ಶೀರ್ಷಿಕೆ : News and Photo Date: 20--9--2017
ಲಿಂಕ್ : News and Photo Date: 20--9--2017
News and Photo Date: 20--9--2017
ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಪ್ರವಾಸ
ಕಲಬುರಗಿ.ಸೆ,20.(ಕ.ವಾ.)-ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಬೀದರ ಜಿಲ್ಲೆಯ ಹುಮನಾಬಾದಿನಿಂದ ರಸ್ತೆ ಮೂಲಕ ಸೆಪ್ಟೆಂಬರ್ 21ರಂದು ಮಧ್ಯಾಹ್ನ 4 ಗಂಟೆಗೆ ಕಲಬುರಗಿಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಚಿವರು ನಂತರ ಅಂದು ಸಂಜೆ 7 ಗಂಟೆಗೆ ಕಲಬುರಗಿ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಸೆಪ್ಟೆಂಬರ್ 22ರಂದು ಬೆಳಗಿನ 8.30 ಗಂಟೆಗೆ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಪ್ರಯಾಣಿಸುವರು.
ಸೆಪ್ಟೆಂಬರ್ 23ರಂದು ರೆಡ್‍ಕ್ರಾಸ್ ಜಿಲ್ಲಾ ಶಾಖೆಯ ಸರ್ವ ಸದಸ್ಯರ ಸಾಮಾನ್ಯ ಸಭೆ
ಕಲಬುರಗಿ.ಸೆ,20.(ಕ.ವಾ.)-ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆಪ್ಟೆಂಬರ್ 23ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈಗಾಗಲೇ ಎಲ್ಲ ಸದಸ್ಯರಿಗೆ ಅಂಚೆ ಮೂಲಕ ಸಭೆಯ ನೋಟೀಸು ಕಳುಹಿಸಲಾಗಿದೆ. ಎಲ್ಲ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಿಂದ ಪ್ರಾಥಮಿಕ-ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ
ಕಲಬುರಗಿ,ಸೆ.20.(ಕ.ವಾ.)-ಜಿಲ್ಲಾ ಪಂಚಾಯಿತಿ ಹಾಗೂ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ 2017-18ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸೆಪ್ಟೆಂಬರ್ 22ರಿಂದ 23ರವರೆಗೆ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಸೆಪ್ಟೆಂಬರ್ 22ರಂದು ಬೆಳಿಗ್ಗೆ 10 ಗಂಟೆಗೆ ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಈ ಕ್ರೀಡಾಕೂಟವನ್ನು ಉದ್ಘಾಟಿಸುವರು. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರ ಘನ ಉಪಸ್ಥಿತಿಯಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಮ್ಮ ಚನ್ನಮಲ್ಲಯ್ಯ ಹಿರೇಮಠ ಅತಿಥಿಗಳಾಗಿ ಆಗಮಿಸುವರು.
ಇನ್ಸ್‍ಪೈರ್ ಆವಾರ್ಡ್: ವಿದ್ಯಾರ್ಥಿಗಳ ನೋಂದಣಿಗೆ ಸೂಚನೆ
ಕಲಬುರಗಿ.ಸೆ,20.(ಕ.ವಾ.)-ಪ್ರಸಕ್ತ 2017-18ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಓದುತ್ತಿರುವ 6 ರಿಂದ 10ನೇ ತರಗತಿಯ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರತಿ ಶಾಲೆಯಿಂದ ಇನ್ಸ್‍ಪೈರ್ ಆವಾರ್ಡ್‍ಗಾಗಿ ಕನಿಷ್ಠ ಇಬ್ಬರು ವಿದ್ಯಾರ್ಥಿಗಳನ್ನು ಆನ್‍ಲೈನ್ ನೋಂದಣಿ ಮಾಡಬೇಕೆಂದು ಕಲಬುರಗಿ ಡಯಟ್‍ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಮರ್ತುಳೆ ಶಶಿಕಾಂತ ಅವರು ತಿಳಿಸಿದ್ದಾರೆ.
ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ನೋಂದಣಿಗಾಗಿ ವಿದ್ಯಾರ್ಥಿಯ ಒಂದು ಭಾವಚಿತ್ರ, ಬ್ಯಾಂಕ್ ಖಾತೆಗಳನ್ನು ತೆಗೆದುಕೊಂಡು ಸಂಬಂಧಿಸಿದ ಬಿ.ಆರ್.ಸಿ. ಕೇಂದ್ರಗಳಲ್ಲಿ ನೋಂದಣಿಯಾದ ನಂತರ ಪ್ರತಿ ಮಗುವಿನ ಕೇಂದ್ರ ಸರ್ಕಾರವು ವಿಜ್ಞಾನ ಮಾದರಿಗಾಗಿ 5000ರೂ.ಗಳನ್ನು ನೇರವಾಗಿ ವಿದ್ಯಾರ್ಥಿಯು ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ನೋಂದಣಿಗೆ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಯಟ್ ನೋಡಲ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರ ಮೊಬೈಲ್ ಸಂಖ್ಯೆ 8105055824ನ್ನು ಸಂಪರ್ಕಿಸಲು ಕೋರಲಾಗಿದೆ.
ತುಳಜಾಪೂರಿನ ಅಂಬಾ ಭವಾನಿ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ
ಕಲಬುರಗಿ.ಸೆ,20.(ಕ.ವಾ.)-ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ದಿಂದ ತುಳಜಾಪುರದಲ್ಲಿ ಜರುಗಲಿರುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಅಕ್ಟೋಬರ್ 8ರವರೆಗೆ ಕಲಬುರಗಿ-ತುಳಜಾಪೂರ, ಚಿಂಚೋಳಿ-ತುಳಜಾಪೂರ, ಕಾಳಗಿ-ತುಳಜಾಪೂರ, ಚಿತ್ತಾಪೂರ-ತುಳಜಾಪೂರ ಹಾಗೂ ಸೇಡಂ-ತುಳಜಾಪೂರ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ಬಸ್‍ಗಳ ಕಾರ್ಯಾಚರಣೆ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಮೇಲ್ಕಂಡ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ಬಸ್‍ಗಳನ್ನು ಕಾರ್ಯಾಚರಣೆ ಮಾಡುತ್ತಿರುವುದಲ್ಲದೇ, ಘಟಕಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಂದ 54 ಜನ ಪ್ರಯಾಣಿಕರು ತುಳಜಾಪೂರಕ್ಕೆ ಪ್ರಯಾಣಿಸಿದಲ್ಲಿ ಅದೇ ಗ್ರಾಮದಿಂದಲೇ ನೇರವಾಗಿ ತುಳಜಾಪುರಕ್ಕೆ ಹೆಚ್ಚಿನ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಸಾರ್ವಜನಿಕ ಪ್ರಯಾಣಿಕರ/ಯಾತ್ರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ವಿಬಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂ. 7760992102, ಕಲಬುರಗಿ ಘಟಕ-1 ಮೊಬೈಲ್ ಸಂ. 7760992113, ಚಿಂಚೋಳಿ-7760992117, ಚಿತ್ತಾಪೂರ-7760992119, ಕಾಳಗಿ-7760992120, ಸೇಡಂ-7760992466 ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕರು-7760992108. ಸಾರ್ವಜನಿಕ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಘಟಕದ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.
530 ಮರಗಳ ಬಹಿರಂಗ ಹರಾಜು
ಕಲಬುರಗಿ,ಸೆ.20.(ಕ.ವಾ.)-ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬೀದರ-ಚಿಂಚೋಳಿ ರಾಜ್ಯ ಹೆದ್ದಾರಿ-15ರ ರಸ್ತೆ ಅಭಿವೃದ್ಧಿ ಮತ್ತು ರಸ್ತೆ ಅಗಲೀಕರಣ ಕಾಮಗಾರಿಗೆ ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ವಿವಿಧ ಜಾತಿಯ ನಿಂತ ಒಟ್ಟು 530 ಮರಗಳ ಬಹಿರಂಗ ಹರಾಜು ಸೆಪ್ಟೆಂಬರ್ 26ರಂದು ಬೆಳಿಗ್ಗೆ 11.30ಗಂಟೆಗೆ ಕಲಬುರಗಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾಡಲಾಗುವುದು. ಸೆಪ್ಟೆಂಬರ್ 26ರಂದು ಹರಾಜು ನಡೆಯದಿದ್ದಲ್ಲಿ ಸೆಪ್ಟೆಂಬರ್ 27ರಂದು ಮರು ಬಹಿರಂಗ ಹರಾಜು ಮಾಡಲಾಗುವುದು ಎಂದು ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಬೀದರ ಕ್ರಾಸ್‍ದಿಂದ ಮೂಗಲಪ್ಪ ಕೆರೆಕಟ್ಟಿ ಜಮೀನವರೆಗೆ ಎಡಬದಿ ಮತ್ತು ಬಲಬದಿ ನಿಂತಿರುವ ಕ್ಯಾಸೀಯಾ ಸಿಮಿಯ್ಯಾ, ಸಿಸ್ಸು, ಬೇವು ಮತ್ತಿತರ ಜಾತಿಯ ನಿಂತ 325 ಮರಗಳನ್ನು ಹಾಗೂ ನಾಗಯ್ಯ ಕೂಟ್ರಕ್ಕಿ ಜಮೀನದಿಂದ ಕೊಳ್ಳುರ ಗ್ರಾಮವರೆಗೆ ಎಡ ಮತ್ತು ಬಲಬದಿ ನಿಂತಿರುವ ಸಿಸ್ಸು, ಕರಿಜಾಲಿ, ಬೇವು, ಬಾಗೆ ಮತ್ತಿತರ ಜಾತಿಯ 205 ಮರಗಳು ಸೇರಿದಂತೆ ಒಟ್ಟು 530 ಮರಗಳನ್ನು ಹರಾಜು ಮಾಡಲಾಗುವುದು. ಇಚ್ಛೆಯುಳ್ಳವರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಇ.ಎಂ.ಡಿ. ಮೊತ್ತ, ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಬಿ.ವಿ. ಕಾರಂತರು ಕಂಡಿರುವ ರಂಗಾಯಣದ ಕನಸು ನನಸಾಗಿಸಿ
ಕಲಬುರಗಿ,ಸೆ.20.(ಕ.ವಾ.)-ರಂಗ ಭೀಷ್ಮ ಬಿ.ವಿ. ಕಾರಂತರು ಕಂಡಿರುವ ರಂಗಾಯಣದ ಕನಸನ್ನು ರಂಗಾಯಣದ ಯುವ ಕಲಾವಿದರು ಹಾಗೂ ರಂಗಾಸಕ್ತರು ನನಸಾಗಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ತಿಳಿಸಿದರು.
ಕಲಬುರಗಿಯ ರಂಗಾಯಣದಿಂದ ಡಾ. ಎಸ್.ಎಂ.ಪಂಡಿತರ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಂಗಭೀಷ್ಮ ಬಿ.ವಿ. ಕಾರಂತರಿಗೆ ಗುರುನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಬುರಗಿಯ ಹಿರಿಯ ರಂಗಕರ್ಮಿ ಶಂಕ್ರಯ್ಯ ಘಂಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿ.ವಿ. ಕಾರಂತರೊಂದಿಗೆ 45 ದಿನಗಳ ಕಾಲ ಶಿಷ್ಯರಾಗಿ ಅವರು ಕಳೆದ ದಿನಗಳ ಕುರಿತು ಹಾಗೂ ಕಲಬುರಗಿ ರಂಗಾಯಣದ ನಿರ್ದೇಶಕ ಮಹೇಶ ವಿ ಪಾಟೀಲರು ಬಿ.ವಿ. ಕಾರಂತರ ಜೊತೆಗಿದ್ದ ಕೆಲ ಘಟನೆಗಳನ್ನು ನೆನೆಸಿಕೊಂಡರು.
ಕಾರಂತರ ಶಿಷ್ಯರಲ್ಲಿ ಒಬ್ಬರಾದ ಚಂದ್ರಶೇಖರಾಚಾರ್ಯ ಕಾರ್ಯಾಗಾರದ ಕುರಿತು ಹಾಗೂ ಕಾರಂತರೊಡನೆ ತಮ್ಮ ಒಡನಾಟ ಅವರ ಕಾರ್ಯಚಟುವಟಿಕೆಗಳನ್ನು ಅತ್ಯಂತ ಸರಳವಾಗಿ ಹಂಚಿಕೊಂಡರು. ನಂತರ ಅವರು ರಂಗಸಂಗೀತ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
. ಕಾರ್ಯಕ್ರಮದಲ್ಲಿ ವಿಜಯಪುರ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಸುಜಾತಾ ಜಂಗಮ ಶೆಟ್ಟಿ, ಬೆಂಗಳೂರಿನ ಹಿರಿಯ ಬರಹಗಾರ ಲಕ್ಷ್ಮೀ ಕುಲಕರ್ಣಿ, ಹಿರಿಯ ರಂಗಕರ್ಮಿ ಪ್ರಭಾಕಾರ ಸಾತ್‍ಖೇಡ್ ಪಾಲ್ಗೊಂಡಿದ್ದರು. ಸಾಜೀದ ಮತ್ತು ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಗಾರದಲ್ಲಿ ಸುಮಾರು 200ಕ್ಕೂ ಹೆಚ್ಚು ರಂಗಾಸ್ತಕರು ಭಾಗವಹಿಸಿದ್ದರು.
ಸೆ. 25ರಂದು ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಸರ್ವ ಸದಸ್ಯರ ಸಭೆ
ಕಲಬುರಗಿ,ಸೆ.20.(ಕ.ವಾ.)-ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ 2016-17ನೇ ಸಾಲಿನ 36ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆಪ್ಟೆಂಬರ್ 25ರಂದು ಬೆಳಿಗ್ಗೆ 10.30 ಗಂಟೆಗೆ ಆಳಂದ ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
ಕಾರ್ಖಾನೆಯ ಅಧ್ಯಕ್ಷ ಗುರುಲಿಂಗಜಂಗಮ ಎಸ್. ಪಾಟೀಲ ಧಂಗಾಪುರ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯ ನೋಟೀಸು ತಲುಪದೇ ಇದ್ದಲ್ಲಿ ಇದನ್ನೇ ಸಭೆಯ ನೋಟೀಸು ಎಂದು ತಿಳಿದು ಕಾರ್ಖಾನೆಯ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಬೇಕೆಂದು ಕಲಬುರಗಿ ಸಹಕಾರಿ ಸಂಘಗಳ ಉಪನಿಬಂಧಕರು ಹಾಗೂ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಟಿ. ಫಿರೋಜ ತಿಳಿಸಿದ್ದಾರೆ.
ವಾಡಿ ಪುರಸಭೆ: ಡೇ-ನಲ್ಮ ಯೋಜನೆಗಳಡಿ ಅರ್ಜಿ ಆಹ್ವಾನ
ಕಲಬುರಗಿ,ಸೆ.20.(ಕ.ವಾ.)-ವಾಡಿ ಪುರಸಭೆಯಿಂದ 2017-18ನೇ ಸಾಲಿನ ಡೇ-ನಲ್ಮ್ ಯೋಜನೆ ಹಾಗೂ ಶೇ. 24.10., ಶೇ. 7.25 ಯೋಜನೆಗಳಡಿ ವಿವಿಧ ತರಬೇತಿಗಾಗಿ ವಾಡಿ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ವಾಡಿ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ವಯಂ ಉದ್ಯೋಗಕ್ಕಾಗಿ 14 ಗುರಿ ಹಾಗೂ ಲಘು ವಾಹನ ತರಬೇತಿಗೆ 80 ಗುರಿ, ಭಾರಿ ವಾಹನ ಚಾಲನಾ ತರಬೇತಿಗೆ-16 ಗುರಿ, ಶೇ. 24.10 ಅನುದಾನದಡಿ 36 ಗುರಿ, ಶೇ. 7.25 ಅನುದಾನದಡಿ 16 ಗುರಿ ನಿಗದಿಪಡಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟೆಂಬರ್ 30ರ ಸಂಜೆ 5 ಗಂಟೆಯೊಳಗಾಗಿ ವಾಡಿ ಪುರಸಭೆಯ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಾಡಿ ಪುರಸಭೆ ಕಾರ್ಯಾಲಯವನ್ನು ಹಾಗೂ ತಿತಿತಿ.ತಿಚಿಜiಣoತಿಟಿ.gov.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ತಾಲೂಕು ಮಟ್ಟದ ಕ್ರೀಡಾಕೂಟ:
ಗುಂಡಗುರ್ತಿ ವಸತಿ ಶಾಲೆಯ ವಿದ್ಯಾರ್ಥಿನಿಯರ ಸಾಧನೆ
ಕಲಬುರಗಿ,ಸೆ.20.(ಕ.ವಾ.)-ಚಿತ್ತಾಪುರ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡಗುರ್ತಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ, ರಿಲೇ ಓಟ (4ಘಿ100) ಸ್ಪರ್ಧೆಯಲ್ಲಿ ಪ್ರಥಮ, ಥ್ರೋ ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಉದ್ದ ಜಿಗಿತ ಸ್ಪರ್ಧೆಯಲ್ಲಿ ರಂಜನಾ ಶಿವರಾಜ ದ್ವಿತೀಯ ಸ್ಥಾನ ಪಡೆದು ವಸತಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗಾಗಿ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ್ ಆಲ್ದಾರ್ತಿ , ದೈಹಿಕ ಶಿಕ್ಷಕ ಬಸವರಾಜ ಬಿರಾದಾರ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
******

ಹೀಗಾಗಿ ಲೇಖನಗಳು News and Photo Date: 20--9--2017
ಎಲ್ಲಾ ಲೇಖನಗಳು ಆಗಿದೆ News and Photo Date: 20--9--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 20--9--2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-20-9-2017.html
0 Response to "News and Photo Date: 20--9--2017"
ಕಾಮೆಂಟ್ ಪೋಸ್ಟ್ ಮಾಡಿ