ಶೀರ್ಷಿಕೆ : ಸಾಕಾಗುವುದಿಲ್ಲ ಮೂರು ಗುಂಡುಗಳು!
ಲಿಂಕ್ : ಸಾಕಾಗುವುದಿಲ್ಲ ಮೂರು ಗುಂಡುಗಳು!
ಸಾಕಾಗುವುದಿಲ್ಲ ಮೂರು ಗುಂಡುಗಳು!
ಕು.ಸ.ಮಧುಸೂದನ್
ಮೊದಲ ಗುಂಡು ಬಿದ್ದಾಗ
ಅದರ ಶಬ್ದಕ್ಕೆ ಎದೆ ನಡುಗಿತು!
ಎರಡನೆ ಗುಂಡು ಬಿದ್ದಾಗ
ಹೃದಯದಿಂದ ರಕ್ತ ಹೊರಚಿಮ್ಮಿತು!
ಮೂರನೇ ಗುಂಡು ಬಿದ್ದಾಗ
ಉಸಿರು ನಿಂತಿತು!
ನಾಲ್ಕನೆಯದಕೆ ಕಾಯುವ ಮೊದಲೇ
ಮಾತು ಸ್ಥಬ್ದವಾಯಿತು..........!
ಹಾಗೆ ನಡುಗಿದ ಎದೆಗೀಗ ಸಾವಿರ
ಉಸಿರ ನಾಳಗಳು ಜೋಡಿಸಲ್ಪಟ್ಟವು-
ರಕ್ತ ಚಿಮ್ಮಿದ ಹೃದಯಕೆ ಅದೆಲ್ಲಿಂದಲೋ
ಹರಿದುಬಂದ ಜನಸಾಗರ ರಕ್ತವ ತುಂಬಿತು.
ಸ್ಥಬ್ದವಾದ ಮಾತು
ಮತ್ತೆ ಹುಟ್ಟಿತು
ನಿಂತು ಹೋದ ಒಂದು ಕೊರಳ ಬದಲಿಗೀಗ
ಲಕ್ಷೋಪಲಕ್ಷ ಕೊರಳುಗಳು
ದನಿಯೆತ್ತಿ ಹಾಡಿದವು!
ನಾನು:
ನಾನು ಗೌರಿ,
ನಾವು ಗೌರಿ!!
ಬಚ್ಚಿಕೊಂಡಿರುವ ಬಂದೂಕುಗಳು
ಬೆಚ್ಚಿದವು
ಕೊಲ್ಲುವ ಕಸಾಯಿಖಾನೆಗಳು ಮುಚ್ಚಿಕೊಂಡವು!
ಹೀಗಾಗಿ ಲೇಖನಗಳು ಸಾಕಾಗುವುದಿಲ್ಲ ಮೂರು ಗುಂಡುಗಳು!
ಎಲ್ಲಾ ಲೇಖನಗಳು ಆಗಿದೆ ಸಾಕಾಗುವುದಿಲ್ಲ ಮೂರು ಗುಂಡುಗಳು! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಾಕಾಗುವುದಿಲ್ಲ ಮೂರು ಗುಂಡುಗಳು! ಲಿಂಕ್ ವಿಳಾಸ https://dekalungi.blogspot.com/2017/09/blog-post_22.html
0 Response to "ಸಾಕಾಗುವುದಿಲ್ಲ ಮೂರು ಗುಂಡುಗಳು!"
ಕಾಮೆಂಟ್ ಪೋಸ್ಟ್ ಮಾಡಿ