ಶೀರ್ಷಿಕೆ : ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಯುವಕರಿಂದ ಅರ್ಜಿ ಆಹ್ವಾನ
ಲಿಂಕ್ : ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಯುವಕರಿಂದ ಅರ್ಜಿ ಆಹ್ವಾನ
ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಯುವಕರಿಂದ ಅರ್ಜಿ ಆಹ್ವಾನ
ಕೊಪ್ಪಳ ಸೆ. 15 (ಕರ್ನಾಟಕ ವಾರ್ತೆ): ಕೊಪ್ಪಳ ಕೃಷಿ ಇಲಾಖೆ ರಾಜ್ಯ ವಲಯ ಯೋಜನೆಯಡಿಯಲ್ಲಿ ಗ್ರಾಮೀಣ ಮಟ್ಟದಲಿ,್ಲ ಕೊಪ್ಪಳ ಜಿಲ್ಲೆಯಲ್ಲಿ ಮೂರು, ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಗ್ರಾಮೀಣ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಯಂತ್ರೋಪಕರಣ, ಪಂಪ್‍ಸೆಟ್, ಬೋರೆವೆಲ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳು ದುರಸ್ತಿಗೆ ಒಳಗಾದಾಗ ರೈತರಿಗೆ ಇವುಗಳ ರಿಪೇರಿ ಮಾಡಿಕೊಡಲು ಅನುಕೂಲವಾಗಲಿದೆ. ಗ್ರಾಮೀಣ ಯುವಕರನ್ನು ಕೃಷಿಯೆಡೆಗೆ ಆಕರ್ಷಿಸಲು ಮತ್ತು ಸ್ಥಳೀಯ ಸಣ್ಣ ಕೃಷಿ ಉಪಕರಣ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರ ಬಳಕೆ ಪ್ರೋತ್ಸಾಹಿಸಲು ಹಾಗೂ ಯುವ ರೈತರನ್ನು ಕೃಷಿಯಲ್ಲಿಯೇ ಮುಂದವರೆಯಲು ಉದ್ಯೋಗವಕಾಶ ಸೃಷ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಹೆಚ್ಚು ಕೃಷಿ ಚಟುವಟಿಕೆ ಇರುವ ಹೋಬಳಿಗಳಲ್ಲಿ ಈ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.
ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು. 20*15 ಅಡಿ ಅಳತೆ ಕೊಠಡಿ ಅಥವಾ ಗೋದಾಮ ಹೊಂದಿರಬೇಕು. ಕೃಷಿ ಎಂಜಿನೀಯರಿಂಗ್ ಡಿಪ್ಲೋಮಾ, ಕೃಷಿ ಡಿಪ್ಲೋಮಾ, ಅಟೋಮೋಬೈಲ್ ಡಿಪ್ಲೋಮಾ, ಮೆಕ್ಯಾನಿಕಲ್ ಡಿಪ್ಲೋಮಾ, ಐಟಿಐ, ಪಿಯುಸಿ ಪಾಸಾದ ಗ್ರಾಮೀಣ ಅಭ್ಯರ್ಥಿಗಳಾಗಿರಬೇಕು. ಒಂದಕ್ಕಿಂತ ಹೆಚ್ಚು ಸಮಾನ ವಿದ್ಯಾರ್ಹತೆ ಹಾಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿದ್ದಲ್ಲಿ, ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಕೇಂದ್ರಗಳಲ್ಲಿ ಯಂತ್ರೋಪಕರಣ ದುರಸ್ತಿಗೆ ಬೇಕಾದ ಟೂಲ್‍ಕಿಟ್, ಗ್ರೈಡಿಂಗ್ ಮಶೀನ್, ಹ್ಯಾಡ್ ಡ್ರಿಲ್ಲಿಂಗ್ ಮಶಿನ್, ವೆಲ್ಡಿಂಗ್ ಮಶಿನ್, ಕಟಿಂಗ್ ಮಶಿನ್ ಸೇರಿದಂತೆ ಅವಶ್ಯಕ ಉಪಕರಣ ಹೊಂದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ.50 ರಷ್ಟು ಅಥವಾ ಗರಿಷ್ಟ ರೂ.5.00 ಲಕ್ಷ ಹಾಗೂ ಪರಿಶಿಷ್ಟ ಪಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ 75 ರಷ್ಟು ಅಥವಾ ಗರಿಷ್ಟ ರೂ. 7.50 ಲಕ್ಷಗಳ ಮಿತಿಯೊಳಗೆ ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಸಹಾಯದನವನ್ನಾಗಿ ಬ್ಯಾಂಕ್ ಸಾಲ ಆಧಾರದ ಮೇಲೆ ಒಂದು ಬಾರಿ (ಬ್ಯಾಕ್ ಎಂಡೆಡ್ ಸಬ್ಸಿಡಿ) ಅನುದಾನ ಲಭ್ಯತೆಗೆ ಅನುಗುಣವಾಗಿ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಪ್ರೋತ್ಸಾಹಧನವನ್ನು ರಾಷ್ಟ್ರೀಕೃತ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ರಾಜ್ಯ ಸಹಕಾರಿ, ಕೃಷಿ ಮತ್ತು ಗ್ರಾಮೀಣ ಅಭೀವೃದ್ದಿ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್, ನಬಾರ್ಡ್‍ಗಳಿಂದ ಸಾಲ ಪಡೆಯಬೇಕು. ಆಯ್ಕೆಯಾದ ಆಭ್ಯರ್ಥಿಗಳು ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರಗಳ ಸ್ಥಾಪನೆಗೆ ಕನಿಷ್ಟ 6 ವರ್ಷ ಕಾರ್ಯ ನಿರ್ವಹಿಸಲು ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ತಾಲ್ಲೂಕವಾರು, ವರ್ಗವಾರು ಅಭ್ಯರ್ಥಿ ಆಯ್ಕೆ ಮಾಡಲಾಗುವುದು.
ಅರ್ಜಿ ನಮೂನೆ ಮತ್ತು ಮಾರ್ಗಸೂಚಿಯನ್ನು ಜಂಟಿ ಕೃಷಿ ನಿರ್ದೇಶಕರ ಕಛೇರಿ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಲ್ಲಿ ಹಾಗೂ ವೆಬ್ ಸೈಟ್ http://ift.tt/2xEIrip; ಮೂಲಕ ಪಡೆಯಬಹುದು. ಅರ್ಜಿಯನ್ನು ಅಕ್ಟೋಬರ್. 03 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರ /ಸಹಾಯಕ ಕೃಷಿ ನಿರ್ದೇಶಕರ ಅಥವಾ ಜಂಟಿ ಕೃಷಿ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ : 08539-221633 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಯುವಕರಿಂದ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಯುವಕರಿಂದ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಯುವಕರಿಂದ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/09/blog-post_59.html
0 Response to "ಕೃಷಿ ಯಂತ್ರೋಪಕರಣಗಳ ಅಥವಾ ಸೇವಾ ಕೇಂದ್ರ ತೆರೆಯಲು ಯುವಕರಿಂದ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ