ಶೀರ್ಷಿಕೆ : ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ
ಲಿಂಕ್ : ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ
ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ
ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಪ್ರಸಕ್ತ ಸಾಲಿನ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕೈಮಗ್ಗ/ ವಿದ್ಯುತ್ ಮಗ್ಗ ಕೂಲಿ ನೇಕಾರರಿಗೆ ಎರಡು ವಿದ್ಯುತ್ ಮಗ್ಗ ಖರೀದಿಸಲು ಶೇ.90 ರಷ್ಟು ಸಹಾಯಧನ ನೀಡಲು ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗರಿಷ್ಟ ಯೋಜನಾ ಮೊತ್ತ ರೂ. 3.00 ಲಕ್ಷಗಳಿದ್ದು ಶೇ.10 ರಷ್ಟು ಫಲಾನುಭವಿಯ ವಂತಿಕೆ ಭರಿಸಲು ಆರ್ಥಿಕವಾಗಿ ಸಾಮಥ್ರ್ಯರಿರಬೇಕು ಅಥವಾ ಬ್ಯಾಂಕಿನಿಂದ ಸಾಲ ಮಂಜೂರಾತಿ ಪಡೆಯಬೇಕು. ಅರ್ಜಿ ಸಲ್ಲಿಸಲು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕೈಮಗ್ಗ ಅಥವಾ ವಿದ್ಯುತ್ ಮಗ್ಗ ಅನುವಂಶಿಕ ನೇಕಾರರಾಗಿರಬೇಕು. ಅಥವಾ ಇಲಾಖೆಯಿಂದ ಅನುಮೋದನೆ ಪಡೆದ ತರಬೇತಿ ಕೇಂದ್ರದಲ್ಲಿ ಇಲಾಖೆಯ ತರಬೇತಿ ಯೋಜನೆಯಡಿಯಲ್ಲಿ ವಿದ್ಯುತ್ ಮಗ್ಗ ನೇಕಾರಿಕೆ ವೃತ್ತಿಯಲ್ಲಿ ತರಬೇತಿ ಪಡೆದಿರಬೇಕು. ಸ್ವಂತ ಮನೆಯಲ್ಲಿ 2 ವಿದ್ಯುತ್ ಮಗ್ಗ ಸ್ಥಾಪಿಸಲು ಸ್ಥಳಾವಕಾಶ ಹೊಂದಿರಬೇಕು. 2 ವಿದ್ಯುತ್ ಮಗ್ಗ ಸ್ಥಾಪಿಸುವ ಕಟ್ಟಡಕ್ಕೆ ದಿನದ 24 ಘಂಟೆ 3ಪೆಸ್ ಲೈನ್ ವಿದ್ಯುತ್ ಪೂರೈಕೆ ಇರಬೇಕು ವಯೋಮಿತಿ 18 ರಿಂದ 35 ವರ್ಷದೊಳಗಿನವರಾಗಿರಬೇಕು. ಈ ಹಿಂದೆ ಇದೇ ಯೋಜನೆಯಡಿ ಸಹಾಯಧನ ಪಡೆದಿರಬಾರದು. ಅರ್ಹತೆ ಹೊಂದಿರುವ ನೇಕಾರರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವೇಶನದ ದಾಖಲಾತಿ, ವಿದ್ಯುತ್ ಸಂಪರ್ಕ ದೃಢೀಕರಣ ಪತ್ರ, ಯಂತ್ರೋಪಕರಣಗಳ ಕೋಟೆಶನ್, ಯೋಜನಾ ವರದಿ ಹಾಗೂ ಇತ್ತೀಚಿನ ಭಾವ ಚಿತ್ರದೊಂದಿಗೆ ನಿಗದಿಪಡಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು ದ್ವಿಪ್ರತಿಯಲ್ಲಿ ಭರ್ತಿ ಮಾಡಿ, ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ.ಕಂಪೌಂಡ್, ಅಶೋಕ್ ಸರ್ಕಲ್, ಕೊಪ್ಪಳ ಇವರಿಗೆ ಅ. 13 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08539-230069 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/09/90.html
0 Response to "ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ