ಶೀರ್ಷಿಕೆ : ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು
ಲಿಂಕ್ : ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು
ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು
ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಆರಂಭದ ದಿನಗಳಲ್ಲಿ ಉತ್ತಮ ಭರವಸೆ ಮೂಡಿಸಿದ್ದ ಮುಂಗಾರು, ಜುಲೈ ತಿಂಗಳಾಂತ್ಯದಲ್ಲಿ ಕ್ಷೀಣವಾಗಿದೆ. ಬಿತ್ತಿದ, ನಾಟಿ ಮಾಡಿದ ಸಸಿಗಳ ನಿರ್ವಹಣೆ ನಿಟ್ಟಿನಲ್ಲಿ ಕೊಪ್ಪಳದ ಹಾರ್ಟಿ ಕ್ಲಿನಿಕ್ ತಜ್ಞರು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
ಮಳೆ ಕಡಿಮೆಯಾದ ಪರಿಸ್ಥಿತಿಯಲ್ಲಿ ಬಿತ್ತಿದ, ನಾಟಿ ಮಾಡಿದ ಸಸಿಗಳ ನಿರ್ವಹಣೆ ಒಂದು ಸವಾಲೆಂದೇ ಹೇಳಬಹುದು. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಹೊಂಡಗಳು ಮಳೆ ನೀರು ಸಂಗ್ರಹಿಸುವಲ್ಲಿ ಸಹಕಾರಿಯಾಗಿವೆ. ಮಳೆ ನೀರು ಕೊಯ್ಲು, ನೀರು ಸಂಗ್ರಹಣಾ ತೊಟ್ಟಿಗಳು ಇಂದಿನ ಕೃಷಿಯಲ್ಲಿ ಅನಿವಾರ್ಯವೆಂದೇ ಹೇಳಬಹುದು. ಅದಕ್ಕಾಗಿಯೇ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಲಭ್ಯವಿದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಹರಿಯುವ ನೀರು ನಿಲ್ಲುವಂತೆ, ನಿಂತ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದೇ ಬರದಲ್ಲಿ ಬೆಳೆಗಳ ನಿರ್ವಹಣೆ ಮಾಡುವಲ್ಲಿ ಸಹಕಾರಿಯಾಗಿದೆ. ಒಂದೆರಡು ಬಾರಿ ಪೊಟ್ಯಾಷ್, ತರಕಾರಿ ಸ್ಪೆಷಲ್ ನಂತಹ ಪೋಷಕಾಂಶಗಳ ಸಿಂಪರಣೆ ಗಿಡಗಳಿಗೆ ಬರ ನಿರೋಧಕ ಶಕ್ತಿ ನೀಡಬಲ್ಲ ಉಪಯುಕ್ತ ಕ್ರಮವಾಗಿದೆ.
ಕುಂಟೆ, ರಂಟೆ ಹೊಡೆದು ಭೂಮಿಯನ್ನು ಅಣಿಗೊಳಿಸಿದಲ್ಲಿ, ಆಗಾಗ ಬೀಳುವ ಅಲ್ಪ- ಸ್ವಲ್ಪ ಮಳೆನೀರು ಇಂಗಿಸಲ್ಪಟ್ಟು, ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವಲ್ಲಿ ಸಹಕಾರಿಯಾಗಲಿದೆ. ಗಿಡಗಳ ಸುತ್ತ ಅರ್ಧ ಚಂದ್ರಾಕೃತಿ ಪಾತಿ ಮಾಡುವುದು, ಇಳಿಜಾರಿಗೆ ಅಡ್ಡವಾಗಿ ಬಿತ್ತನೆ / ನಾಟಿ ಮಾಡುವುದು, ಪ್ಲಾಸ್ಟಿಕ, ಸಾವಯವ ಹೊದಿಕೆ ಮಾಡುವುದು, ನೀರು ಆವಿಯಾಗದಂತೆ ನೋಡಿಕೊಳ್ಳಲು ಸಹಕಾರಿಯಾಗಿವೆ.
ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಮಳೆಗಳಿರುವುದರಿಂದ ರೈತರು ಧೃತಿಗೆಡದೇ, ಆತ್ಮವಿಶ್ವಾಸದಿಂದ ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಮತ್ತು ಸೂಕ್ತ ಬೆಳೆಗಳಾದ ನುಗ್ಗೆ, ಸೊಪ್ಪಿನ ತರಕಾರಿಗಳು ಅಲ್ಲದೇ ಹೂವಿನ ಬೆಳೆಗಳಾದ ಚೆಂಡು ಹೂ, ಗಲಾಟೆ ಹೂ ಮುಂತಾದ ಬೆಳೆಗಳು ಬರದಲ್ಲೂ ರೈತರ ಕೈ ಹಿಡಿಯುವಲ್ಲಿ ಸಹಕಾರಿಯಾಗಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಛೇರಿಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಆಯಾ ತಾಲೂಕ ಕಛೇರಿಗಳನ್ನಾಗಲೀ, ಜಿಲ್ಲಾ ಹಾರ್ಟಿ ಕ್ಲಿನಿಕನ್ನಾಗಲಿ, ಸಂಪರ್ಕಿಸಬಹುದಾಗಿದೆ.
ಹೀಗಾಗಿ ಲೇಖನಗಳು ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2017/07/blog-post_480.html
0 Response to "ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ