ಶೀರ್ಷಿಕೆ : ತುತ್ತು...
ಲಿಂಕ್ : ತುತ್ತು...
ತುತ್ತು...
✍🏻 ರಘು ಮಾಗಡಿ
ಬೀದಿ ಬದಿ ಆಯ್ದ ಹೊಲಿದ ದೊಡ್ಡ ಚೀಲ
ತನಗಿಂತ ದೊಡ್ಡದೆಂಬ ಪರಿವೆ
ಎಂದೂ ಕಂಡಿಲ್ಲ ಅವರಿಗಿಲ್ಲದರ ಚಿಂತೆ.
ರಣ ಹದ್ದಿನ ತೆರದಿ ಬಿಟ್ಟ ಕಣ್ಣೆರಡು
ಬೀದಿ ಬದಿ ಹುಡುಕುತ್ತ ಸಾಗುವರು
ನಾಳಿನ ಆಗು ಹೋಗುಗಳ ಮರೆತು
ದಿಕ್ಕು ದೆಸೆಯಿಲ್ಲದೆ ನಡೆಯುವವರು.
ಹೊತ್ತು ಮೂಡುವ ಮುಂಚೆ
ಕಣ್ಣುಜ್ಜುತ್ತ ಸಾಗುವುದು ನಡಿಗೆ
ಬದುಕ ಬಂಡಿ ಎಳೆಯುವ
ಭುವಿಯ ನಾವಿಕನಿವರು.
ಮಡಿಕೆಯಾಕಾರದ ಗುಡಿಸಲೊ
ಇಲ್ಲಾ ರಸ್ತೆ ಬದಿ ಬಿಟ್ಟಿರುವ ಸವಕಲು ಹಾದಿಯೊ
ಅಥವಾ ಬಟಾ ಬಯಲಾದರೂ ಸರಿ
ಒಕ್ಕಲೆಬ್ಬಿಸುವವರೆಗೆ ಇವರಿಗಲ್ಲೆ ತೇಪೆ ಮನೆ.
ತುತ್ತಿಗೂ ತತ್ವಾರ ಹಡೆದವ್ವ ಹೇಳ್ಯಾಳು
ನಡಿ ಮಗ ಹೊತಾರೆ ಅಲ್ಲಿ ಇಲ್ಲಿ
ಆಯ್ಕಂಡು ಹೊಟ್ಟೆ ತುಂಬಿಸಿಕೊ
ಹೆತ್ತ ಜೀವ ನೊಂದೀತೇನೊ ಪಾಪ!
ಬೇಡವೆಂದು ಎತ್ತಿ ಬಿಸಾಕಿದ ಕಸ
ಆಯ್ವ ಕೈಗಳಿಗದೆ ಸಿರಿ ಸಂಪತ್ತು
ಹೀಗಾಗಿ ಲೇಖನಗಳು ತುತ್ತು...
ಎಲ್ಲಾ ಲೇಖನಗಳು ಆಗಿದೆ ತುತ್ತು... ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತುತ್ತು... ಲಿಂಕ್ ವಿಳಾಸ https://dekalungi.blogspot.com/2017/09/blog-post_526.html
0 Response to "ತುತ್ತು..."
ಕಾಮೆಂಟ್ ಪೋಸ್ಟ್ ಮಾಡಿ