ಶೀರ್ಷಿಕೆ :
ಲಿಂಕ್ :
ಜಲಸಂರಕ್ಷಣೆಯಲ್ಲಿ ಸ್ವಾವಲಂಬನೆ ಸಾಧಿಸಿದ ಕೃಷಿಕ
ಬರದಲ್ಲೂ ತೆಂಗು,ಅಡಿಕೆ ಬದುಕಿಸಿಕೊಂಡ ಪ್ರಯೋಗಶೀಲ
ಗುಂಡ್ಲುಪೇಟೆ : ಚಾಮರಾಜನಗೆರ ಜಿಲ್ಲೆಯ ಬಹುತೇಕ ತೆಂಗು ಮತ್ತು ಅಡಿಕೆ ತೋಟಗಳು ಗೂಟಗಳಾಗಿವೆ.ಕಳೆದ ನಾಲ್ಕೈದು ವರ್ಷಗಳಿಂದ ಪುನಾರಾರ್ವನೆಯಾದ ಬರ ಎರಡು ತಲೆಮಾರಿನ ತೋಟಗಳನ್ನು ಸರ್ವನಾಶ ಮಾಡಿದೆ. "ಚಾಮರಾಜನಗರ ಜಿಲ್ಲೆಯಲ್ಲಿ ಅಡಿಕೆ-ತೆಂಗು ಬೆಳೆಸಿದ್ದು ಐತಿಹಾಸಿಕ ತಪ್ಪು ನಿಧರ್ಾರ" ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ನಿದರ್ೇಶಕರಾಗಿದ್ದ ಡಾ.ಹಿತ್ತಲಮನಿ ಒಮ್ಮೆ ಹೇಳೀದ್ದರು.
ಇದಕ್ಕೆ ಅಪವಾದ ಎಂಬಂತೆ ಆಕಾಶದಿಂದ ಭೂಮಿಗೆ ಬಿದ್ದ ಪ್ರತಿ ಹನಿ ಹನಿ ನೀರನ್ನು ಜೋಪಾನಮಾಡಿ ಕಾಯ್ದಿಟ್ಟುಕೊಳ್ಳುವ ಮೂಲಕ ಸುಮಾರು ತಮ್ಮ ಹದಿನಾರು ಎಕರೆಯಲ್ಲಿ ಬೆಳೆದ ತೆಂಗು ಮತ್ತು ಅಡಿಕೆಯಂತಹ ತೋಟಗಾರಿಕೆ ಬೆಳೆಗಳನ್ನು ಒಣಗದಂತೆ ಜೀವಜಲನೀಡಿ ಕಾಪಾಡಿಕೊಂಡು ಬಂದಿರುವ "ಸಂಪೂರ್ಣ ಜಲಸಾಕ್ಷರತೆ" ಸಾಧಿಸಿರುವ ಚೌಡಳ್ಳಿಯ ಸಿ.ಎಸ್.ರಾಜೇಂದ್ರ ಅವರೇ ನಮ್ಮ ಈ ವಾರದ ಬಂಗಾರದ ಮನುಷ್ಯ.
ಗುಂಡ್ಲುಪೇಟೆಯಿಂದ ಬೊಮ್ಮಲಾಪುರ ಮಾರ್ಗವಾಗಿ ಹೋಗುವಾಗ ಹುಲ್ಲೆಪುರ ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಅಲ್ಲೇ ಸಮೀಪದಲ್ಲಿ ಸಿ.ಎಂ.ಶಿವನೆಂಜಪ್ಪ ಫಾರಂ ಎಂಬ ಈ ಹಸಿರು ತೋಟ ಇದೆ. ಹದಿನಾರುವರೆ ಎಕರೆ ತೋಟದಲ್ಲಿ 450 ತೆಂಗು,ಒಂದೂವರೆ ಎಕರೆ ಪ್ರದೇಶದಲ್ಲಿ 1500 ಅಡಿಕೆ ಬರದ ನಡುವೆಯೂ ಅಚ್ಚ ಹಸಿರಾಗಿವೆ.ಇದಕ್ಕೆಲ್ಲ ಕಾರಣ ಮಲ್ಚಿಂಗ್ (ಹೊದಿಕೆ) ಮತ್ತು ಬೇಸಿಗೆಯಲ್ಲೂ ಮಿತವಾಗಿ ನೀರು ನಿರ್ವಹಣೆ ಮಾಡಿದ್ದು ಎನ್ನುತ್ತಾರೆ ರಾಜೇಂದ್ರ. ಅಡಿಕೆ ತೋಟದಲ್ಲಿ ಔಷದೀಯ ಬಳ್ಳಿ ಗಿಡಗಳನ್ನು ಹಾಕಿದ್ದಯ ಅದು ಜೀವಂತ ಹೊದಿಕೆಯಾಗಿ ಕೆಲಸಮಾಡುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದೆ.
ಚೌಡಳ್ಳಿ ಸಮೀಪ ಇರುವ 12 ಎಕರೆಯ ಮತ್ತೊಂದು ತೋಟದಲ್ಲಿ ನಾಲ್ಕುವರೆ ಎಕರೆಯಲ್ಲಿ ತೆಂಗು ಮತ್ತು ಅಡಿಕೆ ಉಳಿದ ಏಳುವರೆ ಎಕರೆಯಲ್ಲಿ ಅರಿಶಿನ ತರಕಾರಿ ಬೆಳೆಯುತ್ತಾರೆ. ದಶಕದ ಹಿಂದೆಯೇ ಮಳೆ ಚೆನ್ನಾಗಿ ಬರುತ್ತಿದ್ದಾಗಲೇ ಜಲತಜ್ಞ ಅಯ್ಯಪ ಮಸಗಿ ಅವರನ್ನು ಕರೆಸಿ ಬತ್ತಿದ ಕೊಳವೆ ಬಾವಿಗೆ ಜಲ ಮರುಪೂರಣ ಮಾಡಿರುವುದು ಈ ತೋಟದ ವಿಶೇಷ. ಇಷ್ಟಲ್ಲದೆ ತೋಟದ ಸುತ್ತ 150 ತೇಗ,ಸಿಲ್ವರ್,ಹೆಬ್ಬೇವು,70 ಮಾವು, ಸಪೋಟ ಮತ್ತಿತರ ಹಣ್ಣಿನ ಮರಗಿಡಗಳಿಗೂ ತೋಟದಲ್ಲಿ ಜಾಗ ಮಾಡಿಕೊಡಲಾಗಿದೆ.
ಇಂತಹ ಹಲವು ವಿಶೇಷಗಳಿಂದ ಕೂಡಿರುವ ತೋಟದಲ್ಲಿ ಇದೇ ಜುಲೈ 16 ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ಸಮಾನ ಮನಸ್ಕ ಸಾವಯವ ಕೃಷಿಕರ ಸಭೆಯನ್ನು ಕರೆಯಲಾಗಿದೆ. ಒಣಭೂಮಿ ಬೇಸಾಯದಲ್ಲಿ ಹಿಡಬೇಕಾದ ಮುಂದಿನ ಹೆಜ್ಜೆಗಳನ್ನು ಕುರಿತು ಸಭೆಯಲ್ಲಿ ಚಚರ್ೆ ನಡೆಸಲಾಗುತ್ತದೆ.
ಹಿಂತಿರುಗಿ ನೋಡಿದಾಗ : ರಾಜಕೀಯ ಮನೆತನದಿಂದ ಬಂದ ರಾಜೇಂದ್ರ "ತಾನು ರಾಜಕೀಯದಿಂದ ದೂರವೇ ಉಳಿದು ಕೃಷಿಯ ಕಡೆಗೆ ಗಮನಕೊಟ್ಟ ಕಾರಣ ನನ್ನ ತೋಟಗಳು ಜೀವಂತವಾಗಿ ಉಳಿದುಕೊಂಡಿವೆ.ನಾನೇನಾದೂ ಒತ್ತಡಕ್ಕೆ ಮಣಿದು ನೂರಾರು ಭ್ರಮೆಗಳನ್ನು ಕಟ್ಟಿಕೊಂಡು ರಾಜಕೀಯ ಕ್ಷೇತ್ರದತ್ತ ಮುಖಮಾಡಿದ್ದರೆ ನಮ್ಮ ತೋಟಗಳು ಉಳಿಯುತ್ತಿರಲಿಲ್ಲ" ಎನ್ನುತ್ತಾರೆ. ರಾಜಕೀಯವನ್ನು ಉಪ್ಪಿನಕಾಯಿಯಂತೆ ಇಟ್ಟುಕೊಂಡು ಕೃಷಿಯನ್ನು ಊಟದಂತೆ ಮಾಡಿಕೊಂಡಿದ್ದೇವೆ ಎನ್ನುವಾಗ ಅವರ ವ್ಯವಹಾರಿಕ ಜಾಣ್ಮೆ ಎದ್ದು ಕಾಣುತ್ತದೆ.
ಇವರ ತಂದೆ ಶಿವನೆಂಜಪ್ಪ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದವರು.ತಾಲೂಕು ಬೋಡರ್್ ಅಧ್ಯಕ್ಷರಾಗಿ, ತೋಟಗಾರಿಕೆ ಇಲಾಖೆ ಅಧ್ಯಕ್ಷರಾಗಿ, ಟಿಎಪಿಸಿಎಂಎಸ್ ಅಧ್ಯಕ್ಷರಾಗಿ,ಹುಂಡೀಪುರ ಸೋಸೈಟಿಗೆ 25 ವರ್ಷಗಳ ಕಾಲ ಅಧ್ಯಕ್ಷರಾಗಿದ್ದವರು.
ಮಾಜಿ ಶಾಸಕ ಹುಂಡೀಪುರ ಶಿವರುದ್ರಪ್ಪವನರಿಗೆ ಆತ್ಮೀಯರಾಗಿದ್ದವರು. ಆದರೂ ರಾಜಕೀಯ ಕ್ಷೇತ್ರದತ್ತ ನನಗೆ ಒಲವು ಮೂಡಲಿಲ್ಲ.ಕೃಷಿಯನ್ನೇ ಇಷ್ಟಪಟ್ಟು ಆಯ್ಕೆಮಾಡಿಕೊಂಡು ವ್ಯವಸಾಯ ಮಾಡಲು ಬಂದೆ.ಈಗ ಕೃಷಿಯಿಂದಲೇ ಸಾಕಷ್ಟು ಆದಾಯಗಳಿಸಿ ಒಬ್ಬ ಮಗ ಚೇತನ್ನನ್ನು ಬಿಇ ಮಾಡಿಸಿ ನೌಕರಿಗೆ ಸೇರಿಸಿದ್ದೇನೆ.ಮತ್ತೊಬ್ಬ ಮಗ ಕಿರಣ್ನನ್ನು ಬಿಕಾಂ ಪದವಿ ಓದಿಸಿ ಕೃಷಿಯನ್ನೇ ಮಾಡಿಸುತ್ತಿದ್ದೇನೆ ಎಂದರು. ಮನೆ ಮಕ್ಕಳೆಲ್ಲ ಓದಿ ನೌಕರಿ ಸೇರಿಕೊಂಡರೆ ಗ್ರಾಮದ ಮನೆಗಳಿಗೆ ಬೀಗಬಿದ್ದು,ಕೃಷಿಯು ಹಾದಿತಪ್ಪಿಬಿಡುವ ಆತಂಕ ಅವರ ಮಾತಿನಲ್ಲಿತ್ತು.
ಹಲವರಲ್ಲಿ ಮೊದಲಿಗರು : ದಶಕದ ಹಿಂದೆ ಮಸ್ಕ್ ಮೆಲನ್ ಬೆಳೆದು ಡೆಲ್ಲಿ ಮಾರುಕಟ್ಟೆಗೆ ಮಾರಾಟಮಾಡಲು ವಿಮಾನದಲ್ಲಿ ಹೋಗಿಬಂದ ರಾಜೇಂದ್ರ ಆಗಲೇ ಪ್ರಯೋಗಶೀಲ ರೈತ ಎಂದು ಹೆಸರುಮಾಡಿದ್ದರು. ಆಗ ಡೆಲ್ಲಿ ಮಾರುಕಟ್ಟೆಗೆ ಮಸ್ಕ್ ಮೆಲೆನ್ ಮಾರಾಟ ಮಾಡಲು ಹೋಗಿದ್ದ ವಿಷಯ ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ ಅವರಿಗೂ ಗೊತ್ತಾಗಿ ಅಭಿನಂದಿಸಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.
ಪಪ್ಪಾಯಿ,ಕಬ್ಬು,ಅರಿಶಿನ,ಕೋಸು,ಟೊಮಟೊ ಮತ್ತಿತರ ತರಕಾರಿ ಬೆಳೆಗಳನ್ನು ಬೆಳೆಯುವುದರಲ್ಲಿಯೂ ರಾಜೇಂದ್ರ ಮಾದರಿ ಕೃಷಿಕರೆ.
ನೀರಾ ಚಳವಳಿಗೆ ಬೆಂಬಲವಾಗಿ ತಾಲೂಕಿನಲ್ಲಿ ಮೊದಲ ಬಾರಿಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರನ್ನು ತೋಟಕ್ಕೆ ಕರೆಸಿ ತೋಟದಲ್ಲಿ ನೀರಾಕಟ್ಟಿ ಸಭೆ ಮಾಡಿದ್ದರು. ಜಿಲ್ಲೆಗೆ ಹನಿ ನೀರಾವರಿ ಪರಿಚಯಿಸಿದವರಲ್ಲಿಯೂ ಇವರೇ ಮುಂದು.
ಎರಡು ದಶಕದ ಹಿಂದೆ ತೆಂಗಿಗೆ ಹನಿ ನೀರಾವರಿ ಅಳವಡಿಸಲು ರಾಜೇಂದ್ರ ಮುಂದಾಗಿದ್ದಾಗ ತಂದೆ ಶಿವನೆಂಜಪ್ಪ ಅದನ್ನು ವಿರೋಧಿಸಿದ್ದರು. ಆದರೂ ಆಗಲೇ ನೀರಿನ ಅಮೂಲ್ಯತೆ ಬಗ್ಗೆ ಅರಿವಿದ್ದ ರಾಜೇಂದ್ರ ಹನಿ ನೀರಾವರಿ ಅಳವಡಿಸಿ ಗೆದ್ದರು. ನಂತರ ಬಾಳೆ ಮತ್ತು ಅಡಿಕೆಗೂ ಹನಿ ನೀರಾವರಿ ಪದ್ಧತಿಯನ್ನು ವಿಸ್ತರಿಸಿಕೊಂಡು ಈಗ ಯಶಸ್ವಿ ಪ್ರಯೋಗಶೀಲ ರೈತರಾಗಿದ್ದಾರೆ.
ವೈಜ್ಞಾನಿಕ ಜಲಮರುಪೂರಣ : "ಹತ್ತನ್ನೆರಡು ವರ್ಷದ ಹಿಂದೆ ಜಲತಜ್ಞ ಅಯ್ಯಪ್ಪ ಮಸಗಿ ಅವರ ಪುಸ್ತಕ ಓದಿ ಬೋರ್ವೆಲ್ ಮರುಪೂರಣಕ್ಕೆ ಮುಂದಾದೆ. ಅಗ ಅವರು ಗುಂಡ್ಲುಪೇಟೆಗೆ ಬರುತ್ತಿರುವ ವಿಚಾರ ತಿಳಿಯಿತು. ಅವರನ್ನೇ ತೋಟಕ್ಕೆ ಕರೆಸಿ ಜಲಮರುಪೂರಣ ಪ್ರಾತ್ಯಕ್ಷಿಕೆ ನಡೆಸಿ ಜನರಲ್ಲಿ ಅರಿವು ಮೂಡಿಸಲು ಮುಂದಾದೆ. ಅದರೂ ಸುತ್ತಮುತ್ತ ಯಾರು ಈ ರೀತಿ ಮಾಡಲು ಮುಂದಾಗಲಿಲ್ಲ.ನಮ್ಮ ರೂತರಲ್ಲಿ ಪ್ರಯೋಗಶೀಲತೆ ಕಡಿಮೆ" ಎನ್ನುತ್ತಾರೆ ರಾಜೇಂದ್ರ.
ವೈಜ್ಞಾನಿಕವಾಗಿ ರಾಜೇಂದ್ರ ಮಾಡಿರುವ ಜಲ ಮರುಪೂರಣದಿಂದ ಅವರ ಬೋರ್ವೆಲ್ ಎಂತಹ ಕಡು ಬೇಸಿಗೆಯಲ್ಲೂ ಬತ್ತುವ ಸಾಧ್ಯತೆ ಇಲ್ಲ. ಇವರು ಮಾಡಿರುವ ಈ ಜಲ ಮರುಪೂರಣದಿಂದ ಸುತ್ತಮತ್ತಲಿನ ನಾಲ್ಕಾರು ರೈತರ ಬೋರ್ವೆಲ್ಗಳಲ್ಲೂ ನೀರು ಬತ್ತಿಲ್ಲ ಎನ್ನುವುದು ವಿಶೇಷ.
ತೋಟದ ಒಳಗೆಲ್ಲ ಬಂಡ್ ನಿಮರ್ಾಣ ಮಾಡಿಕೊಳ್ಳುವ ಮೂಲಕ ಹರಿಯುವ ನೀರನ್ನು ನಿಲ್ಲಿಸಲಾಗುತ್ತದೆ. ಎರಡು ಅಡಿ ನೀರು ತುಂಬಿದ ನಂತರ ಮತ್ತೊಂದು ಬಂಡ್ಗೆ ನೀರು ಹರಿದು ಹೋಗುತ್ತದೆ. ನಂತರ ಕೊನೆಯ ಬಂಡ್ನಲ್ಲಿ ಚಿಕ್ಕ ಕೆರೆಯಂತೆ ನೀರು ನಿಂತು ಅಲ್ಲಿಂದ ನೀರು ಫಿಲ್ಟರ್ ಆಗಿ ಬತ್ತಿಹೋದ ಬೋರ್ವೆಲ್ಗೆ ಹೋಗುತ್ತದೆ. ಆ ಬೋರ್ವೆಲ್ಗೂ ಮತ್ತೊಬ್ಬ ಜಲತಜ್ಞ ಡಾ.ನಾರಾಯಣ ರೆಡ್ಡಿ ಮಾಡುವಂತೆ ಕೇಸಿಂಗ್ ಪೈಪ್ಗೆ ರಂಧ್ರಕೊರೆದು ಮರಳು ಜೆಲ್ಲಿ ಹಾಕಿ ನೀರು ಬಸಿದುಹೋಗಲು ವ್ಯವಸ್ಥೆಮಾಡಲಾಗಿದೆ.
ಇದಕ್ಕಿಂತಲ್ಲೂ ಗಮನಸೆಳೆಯುವ ಸಂಗತಿ ಎಂದರೆ ರಸ್ತೆಯಲ್ಲಿ ಹರಿದು ಹೋಗುವ ಮಳೆಯ ನೀರನ್ನು ರಾಜೇಂದ್ರ ಅವರು ತಮ್ಮ ತೋಟಗಳಿಗೆ ತಿರುಗಿಸಿಕೊಂಡಿರುವ ರೀತಿ. ತೋಟದ ಸುತ್ತಮುತ್ತ ಬೀಳುವ ಪ್ರತಿ ಹನಿ ನೀರನ್ನು ಜತನದಿಂದ ತಮ್ಮ ತೋಟದ ಒಳಕ್ಕೆ ಬಿಟ್ಟುಕೊಳ್ಳುವ ಮೂಲಕ ಜಿಲ್ಲೆಯ ಜನರಿಗೆ ಜಲಸಾಕ್ಷರತೆಯ ಪಾಠ ಹೇಳಿಕೊಡುವ ಜಲತಜ್ಞರಂತೆ ಕಾಣುತ್ತಾರೆ.
ದುರಂತ ಎಂದರೆ ಕೂಗಳತೆ ದೂರದಲ್ಲಿರುವ ಇಂತಹ ಮಾದರಿಗಳನ್ನು ನೋಡಿ ಪಾಠ ಕಲಿಯದ ನಮ್ಮ ರೈತರು ಕೃಷಿಯಲ್ಲಿ ನಷ್ಟ ಅನುಭವಿಸುವ ಮೂಲಕ ಕೃಷಿಯಿಂದ ವಿಮುಖರಾಗುತ್ತಿರುವುದು.
ಇಲ್ಲಿಂದ ಅಲ್ಲಿಗೆ ನೀರು : ಊರಿನ ಸಮೀಪ ಇರುವ ಹನ್ನೆರಡು ಎಕರೆಯ ಈ ತೋಟ ಜಲಸಂರಕ್ಷಣೆಯಲ್ಲಿ ಮುಂದಿದ್ದು ಇಲ್ಲಿಂದ ಹುಲ್ಲೆಪುರದ ಬಳಿ ಇರುವ ತೋಟಕ್ಕೆ ಬೇಸಿಗೆಯಲ್ಲಿ ಮೂರು ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕರ್ ಮೂಲಕ ನೀರು ತೆಗೆದುಕೊಂಡು ಹೋಗಿ ತೋಟ ಉಳಿಸಿಕೊಂಡಿದ್ದಾರೆ.
ಪ್ರತಿ ದಿನ ಮೂರು ಗಂಟೆ ಕೊಡುವ ವಿದ್ಯುತ್ ಮೂಲಕ ಮೂರು ಟ್ಯಾಂಕರ್ ನೀರನ್ನು ತೆಗೆದುಕೊಂಡು ಹೋಗಿ ಪ್ರತಿ ತೆಂಗಿನ ಗಿಡಕ್ಕೆ ಇಪ್ಪತ್ತು ದಿನಕ್ಕೆ ಒಮ್ಮೆ ಇಪ್ಪತ್ತು ಲೀಟರ್ ನೀರನ್ನು ನೇರವಾಗಿ ಕೊಡಲಾಗಿದೆ. ಜೊತೆಗೆ ಪ್ರತ್ಯೇಕ ನೀರು ಸಂಗ್ರಹಣ ತೊಟ್ಟಿ ಮಾಡಿಕೊಂಡಿದ್ದು ಅದರ ಮೂಲಕ ಅಡಿಕೆ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರು ಕಡಲಾಗುತ್ತದೆ.ಇದರಿಂ ತೋಟ ಒಣಗದೆ ಹಸಿರಾಗಿದೆ. ಸುತ್ತಮುತ್ತಲಿನ ತೋಟಗಳೆಲ್ಲ ಗೂಟಗಳಾಗಿ ನಿಂತು ಬಣಗುಡುತ್ತಿದ್ದರೆ ರಾಜೇಂದ್ರ ಅವರ ಜಲಸಂರಕ್ಷಣೆಯ ಜಾಣ್ಮೆ ಅವರ ತೋಟವನ್ನು ಹಸಿರಾಗಿರುವಂತೆ ಮಾಡಿದೆ.
ಕೊಟ್ಟಿಗೆ ಗೊಬ್ಬರಕ್ಕೂ ಮಹತ್ವ : ಬಹುತೇಕ ನಮ್ಮ ರೈತರು ಕೃಷಿಯಲ್ಲಿ ಸೋತಿದ್ದಕ್ಕೆ ಮುಖ್ಯ ಕಾರಣ ಕೊಟ್ಟಿಗೆ ಗೊಬ್ಬರ ನಿರ್ವಹಣೆಯಲ್ಲಿ ಎಡವಿದ್ದು. ಆದರೆ ರಾಜೇಂದ್ರ ಅವರ ತೋಟದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಫಲವತ್ತಾಗಿ ಮಾಡಿಕೊಳ್ಳಲಾಗಿದೆ.
ಕಾಂಪೋಸ್ಟ್ ಮಾಡಿಕೊಳ್ಳಲು ಸ್ಥಳೀಯವಾಗಿ ಸಿಗುವ ಅಡಿಕೆ ಅಚ್ಚಗಳನ್ನು ಬಳಸಿಕೊಂಡು ಇವರು ಮಾಡಿರುವ ನೆಡಾಫ್ ಮಾದರಿಯ ಗೊಬ್ಬರ ತೊಟ್ಟಿಯಂತೂ ನಮ್ಮ ಜಿಲ್ಲೆಯ ಪ್ರತಿಯೊಬ್ಬರು ಮಾಡಿಕೊಳ್ಲಲೇ ಬೇಕಾದ ಮಾದರಿಯಂತಿದೆ.
ಬದುಕಿಗೆ ತಿರುವು ನೀಡಿದ ಮಾತು : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತೀರ್ಣರಾಗಿ ತೋಟ ನೋಡಿಕೊಂಡು ಇದ್ದ ರಾಜೇಂದ್ರ ಅವರ ಬದುಕಿನಲ್ಲಿ ಹಿರಿಯರು ಹೇಳಿದ ಬುದ್ದಿವಾದ ಇಂತಹ ಪ್ರಯೋಗಶೀಲ ಕೆಲಸದ ಹಿಂದೆ ಕೆಲಸಮಾಡಿದೆ.
ದೊಡ್ಡಹುಂಡಿ ಭೋಗಪ್ಪ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಮರಿಸ್ವಾಮಿ ಅವರು ತೋಟಕ್ಕೆ ನೀರು ಪರೀಕ್ಷೆ ಮಾಡಲು ಬಂದು ಶಿವನೆಂಜಪ್ಪನವರಿಗೆ ಮಗ ರಾಜೇಂದ್ರ ಅವರನ್ನು ಓದಿಸಲು ಹೇಳುತ್ತಾರೆ. ಪರೀಕ್ಷೆ ಕಟ್ಟಿ ಪಾಸು ಮಾಡಿ ಪದವಿವರೆಗೂ ಕಾಲೇಜು ವ್ಯಾಸಂಗ ಮಾಡಿರುವ ರಾಜೇಂದ್ರ ರೇಷ್ಮಡ ಕೃಷಿಯಲ್ಲೂ ಸೈ ಎನಿಸಿಕೊಂಡಿದ್ದರು.
ಹಲವು ವರ್ಷಗಳ ಕಾಲ ಗುಂಡ್ಲುಪೇಟಯಲ್ಲಿ ಸಾಧರ್ಾರ್ ಟೂರಿಂಗ್ ಟಾಕೀಸ್ ನಡೆಸುತ್ತಿದ್ದ ರಾಜೇಂದ್ರ ನಂತರ ಸಂಪೂರ್ಣ ಕೃಷಿಕರಾಗಿದ್ದು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ದೊಡ್ಡಬಳ್ಳಾಪುರದ ಸಾವಯವ ಸಂತ ಡಾ.ಎಲ್.ನಾರಾಯಣ ರೆಡ್ಡಿ ಮತ್ತು ಬೆಳವಲ ಪೌಂಢೇಷನ್ನ ಡಾ.ರಾಮಕೃಷ್ಣಪ್ಪ ಅವರಿಂದ ಸಾವಯವ ಕೃಷಿಯ ಪಾಠ ಹೇಳಿಸಿಕೊಂಡಿದ್ದು ಈಗ ಸಾವಯವ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ರಾಜೇಂದ್ರ 9731256743 ಸಂಪಕರ್ಿಸಬಹುದು.
ಹೀಗಾಗಿ ಲೇಖನಗಳು
ಎಲ್ಲಾ ಲೇಖನಗಳು ಆಗಿದೆ
ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/07/blog-post_87.html
0 Response to " "
ಕಾಮೆಂಟ್ ಪೋಸ್ಟ್ ಮಾಡಿ