ಶೀರ್ಷಿಕೆ : ಗಂಗಾವತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ
ಲಿಂಕ್ : ಗಂಗಾವತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ
ಗಂಗಾವತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ
ಕೊಪ್ಪಳ ಜು. 01 (ಕರ್ನಾಟಕ ವಾರ್ತೆ): ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಾಮಾನ್ಯವಾಗಿ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ, ಕಚೇರಿಗಳಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಗಂಗಾವತಿ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ ಆಚರಿಸುವ ಮೂಲಕ ಗಮನ ಸೆಳೆದಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನೇತೃತ್ವ ವಹಿಸಿ, ಅಧಿಕಾರಿ ಸಿಬ್ಬಂದಿಗಳಿಗೆ ಪ್ರೋತ್ಸಾಹಿಸಿದ್ದು ವಿಶೇಷ.
ಜುಲೈ 01 ರಂದು ಕಂದಾಯ ದಿನಾಚರಣೆ ಆಚರಿಸುವ ಕಾರ್ಯಕ್ರಮದ ಅಂಗವಾಗಿ ಗಂಗಾವತಿ ತಹಸಿಲ್ದಾರರ ಕಚೇರಿ ಅಧಿಕಾರಿ, ಸಿಬ್ಬಂದಿಗಳು ರಕ್ತದಾನ, ಗಿಡಗಳನ್ನು ನೆಡುವುದು ಹಾಗೂ ಬುದ್ದಿಮಾಂದ್ಯ ಮಕ್ಕಳೊಂದಿಗೆ ಸೇರಿ ಕೇಕ್ ಹಂಚಿ ಸಂಭ್ರಮಿಸಿದ್ದು, ಹೀಗಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗಂಗಾವತಿ ತಹಸಿಲ್ದಾರರ ಕಚೇರಿ ಆವರಣದಲ್ಲಿ ಶನಿವಾರದಂದು ರೆಡ್‍ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು. ಕಂದಾಯ ಇಲಾಖೆಗೆ ಸೇರಿದ ತಾಲೂಕಿನ ಎಲ್ಲ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಸಿಲ್ದಾರರು, ಶಿರಸ್ತೆದಾರರು ಅಲ್ಲದೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಹೀಗೆ ಸುಮಾರು 50 ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ರಕ್ತದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ತಹಸಿಲ್ದಾರರ ಕಚೇರಿ ಆವರಣದಲ್ಲಿ ಸುಮಾರು 50 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಈ ಮೂಲಕ ಪರಿಸರ ಪ್ರಜ್ಞೆಯನ್ನು ಅಧಿಕಾರಿ, ಸಿಬ್ಬಂದಿಗಳ ಜೊತೆಗೆ ಸಾರ್ವಜನಿಕರಲ್ಲೂ ಮೂಡಿಸಲಾಯಿತು. ಗಂಗಾವತಿ ನಗರದಲ್ಲಿನ ಬುದ್ದಿಮಾಂಧ್ಯ ಶಾಲೆಗೆ ತೆರಳಿದ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಅಲ್ಲಿನ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಸಂಭ್ರಮವನ್ನು ಹಂಚಿಕೊಂಡರು. ಈ ರೀತಿ ಗಂಗಾವತಿ ತಾಲೂಕಿನ ಕಂದಾಯ ಇಲಾಖೆ, ಅಧಿಕಾರಿ, ಸಿಬ್ಬಂದಿಗಳು ಕಂದಾಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ರಕ್ತದಾನ ಮಾಡಿದ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಮಾಣಪತ್ರ ವಿತರಿಸಿದರು.
ಹೀಗಾಗಿ ಲೇಖನಗಳು ಗಂಗಾವತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ
ಎಲ್ಲಾ ಲೇಖನಗಳು ಆಗಿದೆ ಗಂಗಾವತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಂಗಾವತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ ಲಿಂಕ್ ವಿಳಾಸ https://dekalungi.blogspot.com/2017/07/blog-post_80.html
0 Response to "ಗಂಗಾವತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಕಂದಾಯ ದಿನಾಚರಣೆ"
ಕಾಮೆಂಟ್ ಪೋಸ್ಟ್ ಮಾಡಿ