ಶೀರ್ಷಿಕೆ : ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ
ಲಿಂಕ್ : ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ
ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ
ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ರೈತರು ದ್ರಾಕ್ಷಿ ಬೆಳೆ ಬೆಳೆಯುವಂತೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಮಗ್ರ ತೋಟಗಾರಿಕೆ ಅಬಿsವೃದ್ದಿ ಯೋಜನೆಯಡಿ ದ್ರಾಕ್ಷಿ ಬೆಳೆಯಲು ಆಯ್ಕೆಯಾದ ಮಂಗಳೂರು ಹೋಬಳಿಯ ಫಲಾನುಭವಿ ರೈತರಿಗೆ ಒಂದು ದಿನದ ಪ್ರಥಮ ಹಂತದ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಯಲಬುರ್ಗಾ ತಾಲೂಕು ವಣಗೇರಿ ಗ್ರಾಮದ ಶರಣಪ್ಪ ಹುಣಸ್ಯಾಳ ಇವರ ತೋಟದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲ್ಲೂಕು ಪಂಚಾಯತ ಸದಸ್ಯ ಶಂಕರೇಗೌಡ ತಳಕಲ್ಲ ಅವರು ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಉತ್ತಮ ರೈತಪರ ಯೋಜನೆಗಳು ರೈತರ ಮನೆ ಬಾಗಿಲಿಗೆ ತಲುಪುತ್ತಿದ್ದು, ನಾವೆಲ್ಲ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯಲಬುರ್ಗಾ ರೈತ ಉತ್ಪಾದಕ ಕಂಪನಿ ಅದ್ಯಕ್ಷ ಮಲ್ಲಣ್ಣಾ ಕೋನನಗೌಡರು ಕಂಪನಿ ಬಗ್ಗೆ ವಿವರವಾಗಿ ತಿಳಿಸಿ, ರೈತರು ಗುಂಪು ರಚನೆ ಮಾಡಿಕೊಂಡಲ್ಲಿ ರೈತರಿಗೆ ಆಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ವಿಷಯತಜ್ಞ ವಾಮನಮೂರ್ತಿರವರು ದ್ರಾಕ್ಷಿ ಬೆಳೆಯ ಬೇಸಾಯ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಲಿಂಗಣ್ಣವರ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಫಸಲಿನಿಂದ ಲಾಭ ಪಡೆದು ಆರ್ಥಿಕವಾಗಿ ಮುಂದು ಬರಬೇಕೆಂದು ರೈತರಿಗೆ ಕರೆ ನೀಡಿದರು.
ಪ್ರಗತಿ ಪರ ರೈತ ಅಶೋಕ ಯರಾಸಿ ಅವರು ದ್ರಾಕ್ಷಿ ಬೆಳೆ ಬೇಸಾಯ ಕುರಿತಂತೆ ಅನುಭವ ಹಂಚಿಕೊಂಡರು. ತೋಟಗಾರಿಕೆ ಅಧಿಕಾರಿ ಉಮೇಶ ಕಾಳೆ, ಸಹಾಯಕ ತೋಟಗಾರಿಕೆ ಅದಿsಕಾರಿ ರಮೇಶ ಗುಡಿಸಾಗರ ಕಾರ್ಯಕ್ರಮ ನಿರೂಪಿಸಿದರು. ದ್ರಾಕ್ಷಿ ಬೆಳೆಯ ತೋಟಗಾರಿಕೆ ಸಹಾಯಕ ವಿಜಯಭಾಸ್ಕರ, ಪ್ರಗತಿಪರ ರೈತರಾದ ಶೇಖರಪ್ಪ, ವೆಂಕಪ್ಪ, ರಾಮಣ್ಣಾ ಮುಂತಾದವರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ
ಎಲ್ಲಾ ಲೇಖನಗಳು ಆಗಿದೆ ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ ಲಿಂಕ್ ವಿಳಾಸ https://dekalungi.blogspot.com/2017/09/blog-post_988.html
0 Response to "ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ"
ಕಾಮೆಂಟ್ ಪೋಸ್ಟ್ ಮಾಡಿ