news and photo date: 22--09--2017

news and photo date: 22--09--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo date: 22--09--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo date: 22--09--2017
ಲಿಂಕ್ : news and photo date: 22--09--2017

ಓದಿ


news and photo date: 22--09--2017

ಬ್ಯಾಂಕುಗಳಲ್ಲಿ ಆಧಾರ್ ಜೋಡಣಾ ಕೇಂದ್ರಗಳನ್ನು ಸ್ಥಾಪಿಸಲು ಸೂಚನೆ
**************************************************************
ಕಲಬುರಗಿ,ಸೆ.22.(ಕ.ವಾ.)-ಸರ್ಕಾರದಿಂದ ಯಾವುದೇ ಧನಸಹಾಯ ಪಡೆಯಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯ ಜೋಡಣೆ ಅತ್ಯವಶ್ಯಕವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಆದೇಶದನ್ವಯ ಕಲಬುರಗಿ ಜಿಲ್ಲೆಯ ಎಲ್ಲ ಶೆಡ್ಯೂಲ್ಡ್ ಬ್ಯಾಂಕ್‍ಗಳು ಪ್ರತಿ 10 ಶಾಖೆಗಳಲ್ಲಿ ಒಂದರಂತೆ ಆಧಾರ್ ಜೋಡಣೆ ಕೇಂದ್ರ ಸ್ಥಾಪಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಸೂಚಿಸಿದರು.
ಅವರು ಶುಕ್ರವಾರ ಕಲಬುರಗಿಯ ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಬ್ಯಾಂಕರುಗಳ ಜಿಲ್ಲಾ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಆದೇಶದನ್ವಯ ಭಾರತೀಯ ಸ್ಟೇಟ್ ಬ್ಯಾಂಕಿನ ಕಲಬುರಗಿ ಜಿಲ್ಲೆಯ 11 ಶಾಖೆಗಳಲ್ಲಿ ಹಾಗೂ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ 7 ಶಾಖೆಗಳಲ್ಲಿ ಆಧಾರ್ ಜೋಡಣೆ ಕೇಂದ್ರಗಳನ್ನು ಸ್ಥಾಪಿಸಲು ಸಭೆ ಅನುಮೋದನೆ ನೀಡಿತು.
ಭಾರತೀಯ ಸ್ಟೇಟ್ ಬ್ಯಾಂಕಿನ ಆಧಾರ್ ಜೋಡಣಾ ಕೇಂದ್ರಗಳಾದ ಕಡಗಂಚಿ, ಮಣ್ಣೂರ, ವಾಡಿ, ಅಫಜಲಪುರ, ಮೇನ್ ರೋಡ ಆಳಂದ, ಚಿತ್ತಾಪುರ ಬಸ್‍ನಿಲ್ದಾಣ, ಶಹಾಬಾದ, ನುಲಾ ಬಿಲ್ಡಿಂಗ್ ಅಫಜಲಪುರ, ಚಿಂಚೋಳಿ, ಜೇವರ್ಗಿ ಮತ್ತು ಮೇನ್ ರೋಡ ಸೇಡಂ. ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಆಧಾರ್ ಕೇಂದ್ರಗಳು, ಜೇವರ್ಗಿ, ಆಳಂದ, ಚಿಂಚೋಳಿ, ಅಫಜಲಪುರ, ಮಹಾಗಾಂವ ಕ್ರಾಸ್, ಸುಲೇಪೇಟ್ ಮತ್ತು ಮುಧೋಳ. ಈ ಕೇಂದ್ರಗಳ ಸ್ಥಾಪನೆಯಿಂದ ಜನರಿಗೆ ಆಧಾರ್ ನೋಂದಣಿ ಮತ್ತು ಜೋಡಣೆ ಕಾರ್ಯ ಕ್ಷೀಪ್ರವಾಗಿ ನಡೆಯಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬ್ಯಾಂಕುಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತ್ವರಿತವಾಗಿ ತಲುಪಿಸಲು ಅನುವಾಗುವಂತೆ ಹಾಗೂ ಅನುಕೂಲವಾಗುವಂತೆ ಪ್ರತಿ ವಾರ ಒಂದೊಂದು ಬ್ಯಾಂಕಿನಿಂದ ಪ್ರಾಯೋಜಿತ ರೇಡಿಯೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರೇಡಿಯೋ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು. ಇದಲ್ಲದೇ ಸ್ವಚ್ಛ ಭಾರತ ಯೋಜನೆಯನ್ನು ಜಿಲ್ಲೆಯಾದ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲ ಬ್ಯಾಂಕುಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಕೋರಿದರು.
ಸಭೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಂಕರ ಪ್ರಸಾದ್, ನಬಾರ್ಡ್ ಸಂಸ್ಥೆ ಜಿಲ್ಲಾ ವ್ಯವಸ್ಥಾಪಕ ರಮೇಶ ಭಟ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಸೂರ್ಯಕಾಂತ ಆಳಂದಕರ್ ಸ್ವಾಗತಿಸಿದರು. ಭಾರತೀಯ ಸ್ಟೇಟ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ ವಂದಿಸಿದರು.
ಸೇಡಂ ಉಪವಿಭಾಗ:
*******************
ಸೆಪ್ಟೆಂಬರ್ 25ರೊಳಗಾಗಿ ಸಂಘದ ಮಹಾಸಭೆ ಜರುಗಿಸಲು ಸೂಚನೆ
***********************************************************
ಕಲಬುರಗಿ,ಸೆ.22.(ಕ.ವಾ.)-ಸೇಡಂ ಉಪವಿಭಾಗದಲ್ಲಿ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಧವಾದ ಸಹಕಾರ ಸಂಘಗಳು ಸಹಕಾರ ಶಿಕ್ಷಣ ನಿಧಿಯನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಮೂಲ ಅಧಿನಿಯಮ ಕಲಂ 57(2ಎ) ಪ್ರಕಾರ ಪ್ರತಿಯೊಂದು ಸಹಕಾರ ಸಂಘವು ತಮ್ಮ ನಿವ್ವಳ ಲಾಭದಲ್ಲಿ ಕಾಯ್ದಿಟ್ಟ ನಿಧಿಯನ್ನು ಕಳೆದ ನಂತರ ಶೇ. 2ರಷ್ಟು ಸಹಕಾರ ಶಿಕ್ಷಣ ನಿಧಿ ಪಾವತಿಸಬೇಕು. ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆದ 30 ದಿನದೊಳಗಾಗಿ ಸಹಕಾರ ಮಹಾಮಂಡಳಕ್ಕೆ ಸಂದಾಯ ಮಾಡಬೇಕೆಂದು ಸೇಡಂ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ಕಲಂ 27ರ ಅನುಸಾರ ಕಲಬುರಗಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಧದ ಸಹಕಾರ ಸಂಘಗಳು ತಮ್ಮ ಸಂಘದ ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ 25ರೊಳಗಾಗಿ ಜರುಗಿಸಿ ವರದಿಯನ್ನು ಸೇಡಂ ಉಪವಿಭಾಗ ಸೇಡಂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಸಲ್ಲಿಸಬೇಕೆಂದು ಸೇಡಂ ಉಪವಿಭಾಗದ ಎಲ್ಲ ಸಹಕಾರ ಸಂಘಗಳಿಗೆ ಅವರು ತಿಳಿಸಿದ್ದಾರೆ
ಅಕ್ಟೋಬರ್ ತಿಂಗಳಲ್ಲಿ ಮಾಜಿ ಸೈನಿಕರಿಗೆ ಉದ್ಯೋಗ ಮೇಳ
****************************************************
ಕಲಬುರಗಿ,ಸೆ.22.(ಕ.ವಾ.)-ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಮಾಜಿ ಸೈನಿಕರಿಗೆ 2017ರ ಅಕ್ಟೋಬರ್ ತಿಂಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಕಾರ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಬೀದರ, ರಾಯಚೂರ, ಮತ್ತು ಯಾದಗಿರಿ ಜಿಲ್ಲೆಯ ಆಸಕ್ತ ಮಾಜಿ ಸೈನಿಕರು ಸೆಪ್ಟೆಂಬರ್ 28ರೊಳಗಾಗಿ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-225003ನ್ನು ಸಂಪರ್ಕಿಸಲು ಕೋರಲಾಗಿದೆ.
ಕೊಡಗು ಸೈನಿಕ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
************************************************
ಕಲಬುರಗಿ,ಸೆ.22.(ಕ.ವಾ.)-ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆಯಲ್ಲಿರುವ ಸೈನಿಕ ಶಾಲೆಗೆ 2018-19ನೇ ಸಾಲಿನ 6ನೇ ಮತ್ತು 9ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಠ್ಯಾಕ್ರಮ 10+2 ಸಿ.ಬಿ.ಎಸ್.ಸಿ (ವಿಜ್ಞಾನ ವಿಭಾಗ) ವಾಗಿದ್ದು, ಅಖಿಲ ಭಾರತ ಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 6ನೇ ಹಾಗೂ 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿ.ಬಿ.ಎಸ್.ಸಿ ಪಠ್ಯಾಕ್ರಮದ ಆಧಾರದಲ್ಲಿರುತ್ತದೆ.
ಸೈನಿಕ ಶಾಲೆಯಲ್ಲಿ 6ನೇ ತರಗತಿಗೆ 90-100 ಮತ್ತು 9ನೇ ತರಗತಿಗೆ 15-20 ಸೀಟುಗಳು ಖಾಲಿ ಇದ್ದು, ಎಸ್.ಸಿ.- ಶೇ. 15ರಷ್ಟು ಮತ್ತು ಎಸ್.ಟಿ - ಶೇ. 7.5 ರಷ್ಟು ಮತ್ತು ರಕ್ಷಣಾ ಇಲಾಖೆ ಶೇ. 25 ರಷ್ಟು ಮೀಸಲಾತಿಯಲ್ಲಿ ಪ್ರವೇಶ ಪಡೆಯಬಹುದು. 6ನೇ ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆ ಕೊಡಗಿನ ಸೈನಿಕ ಶಾಲೆಯಲ್ಲಿ ಹಾಗೂ 9ನೇ ತರಗತಿಗೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
ಅರ್ಜಿ ಸಲ್ಲಿಸಲು ಅಕ್ಟೋಬರ್/ ನವೆಂಬರ್‍ನಲ್ಲಿ ಶಾಲೆಯ ವೆಬ್‍ಸೈಟ್ ತಿತಿತಿ.sಚಿiಟಿiಞsಛಿhooಟಞoಜಚಿgueಜu.iಟಿ ನ್ನು ಸಂಪರ್ಕಿಸಿ ಮಾಹಿತಿ ಪುಸ್ತಕ/ ಅರ್ಜಿಯನ್ನು ಡೌನ್‍ಲೊಡ್ ಮಾಡಬಹುದು ಅಥವಾ ಶಾಲೆಯಿಂದ ಖುದ್ದಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಶಾಲೆಯ ದೂರವಾಣಿ ಸಂಖ್ಯೆ 08276-278963 ಕ್ಕೆ ಸಂಪರ್ಕಿಸಲು ಕೋರಲಾಗಿದೆ. ಈ ಸೈನಿಕ ಶಾಲೆಯು ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ ಭಾರತೀಯ ನೌಕಾ ಅಕಾಡೆಮಿಗೆ ಸೇರಿಸಲು ಶೈಕ್ಷಣಿಕವಾಗಿ, ಮನಸಿಕವಾಗಿ ಮತ್ತು ದೈಹಿಕ ಸದೃಢವಾಗಿ ತರಬೇತಿಗೊಳಿಸುವ ಉದ್ದೇಶವನ್ನು ಹೊಂದಿದೆ.
ಸೆಪ್ಟೆಂಬರ್ 24ರಂದು ಶ್ರೀ ಬಿ.ವಿ. ಕಾರಂತರಿಗೆ ಗುರು ನಮನ
*****************************************************
ಕಲಬುರಗಿ,ಸೆ.21.(ಕ.ವಾ.)-ಕಲಬುರಗಿ ರಂಗಾಯಣದಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ರಂಗಭೀಷ್ಮ ಬಿ.ವಿ. ಕಾರಂತರಿಗೆ “ಗುರು ನಮನ”ವನ್ನು ಸೆಪ್ಟೆಂಬರ್ 24ರಂದು ಸಾಯಂಕಾಲ 4 ಗಂಟೆಗೆ ಏರ್ಪಡಿಸಲಾಗಿದೆ.
ನಂತರ ಬಿ.ವಿ. ಕಾರಂತರ ರಂಗಗೀತೆಗಳು ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ, ಕಲಬುರಗಿ ರಂಗಾಯಣ ಪ್ರಸ್ತುತಪಡಿಸುವ (ಅಭ್ಯಾಸ ಮಾಲಿಕೆ) ರಂಗಾ-ರಂಗಿ, ಸ್ವಾಮಿರಾವ ಕುಲಕರ್ಣಿ ಅವರ ಹಳೆಗನ್ನಡ ಕಿರುನಾಟಕ ರನ್ನನ ಗಧಾಯುದ್ಧ ಪ್ರದರ್ಶನಗೊಳ್ಳಲಿದೆ. ನಂತರ ಸಂಜೆ 6.30 ಗಂಟೆಗೆ ರಂಗಾಯಣದ ಕಲಾವಿದರಿಂದ ಗುರು ನಮನ ನಾಟಕ ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಸಾಹಿತಿಗಳು, ಸಾರ್ವಜನಿಕರು, ರಂಗಾಸ್ತಕರು ಹಾಗೂ ಕಲಾವಿದರು ಭಾಗವಹಿಸಬೇಕೆಂದು ಕಲಬುರಗಿ ರಂಗಾಯಣದ ನಿರ್ದೇಶಕ ಮಹೇಶ ವಿ.ಪಾಟೀಲ ಅವರು ತಿಳಿಸಿದ್ದಾರೆ.
ಪಾಲಿಹೌಸ್-ನೆರಳು ಪರದೆ ನಿರ್ಮಿಸಿಕೊಳ್ಳಲು ರೈತರಿಗೆ ಸಹಾಯಧನ
*************************************************************
ಕಲಬುರಗಿ,ಸೆ.22.(ಕ.ವಾ.)-ತೋಟಗಾರಿಕೆ ಇಲಾಖೆಯಿಂದ 2017-18ನೇ ಸಾಲಿನ ರಾಜ್ಯ ವಲಯದ ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ಮತ್ತು ನೆರಳು ಪರದೆ ನಿರ್ಮಿಸಿಕೊಳ್ಳಲು ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯಧನಕ್ಕಾಗಿ ಕಲಬುರಗಿ ಜಿಲ್ಲೆಯ ಆಸಕ್ತ ರೈತರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ತೋಟಗಾರಿಕೆ ಬೆಳೆಗಳಾದ ಹೂವು, ತರಕಾರಿ ಮತ್ತು ಬಹು ಮೌಲ್ಯದ ಬೆಳೆಗಳು ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತೋಟಗಾರಿಕಾ ರೈತರಿಗೆ ಶೇ. 90 ರಷ್ಟು ಹಾಗೂ ಸಾಮಾನ್ಯ ರೈತರಿಗೆ ಶೇ. 50ರಷ್ಟು ಮಾರ್ಗಸೂಚಿ ಪ್ರಕಾರ ಸಹಾಯಧನ ನೀಡಲಾಗುವುದು.
ರೈತ ಫಲಾನುಭವಿ ತಮ್ಮ ಹೆಸರಿನಲ್ಲಿ ಜಮೀನು ಮತ್ತು ಪಹಣಿ ಪತ್ರ ಹೊಂದಿರಬೇಕು. ರೈತರು ಕಡ್ಡಾಯವಾಗಿ ಭಾವಿ, ಬೋರವೇಲ್ ನೀರಾವರಿ ಮೂಲ ಹೊಂದಿರಬೇಕು. ರೈತ ಫಲಾನುಭವಿಗಳು ಸಹಾಯಧನ ಪಡೆದ ನಂತರ ಕಡ್ಡಾಯವಾಗಿ ತೋಟಗಾರಿಕೆ ಬೆಳೆಗಳಾದ ಹೂವು, ತರಕಾರಿ ಮತ್ತು ಬಹು ಮೌಲ್ಯದ ಬೆಳೆಗಳನ್ನು ಬೆಳೆಯಬೇಕು. ಈ ಯೋಜನೆಯ ಮಾರ್ಗಸೂಚಿಯಂತೆ ಪಾಲಿಹೌಸ್/ನೆರಳು ಪರದೆ ನಿರ್ಮಿಸಲು ಇಲಾಖೆಯಿಂದ ಅನುಮೋದಿತ/ಏಜೆಂಟ್‍ರಿಂದ/ ಸಂಸ್ಥೆಯಿಂದ ಕಾಮಗಾರಿ ಕೈಗೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ/ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲೂಕಿನ ಕಚೇರಿಗಳಲ್ಲಿ ಅಕ್ಟೋಬರ್ 13ರೊಳಗಾಗಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು news and photo date: 22--09--2017

ಎಲ್ಲಾ ಲೇಖನಗಳು ಆಗಿದೆ news and photo date: 22--09--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 22--09--2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-22-09-2017.html

Subscribe to receive free email updates:

0 Response to "news and photo date: 22--09--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ