ಶೀರ್ಷಿಕೆ :
ಲಿಂಕ್ :
ಸಕ್ಕರೆ ಸೀಮೆಯಲ್ಲಿ ಗೇರು ಕೃಷಿ,
ಬೆಳೆ ಬದಲಾವಣೆಯತ್ತ ಬತ್ತದ ನಾಡು
# ನೀರಿನ ಕೊರತೆ ಸರಿದೂಗಿಸಲು ರೈತರ ಜಾಣ್ಮೆ
ಸಕ್ಕರೆ ನಾಡು ಮಂಡ್ಯ ಜಿಲ್ಲೆ ಹಸಿ ಬತ್ತ,ಬಿಸಿ ಬೆಲ್ಲಕ್ಕೆ ಪ್ರಖ್ಯಾತಿ. ಕಾವೇರಿ ನದಿಗೆ ಕನ್ನಂಬಾಡಿ ಸಮೀಪ ಕೃಷ್ಣರಾಜಸಾಗರ (ಕೆಆರ್ಎಸ್) ಅಣೆಕಟ್ಟು ನಿಮರ್ಾಣ ಮಾಡುವ ಮುನ್ನಾ ಮಂಡ್ಯ ಜಿಲ್ಲೆಯ ರೈತರು ಮಳೆಯಾಶ್ರಯದಲ್ಲೆ ಬೆಳೆ ಬೆಳೆಯುತ್ತಿದ್ದರು. ಕೆಆರ್ಎಸ್ ನಿಮರ್ಾಣವಾದ ನಂತರ ಜಿಲ್ಲೆಯ ಸ್ಥಿತಿ ಸಂಪೂರ್ಣ ಬದಲಾಯಿತು. ಬತ್ತ ಮತ್ತು ಕಬ್ಬು ಪ್ರಮುಖ ಬೆಳೆಯಾದವು. ಅಣೆಕಟ್ಟು ನಿಮರ್ಾಣಕ್ಕೆ ಮೊದಲು ಜಿಲ್ಲೆಯ ರೈತರು ಬರಕ್ಕೆ ಎದುರಿರಲಿಲ್ಲ. ನೀರಾವರಿ ಆದ ನಂತರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಸದ್ದು ಮಾಡತೊಡಗಿವೆ.
ಅನಿವಾರ್ಯತೆ ಮತ್ತು ಅವಶ್ಯಕತೆಗಳು ಬದಲಾವಣೆಗೆ ನಾಂದಿಯಾಡುತ್ತವೆ.ಅಂತೆಯೇ ಈಗ ಜಿಲ್ಲೆಯ ರೈತರು ಬದಲಾದ ಹವಾಮಾನ ಪರಿಸ್ಥಿತಿಕ್ಕೆ ಹೊಂದಿಕೊಂಡು ತಮ್ಮ ಬೆಳೆ ಪದ್ಧತಿಯನ್ನು ಬದಲಿಸಿಕೊಳ್ಳುವತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಮಂಡ್ಯ ಸಮೀಪದ ಗೆಜ್ಜಲಗೆರೆಯ ಯುವ ಕೃಷಿಕ ಜಿ.ವಿ.ಚೇತನ್ ಜುಂಜೀರ್ ಕಬ್ಬು,ಬತ್ತ ಬೆಳೆಯುತ್ತಿದ್ದ ಭೂಮಿಯಲ್ಲಿ ಗೋಡಂಬಿ(ಗೇರು) ಬೆಳೆ ಬೆಳೆಯುವ ಮೂಲಕ ಬದಲಾವಣೆಯ ಹೊಸಪರ್ವಕ್ಕೆ ನಾಂದಿ ಆಡಿದ್ದಾರೆ.
ಮಂಡ್ಯ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೊಗ್ಗಲಲ್ಲೇ ಇರುವ ಗೆಜ್ಜಲಗೆರೆ ಬಳಿ ಇರುವ ಒಂದುವರೆ ಎಕರೆ ಪ್ರದೇಶದಲ್ಲಿ ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ ಹತ್ತು ಅಡಿಗೆ ಒಂದರಂತೆ 500 ಗೋಡಂಬಿ ಗಿಡಗಳನ್ನು ಬೆಳೆಸಿರುವ ಚೇತನ್ ಎರಡನೆ ವರ್ಷದಿಂದಲೇ ಆದಾಯಗಳಿಸುತ್ತಿದ್ದಾರೆ. ಅಷ್ಟೇ ಅಲ್ಲಾ ಮತ್ತೂ ಮೂರುವರೆ ಎಕರೆಯಲ್ಲಿರುವ ಕಬ್ಬು ಬೆಳೆಯನ್ನು ತೆಗೆದು ಗೋಡಂಬಿ ಸಸಿಗಳನ್ನು ನಾಟಿಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಗೋಡಂಬಿ ಬೆಳೆಯುತ್ತಿರುವುದರ ಬಗ್ಗೆ ಕೇಳಿದಾಗಲೇ ನಮಗೆ ಆಶ್ಚರ್ಯವಾಗಿತ್ತು.ಮಳೆಯಾಶ್ರಿತ.ಅರೆ ನೀರಾವರಿ, ಖುಷ್ಕಿ ಪ್ರದೇಶದಲ್ಲಿ ಗೋಡಂಬಿ ಬೆಳೆಯಲು ರೈತರು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಇದ್ದ ನಮಗೆ ಚಿನ್ನದಂತ ಭೂಮಿಯಲ್ಲಿ ಗೇರು ಬೆಳೆಯುತ್ತಿರುವುದನ್ನು ನೋಡಿದಾಗ ಹವಾಮಾನ,ಮಾರುಕಟ್ಟೆ,ಅತಿವೃಷ್ಠಿ,ಅನಾವೃಷ್ಠಿಗೆ ಹೊಂದಿಕೊಂಡು ಗೋಡಂಬಿ ಬೆಳೆಯಲು ಧೈರ್ಯಮಾಡಿದ ಚೇತನ್ ಅವರ ಜಾಣ್ಮೆ ಅರ್ಥವಾಯಿತು. ಗುಂಡ್ಲುಪೇಟೆ ತಾಲೂಕಿನಿಂದ ಚೇತನ್ ಅವರ ಗೇರು ತೋಟಕ್ಕೆ ಹೋಗಿದ್ದ ನಮ್ಮ ರೈತರ ತಂಡಕ್ಕೆ ತಾಲೂಕಿನಲ್ಲೂ ಗೇರು ಬೆಳೆಯುವ ಆತ್ಮವಿಶ್ವಾಸ ಹೆಚ್ಚಾಯಿತು.
ನೀರಿಗೆ ಕೊರತೆ ಇಲ್ಲ : ಮಂಡ್ಯ ಜಿಲ್ಲೆಯಲ್ಲಿ ನೀರಿಗೆ ಅಷ್ಟೇನೂ ಕೊರತೆ ಇಲ್ಲ.ಕಾವೇರಿ,ಹೇಮಾವತಿ,ಲೋಕಪವಾನಿ,ಶಿಂಷಾ,ವೀರವೈಷ್ಣವಿ ನದಿಗಳು ಇಲ್ಲಿನ ರೈತರ ಕೈಹಿಡಿದಿವೆ. ಕೆಆರ್ಎಸ್ ಜಲಾಶಯದ ವಿಶ್ವೇಶ್ವರನಾಲೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಎತ್ತ ನೋಡಿದರೂ ಬತ್ತ,ಕಬ್ಬಿನ ಗದ್ದೆಗಳು.ಅಕ್ಕಿ ಗಿರಣಿಗಳು,ಕಬ್ಬು ಅರೆಯುವ ಕಾಖರ್ಾನೆಗಳು. ದುರಂತವೆಂದರೆ ಅತಿಯಾದ ನೀರಿನ ಬಳಕೆಯೆ ರೈತರ ಪಾಲಿಗೆ ಶಾಪವಾಗಿದೆ. ಅತಿ ನೀರು ಬಳಕೆಯಿಂದ ಮಣ್ಣು ಜವಳು ಭೂಮಿಯಾಗುತ್ತಿದೆ.ಇಳುವರಿ ಕ್ರಮೇಣ ಕಡಿಮೆಯಾಗುತ್ತಿದೆ.ವೆಚ್ಚ ಮತ್ತು ಆದಾಯಕ್ಕೆ ಅಜಗಜಾಂತರವಾಗಿ ರೈತರು ಚಿಂತಿಗೀಡಾಗಿದ್ದಾರೆ.
ಈ ನಡುವೆ ಮುಂಚಿತವಾಗಿ ಬರುವ ಮುಂಗಾರು,ತಡವಾಗಿ ಬರುವ ನೈರುತ್ಯ ಮುಂಗಾರಿನಿಂದ ಭಿತ್ತನೆ ಸಮಯದ ಮೇಲೂ ದುಷ್ಪರಿಣಾಮವಾಗುತ್ತಿದೆ. ಕಳೆದ ಎರಡುಮೂರು ವರ್ಷಗಳಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ನಾಲೆಗಳಿಗೆ ನೀರು ಬಿಡುವುದನ್ನು ಬಂದ್ ಮಾಡಲಾಗಿದೆ.
ರೈತರು ಬತ್ತ,ಕಬ್ಬು ಬೆಳೆಯುವ ಬದಲು ರಾಗಿ,ಜೋಳ.ಸಿರಿಧಾನ್ಯಗಲನ್ನು ಬೆಳೆದುಕೊಳ್ಳುವಂತೆ ಸಕರ್ಾರವೇ ಹೇಳುತ್ತಿದೆ.ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ.ವರ್ಷದಿಂದ ವರ್ಷಕ್ಕೆ ಉಲ್ಬಣವಾಗುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ಜಾಣ ರೈತರು ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಕೃಷಿಕ ಪ್ರಯೋಗಶೀಲನಾಗಬೇಕು : ಈ ಮುಂಚೆ ಗೆಜ್ಜಲಗೆರೆಯ ಚೇತನ್ ಅವರು ಬತ್ತ,ಕಬ್ಬು ಬೆಳೆಗಾರರೆ.ಅವರೀಗಾ ಗೋಡಂಬಿ ಕೃಷಿಕರಾಗಿದ್ದಾರೆ.ಕೆ.ಎಂ.ದೊಡ್ಡಿ ಭಾರತಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಚೇತನ್ ತಮ್ಮ ಬಿಡುವಿನ ವೇಳೆಯನ್ನು ಕೃಷಿಗೆ ಕೊಡುವ ಮೂಲಕ ಪ್ರಯೋಗಶೀಲತೆಗೆ ಮುಂದಾಗಿದ್ದಾರೆ.ಅವರಿಂದ ಪ್ರಭಾವಿತರಾದ ನೂರಾರು ರೈತರು ಈಗ ಗೋಡಂಬಿ ಕೃಷಿಮಾಡಲು ಮುಂದಾಗಿದ್ದಾರೆ. ತಮ್ಮ ಸುತ್ತಮುತ್ತಲಿನ ರೈತರು ಬೆಳೆ ಪದ್ಧತಿ ಬದಲಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ.
ಬತ್ತ,ಕಬ್ಬು ಬೆಳೆಯುವಂತಹ ಈ ಭೂಮಿಯಲ್ಲಿ ಯಾಕೆ ಗೇರು ಬೆಳೆಯಲು ನೀವು ಧೈರ್ಯಮಾಡಿದಿರಿ ಎಂದು ಚೇತನ್ ಅವರನ್ನು ಕೇಳಿದಾಗ, ಅದರ ಹಿಂದಿನ ಪ್ರೇರಣೆ ಮತ್ತು ಸ್ಫೂತರ್ಿಯನ್ನು ನಮ್ಮ ತಂಡದ ಎದುರು ತೆರೆದಿಟ್ಟರು.
ಕಳೆದ ಎರಡು ವರ್ಷಗಳಿಂದ ಚೇತನ್ ಗೋಡಂಬಿ ಕೃಷಿ ಮಾಡುತ್ತಿದ್ದಾರೆ.ಒಂದುವರೆ ಎಕರೆ ಪ್ರದೇಶದಲ್ಲಿ ವೆಂಗೂರ್ಲಾ 4 ತಳಿಯ ಗೇರು ಸಸಿಗಳನ್ನು ನಾಟಿ ಮಾಡಿರುವ ಅವರು ಎರಡನೆ ವರ್ಷದಲ್ಲೇ ಎರಡುಮಕ್ಕಾಲು ಕ್ವಿಂಟಾಲ್ ಗೋಡಂಬಿ ಕಚ್ಚಾಬೀಜ ಉತ್ಪಾದನೆ ಮಾಡಿದ್ದಾರೆ. ಕಬ್ಬಿಗಿಂತ ಗೋಡಂಬಿ ಲಾಭದಾಯಕ ಬೆಳೆ ಎನ್ನುವುದು ಅವರ ಅನುಭವ.
ಇವರೆಲ್ಲರ ಪ್ರೇರಣೆಯಿಂದ ಗೋಡಂಬಿ ಬೆಳೆಯಲು ತೀಮರ್ಾನಿಸಿದೆ ಎನ್ನುವ ಚೇತನ್ ಜುಂಜೀರ್ ಗೋಡಂಬಿ ಬೆಳೆಯುತ್ತಿದ್ದ ಕರಾವಳಿ ಪ್ರದೇಶ ಪುತ್ತೂರು,ಮಂಗಳೂರು ಸೇರಿದಂತೆ ರಾಜ್ಯಸ ನಾನಾ ಕಡೆ ಸುತ್ತಾಡಿ ತೋಟಗಳನ್ನು ನೋಡಿ ರೈತರ ಅನುಭವಗಳನ್ನು ಕೇಳಿಸಿಕೊಂಡಿದ್ದಾರೆ.
"ಗೋಡಂಬಿ ಬೆಳೆಯುವ ತೋಟಗಳಿಗೆ ಹೋಗಿ ಬಂದ ನಂತರ ನಂತರ ಎರಡು ಎಕರೆಯಲ್ಲಿ ಗೋಡಂಬಿ ಸಸಿಗಳನ್ನು ನಾಟಿಮಾಡಿದೆ.ಲಾಭದಾಯಕ ಎನಿಸಿತು. ಈಗ ಮೂರು ಎಕರೆ ಕಬ್ಬು ಇದೆ.ನಂತರ ಅದನ್ನು ತೆಗೆದು ಗೋಡಂಬಿ ಹಾಕಲು ತೀಮರ್ಾನಿಸಿದ್ದೇನೆ. ಒಂದೂವರೆ ಎಕರೆಯಲ್ಲಿ ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ 10*10 ಅಡಿಗೆ 500 ಸಸಿ ಹಾಕಿದ್ದೇನೆ.ಕರಾವಳಿ ಭಾಗದಲ್ಲಿ ಗಿಡಗಳು ನಮ್ಮಲ್ಲಿ ಬೆಳವಣಿಗೆಯಾದಂತೆ ಬೇಗ ಆಗುವುದಿಲ್ಲ. ಗಿಡಗಳು ಚೆನ್ನಾಗಿ ಬೆಳೆಯಲು ಕನಿಷ್ಠ ನಾಲ್ಕರಿಂದ ಐದು ವರ್ಷಬೇಕು. ನಮ್ಮಲ್ಲಿ ಎರಡು ವರ್ಷಕ್ಕೆ ಗಿಡಗಳು ಚೆನ್ನಾಗಿ ಬೆಳೆದು ಹಣ್ಣು ಬಿಡಲು ಶುರುವಾಗಿಬಿಡುತ್ತದೆ. ಸಧ್ಯ ತಮ್ಮ ತೋಟದಲ್ಲಿರುವ ಗಿಡಗಳನ್ನು ಫ್ರೂನಿಂಗ್ ಮಾಡಿದ್ದೇನೆ. ಈಗ ನೀವು ನೋಡುತ್ತಿರುವ ಗಿಡಗಳು ಇದರ ಮೂರು ಪಟ್ಟು ಬೆಳೆದು ದೊಡ್ಡದಾಗಿದ್ದವು.ಕಳೆದ ಅಗಸ್ಟ್ನಲ್ಲಿ ಫ್ರೂನಿಂಗ್ ಮಾಡಿ ಗಿಡಗಳ ಗಾತ್ರವನ್ನು ಕಡಿಮೆ ಮಾಡಿದ್ದೇನೆ. ಜನವರಿ ತಿಂಗಳವರೆಗೆ ಗಿಡಗಳು ಬೆಳವಣಿಗೆ ಹೊಂದುತ್ತವೆ. ಜನವರಿಗೆ ಹೂ ಬಿಟ್ಟು ಒಂದೆರಡು ತಿಂಗಳಲ್ಲಿ ಗೋಡಂಬಿ ಬೀಜ ಸಿಗುತ್ತದೆ" ಎನ್ನುತ್ತಾರೆ.
ಫ್ರೂನಿಂಗ್ ಮಾಡುವುದರ ಮತ್ತೊಂದು ಅನುಕೂಲವೆಂದರೆ ಗಿಡದಲ್ಲಿ ಕವಾಟುಗಳು ಹೆಚ್ಚು ಬರುತ್ತವೆ. ಹೆಚ್ಚು ಇಳುವರಿಯೂ ದೊರೆಯುತ್ತದೆ. ಪ್ರತಿ ವರ್ಷವೂ ಫ್ರೂನಿಂಗ್ ಮಾಡಿಕೊಳ್ಳುವುದು ಒಳ್ಳೆಯದು ಎಂದೂ ಸಲಹೆ ನೀಡುತ್ತಾರೆ
ಮಹಾರಾಷ್ಟ್ರದಿಂದ ಮಂಡ್ಯಕ್ಕೆ : ಎರಡು ವರ್ಷದ ಹಿಂದೆ ಕೇಂದ್ರ ಸಕರ್ಾರ ಯೋಜನೆಯೊಂದರಲ್ಲಿ ರಾಜ್ಯದಲ್ಲಿ ಗೋಡಂಬಿ ಬೆಳೆಸಲು ದಕ್ಷಿಣ ಭಾರತ ಗೋಡಂಬಿ ಅಭಿವೃದ್ಧಿ ಮಂಡಳಿಯ ನಿದರ್ೇಶಕರಾಗಿದ್ದ ನಾಗರಾಜು ಅವರು ಮಹಾರಾಷ್ಟ್ರದ ವೆಂಗೂರ್ಲಾದಿಂದ ಒಂದು ಟ್ಯಾಂಕರ್ನಲ್ಲಿ ಮೂರು ಲಕ್ಷ ಗಿಡಗಳನ್ನು ತರಿಸಿದ್ದರು. ಆಗ ಈ ಬೆಳೆಯ ಮಹತ್ವ ಅರ್ಥವಾಗದೆ ಸಸಿಗಳನ್ನು ತೆಗೆದುಕೊಂಡು ಹೋದ ರೈತರು ಸರಿಯಾಗಿ ನಿರ್ವಹಣೆ ಮಾಡದೆ ಎಲ್ಲಾ ಹಾಳುಮಾಡಿದರು. ಈಗ ಗೋಡಂಬಿ ಕೃಷಿಯ ಮಹತ್ವ ಗೊತ್ತಾಗಿದೆ.ಗಿಡಗಳು ಸಿಗುದೆ ಪರಿತಪಿಸುತ್ತಿದ್ದಾರೆ ಎನ್ನುತ್ತಾರೆ ಚೇತನ್.
ಮಂಡ್ಯ,ಮೈಸೂರು,ಚಾಮರಾಜನಗರ,ಹಾಸನ ವಿಭಾಗದ ರೈತರು ಒಟ್ಟಾಗಿ ಗೋಡಂಬಿ ಬೆಳೆಗಾರರ ಸಂಘ ಕಟ್ಟಿಕೊಂಡು ಸಂಘಟಿತರಾದರೆ ಗೋಡಂಬಿ ಸಂಸ್ಕರಣೆ ಮತ್ತು ಗೇರು ಹಣ್ಣಿನಿಂದ ಪಾನೀಯ ತಯಾರುಮಾಡುವ ಕಾಖರ್ಾನೆಯನ್ನು ನಮ್ಮದೆ ಭಾಗದಲ್ಲಿ ತರಬಹುದು, ಆ ಮೂಲಕ ರೈತರು ಆಥರ್ಿಕವಾಗಿ ಸಬಲರಾಗಬಹುದು ಎನ್ನುತ್ತಾರೆ.
ತಮ್ಮ ಮೂರು ಎಕರೆಯಲ್ಲಿ 22*22 ಅಡಿಗೆ ಒಂದರಂತೆ ಗೋಡಂಬಿ ಗಿಡಗಳನ್ನು ಹಾಕಿ ನಡುವೆ ಅಂತರ ಬೇಸಾಯ ಮಾಡಲು ತೀಮರ್ಾನಿಸಿರುವ ಚೇತನ್ ಗೋಡಂಬಿ ಬೆಳೆಯಲು ಆಸಕ್ತಿವಹಿಸಿ ನೋಡಲು ಬಂದವರಿಗೆ ಕೆಲವೊಂದು ಸಲಹೆ,ಸೂಚನೆಯನ್ನು ಕೊಡುತ್ತಾರೆ.
ಆದರೆ ಗೋಡಂಬಿ ಕೃಷಿಯಲ್ಲಿ ಇಂತಹ ಕಷ್ಟಗಳು ಇಲ್ಲ. ಈ ಬೆಳೆಗೆ ಅಷ್ಟಾಗಿ ಕಾಮರ್ಿಕರು ಬೇಕಾಗಿಲ್ಲ.ಒಂದು ಸಾರಿ ಗಿಡ ಹಾಕಿದ ನಂತರ ಮೂರ್ನಾಲ್ಕು ವರ್ಷ ಪೋಷಣೆ ಮಾಡಬೇಕು. ಆ ನಂತರ ಇದು ಮಳೆಯಾಶ್ರಯದಲ್ಲಿ ತನಗೆ ತಾನೇ ಬೆಳೆದುಕೊಳ್ಳುತ್ತದೆ. ವರ್ಷದಲ್ಲಿ ಎರಡು ಬಾರಿ ಮುಂಜಾಗ್ರತವಾಗಿ ನೋಡಿಕೊಳ್ಳಬೇಕು. ಅಗಸ್ಟ್,ಸೆಪ್ಟಬಂರ್ ತಿಂಗಳಲ್ಲಿ ಗೊಬ್ಬರ ಕೊಡಬೇಕು. ಚಳಿಗಾಲದಲ್ಲಿ (ನವೆಂಬರ್ ಅಂತ್ಯ ಡಿಸೆಂಬರ್) ಟಿ ಮಸ್ಕಿಟೋ ಎಂಬ ಸೊಳ್ಳೆ ಬರುತ್ತದೆ. ಅದಕ್ಕೆಲ್ಲ ಜೈವಿಕ,ರಾಸಾಯನಿಕ ಔಷಧಿಗಳಿವೆ ಒಂದೆರಡು ಬಾರಿ ಸಿಂಪರಣೆ ಮಾಡಿದರೆ ಬೇರೆ ರೀತಿಯ ರಿಸ್ಕ್ ಇಲ್ಲ.
ಹೂ ಬಿಡುವ ಸಮಯದಲ್ಲಿ ಹೆಚ್ಚು ನೀರು ಕೊಡಬಾರದು.ಬಿಸಿಲು ಬಂದಷ್ಟು ಹೂ ಹೆಚ್ಚು ಬರುತ್ತದೆ.ನಂತರ ಕಚ್ಚಾ ಗೋಡಂಬಿ ಬೀಜಗಳು ಸಿಗುತ್ತವೆ" ಅದರಿಂದ ಇದು ಲಾಭದಾಯಕ ಕೃಷಿ ಎನ್ನುವುದು ಅನುಭವಕ್ಕೆ ಬಂದಿದೆ ಎನ್ನುತ್ತಾರೆ.
"ಈಗ ರೈತರು ಬದಲಾಗುತ್ತಿದ್ದಾರೆ.ನಮ್ಮೂರು ಗೆಜ್ಜಲಗೆರೆಯಲ್ಲೆ ನೋಡುವುದಾದರೆ ರೈತರು ಈಗ ತೋಟಗಾರಿಕಾ ಬೆಳೆಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.ಮೊದಲು ಬರಿ ಬತ್ತ,ಕಬ್ಬು ಅಬ್ಬಾಬ್ಬ ಅಂದ್ರೆ ರಾಗಿ ಬೆಳೆಯುತ್ತಿದ್ದರು. ಈಗ ಬಾಳೆ,ಹೂ,ತರಕಾರಿ,ರೇಷ್ಮೆ,ಗೋಡಂಬಿಯಂತಹ ತೋಟಗಾರಿಕೆ ಬೆಳೆಗಳನ್ನು ಹಾಕುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ತಾನೇ ಮೊದಲು ಗೋಡಂಬಿ ನಾಟಿ ಮಾಡಿದ್ದು. ಮೊದಲ ವರ್ಷವೇ ಹೂ ಬಿಟ್ಟಿತ್ತು. ಆದರೆ ಹೂ ಕಿತ್ತು ಹಾಕಿದೆ. ಗಿಡಗಳು ಚೆನ್ನಾಗಿ ಬೆಳೆದವು.ಎರಡನೇ ವರ್ಷ ಹೂ ಬಿಟ್ಟೆ ಎರಡುಮುಕ್ಕಾಲು ಕ್ವಿಂಟಾಲ್ ಗೋಡಂಬಿ ಕಚ್ಚಾಬೀಜ ಸಿಕ್ಕಿತು ಪುತ್ತೂರು, ಮಂಗಳೂರು,ಚಿಂತಾಮಣಿಯಲ್ಲಿ ಗೋಡಂಬಿ ಮಾರುಕಟ್ಟೆ ಇದೆ. ಪ್ರತಿ ಕ್ವಿಂಟಾಲ್ ಬೀಜವನ್ನು 17 ಸಾವಿರ ರೂಪಾಯಿಗೆ ಮಾರಾಟಮಾಡಿದೆ. ಒಂದೆರಡು ದಿನ ತಡೆದಿದ್ದರೆ 20 ಸಾವಿರ ರೂಪಾಯಿಗೆ ಹೋಗುತ್ತಿತ್ತು.ಈ ಬೆಳೆಯ ಮತ್ತೊಂದು ವೈಶಿಷ್ಠ್ಯವೆಂದರೆ ಬೀಜವನ್ನು ಒಂದು ವರ್ಷದವರೆಗೂ ದಾಸ್ತಾನು ಮಾಡಿ ದರ ಬಂದಾಗ ಮಾರಾಟಮಾಡಬಹುದು ಎನ್ನುತ್ತಾರೆ.ಗೇರು ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಜಿ.ವಿ.ಚೇತನ್ ಜುಂಜೀರ್ 9916017097 ಅವರನ್ನು ಸಂಪಕರ್ಿಸಬಹುದು.
ಹೀಗಾಗಿ ಲೇಖನಗಳು
ಎಲ್ಲಾ ಲೇಖನಗಳು ಆಗಿದೆ
ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/09/blog-post_58.html
0 Response to " "
ಕಾಮೆಂಟ್ ಪೋಸ್ಟ್ ಮಾಡಿ