ಶೀರ್ಷಿಕೆ : news and photo 19-09-2017
ಲಿಂಕ್ : news and photo 19-09-2017
news and photo 19-09-2017
ಕಲಬುರಗಿಯಲ್ಲಿ ಖಮರುಲ್ ಇಸ್ಲಾಂ ಅವರ ಅಂತಿಮ ದರ್ಶನ ಪಡೆದ ಸಿ.ಎಂ
ಖಮರುಲ್ ಇಸ್ಲಾಂ ಅವರು ಎತ್ತರದ ಜನಪ್ರಿಯ ನಾಯಕ
-ಶ್ರೀ ಸಿದ್ದರಾಮಯ್ಯ
ಕಲಬುರಗಿ.ಸೆಪ್ಟಂಬರ್,19.(ಕ.ವಾ.)- ದಿವಂಗತ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಖಮರುಲ್ ಇಸ್ಲಾಂ ಅವರು ಅಲ್ಪಸಂಖ್ಯಾತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಈ ಸಮುದಾಯದ ಹಕ್ಕುಗಳ ರಚನೆಗಾಗಿ ಮುಂಚೂಣಿಯಲ್ಲಿದ್ದು ಹೋರಾಡಿದ ನಾಯಕ ಎಂದು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಬಣ್ಣಿಸಿದ್ದಾರೆ.
ನಗರದ ಕೆಸಿಟಿ ಕಾಲೇಜು ಮೈದಾನದಲ್ಲಿ ಖಮರುಲ್ ಇಸ್ಲಾಂ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಅವರು ಮಾತನಾಡುತ್ತಿದ್ದರು.
ಖಮರುಲ್ ಇಸ್ಲಾಂ ಅವರು ಈ ಭಾಗದ ತುಂಬಾ ಎತ್ತರದ ಜನಪ್ರಿಯ ನಾಯಕರಾಗಿದ್ದರು. ಸುಧೀರ್ಘ ಕಾಲ ಕಾಂಗ್ರೆಸ್‍ನ ಶಾಸಕ, ಸಂಸದ ಹಾಗೂ ಸಚಿವರಾಗಿ ಸೇವೆಸಲ್ಲಿಸಿದ್ದಾರೆ. ಅವರನ್ನು ನಾನು ಹತ್ತಿರದಿಂದ ಕಂಡಿದ್ದೇನೆ ಎಂದು ಅವರೊಂದಿಗಿನ ಒಡನಾಟವನ್ನು ಮುಖ್ಯಮಂತ್ರಿಗಳು ಮೆಲುಕು ಹಾಕಿದರು.
ಇತ್ತೀಚಿಗೆ ಎಐಸಿಸಿ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದರು. ರಾಷ್ಟ್ರಮಟ್ಟದಲ್ಲಿ ಅವರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ದುರಾದೃಷ್ಟವಶಾತ್ ಇಂದು ನಮ್ಮನ್ನು ಅಗಲಿದ್ದಾರೆ ಎಂದು ಅವರು ವಿಷಾದದಿಂದ ನುಡಿದರು.
ಖಮರುಲ್ ಇಸ್ಲಾಂ ನಿಧನದಿಂದ ರಾಜ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಾ ನಷ್ಟವಾಗಿದೆ ಎಂದು ಹೇಳಿದರು. ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾಥಿಸಿದ ಮುಖ್ಯಮಂತ್ರಿಗಳು, ಮೃತರ ಕುಟುಂಬಕ್ಕೆ ಭಗವಂತ ದು:ಖ ಭರಿಸುವ ಶಕ್ತಿ ನೀಡಲೆಂದು ಕೋರಿದರು.
ಸಂಸದರಾದ ಡಾ|| ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಖಮರುಲ್ ಇಸ್ಲಾಂ ಅವರ ಅಗಲಿಕೆಯಿಂದ ಉತ್ತರ ಕರ್ನಾಟಕ ಬಡವಾಗಿದೆ. ಬಡವರ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು. ಅದರಲ್ಲೂ ವಿಶೇಷವಾಗಿ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದ್ದರು.ಇವರ ಅಗಲಿಕೆಯಿಂದ ಈ ಭಾಗಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಖಮರುಲ್ ಇಸ್ಲಾಂ ಅವರು ಕಾಂಗ್ರೆಸ್ ಪಕ್ಷದಲ್ಲಿ ಸೈನಿಕನಂತೆ ಕೆಲಸ ನಿರ್ವಹಿಸಿದ್ದರು. ಇವರ ಅಗಲಿಕೆಯಿಂದ ಭರಿಸಲಾರದ ನಷ್ಟವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಯು.ಟಿ.ಖಾದರ್, ರೋಶನ್ ಬೇಗ್, ತನ್ವೀರ್ ಸೆÉೀಠ, ಪ್ರೀಯಾಂಕ ಎಂ. ಖರ್ಗೆ, ಈಶ್ವರ ಖಂಡ್ರೆ, ಕೆ.ಪಿ.ಸಿ.ಸಿ ಡಾ|| ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಹಾಪೌರರಾದ ಶರಣಕುಮಾರ ಮೋದಿ, ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ, ಈಶಾನ್ಯ ವಲಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್, ಸಂಸದರು,ಶಾಸಕರು,ಇನ್ನಿತರ ಜನಪ್ರತಿನಿಧಿಗಳು ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮುಸ್ಲಿಂ ವಿಧಿ-ವಿಧಾನ ಪ್ರಕಾರ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಹೀಗಾಗಿ ಲೇಖನಗಳು news and photo 19-09-2017
ಎಲ್ಲಾ ಲೇಖನಗಳು ಆಗಿದೆ news and photo 19-09-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo 19-09-2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-19-09-2017.html
0 Response to "news and photo 19-09-2017"
ಕಾಮೆಂಟ್ ಪೋಸ್ಟ್ ಮಾಡಿ