ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ

ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ
ಲಿಂಕ್ : ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ

ಓದಿ


ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ


ಕೊಪ್ಪಳ ಸೆ. 07 (ಕರ್ನಾಟಕ ವಾರ್ತೆ): ಬದುಕಿನ ಸಂಧ್ಯಾಕಾಲದಲ್ಲಿ ಇಳಿ ವಯಸ್ಸಿಗೆ ಅಂಜದೇ ಕ್ರೀಡೆಯಲ್ಲಿ ಭಾಗವಹಿಸಲು ಬಂದಿದ್ದು, ಇಂದಿನ ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ ಎಂದು ಕೊಪ್ಪಳದ ಸಶಸ್ತ್ರ ಮೀಸಲು ಪಡೆ ಅಧಿಕಾರಿ ಗಣೇಶ ಅವರು ಹೇಳಿದರು.
 
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಜಿಲ್ಲಾ ಪೆÇಲೀಸ್ ಕ್ರೀಡಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
 
    ಹಿರಿಯ ನಾಗರೀಕರು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿದಾಯಕರಾಗಿದ್ದು, ಕ್ರೀಡೆ ಎಂಬುದು ಕೇವಲ ಯುವಕರು, ಮಕ್ಕಳು, ವಿದ್ಯಾರ್ಥಿಗಳಿಗಷ್ಟೇ ಸೀಮಿತವಲ್ಲ.  ಹಿರಿಯರು ಕೂಡ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮಲ್ಲಿ ಅಡಗಿದ  ಪ್ರತಿಭೆಯನ್ನು ಪ್ರದರ್ಶಿಸಬಹುದು.  ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.  ದಿನಕ್ಕೆ ಒಂದು ಬಾರಿ ಮಕ್ಕಳ ಜೊತೆ ಮಕ್ಕಳಾಗಿ ಹಾಗೂ ಹಿರಿಯರ ಜೊತೆ ಸ್ನೇಹಭಾವದ ಒಡನಾಟದೊಂದಿಗೆ ಇರಬೇಕು ಅಂದಾಗ ಮಾತ್ರ ಜೀವನದ ಮೌಲ್ಯಗಳನ್ನು ಅರಿತುಕೊಳ್ಳಲು ಸಾಧ್ಯ.  ಯುವಕರಿಗೆ ಹಿರಿಯರ ಸಲಹೆ, ಸೂಚನೆಗಳು ಹಾಗೂ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಗಣೇಶ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಿವೃತ್ತ ಪ್ರಾಚಾರ್ಯ ಸಿ.ಬಿ ಜಡಿಯವರ್ ಅವರು ಮಾತನಾಡಿ, ಹಿರಿಯರಿಗೆ ವಯಸ್ಸಾಗಿದೆ ಎಂದು ನಿರ್ಲಕ್ಷ್ಯ ಮಾಡಬಾರದು, ಏಕೆಂದರೆ ಅವರಲ್ಲಿ ಜೀವನದ ಅನುಭವ ಅಡಗಿರುತ್ತದೆ.  ಅವರು ಅನುಭವದ ಗಣಿಗಳು.  ಹಿರಿಯರು ವಿಚಾರವಾದಿಗಳಾಗಿ, ಎಲ್ಲರಿಗೂ ಮಾರ್ಗದರ್ಶನ ನೀಡಬೇಕು.  ಒಂದು ದೊಡ್ಡದಾದ ಮರ ಇದೆ ಅಂದರೆ, ಅಲ್ಲಿಗೆ ಎಲ್ಲಾ ಪ್ರಾಣಿ ಪಕ್ಷಿಗಳು ಬರುತ್ತವೆ.  ಅದೇರೀತಿ ನಾವು ಒಂದು ಸಂಘಟನೆಯನ್ನು ಮಾಡಿಕೊಂಡು ಬೆಳೆಯಬೇಕು.  ಸಂಘಟನೆಯಲ್ಲಿ ಬಲ ಇದೆ.  ಹಿರಿಯರೂ ಕೂಡ ಸಂಘಟಿತರಾಗಿ, ಸಂಘಟನೆಯನ್ನು ಬೆಳೆಸಬೇಕು ಎಂದು ಹಿರಿಯ ನಾಗರಿಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಷ್ಟಗಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಶಿವಶಂಕರ ಗೋನಾಳ, ನಿವೃತ್ತ ವಿಶೇಷ ಪರಿವೀಕ್ಷಕ ನಾಗಪ್ಪ ಬಳಿಗಾರ, ಕನಕಗಿರಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಮಹಾಂತೇಶ ತಾಡಪತ್ರೆ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ  ಅಧಿಕಾರಿ ಜಗದೀಶ ಕೆಂಪ್ಪಲಿಂಗಣ್ಣ, ಹಿರಿಯರಾದ ಅನ್ನಪೂರ್ಣ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಸಶಸ್ತ್ರ ಮೀಸಲು ಪಡೆ ಅಧಿಕಾರಿ ಗಣೇಶ ಅವರು ಗುಂಡು ಎಸೆಯುವುದರ ಮೂಲಕ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.  ನಂತರ ಹಿರಿಯ ನಾಗರಿಕರಿಗೆ ನಡಿಗೆ, ಗುಂಡು ಎಸೆತ, ಓಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ನಡೆಸಲಾಯಿತು.   


ಹೀಗಾಗಿ ಲೇಖನಗಳು ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ

ಎಲ್ಲಾ ಲೇಖನಗಳು ಆಗಿದೆ ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ ಲಿಂಕ್ ವಿಳಾಸ https://dekalungi.blogspot.com/2017/09/blog-post_78.html

Subscribe to receive free email updates:

0 Response to "ಯುವ ಪೀಳಿಗೆಗೆ ಹಿರಿಯ ನಾಗರಿಕರು ಸ್ಪೂರ್ತಿದಾಯಕರಾಗಿದ್ದಾರೆ : ಆರ್.ಪಿ.ಐ ಗಣೇಶ"

ಕಾಮೆಂಟ್‌‌ ಪೋಸ್ಟ್‌ ಮಾಡಿ