆ ಮಹಿಳಾ ನೌಕರರು ಸುಳ್ಳು ಆರೋಪ ಮಾಡಿದ್ದಲ್ಲಿ ಅವರ ಮೇಲೂ ಸಹ ಶಿಸ್ತು ಕ್ರಮಕೈಗೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮಾತನಾಡಿ, ಕಚೇರಿಯಲ್ಲಿ ಮಹಿಳೆಯರನ್ನು ಲಿಂಗ ತಾರತಮ್ಯ ಮಾಡದೇ ಸಮಾನವಾಗಿ ಹಾಗೂ ಗೌರವವಾಗಿ ಕಾಣಬೇಕು. ಮಹಿಳಾ ನೌಕರ ಸಮುದಾಯಕ್ಕೆ ಈ ಕಾನೂನು ವರದಾನವಾಗಿದ್ದು, ಉತ್ತಮ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕು. ಜನರಿಗೆ ಉಪಯೋಗವಾಗಲೆಂದೇ ಕಾನೂನುಗಳು ಜಾರಿಗೆ ತರಲಾಗುತ್ತಿದೆ. ಆದರೆ ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳಿಂದ ಹೊರ ಬರುವುದೇ ಭಾರತೀಯರ ಪ್ರವೃತ್ತಿಯಾಗಿದ್ದು, ಈ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆಯಿದೆ. ನಾವು ಕಾನೂನುಗಳನ್ನು ಉಲ್ಲಂಘಿಸಿದಂತೆ ಹೊಸ ಕಾನೂನುಗಳು ರೂಪುಗೊಳ್ಳುತ್ತಿವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ವರದಿ ನೀಡುವ ತಜ್ಞರ ಸಮಿತಿಯ ಸೂಚನೆಯಂತೆ ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಕಾಯ್ದೆಯನ್ವಯ ಪ್ರತಿಯೊಂದು ಕಚೇರಿಯಲ್ಲಿ ಆಂತರಿಕ ದೂರು ಸಮಿತಿ ರಚಿಸಿ ಒಂದು ವಾರದೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವರದಿ ನೀಡುವಂತೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಾಗಾರದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಕಾರ್ಯಕ್ರಮ ನಿರೂಪಿಸಿದರು.
ತುಳಜಾಪೂರಕ್ಕೆ ವಿಶೇಷ ಬಸ್ಸುಗಳ ಕಾರ್ಯಾಚರಣೆ
ಕಲಬುರಗಿ,ಸೆ.16(ಕ.ವಾ.)-ತುಳಜಾಪೂರ ಶ್ರೀ ಮಾತಾ ಅಂಭಾಭವಾನಿ ಜಾತ್ರೆಯ ಪ್ರಯುಕ್ತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 10 ರವರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ 2ನೇ ವಿಭಾಗದಿಂದ ಭಕ್ತಾಧಿಗಳ ಅನುಕೂಲಕ್ಕಾಗಿ ಕಲಬುರಗಿ, ಆಳಂದ, ಜೇವರ್ಗಿ, ಅಫಜಲಪೂರ, ಗಾಣಗಾಪೂರ ಮತ್ತು ಇನ್ನಿತರ ಸ್ಥಳಗಳಿಂದ ತುಳಜಾಪೂರಕ್ಕೆ ಶ್ರೀ ತುಳಜಾಭವಾನಿದೇವಿ ದರ್ಶನಕ್ಕೆ ಹೋಗಲು ಹಾಗೂ ಬರಲು ವಿಶೇಷ ಬಸ್ಸುಗಳ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಹೆಚ್.ನಾಗೇಶ ತಿಳಿಸಿದ್ದಾರೆ.
ಒಂದೇ ಸ್ಥಳದಿಂದ 40 ಜನ ಪ್ರಯಾಣಿಕರು ಲಭ್ಯವಿದ್ದಲ್ಲಿ, ಅದೇ ಸ್ಥಳದಿಂದ ತುಳಜಾಪೂರಕ್ಕೆ ವಿಶೇಷ ವಾಹನ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760984086, 7760993920, 7760992115, 7760992114, 7760992116, 7760992118, 7760992121 ಗಳನ್ನು ಸಂಪರ್ಕಿಸಬೇಕು. ವಿಶೇಷ ಬಸ್ಸುಗಳ ಸದುಪಯೋಗವನ್ನು ಭಕ್ತಾದಿಗಳು ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ಸೆ.17 ರಂದು ವಿದ್ಯುತ್ ವ್ಯತ್ಯಯ
ಕಲಬುರಗಿ,ಸೆ.16(ಕ.ವಾ.)- 110/11 ಕೆ.ವಿ ಯುನಿವರ್ಸಿಟಿ ವಿದ್ಯುತ್ ವಿತರಣಾ ಕೇಂದ್ರ ದಿಂದ ಬರುವ ಈ10 ಮತ್ತು ಈ12 ಫೀಡರ್ ಮೇಲೆ ಶಹಾಬಾದ ರೊಡಿನ ಲೈನ್ ಶಿಫ್ಟಿಂಗ್ ಕೆಲಸವನ್ನು ಕೈಗೊಂಡಿರುವ ಪ್ರಯುಕ್ತ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ 11 ಕೆ.ವಿ. ಫೀಡರ್‍ಗಳು ಇಂತಿವೆ. ಈ-10 ನಂದೂರ ಈ-12 ಕೆಸರಟಗಿ, ಕೆಐಡಿಬಿ ನಂದೂರ ಫೀಡರ್ ಮೇಲೆ ಬರುವ ನಂದೂರ ಕೆಸರಟಗಿ ಇಂಡಸ್ಟ್ರೀಯಲ್ ಏರಿಯಾ, ನಂದೂರ, ನಂದೂರ (ಕೆ), ಧರ್ಮಪೂರ ಗ್ರಾಮಗಳು ಮತ್ತು ಪ್ರದೇಶಗಳು. ಈ ಗ್ರಾಮಗಳ ಮತ್ತು ಇತರೆ ಸುತ್ತಮುತ್ತಲಿನ ಪ್ರದೇಶದÀ ಎಲ್ಲಾ ಗ್ರಾಹಕರು ಸಹಕರಿಸಬೇಕೆಂದು ಗುವಿಸಕನಿ ಕಾ ಮತ್ತು ಪಾ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
ಕಲಬುರಗಿ,ಸೆ.16(ಕ.ವಾ.)-ಕಲಬುರಗಿ ತಾಲೂಕಿನ ಕಪನೂರ ಗ್ರಾಮದ ನಿವೇಶನ ಸಂಖ್ಯೆ 07 ಸರ್ವೇ ಸಂಖ್ಯೆ 19 ಭಾಗ ಶೇಖರೋಜಾದಲ್ಲಿ 12358 ಚ.ಅ. ಪ್ರದೇಶದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಪಾಲಿಕೆಯಿಂದ ಅನುಮತಿ ನೀಡಬೇಕಾಗಿದೆ. ಕಟ್ಟಡ ಅನುಮತಿ ನೀಡುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ, ತಕರಾರು, ಸಲಹೆಗಳು ಇದ್ದಲ್ಲಿ 15 ದಿನಗಳೊಳಗಾಗಿ ಪಾಲಿಕೆಯ ವಲಯ ಕಚೇರಿ-2, ಎಸ್.ಬಿ.ಕಾಲೇಜು ಹತ್ತಿರ, ಕಲಬುರಗಿ ಇಲ್ಲಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸುವಂತೆ ಮಹಾನಗರ ಪಾಲಿಕೆ ವಲಯ ಕಚೇರಿ-2ರ ವಲಯ ಆಯುಕ್ತರು ತಿಳಿಸಿದ್ದಾರೆ.
ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಕರೆ
ಕಲಬುರಗಿ,ಸೆ.16(ಕ.ವಾ.)-ಗ್ರಾಹಕರಿಗೆ ಉತ್ತಮ ಸೇವೆ ಪೂರೈಸಲು ಬಿ.ಎಸ್.ಎನ್.ಎಲ್. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸುವಂತೆ ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಹೇಳಿದರು.
ಕೆಂದು ಹೇಳಿದರು.
ಉಪ ಮಹಾಪ್ರಬಂಧಕ ಕೆ. ಸುರೇಶ ಸರ್ವರನ್ನು ಸ್ವಾಗತಿಸಿ ಬಿ.ಎಸ್.ಎನ್.ಎಲ್. ಪ್ರಗತಿ ಕುರಿತು ಸಭೆಯ ಗಮನಕ್ಕೆ ತಂದರು. ಎಂ.ಕೆ. ವಗ್ಗೇರ್ ಅವರು ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಸ್ತುತಪಡಿಸಿದರು.
ಉಪ ಮಹಾಪ್ರಬಂಧಕರಾದ ಡಿ.ಕೆ. ಕುಲಕರ್ಣಿ, ಆಂತರಿಕ ವಿತ್ತಿಯ ಸಲಹೆಗಾರ ಆರ್.ಕೆ. ವಕ್ಕಾರೆ, ಸಹಾಯಕ ಮಹಾಪ್ರಬಂಧಕ ಅಬ್ದುಲ್ ನಸೀರ್, ಸುನೀಲ ಗಣಪತಿ, ಲೆಕ್ಕಾಧಿಕಾರಿ ಜಿ.ಎಸ್.ಹೂಗಾರ, ಗೌರ ಶಿವಚಲಪ್ಪ, ಮಂಡಲ ಅಭಿಯಂತರರಾದ ಎಸ್.ಪಿ.ಕರಣಿಕ, ಉಪ ಮಂಡಲ ಅಭಿಯಂತರರಾದ ಗಿರೀಶ ಮೂಲಭಾರತಿ, ನಾಗರಾಜ್ ಕೆ.ಎ., ಹಾಗೂ ಇನ್ನಿತರ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಗಳು ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಎಸ್.ಸಿ. ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಮಹಾಪ್ರಬಂಧಕ ಶಿವಾಜಿ ಉಪಳಾಂಕರ್ ವಂದಿಸಿದರು.
ಹೀಗಾಗಿ ಲೇಖನಗಳು news and photos Date: 16--09--2017
ಎಲ್ಲಾ ಲೇಖನಗಳು ಆಗಿದೆ news and photos Date: 16--09--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photos Date: 16--09--2017 ಲಿಂಕ್ ವಿಳಾಸ https://dekalungi.blogspot.com/2017/09/news-and-photos-date-16-09-2017.html
0 Response to "news and photos Date: 16--09--2017"
ಕಾಮೆಂಟ್ ಪೋಸ್ಟ್ ಮಾಡಿ