ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ

ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ
ಲಿಂಕ್ : ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ

ಓದಿ


ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ


ಕೊಪ್ಪಳ  ಜು. 20 (ಕ.ವಾ): ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಭೆ ಮತ್ತು ಜ್ಞಾನಕ್ಕೆ ಹಲವು ಮುಖಗಳಿದ್ದು, ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದ್ದರಿಂದಲೇ ಅವರು ವಿಶ್ವ ರತ್ನ ಅಂಬೇಡ್ಕರ್ ಎನಿಸಿಕೊಂಡಿದ್ದಾರೆ ಎಂದು ಬಳ್ಳಾರಿ ತಾಲೂಕು ಎಮ್ಮಿಗನೂರು ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ, ಗಂಗಾವತಿಯ ಡಾ. ಲಿಂಗಣ್ಣ ಜಂಗಮರಹಳ್ಳಿ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಡಾ. ಅಂಬೇಡ್ಕರ್ ಅವರ 126 ನೇ ಜನ್ಮ ವರ್ಷಾಚರಣೆ ಅಂಗವಾಗಿ ನಗರದ ಶಾದಿ ಮಹಲ್ ನಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ  ‘ತಮಗಿದೋ ನಮ್ಮ ಗೌರವ ನಮನ’ ಕಾರ್ಯಕ್ರಮದಡಿ ಶಿಕ್ಷಣ-ಸಂಘಟನೆ-ಹೋರಾಟದ ‘ಮೂರು ನುಡಿ-ನೂರು ದುಡಿ’ ನುಡಿನಮನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.


     ಡಾ. ಅಂಬೇಡ್ಕರ್ ಅವರ ಹೋರಾಟದ ಫಲವನ್ನು ಎಲ್ಲ ದಲಿತರು, ಮಹಿಳೆಯರು ಅನುಭವಿಸುತ್ತಿದ್ದೇವೆ.  ಪ್ರಬುದ್ಧ ಭಾರತ ದೇಶದ ನಿರ್ಮಾಣಕ್ಕೆ ಶಿಕ್ಷಣ-ಹೋರಾಟ-ಸಂಘಟನೆ ಈ ಮೂರು ನುಡಿಗಳ ವ್ಯಾಖ್ಯಾನವನ್ನು ಕಲಿಸಿಕೊಟ್ಟರು.  ಶಿಕ್ಷಣ ಎಂದರೆ ಕೇವಲ ವೇದ-ಉಪನಿಷತ್ತುಗಳ ಅಧ್ಯಯನವಲ್ಲ, ಬದಲಿಗೆ ಎಲ್ಲರೂ ಸಮಾನರಾಗಿ ಬದುಕಲು ಕಲಿಯುವುದು ಮತ್ತು ಕಲಿಸುವುದು ನಿಜವಾದ ಶಿಕ್ಷಣ ಎಂದು ತೋರಿಸಿಕೊಟ್ಟರು.  ದೇಶದಲ್ಲಿ ನಿಜವಾದ ಪ್ರಜೆಗಳು, ನಾಗರೀಕರಾಗಬೇಕು ಎಂದರೆ, ಎಲ್ಲರೂ ಅಂಬೇಡ್ಕರ್ ಅವರನ್ನು ಹೃದಯದಲ್ಲಿ, ಮನಸ್ಸಿನಲ್ಲಿಟ್ಟು ಪೂಜಿಸಬೇಕು.  ಕೆಲವರು ಅಂಬೇಡ್ಕರ್ ಅವರ ಹೆಸಿನಲ್ಲಿ ತಮ್ಮ ಹೊಟ್ಟೆಪಾಡಿನ ಜೀವನ ನಡೆಸಿಕೊಳ್ಳುತ್ತಿದ್ದಾರೆ.  ಅವರನ್ನು, ದಲಿತ ಮೀಸಲಾತಿಗೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ.  ಆದರೆ ಇದು ತಪ್ಪು, ಅಂಬೇಡ್ಕರ್ ಅವರು ಇಡೀ ಜಗತ್ತಿಗೆ ಸಲ್ಲಬೇಕಾದವರು, ಅವರು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತರಲ್ಲ.  ಪಂಚಭೂತ ಸಂಪನ್ಮೂಲಗಳನ್ನು ಸಮಾನವಾಗಿ ಪಡೆಯುವ ಹಕ್ಕು ದೇಶದ ಎಲ್ಲ ಜನರಿಗೂ ಇದೆ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಹಕ್ಕು ಪ್ರತಿಪಾದನೆ ಮಾಡಿದವರು ಅಂಬೇಡ್ಕರ್ ಅವರು.  ಅಂಬೇಡ್ಕರ್ ಅವರ ಅಗಾಧ ಪ್ರತಿಭೆ, ಜ್ಞಾನದಿಂದಾಗಿಯೇ ಇಡೀ ಜಗತ್ತು ಅವರನ್ನು ಅಪ್ಪಿಕೊಂಡಿದೆ.  ಅಂತಹ ಮಹಾ ಜ್ಞಾನಿ ಅಂಬೇಡ್ಕರ್ ಅವರ ಕುರಿತ ಪುಸ್ತಕಗಳನ್ನು ಇಂದಿನ ಯುವಪೀಳಿಗೆ ಓದಬೇಕು.  ಅಂದಾಗ ಮಾತ್ರ ಭವಿಷ್ಯದ ಭಾರತ ಜಾತಿ ವ್ಯವಸ್ಥೆಯಿಂದ ಮುಕ್ತವಾಗಲು ಸಾಧ್ಯ ಎಂದು ಡಾ. ಲಿಂಗಣ್ಣ ಅಭಿಪ್ರಾಯಪಟ್ಟರು.   
     ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನೆರವೇರಿಸಿದರು.  ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರಾವಿಣ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್, ಗಣ್ಯರಾದ ಡಾ. ಜ್ಞಾನಸುಂದರ್, ಭರಮಪ್ಪ ಬೆಲ್ಲದ, ಪ್ರಕಾಶ್ ಉಪಸ್ಥಿತರಿದ್ದರು.  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಿದಾನಂದ್ ಸ್ವಾಗತಿಸಿದರು.  ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಸುಮಾರು 50 ಕಲಾವಿದರು ಏಕಕಾಲಕ್ಕೆ ವೇದಿಕೆ ಮೇಲೆ ಪ್ರಸ್ತುತಪಡಿಸಿದ ಹಲಗೆ ವಾದನ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಿತು.  ಕುಣಿಕೇರಿ ತಾಂಡಾದ ಜಂಬಣ್ಣ ಹಾಗೂ ಸಂಗಡಿಗರು ನಗಾರಿ ವಾದ್ಯದೊಂದಿಗೆ ಲಂಬಾಣಿ ಹಾಡುಗಳು, ಮುದುಕವ್ವ ತಂಡದಿಂದ ಗೀಗೀ ಪದ ಕಾರ್ಯಕ್ರಮ ನಡೆಸಲಾಯಿತು.   ಕೊಪ್ಪಳದ ಮಂಜುನಾಥ ದೊಡ್ಡಮನಿ ಹಾಗೂ ಸಂಗಡಿಗರಿಂದ ಪ್ರಗತಿಪರ ಹಾಡುಗಳು, ಕುಷ್ಟಗಿಯ ಶರಣಪ್ಪ ವಡಿಗೇರಿ ಅವರಿಂದ ಹೋರಾಟದ ಹಾಡುಗಳು ಪ್ರಸ್ತುತಗೊಂಡವು.  ಒಟ್ಟಾರೆ ಜಿಲ್ಲೆಯ 150 ಕಲಾವಿದರಿಂದ ನಡೆಸಿದ ವಿವಿಧ ಚರ್ಮವಾದ್ಯ ಮೇಳ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.


ಹೀಗಾಗಿ ಲೇಖನಗಳು ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ

ಎಲ್ಲಾ ಲೇಖನಗಳು ಆಗಿದೆ ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ ಲಿಂಕ್ ವಿಳಾಸ https://dekalungi.blogspot.com/2017/07/blog-post_56.html

Subscribe to receive free email updates:

0 Response to "ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ"

ಕಾಮೆಂಟ್‌‌ ಪೋಸ್ಟ್‌ ಮಾಡಿ