ಶೀರ್ಷಿಕೆ : ಸೆ. 21 ರಿಂದ ಹುಲಿಗೆಮ್ಮದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ
ಲಿಂಕ್ : ಸೆ. 21 ರಿಂದ ಹುಲಿಗೆಮ್ಮದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ
ಸೆ. 21 ರಿಂದ ಹುಲಿಗೆಮ್ಮದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ
ಕೊಪ್ಪಳ ಸೆ. 15 (ಕರ್ನಾಟಕ ವಾರ್ತೆ): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸೆ.21 ರಿಂದ 30 ರವರೆಗೆ “ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದ್ದು, ಇದರ ಅಂಗವಾಗಿ ಹಲವು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ಸೆ. 21 ರಂದು ಸಂಜೆ 06-30 ಗಂಟೆಗೆ ನೆರವೇರಲಿದ್ದು, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಹುಲಿಗಿ ಗ್ರಾ.ಪಂ ಅಧ್ಯಕ್ಷೆ ರೇಣಕಾ ರಾಮಣ್ಣ, ಜಿ.ಪಂ ಸದಸ್ಯೆ ಗಾಯಿತ್ರಿ ವೇಂಕಟೇಶ ವಡ್ಡರ, ತಾ.ಪಂ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಅತಿಥಿಗಳಾಗಿ ಭಾಗವಹಿಸುವರು.
ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಸೆ. 21 ರಂದು ಸಂಜೆ 06-30ಕ್ಕೆ ಘಟಸ್ಥಾಪನೆ, ದೇವಸ್ಥಾನದ ಭಜಂತ್ರಿ ಇವರಿಂದ ಮಂಗಲವಾದ್ಯ. 22 ರಂದು ಸಂಜೆ 06-30 ಕ್ಕೆ ಕನಕಗಿರಿಯ ಹುಸೇನ್‍ದಾಸ ಅವರಿಂದ ದಾಸವಾಣಿ ಕಾರ್ಯಕ್ರಮ. 23 ರಂದು ಸಂಜೆ 06-30 ಕ್ಕೆ ಧಾರವಾಡದ ಶಫೀಖಾನ್ ಹಾಗೂ ಸಂಗಡಿಗರಿಂದ ಜಗಲ್‍ಬಂದಿ ಸಂಗೀತ ಕಾರ್ಯಕ್ರಮ. 24 ರಂದು ಸಂಜೆ 06-30 ಕ್ಕೆ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು. 25 ರಂದು ಸಂಜೆ 06-30 ಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಈಶ್ವರದಾಸ ಕೊಪ್ಪೇಸರ ಹಾಗೂ ಸಂತಭದ್ರಗಿರಿ ಅಚ್ಯುತದಾಸರ ಶಿಷ್ಯರು ಇವರಿಂದ ಹರಿಕಥಾ ಕಾಲಕ್ಷೇಪ, ಹಾಗೂ ಬೆಳ್ಳಿ ಮಂಟಪದಲ್ಲಿ ದೇವಿಯವರಿಗೆ ಶಾರ್ದೂಲವಾಹನ ಪೂಜೆ. 26 ರಂದು ಸಂಜೆ 06-30 ಕ್ಕೆ ಬೆಂಗಳೂರಿನ ನಾಗಚಂದ್ರಿಕಾ ಹಾಗೂ ತಂಡದಿಂದ ವೈವಿದ್ಯಮಯ ಸಂಗೀತ ಕಾರ್ಯಕ್ರಮ ಮತ್ತು ಬೆಳ್ಳಿ ಮಂಟಪದಲ್ಲಿ ದೇವಿಯವರಿಗೆ ಸಿಂಹವಾಹನ ಪೂಜೆ. 27 ರಂದು ಸಂಜೆ 06-30 ಕ್ಕೆ ಕೊಪ್ಪಳ ಸಿ.ಪಿ.ಐ ರುದ್ರೇಶ ಎಸ್. ಉಜ್ಜನಕೊಪ್ಪ ಹಾಗೂ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಮತ್ತು ಬೆಳ್ಳಿ ಮಂಟಪದಲ್ಲಿ ದೇವಿಯವರಿಗೆ ಮಯೂರವಾಹನ ಪೂಜೆ. ದುರ್ಗಾಷ್ಟಮಿ, ಸರಸ್ವತಿ ಪೂಜೆ ಅಂಗವಾಗಿ ಸೆ. 28 ರಂದು ಸಂಜೆ 06-30 ಕ್ಕೆ ಹೊಸಪೇಟೆಯ ಡಾ. ರಾಘವೇಂದ್ರ ಕಟ್ಟಿ ಹಾಗೂ ಕೂಡ್ಲಿಗಿಯ ಕೋಗಳಿ ಕೊಟ್ರೇಶ ಅವರಿಂದ ಹಾಸ್ಯ ಕಾರ್ಯಕ್ರಮ ಮತ್ತು ಬೆಳ್ಳಿ ಮಂಟಪದಲ್ಲಿ ದೇವಿಯವರಿಗೆ ಅಶ್ವವಾಹನ ಪೂಜೆ. ಖಂಡಾ ಪೂಜೆ, ಘಟವಿಸರ್ಜನೆಯ ಅಂಗವಾಗಿ ಸೆ. 29 ರಂದು ಸಂಜೆ 06-30 ಕ್ಕೆ ಗದಗ ಜಿಲ್ಲೆಯ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ “ಹೇಮರೆಡ್ಡಿ ಮಲ್ಲಮ್ಮ ಭಕ್ತಿಪ್ರಧಾನ ನಾಟಕ” ಮತ್ತು ಬೆಳ್ಳಿ ಮಂಟಪದಲ್ಲಿ ದೇವಿಯವರಿಗೆ ಗಜವಾಹನ ಪೂಜೆ. ವಿಜಯದಶಮಿ ಅಂಗವಾಗಿ ಸೆ. 30 ರಂದು ಮಧ್ಯಾಹ್ನ 03-00 ರಿಂದ ದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳಿ ಶಮಿ ಪೂಜೆ, ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪ ಸಮರ್ಪಣೆ ಕಾರ್ಯಕ್ರಮಗಳು ಜರುಗಲಿವೆ. ಭಕ್ತಾದಿಗಳು ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹೀಗಾಗಿ ಲೇಖನಗಳು ಸೆ. 21 ರಿಂದ ಹುಲಿಗೆಮ್ಮದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ
ಎಲ್ಲಾ ಲೇಖನಗಳು ಆಗಿದೆ ಸೆ. 21 ರಿಂದ ಹುಲಿಗೆಮ್ಮದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೆ. 21 ರಿಂದ ಹುಲಿಗೆಮ್ಮದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಲಿಂಕ್ ವಿಳಾಸ https://dekalungi.blogspot.com/2017/09/21.html
0 Response to "ಸೆ. 21 ರಿಂದ ಹುಲಿಗೆಮ್ಮದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ"
ಕಾಮೆಂಟ್ ಪೋಸ್ಟ್ ಮಾಡಿ