ಶೀರ್ಷಿಕೆ : ಕೊಪ್ಪಳ ಜಿಲ್ಲೆಯಲ್ಲಿ ಶೇ.96. 11 ಜನರಿಗೆ ಆಧಾರ್ ನೊಂದಣಿ- ಡಾ. ರುದ್ರೇಶ್ ಘಾಳಿ
ಲಿಂಕ್ : ಕೊಪ್ಪಳ ಜಿಲ್ಲೆಯಲ್ಲಿ ಶೇ.96. 11 ಜನರಿಗೆ ಆಧಾರ್ ನೊಂದಣಿ- ಡಾ. ರುದ್ರೇಶ್ ಘಾಳಿ
ಕೊಪ್ಪಳ ಜಿಲ್ಲೆಯಲ್ಲಿ ಶೇ.96. 11 ಜನರಿಗೆ ಆಧಾರ್ ನೊಂದಣಿ- ಡಾ. ರುದ್ರೇಶ್ ಘಾಳಿ
ಕೊಪ್ಪಳ, ಜು. 01 (ಕರ್ನಾಟಕ ವಾರ್ತೆ): ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಪಡೆಯಲು ಇದೀಗ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ 1413779 ಜನರಿಗೆ ಅಂದರೆ ಶೇ. 96. 11 ರಷ್ಟು ಜನರಿಗೆ ಆಧಾರ್ ನೋಂದಣಿ ಮಾಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ/ಸಿಬ್ಬಂದಿ ವರ್ಗದವರಿಗೆ ಶನಿವಾರದಂದು ಏರ್ಪಡಿಸಲಾಗಿದ್ದ ಆಧಾರ್ ನೊಂದಣಿ, ಆಧರ್ ಸೀಡಿಂಗ್, ಆಧಾರ್‍ಗೆ ಸಂಬಂಧಿಸಿದ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಧಾರ್ ಯೋಜನೆಗೆ ಸಂಬಂಧಿಸಿದಂತೆ ಕಳೆದ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿರುವುದರಿಂದ, ಆಧಾರ್ ಸಂಖ್ಯೆಯನ್ನು ಪ್ರತಿಯೊಬ್ಬರೂ ಪಡೆಯುವುದು ಅಗತ್ಯವಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಜನರಿಗೆ ಹಲವು ಯೋಜನೆಗಳನ್ನು ನೀಡಲಾಗುತ್ತಿದ್ದು, ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗುತ್ತಿರುವುದರಿಂದ, ಯೋಜನೆಗಳ ಜಾರಿಯಲ್ಲಿ ಅನಗತ್ಯ ವಿಳಂಬವಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿದೆ. ಅಲ್ಲದೆ, ಅಕ್ರಮವನ್ನೂ ತಡೆಗಟ್ಟಲು ಸಹಕಾರಿಯಾಗಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ 1. 10 ಲಕ್ಷ ರೈತರಿಗೆ ಸರ್ಕಾರದ ಪರಿಹಾರವನ್ನು ನೇರವಾಗಿ ಬೆಂಗಳೂರಿನಿಂದಲೇ ಜಮಾ ಮಾಡಲಾಗಿದ್ದು, ಇದಕ್ಕೆ ಕಾರಣವಾಗಿದ್ದು ರೈತರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯ ಜೋಡಣೆಯಿಂದ. ಜಿಲ್ಲೆಯಲ್ಲಿ 2015 ರ ಅಂಕಿ-ಅಂಶದಂತೆ 1471026 ಜನಸಂಖ್ಯೆ ಇದ್ದು, 1413779 ಜನರು ಅಂದರೆ ಶೇ. 96. 11 ರಷ್ಟು ಜನ ಈಗಾಗಲೆ ಆಧಾರ್ ಹೊಂದಿದ್ದಾರೆ. ಇನ್ನೂ 57247 ಜನರು ಆಧಾರ್ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಜಿಲ್ಲೆಯ 20 ನಾಡಕಚೇರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಸ್ಪಂದನ ಕೇಂದ್ರ, ಕಾರ್ವೆ ಕೇಂದ್ರಗಳಲ್ಲಿ ಶಾಶ್ವತ ಆಧಾರ್ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 05 ವರ್ಷದೊಳಗಿನ ಮಕ್ಕಳಿಗೆ ಆಧಾರ್ ನೋಂದಣಿಗಾಗಿ ಅಂಗನವಾಡಿ ಮೇಲ್ವಿಚಾರಕಿಯರಿಗೆ 70 ಟ್ಯಾಬ್ ಗಳನ್ನು ನೀಡಲಾಗಿದ್ದು, ಇದರಿಂದ 26799 ಮಕ್ಕಳ ಆಧಾರ್ ನೊಂದಣಿ ಸಾಧ್ಯವಾಗಿದೆ. ಬರುವ ದಿನಗಳಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಸರ್ಕಾರಿ ಸೇವೆಗಳನ್ನು ಸಾರ್ವಜನಿಕರು ಪಡೆಯುವ ನಿಟ್ಟಿನಲ್ಲಿ ಆಧಾರ್ ಎಷ್ಟು ಮಹತ್ವದ್ದು ಎಂಬುದನ್ನು ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಮಾಹಿತಿ ಪಡೆದುಕೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
ಆಧಾರ್ ಕುರಿತಂತೆ ಸಮಗ್ರ ವಿವರಣೆ ನೀಡಿದ ಇ-ಆಡಳಿತ ಕೇಂದ್ರದ ಅಧಿಕಾರಿ ರಘುವಂಶಿ ಅವರು ಮಾತನಾಡಿ, ದೇಶದಲ್ಲಿ ಈಗಾಗಲೆ 115 ಕೋಟಿ ಜನರಿಗೆ ಆಧಾರ್ ಸಂಖ್ಯೆ ನೀಡಲಾಗಿದೆ. ಆಧಾರ್ ಸಂಖ್ಯೆ ನೀಡುವ ಯೋಜನೆಯು ಸುಧಾರಿತ ತಾಂತ್ರಿಕ ವ್ಯವಸ್ಥೆ ಹೊಂದಿರುವುದರಿಂದ, ನಕಲಿ ಆಧಾರ್ ಸಂಖ್ಯೆ ನೀಡುವುದಾಗಲಿ, ಒಬ್ಬ ವ್ಯಕ್ತಿ ಎರಡು ಆಧಾರ್ ಸಂಖ್ಯೆ ಹೊಂದುವುದಾಗಲಿ ಸಾಧ್ಯವಿಲ್ಲ. ಆಧಾರ್ ಮಾಹಿತಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತಿದ್ದು, ಯಾವುದೇ ವ್ಯಕ್ತಿ ಗರಿಷ್ಟ 03 ವರ್ಷದವರೆಗೆ ಆಧಾರ್ ಸಂಖ್ಯೆಯನ್ನು ಬಳಸದೇ ಇದ್ದಲ್ಲಿ, ರದ್ದಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ, ಪಾನ್ ಕಾರ್ಡ್‍ಗಳಂತಹ ಸೇವೆಗಳಿಗೆ ಜೋಡಣೆ ಮಾಡಿಸಬೇಕು. ಆಧಾರ್ ಈಗ ಕಾಯ್ದೆಯಾಗಿರುವುದರಿಂದ, ಪ್ರತಿಯೊಂದು ಸರ್ಕಾರದ ಸೇವೆಗಳಿಗೂ ಆಧಾರ್ ಕಡ್ಡಾಯವಾಗಿ ಹೊಂದಲೇ ಬೇಕಾಗುತ್ತದೆ. ಈಗಾಗಲೆ ರಾಷ್ಟ್ರೀಯ ಭದ್ರತಾ ಯೋಜನೆಗಳು, ಆಹಾರ ಪಡಿತರ ಯೋಜನೆ, ಉದ್ಯೋಗಖಾತ್ರಿ ಯೋಜನೆ, ವಿದ್ಯಾರ್ಥಿ ವೇತನ, ನೇರ ನಗದು ವರ್ಗಾವಣೆ, ಬ್ಯಾಂಕಿಂಗ್ ಸೇವೆ, ಪಾಸ್‍ಪೋರ್ಟ್, ವಾಹನ ಚಾಲನೆ ಪರವಾನಗಿ, ಸರ್ಕಾರಿ ಮತ್ತು ಖಾಸಗಿ ಸೇವೆ ಪಡೆಯಲು ಸಹ ಆಧಾರ್ ಅನ್ನು ಕಡ್ಡಾಯವಾಗಿ ಬಳಸಲಾಗುತ್ತಿದೆ ಎಂದರು.
ಜಿಲ್ಲಾ ಎನ್‍ಐಸಿ ಅಧಿಕಾರಿ ವೀರಣ್ಣ ಏಳುಬಾವಿ, ಜಿ.ಪಂ. ಸಹಾಯಕ ಕಾರ್ಯದರ್ಶಿ ಶರಣಪ್ಪ, ಇ-ಆಡಳಿತದ ಅಧಿಕಾರಿ ಶ್ರೇಯಸ್, ಆಧಾರ್ ಜಿಲ್ಲಾ ಸಮನ್ವಯಾಧಿಕಾರಿ ಜಾಫರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಕೊಪ್ಪಳ ಜಿಲ್ಲೆಯಲ್ಲಿ ಶೇ.96. 11 ಜನರಿಗೆ ಆಧಾರ್ ನೊಂದಣಿ- ಡಾ. ರುದ್ರೇಶ್ ಘಾಳಿ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ಜಿಲ್ಲೆಯಲ್ಲಿ ಶೇ.96. 11 ಜನರಿಗೆ ಆಧಾರ್ ನೊಂದಣಿ- ಡಾ. ರುದ್ರೇಶ್ ಘಾಳಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ.96. 11 ಜನರಿಗೆ ಆಧಾರ್ ನೊಂದಣಿ- ಡಾ. ರುದ್ರೇಶ್ ಘಾಳಿ ಲಿಂಕ್ ವಿಳಾಸ https://dekalungi.blogspot.com/2017/07/96-11.html
0 Response to "ಕೊಪ್ಪಳ ಜಿಲ್ಲೆಯಲ್ಲಿ ಶೇ.96. 11 ಜನರಿಗೆ ಆಧಾರ್ ನೊಂದಣಿ- ಡಾ. ರುದ್ರೇಶ್ ಘಾಳಿ"
ಕಾಮೆಂಟ್ ಪೋಸ್ಟ್ ಮಾಡಿ