ಶೀರ್ಷಿಕೆ : ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು
ಲಿಂಕ್ : ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು
ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು
ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವಿಜ್ಞಾನಿಗಳು ಕೊಪ್ಪಳ ಜಿಲ್ಲೆಯಾದ್ಯಂತ ಹೆಸರು ಬೆಳೆಯ ಸ್ಥಿತಿಗತಿ ಅರಿಯಲು ಸಮೀಕ್ಷೆ ಕೈಗೊಂಡ ಸಂದರ್ಭದಲ್ಲಿ ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಡೆ ಮತ್ತು ಕರಿಹೇನಿನ ಬಾಧೆ ಕಂಡುಬಂದಿದ್ದು, ಅವುಗಳ ನಿಯಂತ್ರಣಕ್ಕೆ ರೈತರಿಗೆ ಸಲಹೆ ನೀಡಲಾಗಿದೆ.
ನೊರೆ ಕೀಟ / ಸ್ಪಿಟಲ್ ಬಗ್ : ಈ ಕೀಟವು ಹೆಸರು ಕಾಯಿಯ ಮೇಲೆ ನೊರೆಯಂತಹ ಅಂಟನ್ನು ಸ್ರವಿಸಿ ಕಾಯಿಯ ಬೆಳವಣಿಗೆಯನ್ನು ಕುಂಟಿತಗೊಳಿಸುತ್ತದೆ. ಈ ಕೀಟದ ನಿಯಂತ್ರಣಕ್ಕೆ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಸೋಪಿನ (ಬಟ್ಟೆ ತೊಳೆಯುವ) ದ್ರಾವಣದೊಂದಿಗೆ ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಕಷಾಯವನ್ನು ಮಿಶ್ರಣ ಮಾಡಿ ಪಾವರ್ ಸ್ಪ್ರೇಯರ್‍ನಿಂದ ಸಿಂಪಡಿಸಬೇಕು. ಒಂದು ದಿವಸ ಬಿಟ್ಟು ಇಮಿಡಾಕ್ಲೋಪ್ರಿಡ್‍ನ್ನು ಪ್ರತಿ 10 ಲೀಟರ್ ನೀರಿಗೆ 3 ಮಿ.ಲೀ. ಅಥವಾ ಡೈಯೋಮೆಥಾಕ್ಸಿವ್ 3 ಗ್ರಾಂ. ಬೆರೆಸಿ ಸಿಂಪಡಿಸಬೇಕು.
ಹೇನು ಮತ್ತು ತ್ರಿಪ್ಸ್ ಬಾಧೆ : ಇದರ ನಿವಾರಣೆಗೆ ಪ್ರತಿ ಲೀಟರ್ ನೀರಿಗೆ 1 ಮಿ.ಲಿ. ಮಿಥೈಲ್ ಪ್ಯಾರಾಥಿಯಾನ್ 50 ಇಸಿ ಅಥವಾ 1 ಮಿ.ಲೀ. ಮೊನೊಕ್ರೋಟೊಫಾಸ್ 36 ಎಸ್.ಎಲ್. ಅಥವಾ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಬೆರೆಸಿ ಸಿಂಪಡಿಸಬೇಕು.
ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೈತರು ಪ್ರತಿ ಎಕರೆಗೆ 5 ರಂತೆ ಮೋಹಕ ಮತ್ತು ಅಂಟುಬಲೆಗಳನ್ನು ಹೊಲದಲ್ಲಿ ಹಾಕಬೇಕು. ಇದರಿಂದ ಹೇನು, ಥ್ರ್ರಿಪ್ಸ್ ಮತ್ತು ಬಿಳಿ ನೊಣಗಳ ಬಾಧೆ ಕಡಿಮೆಯಾಗುತ್ತದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದ ವಿಜ್ಞಾನಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ (08539-220305) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2017/07/blog-post_864.html
0 Response to "ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ