ಶೀರ್ಷಿಕೆ : ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ
ಲಿಂಕ್ : ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ
ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ
ಕೊಪ್ಪಳ, ಜು. 20 (ಕರ್ನಾಟಕ ವಾರ್ತೆ): ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ರೈತ ಸಾರಥಿ ಯೋಜನೆಯಡಿ ಕೃಷಿ ಬಳಕೆ ಟ್ರ್ಯಾಕ್ಟರ್-ಟ್ರೇಲರ್ ಹೊಂದಿರುವ ರೈತರಿಗೆ ಚಾಲನಾ ತರಬೇತಿ ನೀಡಿ, ಚಾಲನಾ ಅನುಜ್ಞಾ ಪತ್ರ ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದು, ಆಸಕ್ತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ನೂರ ಮಹ್ಮದ ಬಾಷಾ ತಿಳಿಸಿದ್ದಾರೆ.
ರೈತ ಸಾರಥಿ ಯೋಜನೆಯು ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‍ನಲ್ಲಿ ಘೋಷಿಸಿರುವ ಯೋಜನೆಯಾಗಿದ್ದು, ಕೃಷಿ ಬಳಕೆ ಟ್ರ್ಯಾಕ್ಟರ್-ಟ್ರೇಲರ್ ಹೊಂದಿರುವ ರೈತರು ಈ ಯೋಜನೆಯ ಸವಲತ್ತು ಪಡೆಯಬಹುದಾಗಿದೆ. ಕೊಪ್ಪಳ ಜಿಲ್ಲೆಗೆ ಈ ವರ್ಷ 760 ರೈತರಿಗೆ ಟ್ರ್ಯಾಕ್ಟರ್-ಟ್ರೇಲರ್ ಚಾಲನೆ ತರಬೇತಿ ನೀಡಿ, ಚಾಲನಾ ಅನುಜ್ಞಾ ಪತ್ರ ನೀಡುವ ಗುರಿಯನ್ನು ನಿಗದಿಪಡಿಸಲಾಗಿದೆ.
ಮೋಟಾರ ವಾಹನ ಕಾಯ್ದೆ 1988 ಮತ್ತು ಅದರಡಿ ರಚಿತವಾದ ನಿಯಮಗಳ ಮೇರೆಗೆ ಅಧಿಕೃತ ಲೈಸೆನ್ಸ್ ಪಡೆದು ಸ್ಥಾಪಿತವಾಗಿರುವ ಚಾಲನಾ ತರಬೇತಿ ಶಾಲೆ/ ಸಂಸ್ಥೆಗಳಿಂದ ತರಬೇತಿ ನೀಡಲು ಸರ್ಕಾರದಿಂದ ಪ್ರತಿ ಅಭ್ಯರ್ಥಿಗೆ 500 ರೂ. ಗಳನ್ನು ತರಬೇತಿ ಶಾಲೆಗೆ ಪಾವತಿಸಲಿದೆ. ಚಾಲನಾ ತರಬೇತಿ ಪಡೆದು ಚಾಲನಾ ಅನುಜ್ಞಾ ಪತ್ರ ಪಡೆಯಲು ಸರ್ಕಾರ ನಿಗದಿ ಪಡಿಸಿರುವ ಅವಶ್ಯಕ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕು.
ಕೊಪ್ಪಳ ಪ್ರಾದೇಶಿಕ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿ ಬಳಕೆ ಟ್ರ್ಯಾಕ್ಟರ್-ಟ್ರೈಲರ್ ಹೊಂದಿರುವ ರೈತ ಮಾಲೀಕರು/ ಅವರ ಕುಟುಂಬದ ಸದಸ್ಯರು/ ಟ್ರ್ಯಾಕ್ಟರ್-ಟ್ರೈಲರ್ ಚಲಾಯಿಸಲು ನೇಮಿಸಿಕೊಂಡಿರುವ ಚಾಲಕರುಗಳು ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶವಿದ್ದು, ಅನುಜ್ಞಾ ಪತ್ರ ಪಡೆಯಲಿಚ್ಛಿಸುವ ರೈತಭಾಂದವರು ಕೊಪ್ಪಳ ಪ್ರಾದೇಶಿಕ ಸಾರಿಗೆ ಸಂಸ್ಥೆ ಕಛೇರಿಗೆ ಆಗಸ್ಟ್. 16 ರೊಳಗಾಗಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ
ಎಲ್ಲಾ ಲೇಖನಗಳು ಆಗಿದೆ ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ ಲಿಂಕ್ ವಿಳಾಸ https://dekalungi.blogspot.com/2017/07/blog-post_51.html
0 Response to "ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ"
ಕಾಮೆಂಟ್ ಪೋಸ್ಟ್ ಮಾಡಿ