ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ

ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ
ಲಿಂಕ್ : ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ

ಓದಿ


ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ



ಕೊಪ್ಪಳ, ಆ. 02 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರು ತಮ್ಮ ಖಾತೆಗಳಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡಿ ನರೇಗಾ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಕೂಲಿಕಾರರಿಗೆ ಸೂಚನೆ ನೀಡಿದ್ದಾರೆ. 

ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ ಮತ್ತು ಗ್ರಾಮಗಳಲ್ಲಿ ಈಗಾಗಲೇ ಜು. 24 ರಿಂದ ಸೆಪ್ಟೆಂಬರ್. 11 ರವರೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಜಾಬ ಕಾರ್ಡ ಹೊಂದಿದ ಕೂಲಿಕಾರರ ಖಾತೆಗಳಿಗೆ ಆಧಾರ ಜೋಡಣೆ ಮತ್ತು ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಅಧಿಸೂಚನೆಯಂತೆ ಲೆಕ್ಕಾ ಖಾತೆ ಹೊಂದಿರುವ ಖಾತೆದಾರರು ಸೆಪ್ಟೆಂಬರ್. 11 ರೊಳಗಾಗಿ ಆಧಾರ ಶಿಬಿರದಲ್ಲಿ ಪಾಲ್ಗೊಳ್ಳಬೇಕು.  ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ಸಂರ್ಪಕಿಸಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನೇರ ಲಾಭ ವರ್ಗಾವಣೆ (ಡಿ.ಬಿ.ಟಿ) ಒಪ್ಪಿಗೆ ಪತ್ರದ ಮೂಲಕ ತಮ್ಮ ಖಾತೆಗಳಿಗೆ ಆಧಾರ ಸಂಖ್ಯೆಗಳನ್ನು ಜೋಡಣೆ ಮಾಡಿ, ನರೇಗಾ ಯೋಜನೆಯ ಲಾಭವನ್ನು ಪಡೆಕೊಳ್ಳಬಹುದು ಎಂದು ವೆಂಕಟರಾಜಾ ತಿಳಿಸಿದ್ದಾರೆ.

ಕೊಪ್ಪಳ ಜಿ.ಪಂ ಜಿಲ್ಲಾ ಐ.ಇ.ಸಿ ಸಂಯೋಜಕ ಶ್ರೀನಿವಾಸ ಹೆಚ್. ಚಿತ್ರಗಾರ ಅವರು ಕುಷ್ಟಗಿ ತಾಲೂಕಿನ ಗ್ರಾಮ ಪಂಚಾಯತಿಗಳಾದ ಹನುಮನಾಳ, ಜಾಗೀರ ಗುಡ್ಡದೂರ, ನಿಲೋಗಲ್, ಬಿಳೆಕಲ್, ಹನುಮಸಾಗರ, ಗ್ರಾಮ ಪಂಚಾಯತಿಗಳಲ್ಲಿ ಆಧಾರ ಶಿಬಿರಗಳನ್ನು ಏರ್ಪಡಿಸಿ ಎಲ್ಲಾ ಕೂಲಿಕಾರರಿಗೆ ಆಧಾರ ಸಂಗ್ರಣೆ, ಜೋಡಣೆ ಒಪ್ಪಿಗೆ ಪತ್ರ ಪಡೆಯುವ ಮಾಹಿತಿ, ವೈಯಕ್ತಿಕ ಬ್ಯಾಂಕ್ ಖಾತೆ ಹೊಂದಲು ಸಲ್ಲಿಸುವ ದಾಖಲೆಗಳ ಕುರಿತು, ಜಂಟಿ ಬ್ಯಾಂಕ್ ಖಾತೆ ಹೊಂದಿರುವ ಪ್ರತಿ ಕೂಲಿಕಾರರನ್ನು ವೈಯಕ್ತಿಕ ಖಾತೆ ಹೊಂದುವಂತೆ ಮಾಹಿತಿ ಶಿಕ್ಷಣ ಸಂವಹನ ಮುಖಾಂತರ ಎಲ್ಲಾ ಗ್ರಾಮಸ್ಧರಿಗೆ ಅರಿವು ಮೂಡಿಸಿದರು.   ನರೇಗಾ ಯೋಜನೆಯಲ್ಲಿ ತಾವು ಕೆಲಸ ನಿರ್ವಹಿಸಿ ಕೂಲಿ ಹಣ ಪಾವತಿಸಲು ಆಧಾರ ಕಡ್ಡಾಯವಾಗಿರುತ್ತದೆ. ಡಿಸೆಂಬರ್.31 ನಂತರದಲ್ಲಿ ಕೂಲಿಕಾರರಿಗೆ ಕೂಲಿ ಕೆಲಸ ನೀಡಿರುವ ಅವಕಾಶ ಮೀರುವುದಿಲ್ಲ.  ಗ್ರಾಮಸ್ಧರು ಆಧಾರ್ ಸಂಖ್ಯೆ ಜೋಡಣೆಯನ್ನು ಅತೀ ಗಂಭಿರವಾಗಿ ಪರಿಗಣಿಸಿ ಎಂದು ಮನವರಿಕೆ ಮಾಡಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಲೂಕ ಐ.ಇ.ಸಿ ಸಂಯೋಜಕರು, ಎಂ.ಐ.ಎಸ್ ಸಂಯೋಜಕರು ಗ್ರಾಮ ಪಂಚಾಯತ ಅಧ್ಯಕ್ಷರು, ಉಪಧ್ಯಕ್ಷರು ಮತ್ತು ಸರ್ವ ಸದಸ್ಯರು, ತಾಂತ್ರಿಕ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ

ಎಲ್ಲಾ ಲೇಖನಗಳು ಆಗಿದೆ ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ ಲಿಂಕ್ ವಿಳಾಸ https://dekalungi.blogspot.com/2017/08/blog-post_4.html

Subscribe to receive free email updates:

0 Response to "ಆಧಾರ ಸಂಖ್ಯೆ ಜೋಡಣೆ ಮಾಡಿ ನರೇಗಾ ಯೋಜನೆ ಲಾಭ ಪಡೆಯಲು ಕರೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ