ಶೀರ್ಷಿಕೆ : NEWS AND PHOTO DATE: 18--09--2017
ಲಿಂಕ್ : NEWS AND PHOTO DATE: 18--09--2017
NEWS AND PHOTO DATE: 18--09--2017
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
ಕಲಬುರಗಿ,ಸೆ.18.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಸೆಪ್ಟೆಂಬರ್ 19ರಂದು ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವರು. ನಂತರ ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ
ನಡೆಸುವರು.
ಸೆ. 19ರಂದು ಸಕಲ ಸರ್ಕಾರಿ ಗೌರವದೊಂದಿಗೆ ದಿ.ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ
ಕಲಬುರಗಿ,ಸೆ.18.(ಕ.ವಾ.)-ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆಯನ್ನು ಸೆಪ್ಟೆಂಬರ್ 19ರಂದು ಆನಂದ ನಗರದಲ್ಲಿರುವ ಕಲಂದರ್ ಖಾನ್ ದರ್ಗಾ ಖಬರಸ್ಥಾನದಲ್ಲಿ ರಾತ್ರಿ ಸುಮಾರು 10 ಗಂಟೆಗೆ ಸರ್ಕಾರಿ ಸಕಲ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದಿ. ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರವು ಬೆಂಗಳೂರಿನಿಂದ ಸೆಪ್ಟೆಂಬರ್ 19ರಂದು ಬೆಳಗಿನ 7 ರಿಂದ 9 ಗಂಟೆಯೊಳಗೆ ಕಲಬುರಗಿಗೆ ಆಗಮಿಸುವ ನಿರೀಕ್ಷೆಯಿದೆ. ಮನೆಯಲ್ಲಿ ಪರಿವಾರ ಸಮೇತವಾಗಿ ಕೈಗೊಳ್ಳುವ ಧಾರ್ಮಿಕ ಆಚರಣೆ ಮುಗಿದ ನಂತರ ಜಿಲಾನಾಬಾದ, ಮಿಸಬಾ ನಗರ ವೃತ್ತ, ಆಳಂದ ಚೆಕ್‍ಪೋಸ್ಟ್, ತಾಜ್ ನಗರ, ಹುಮನಾಬಾದ ಸರ್ಕಲ್, ಮಿಲ್ಲತ ನಗರ ಮಾರ್ಗವಾಗಿ ಕೆ.ಸಿ.ಟಿ. ಕಾಲೇಜಿನ ಮೈದಾನಕ್ಕೆ ಪಾರ್ಥಿವ ಶರೀರವನ್ನು ತರಲಾಗುವುದು. ಬೆಳಗಿನ 10.30ರಿಂದ ಸಂಜೆ 5 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಂಜೆ 5.45 ಗಂಟೆಗೆ ಕೆ.ಸಿ.ಟಿ. ಕಾಲೇಜು ಮೈದಾನದಲ್ಲಿ ಮುಸ್ಲಿಂ ಧರ್ಮದ ಪ್ರಕಾರ ನಮಾಜ ಮತ್ತು ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ, ದಿ. ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರವನ್ನು ಸರ್ಕಾರಿ ಗೌರವದೊಂದಿಗೆ ಮಹ್ಮದ ರಫೀಕ್ ಚೌಕ್, ಬಿಬಿ ರೋಜಾ ಕಾಲೇಜು, ಫರಾನ್ ಕಾಲೇಜು, ಮುಸ್ಲಿಂ ಚೌಕ್, ಗಂಜ್, ಹುಮನಾಬಾದ್ ಬೇಸ್, ಸುಪರ ಮಾರ್ಕೆಟ್, ಜಗತ್ ಸರ್ಕಲ್, ಎಸ್.ವಿ.ಪಿ. ಚೌಕ್, ಕೋರ್ಟ ರಸ್ತೆ ಮಾರ್ಗವಾಗಿ ಕಲಂದರ ಖಾನ್ ದರ್ಗಾ ಖಬರಸ್ಥಾನಕ್ಕೆ ಆಗಮಿಸಿ ರಾತ್ರಿ 10 ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಪೊಲೀಸ್ ಬಲವಿದೆ. ದಿ. ಖಮರುಲ್ ಇಸ್ಲಾಂ ಅವರ ಅಂತ್ಯಸಂಸ್ಕಾರದ ವೇಳೆ ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಹೆಚ್ಚಿನ ಪೊಲೀಸರ ಅವಶ್ಯಕತೆಯಿದ್ದಲ್ಲಿ ನೆರೆ ಜಿಲ್ಲೆಯ ಸಹಾಯ ಪಡೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಐ.ಪಿ.ಎಸ್. ಪ್ರೊಬೇಷನರಿ ಅಧಿಕಾರಿ ಲೋಕೇಶ ಬಿ ಜಗಲಾಸರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತ ರಾಚಪ್ಪ, ಶಿಷ್ಠಾಚಾರ ತಹಸೀಲ್ದಾರ ಪ್ರಕಾಶ ಚಿಂಚೋಳಿಕರ್ ಹಾಜರಿದ್ದರು.
ಹಕ್ಕುಗಳ ಚ್ಯುತಿಯಾಗದಂತೆ ಸಹೋದರತ್ವದಿಂದ ಬಾಳಬೇಕು
ನ್ಯಾ. ಎಸ್.ಆರ್.ಬನ್ನೂರಮಠ
ಕಲಬುರಗಿ,ಸೆ.18.(ಕ.ವಾ.)-ಮಾನವ ಹಕ್ಕುಗಳ ಅಧುನಿಕ ಪರಿಕಲ್ಪನೆಯಾದ “ವಸುದೈವ ಕುಟುಂಬಕ್ಕಂ” ರಂತೆ ವಿಶ್ವವೇ ಒಂದು ಕುಟುಂಬ ನಾವೆಲ್ಲರು ಅದರ ಸದಸ್ಯರು. ಇನ್ನೊಬರ ಹಕ್ಕುಗಳಿಗೆ ಚ್ಯುತಿಯಾಗದಂತೆ ನಾವೆಲ್ಲರು ಒಂದೇ ಎಂಬ ಮನೋಭಾವನೆಯಿಂದ ಹಾಗೂ ಸಹೋದರತ್ವದಿಂದ ಬಾಳಬೇಕು ಎಂದು ಮಹಾರಾಷ್ಟ್ರ ರಾಜ್ಯದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಹೇಳಿದರು.
ಅವರು ಸೋಮವಾರ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ನ್ಯಾಯಾಂಗದ ದೃಷ್ಠಿಯಲ್ಲಿ ಜೀವನದ ಹಕ್ಕು-ಅನುಚ್ಚೇಧ 21ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಂವಿಧಾನದ 21ನೇ ವಿಧಿಯು ದೇಶದ ಪ್ರತಿ ನಾಗರಿಕನಿಗೂ ಘನತೆಯಿಂದ ಜೀವಿಸುವ ಹಕ್ಕು ನೀಡಿದೆ. ಈ ಅನುಚ್ಛೇಧವು ಒಂದು ರೀತಿಯಲ್ಲಿ ಮಾನವ ಹಕ್ಕುಗಳ ತಾಯಿ ಇದ್ದಂತೆ. ವೇದಕಾಲದಲ್ಲಿಯೆ ಸರ್ವೇಜನಾ ಸುಖಿನೋ ಭವಂತು, ಸರ್ವೇ ಭದ್ರಾಣಿ ಎಂಬ ಮಹಾಮಂತ್ರ ಹೇಳಲಾಗಿದ್ದು, ಸರ್ವರು ಸುಖವಾಗಿರಬೇಕು ಆರೋಗ್ಯವಾಗಿರಬೇಕು ಎಂಬುದೆ ಇದರ ಸದಾಶಯವಾಗಿದೆ. ಇನ್ನೊಬ್ಬರ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದು, ಅವರ ಹಕ್ಕುಗಳನ್ನು ಕಸಿದಿಕೊಳ್ಳುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇದು ನ್ಯಾಯಾಂಗದ ದೃಷ್ಠಿಯಲ್ಲಿ ಅಪರಾಧವಾಗುತ್ತದೆ. ಪ್ರಜಾಪ್ರಭುತ್ವ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯ ಸರ್ವಾಂಗೀಣ ಅಭಿವೃದ್ಧಿಗೆ ಖಾಸಗಿ ಹಕ್ಕು, ಶಿಕ್ಷಣದ ಹಕ್ಕು, ವೇತನ ಹಕ್ಕು, ಆರೋಗ್ಯ. ಸಾಮಾಜಿಕ ಭದ್ರತೆ ಹಕ್ಕುಗಳು ನೀಡಲಾಗಿದೆ. ಮೂಲಭೂತ ಹಕ್ಕುಗಳು ವೈಯಕ್ತಿಕವಾಗಿದ್ದರೆ ಮಾನವ ಹಕ್ಕುಗಳ ಸಾರ್ವತ್ರಿಕವಾಗಿವೆ. ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಧ್ವನಿ ಎತ್ತುವುದರೊಂದಿಗೆ ಮೂಲಭೂತ ಕರ್ತವ್ಯಗಳನ್ನು ನಾವು ಪಾಲಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನವು ಒಂದು ಸ್ಮಾರಕ ಗ್ರಂಥವಾಗಿದ್ದು, ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ಸಮೂಹ ಅಧ್ಯಯನ ಮಾಡಬೇಕು. ಯಾವುದೇ ಕಾರಣಕ್ಕು ಮಾನವೀಯತೆಯ ಅಂಶಗಳನ್ನು ಕಳೆದುಕೊಳ್ಳದೆ ಭಾತೃತ್ವದಿಂದ ಜೀವನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಂಗನಿಂದ ಮನುಷ್ಯರಾದ ಮಾನವರು, ಭೂಮಿಯ ಮೇಲೆ ಜೀವಿಸುವ ಜೀವಿಗಳ ಪೈಕಿ ಅತಿ ಹೆಚ್ಚು ಬುದ್ಧಿವಂತರಾಗಿದ್ದರೂ ಸಹ ಮಾನವನಿಂದಲೆ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ತಾನು ಬದುಕಿ ಇತರರನ್ನು ಬದುಕಿಸುವ ತತ್ವದಡಿ ಜೀವನ ನಡೆಸಬೇಕಾಗಿದೆ. ಅದು ಧಾರ್ಮಿಕ ಹೆಸರಿನ ಮೇಲೆ, ರಾಜಕೀಯ ಪ್ರೇರಿತ ಹಿಂಸೆ ಅಥವಾ ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಿನನಿತ್ಯ ನಾವು ಮಾಧ್ಯಮದಲ್ಲಿ ಕಾಣುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಇತರರ ಹಕ್ಕುಗಳ ಉಲ್ಲಂಘನೆಯಾಗದಂತೆ ನಾವು ನೋಡಿಕೊಳ್ಳಬೇಕಾಗಿದೆ. ವಿಶ್ವ ಯುದ್ಧಗಳ ನಂತರ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆದ ಪರಿಣಾಮ ವಿಶ್ವ ಸಂಸ್ಥೆ ಸ್ಥಾಪನೆಯಾಯಿತು. 1948ರ ಪ್ಯಾರಿಸ್ ಸಮ್ಮೇಳನದ ನಿರ್ಣಯದ ಪ್ರಕಾರ ಆಯಾ ದೇಶಗಳಲ್ಲಿ ಮಾನವ ಹಕ್ಕುಗಳ ಆಯೋಗವನ್ನು ರಚಿಸಲು ತೀರ್ಮಾನ ಕೈಗೊಳ್ಳಲಾಯಿತು. ಜಿನೀವಾ ಒಪ್ಪಂದದ ಪ್ರಕಾರ ಭಾರತದಲ್ಲಿ 1993ರಲ್ಲಿ ಮಾನವ ಹಕ್ಕುಗಳ ಆಯೋಗ ರಚನೆಗೆ ಕಾಯ್ದೆ ರೂಪಿಸಲಾಗಿ ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವು ಮಾನವ ಹಕ್ಕುಗಳ ಉಲ್ಲಂಘನೆಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಎಚ್.ಎಂ.ಮಹೇಶ್ವರಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ ಜಿ.ಆರ್.ನಾಯಕ್, ಕುಲಸಚಿವ ಪ್ರೊ. ಚಂದ್ರಕಾಂತ ಎಂ.ಯಾತನೂರ, ಸಹಾಯಕ ಕುಲಸಚಿವ ಡಾ. ರವಿಂದ್ರ ಪಂಡಿತ, ಹಣಕಾಸು ಅಧಿಕಾರಿ ಶಿವಾನಂದನ್, ಪ್ರೊ. ಚನ್ನವೀರ ಆರ್.ಎಂ., ಗಣೇಶ ಪವಾರ, ಪ್ರೊ. ಅಸ್ಲಂ, ಪ್ರೊ. ಜೋಹರ್, ಡಾ.ಶಿವಗಂಗಮ್ಮಾ ರುಮ್ಮಾ ಇತರರು ಉಪಸ್ಥಿತರಿದ್ದರು. ಪ್ರೊ. ಎನ್.ನಾಗರಾಜ ಸ್ವಾಗತಿಸಿದರೆ ಪ್ರೊ. ಅಪ್ಪುಗೆರೆ ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಸೆಪ್ಟೆಂಬರ್ 19ರಂದು ಶ್ರೀ ಬಿ.ವಿ. ಕಾರಂತರಿಗೆ ಗುರು ನಮನ
ಕಲಬುರಗಿ,ಸೆ.18.(ಕ.ವಾ.)-ಕಲಬುರಗಿ ರಂಗಾಯಣದಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ರಂಗಭೀಷ್ಮ ಶ್ರೀ ಬಿ.ವಿ. ಕಾರಂತರಿಗೆ “ಗುರು ನಮನ”ವನ್ನು ಸೆಪ್ಟೆಂಬರ್ 19ರಂದು ಸಾಯಂಕಾಲ 4 ಗಂಟೆಗೆ ಏರ್ಪಡಿಸಲಾಗಿದೆ.
ಮೈಸೂರಿನ ಬಿ.ವಿ. ಕಾರಂತರ ಶಿಷ್ಯರು ಮತ್ತು ರಂಗ ಸಂಗೀತ ತಜ್ಞ ಚಂದ್ರಶೇಖರಾಚಾರ್ಯ ಈ ಕಾರ್ಯಕ್ರಮ ಉದ್ಘಾಟಿಸುವರು. ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ ಹಿರಿಯ ರಂಗಕರ್ಮಿ ಪ್ರೊ. ಪ್ರಭಾಕರ ಸಾಥಖೇಡ, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಡಾ. ಸುಜಾತಾ ಜಂಗಮಶೆಟ್ಟಿ, ಹೊಸಪೇಟೆ ರಂಗ ಸಮಾಜದ ಸದಸ್ಯೆ ಸಹನಾ ಪಿ., ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ, ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಶ್ರೀ ಬಿ.ವಿ. ಕಾರಂತರ ರಂಗಗೀತೆಗಳು ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ, ಕಲಬುರಗಿ ರಂಗಾಯಣ ಪ್ರಸ್ತುತಪಡಿಸುವ (ಅಭ್ಯಾಸ ಮಾಲಿಕೆ) ರಂಗಾ-ರಂಗಿ, ಸ್ವಾಮಿರಾವ ಕುಲಕರ್ಣಿ ಅವರ ಹಳೆಗನ್ನಡ ಕಿರುನಾಟಕ ರನ್ನನ ಗಧಾಯುದ್ಧ ಪ್ರದರ್ಶನಗೊಳ್ಳಲಿದೆ.
ಸೆಪ್ಟೆಂಬರ್ 20ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ರಂಗಾಯಣದ ನಟರಂಗದಲ್ಲಿ ಒಂದು ದಿನದ ಶ್ರೀ ಬಿ.ವಿ.ಕಾರಂತರ ಸಂಯೋಜನೆಯ ರಂಗಗೀತೆಗಳ ಸಂಗೀತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕಲಬುರಗಿಯ ಹಿರಿಯ ರಂಗಕರ್ಮಿ ಶಂಕ್ರಯ್ಯ ಘಂಟಿ ಈ ಕಾರ್ಯಾಗಾರವನ್ನು ಉದ್ಘಾಟಿಸುವರು. ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ಅವರ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನ ಬಿ.ವಿ. ಕಾರಂತರ ಶಿಷ್ಯರು ಹಾಗೂ ರಂಗ ಸಂಗೀತ ತಜ್ಞ ಚಂದ್ರಶೇಖರಾಚಾರ್ಯ, ದೇವೇಂದ್ರ ಬಡಿಗೇರ್, ಸಾಜೀದ ಶೇಖ, ಕು. ವಿಜಯಲಕ್ಷ್ಮೀ ಉಪಸ್ಥಿತರಿರುವರು.
ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕಾಗಿ ಶಿಲ್ಪಿಗಳಿಂದ ಅರ್ಜಿ ಆಹ್ವಾನ
ಕಲಬುರಗಿ,ಸೆ.18.(ಕ.ವಾ.)-ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಸಂಪ್ರದಾಯಿಕ ಮತ್ತು ಸಮಕಾಲೀನ ಶಿಲ್ಪಕಲೆಯ ಹದಿಮೂರನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2017ಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ. ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹುಟ್ಟಿದ ಅಥವಾ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ 5 ವರ್ಷ ಮೊದಲು ರಾಜ್ಯದಲ್ಲಿ ನೆಲೆಸಿರುವ 18 ರಿಂದ 45 ವರ್ಷದೊಳಗಿನ ಶಿಲ್ಪಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ ಪ್ರದರ್ಶನಕ್ಕೆ ಗರಿಷ್ಠ ಎರಡು ಅಡಿಗಳ ಪ್ರಮಾಣದ ಲೋಹ, ಮರ, ಕಲ್ಲು, ಮಿಶ್ರ ಮಾಧ್ಯಮದಲ್ಲಿ ಇರಬೇಕು. ಪ್ರದರ್ಶನಕ್ಕೆ ಬರುವ ಶಿಲ್ಪ ಕಲಾಕೃತಿಗಳಲ್ಲಿ 6 ಅತ್ಯುತ್ತಮ ಕಲಾಕೃತಿಗಳಿಗೆ ತಲಾ 25,000ರೂ. ಗಳ ಬಹುಮಾನ ನೀಡಲಾಗುವುದು.
ಶಿಲ್ಪಕೃತಿಗಳನ್ನು ವಿವರಣಾ ಪತ್ರದ ಜೊತೆಗೆ ಸೆಪ್ಟೆಂಬರ್ 11ರಿಂದ ಅಕ್ಟೋಬರ್ 10ರೊಳಗಾಗಿ ಅಕಾಡೆಮಿ ಕಚೇರಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ತಲುಪಿಸಬೇಕು. ಪ್ರವೇಶ ಶುಲ್ಕ 300 ರೂ. ಇದ್ದು, ಶಿಲ್ಪಕೃತಿಗಳ ಪ್ರದರ್ಶನಕ್ಕೆ ಪ್ರವೇಶ ಪಡೆಯಲಿಚ್ಛಿಸುವವರು ವಿವರಣಾ ಪತ್ರವನ್ನು ಕಚೇರಿ ವೇಳೆಯಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ) ಶಿಲ್ಪಕಲಾ ಅಕಾಡೆಮಿಯಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಹಾಗೂ ದೂರವಾಣಿ ಸಂಖ್ಯೆ 080-22278725ನ್ನು ಸಂಪರ್ಕಿಸಲು ಕೋರಿದೆ.
ವಿವರಣಾ ಪತ್ರಗಳನ್ನು ಶಿಲ್ಪಕಲಾ ಅಕಾಡೆಮಿಯಲ್ಲಿ ಅಥವಾ ರಾಜ್ಯದ ಎಲ್ಲ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು, ಅಕಾಡೆಮಿ ತಿತಿತಿ.ಞಚಿಡಿಟಿಚಿಣಚಿಞಚಿshiಟಠಿಚಿಞಚಿಟಚಿಚಿಛಿಚಿಜemಥಿ.oಡಿg ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 080-22278725ನ್ನು ಸಂಪರ್ಕಿಸಲು ಕೋರಿದೆ.
ಅಪ್ರೆಂಟಿಸ್ ತರಬೇತಿಗಾಗಿ ಐಟಿಐ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕಲಬುರಗಿ,ಸೆ.18.(ಕ.ವಾ.)-ಬೆಂಗಳೂರಿನ ಹಿಂದುಸ್ತಾನ ಏರೋನಾಟಿಕ್ ಲಿಮಿಟೆಡ್‍ದಿಂದ ಕೆಳಕಂಡ ವಿವಿಧ ಟ್ರೇಡ್‍ಗಳಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಐಟಿಐ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅಪ್ರಿಂಟಿಸ್ ತರಬೇತಿ ನೀಡುವ ಟ್ರೇಡ್ ಹೆಸರು ಹಾಗೂ ಖಾಲಿ ಹುದ್ದೆಗಳ ವಿವರ. ಫಿಟ್ಟರ್-400, ಟರ್ನರ್-50, ಮಶಿನಿಷ್ಟ-30, ಎಲೆಕ್ಟ್ರಿಶಿಯನ್-60, ವೆಲ್ಡರ್-60, ಪಾಸಾ-50, ಕಾರಪೆಂಟರ್-10, ಫೌಂಡ್ರಿಮನ್-15, ಶೀಟ್ ಮೆಟಲ್ ವರ್ಕ-25. ಅರ್ಹ ಆಸಕ್ತ ಆಭ್ಯರ್ಥಿಗಳು ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಜಿ ನಮೂನೆ ಪಡೆದು ತಿತಿತಿ.ಚಿಠಿಠಿಡಿeಟಿಣiಛಿeshiಠಿ.gov.iಟಿ ವೆಬ್‍ಸೈಟ್‍ನಲ್ಲಿ ನೋಂದಾಯಿಸಿ ನೋಂದಣಿ ಸಂಖ್ಯೆಯನ್ನು ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ., ಐ.ಟಿ.ಐ. ಪಾಸಾದ ಅಂಕಪಟ್ಟಿ, ಜಾತಿ ಪ್ರಮಾಣಪತ್ರ (ಹೊಂದಿದಲ್ಲಿ) ಹಾಗೂ ಒಂದು ಭಾವಚಿತ್ರವನ್ನು ಲಗತ್ತಿಸಿ ಅಕ್ಟೋಬರ್ 3ರೊಳಗಾಗಿ ಸಹಾಯಕ ನಿರ್ದೇಶಕರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಕಲಬುರಗಿ ಕಚೇರಿಯಲ್ಲಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ನೀರಿನ ಟ್ಯಾಂಕರ್ ಖರೀದಿಗೆ ರೈತರಿಗೆ ಸಹಾಯಧನ
ಕಲಬುರಗಿ,ಸೆ.18.(ಕ.ವಾ.)-ತೋಟಗಾರಿಕೆ ರಾಜ್ಯ ವಲಯ ಯೋಜನೆಯಡಿ 2017-18 ನೇ ಸಾಲಿನ ತೋಟಗಳಲ್ಲಿ ಅಂತರ್ಜಲ ಕುಸಿದಿದ್ದು, ಬೇರೆ ಕಡೆಯಿಂದ ಟ್ಯಾಂಕರ್ ಮೂಲಕ ನೀರು ಒದಗಿಸುವುದು ಹಾಗೂ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ನೀರಿನ ಟ್ಯಾಂಕರ್ ಖರೀದಿಸಲು ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ತೋಟಗಾರಿಕೆ ಉಪನಿರ್ದೆಶಕರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ತೋಟಗಾರಿಕೆ ರೈತರಿಗೆ ಶೇ.90 ರಷ್ಟು ಗರಿಷ್ಠ 90,000 ರೂ.ಗಳು ಹಾಗೂ ಸಾಮಾನ್ಯ ರೈತರಿಗೆ ಶೇ.50 ರಷ್ಟು ಗರಿಷ್ಠ 50,000 ರೂ.ಗಳ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗ ರೈತರು ಕನಿಷ್ಠ 1.00 ಹೆಕ್ಟೇರ್ (2.50 ಎಕರೆ) ಪ್ರದೇಶದಲ್ಲಿ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಬೆಳೆದಿರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಕನಿಷ್ಠ 1.00 ಎಕರೆ (0.40 ಹೆಕ್ಟೇರ್) ಪ್ರದೇಶದಲ್ಲಿ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಬೆಳೆದಿರಬೇಕು. ಷರತ್ತು ಹಾಗೂ ಮತ್ತಿತರ ಮಾಹಿತಿಗಾಗಿ ತಮ್ಮ ಸಮೀಪದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಶಿಶಿಕ್ಷು ತರಬೇತಿಗೆ ಮೌಖಿಕ ಸಂದರ್ಶನ
ಕಲಬುರಗಿ,ಸೆ.18.(ಕ.ವಾ.)-ಶಿಶಿಕ್ಷು ಕಾಯ್ದೆ-1961 ರನ್ವಯ ಪೂರ್ಣಾವಧಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-2ದÀಲ್ಲಿ ಲಭ್ಯವಿರುವ ವಿವಿಧ ವೃತ್ತಿಯ ಒಟ್ಟು 80 ಸ್ಥಾನಗಳಿಗೆ ಶಿಶಿಕ್ಷು ತರಬೇತಿದಾರರನ್ನು ಆಯ್ಕೆ ಮಾಡಲು ಆಯಾ ತಾಲೂಕಿನ ಅಭ್ಯರ್ಥಿಗಳಿಗೆ ಆಯಾ ಘಟಕಗಳಲ್ಲಿ ಸೆಪ್ಟೆಂಬರ್ 25, 26, 27, ಹಾಗೂ 28ರಂದು ಮೌಖಿಕ ಸಂದರ್ಶನವನ್ನು ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಫಿಟ್ಟರ್, ಪಾಸಾ, ಮಶಿನಿಷ್ಟ, ವೆಲ್ಡರ್, ಆಟೋ ಎಲೆಕ್ಟ್ರೀಶಿಯನ್, ಎಲೆಕ್ಟ್ರೀಷಿಯನ್, ಎಂ.ಎಂ.ವ್ಹಿ. ಟರ್ನರ್, ಡೀಸೆಲ್ ಮೆಕ್ಯಾನಿಕ್ ವೃತ್ತಿಗಳಿಗೆ ಶಿಶಿಕ್ಷು ತರಬೇತಿಗಾಗಿ ಸೆಪ್ಟೆಂಬರ್ 25ರಂದು ಆಳಂದ ಘಟಕದಲ್ಲಿ, ಸೆಪ್ಟೆಂಬರ್ 26ರಂದು ಅಫಜಲಪುರ ಘಟಕ, ಸೆಪ್ಟೆಂಬರ್ 27ರಂದು ಜೇವರ್ಗಿ ಘಟಕ ಹಾಗೂ ಸೆಪ್ಟೆಂಬರ್ 28ರಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗ-2ರ ಕೇಂದ್ರ ಬಸ್ ನಿಲ್ದಾಣದ ಮೊದಲನೇ ಮಹಡಿಯಲ್ಲಿ ನೇರ ಸಂದರ್ಶನ ಜರುಗಲಿದೆ.
ಅರ್ಹ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಯೊಂದಿಗೆ ಆಧಾರ ಕಾರ್ಡ್ ಮತ್ತು ಕಡ್ಡಾಯವಾಗಿ ಇ-ಮೇಲ್ ವಿಳಾಸದ ಜೊತೆಗೆ ಒಂದು ಜಿರಾಕ್ಸ್ ಪ್ರತಿ ಮತು ಇತ್ತೀಚಿನ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತರಬೇಕು. ವಿದ್ಯಾರ್ಹತೆ ಮತ್ತು ಖಾಲಿ ಸ್ಥಾನಗಳ ಬಗ್ಗೆ ಮತ್ತು ನೇಮಕಾತಿಯ ಷರತ್ತು ಮತ್ತು ನಿಬಂಧನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-2ರ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ: 7760566880/ 9986849179ಗಳನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-262933ಗೆ ಸಂಪರ್ಕಿಸಿ ಪಡೆಯಲು ಕೋರಿದೆ.
ವಾಲ್ಮೀಕಿ ಪ್ರತಿಮೆ ಅನಾವರಣ
ಕಾರ್ಯಕ್ರಮದಲ್ಲಿ ಭಾಗವಹಿಸುವ ಸಮುದಾಯದ ಮುಖಂಡರು ಹೆಸರು ನೋಂದಾಯಿಸಲು ಸೂಚನೆ
ಕಲಬುರಗಿ,ಸೆ.18.(ಕ.ವಾ.)-ಪ್ರಸಕ್ತ 2017-18ನೇ ಸಾಲಿನಲ್ಲಿ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಅಕ್ಟೋಬರ್ 5ರಂದು ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಶಾಸಕರ ಭವನ ಮುಂಭಾಗದ ವಾಲ್ಮೀಕಿ ತಪೋವನದಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣ ಹಾಗೂ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮುಖ್ಯಮಂತ್ರಿಗಳು ಜಿಲ್ಲೆಯ ಮತ್ತು ತಾಲೂಕಿನಲ್ಲಿರುವ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರನ್ನು ಮೇಲ್ಕಂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಹೋಗಿರುವ ಬರುವ ಜಿಲ್ಲೆಯ ಮತ್ತು ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನು ಸೆಪ್ಟೆಂಬರ್ 30ರೊಳಗಾಗಿ ನೋಂದಾಯಿಸಬೇಕೆಂದು ಜಂಟಿ ನಿರ್ದೆಶಕರು ತಿಳಿಸಿದ್ದಾರೆ.
ಶಹಾಬಾದ: ನಲ್ಮ ಯೋಜನೆಯಡಿ ಅರ್ಜಿ ಆಹ್ವಾನ
ಕಲಬುರಗಿ,ಸೆ.18.(ಕ.ವಾ.)-ದೀನದಯಾಳ ಅಂತ್ಯೋದಯ ಯೋಜನೆ ನಲ್ಮ ಅಭಿಯಾನ ಯೋಜನೆಯಡಿ 2017-18ನೇ ಸಾಲಿನ ಸ್ವಯಂ ಉದ್ಯೋಗ ಮತ್ತು ಗುಂಪು ಉದ್ದಿಮೆಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಹಾಬಾದ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ನಗರಸಭೆ ಶಹಾಬಾದಿಗೆ ಒಟ್ಟು 33 ಭೌತಿಕ ಗುರಿ ಹಾಗೂ ಗುಂಪು ಉದ್ದಿಮೆಗಾಗಿ ಒಟ್ಟು 02 ಗುರಿ ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ಮೀಸಲಾತಿ ಹಾಗೂ ಗುರಿ ವಿವರ ಇಂತಿದೆ. ಪರಿಶಿಷ್ಟ ಜಾತಿ-06, ಪರಿಶಿಷ್ಟ ಪಂಗಡ-02, ಅಲ್ಪಸಂಖ್ಯಾತ-05, ಮಹಿಳೆ-10, ಅಂಗವಿಕಲ-01, ಇತರರು-09.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ ಕಾರ್ಡ, ಇತ್ತೀಚಿನ ನಾಲ್ಕು ಭಾವಚಿತ್ರಗಳು, ಸ್ವಯಂ ಉದ್ಯೋಗ ಮತ್ತು ಗುಂಪು ಉದ್ಯಮಶೀಲತೆ ಘಟಕದಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಫಲಾನುಭವಿಗಳ ಕುಟುಂಬದ ಓರ್ವ ಸದಸ್ಯರು ಕಡ್ಡಾಯವಾಗಿ ಸ್ವ ಸಹಾಯ ಸಂಘದ ಸದಸ್ಯರಾಗಿರಬೇಕು. ಯೋಜನಾ ವರದಿ, ಎಲ್ಲ ದಾಖಲೆಗಳನ್ನು ದೃಢೀಕರಿಸಿ ಅಕ್ಟೋಬರ್ 4ರ ಸಂಜೆ 5.30 ಗಂಟೆಯೊಳಗಾಗಿ ಶಹಾಬಾದ ನಗರಸಭೆಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಶಹಾಬಾದ ನಗರಸಭೆ ಪೌರಾಯುಕ್ತರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ. ಸ
ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹಧನ: ಅರ್ಜಿ ಆಹ್ವಾನ
ಕಲಬುರಗಿ,ಸೆ.18.(ಕ.ವಾ.)-ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2016ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಗಾಗಿ ಸಲ್ಲಿಸಲ್ಪಡುವ ಕೃತಿಯು ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ, ಪಠ್ಯ ಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು.
ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯವಾಗಲಿ ಇರಬಾರದು. ಅಲ್ಲದೇ ರಾಷ್ಟ್ರೀಯ ಭಾವೈಕ್ಯತೆಗೆ ದಕ್ಕೆ ತರುವಂತಹ ವಿಷಯ ಅಥವಾ ಸಂಗತಿಗಳು ಪ್ರಸ್ತಾಪವಾಗಿರಬಾರದು.
ಅರ್ಜಿದಾರರು 18 ರಿಂದ 35 ವರ್ಷದವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್‍ಎಸ್‍ಎಲ್‍ಸಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳನ್ನು ಅಥವಾ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಹಸ್ತಪ್ರತಿಯ ಅಥವಾ ಡಿ.ಟಿ.ಪಿ ಪ್ರತಿಯ ಎರಡನೇ ಪ್ರತಿಯನ್ನು ಸಲ್ಲಿಸಬಹುದು. ಅರ್ಜಿಗಳನ್ನು ಅಕ್ಟೋಬರ್ 4ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಇವರಿಗೆ ಸಲ್ಲಿಬೇಕು. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು ಇವರನ್ನು ದೂರವಾಣಿ ಸಂಖ್ಯೆ 080-22484516/22017704ಗಳನ್ನು ಸಂಪರ್ಕಿಸಲು ಕೋರಿದೆ.
ಪೀಠೋಪಕರಣಗಳ ಸರಬರಾಜಿಗಾಗಿ ಅರ್ಜಿ ಆಹ್ವಾನ
ಕಲಬುರಗಿ,ಸೆ.18.(ಕ.ವಾ.)-ಕಲಬುರಗಿಯ ಜಿಲ್ಲಾ ನ್ಯಾಯಾಲಯದ ಘಟಕಕ್ಕೆ ಕಚೇರಿ ಉಪಯೋಗಕ್ಕಾಗಿ ವಿವಿಧ 09 ಮಾದರಿಯ ಪೀಠೋಪಕರಣಗಳನ್ನು ಸರಬರಾಜು ಮಾಡಲು ಕೆ.ಟಿ.ಪಿ.ಪಿ. ಕಾಯ್ದೆ 1999 ನಿಯಮ 2000ರನ್ವಯ ಅರ್ಹ ತಯಾರಕರು, ಡೀಲರ್ ಮತ್ತು ಸರಬರಾಜುದಾರರಿಂದ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವ್ಹಿ.ಪಾಟೀಲ್ ತಿಳಿಸಿದ್ದಾರೆ.
ಸರಬರಾಜು ಮಾಡುವ ಪೀಠೋಪಕರಣಗಳ ವಿವರ ಇಂತಿದೆ. ಸ್ಟೀಲ್ ಸ್ಲೋಟೆಡ್ ಆ್ಯಂಗಲ್ ರ್ಯಾಕ್ ದೊಡ್ಡದ್ದು, ಸ್ಟೀಲ್ ಅಲಮಾರಿ, ವುಡನ್ ಚಿಕ್ಕ ಟೇಬಲ್, ವುಡನ್ ಈಜಿ ಚೇರ್, ಹೈ ಬ್ಯಾಕ್ ರಿವಾಲ್ವಿಂಗ್ ಕುಷನ್ ಚೇರ್, ಟೈಪಿಸ್ಟ್ ರಿವಾಲ್ವಿಂಗ್ ಕುಷನ್ ಚೇರ್, ಸಾಗುವಾನಿ ಹಾರ್ಸ್ ಶೋ ಟೇಬಲ್, ಸಾಗುವಾನಿ ಬೆಂಚ್ ವಿಥ್ ಬ್ಯಾಕ್ ಮತ್ತು ಕಂಪ್ಯೂಟರ್ ಟೇಬಲ್.
ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಕಚೇರಿಯಿಂದ ಕೆಲಸದ ದಿನಗಳಂದು ಬೆಳಿಗ್ಗೆ 10.30 ರಿಂದ ಸಾಯಂಕಾಲ 5 ಗಂಟೆಯವರೆಗೆ ಟೆಂಡರ್ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅದರೊಂದಿಗೆ ಇ.ಎಂ.ಡಿ 10,000 ರೂ. ಡಿ.ಡಿ./ಎಫ್‍ಡಿಆರ್ ಯನ್ನು ಲಗತ್ತಿಸಿದ ಭದ್ರಪಡಿಸಿದ ಅರ್ಜಿಯ ಎರಡು ಲಕೋಟೆಗಳನ್ನು ಅಕ್ಟೋಬರ್ 12ರ ಸಾಯಂಕಾಲ 4ಗಂಟೆಯೊಳಗಾಗಿ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಸಲ್ಲಿಸಬೇಕು. ಒಂದನೇ ಲಕೋಟೆಯಲ್ಲಿ ಡಿ.ಡಿ./ಎಫ್‍ಡಿಆರ್ ಮತ್ತು ಎರಡನೇ ಲಕೋಟೆಯಲ್ಲಿ ಟೆಂಡರ್ ಸಂಬಂಧಪಟ್ಟ ಅರ್ಜಿ, ಪ್ರಮಾಣ ಪತ್ರಗಳು, ಜಿ.ಎಸ್.ಟಿ. ನೋಂದಣಿ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳು ಇರಬೇಕು.
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು ಅಕ್ಟೋಬರ್ 13ರಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ಪೀಠೋಪಕರಣಗಳ ವಿವರ, ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಸೆ. 20ರಿಂದ ಮೈಸೂರಿನಲ್ಲಿ ರಾಜ್ಯಮಟ್ಟದ ದಸರಾ ಕ್ರೀಡಾಕೂಟ
ಕಲಬುರಗಿ,ಸೆ.18.(ಕ.ವಾ.)-ಪ್ರಸಕ್ತ 2017-18ನೇ ಸಾಲಿನ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟವನ್ನು ಮೈಸೂರಿನಲ್ಲಿ ಸೆಪ್ಟೆಂಬರ್ 20 ರಿಂದ 24ರವರೆಗೆ ಏರ್ಪಡಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕರು ತಿಳಿಸಿದ್ದಾರೆ.
ಕಲಬುರಗಿ ವಿಭಾಗ ದಸರಾ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟುಗಳು ಸೆಪ್ಟೆಂಬರ್ 20ರ ಮಧ್ಯಾಹ್ನ 3 ಗಂಟೆಯೊಳಗಾಗಿ ನಂಜರಾಜ್ ಬಹದ್ದೂರ ಛತ್ರ, ರೈಲ್ವೆ ಸ್ಪೇಶನ್ ಸಮೀಪ, ಮೈಸೂರಿನಲ್ಲಿ ವರದಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳಾಗಿ ಮೊಬೈಲ್ ಸಂಖ್ಯೆ 8197058425 ಸಂಪರ್ಕಿಸಲು ಕೋರಿದೆ. ಅದೇ ರೀತಿ ರಾಜ್ಯ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಕಾರ್ಯದರ್ಶಿ, ಕುಸ್ತಿ ಉಪಸಮಿತಿ, ಮೈಸೂರು ದೂರವಾಣಿ ಸಂಖ್ಯೆ 0821-6554955, 2412101ಗಳನ್ನು ಸಂಪರ್ಕಿಸಲು ಕೋರಿದೆ.

ಹೀಗಾಗಿ ಲೇಖನಗಳು NEWS AND PHOTO DATE: 18--09--2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 18--09--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 18--09--2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-18-09-2017.html
0 Response to "NEWS AND PHOTO DATE: 18--09--2017"
ಕಾಮೆಂಟ್ ಪೋಸ್ಟ್ ಮಾಡಿ