ಶೀರ್ಷಿಕೆ : ಗಂಗಾವತಿ: ಅಂಬೇಡ್ಕರ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಲಿಂಕ್ : ಗಂಗಾವತಿ: ಅಂಬೇಡ್ಕರ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಗಂಗಾವತಿ: ಅಂಬೇಡ್ಕರ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ, ಜು. 05 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ವಸತಿ ರಹಿತ ಹಾಗೂ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಪ್ರಸ್ತುತ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಆಧರ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ನಕಲು ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿದಾರರ ಕುಟುಂಬವು ಸ್ವಂತ ನಿವೇಶನವನ್ನು ಹೊಂದಿರಬೇಕು. ಯಾವುದೇ ಕಾರಣಕ್ಕೂ ಗೋಮಾಳ, ಗಾಂವಠಾಣ ಹಾಗೂ ಇತರೆ ಯಾವುದೇ ಸರ್ಕಾರಿ ಜಾಗದಲ್ಲಿ/ ನಿವೇಶನದಲ್ಲಿ ಮನೆಯನ್ನು ಕಟ್ಟುವಂತಿಲ್ಲ. ಈ ಹಿಂದೆ ಯಾವುದೇ ಯೋಜನೆ ಅಡಿಯಲ್ಲಿ ಆಶ್ರಯ ಮನೆಯನ್ನು ಪಡೆದಿರಬಾರದು. ನಗರ ಪ್ರದೇಶದಲ್ಲಿ ಯಾವುದೇ ಸ್ವಂತ ಮನೆಯನ್ನು ಹೊಂದಿರಬಾರದು. ಆಶ್ರಯ ಮನೆಯನ್ನು ಪಡೆದಿಲ್ಲ, ಹಾಗೂ ನಗರದಲ್ಲಿ ಸ್ವಂತ ಮನೆ ಇರುವುದಿಲ್ಲವೆಂದು ಸ್ವಯಂ ದೃಢೀಕೃರಣವನ್ನು ರೂ. 50/- ರ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು. ಮಹಿಳಾ ಫಲಾನುಭವಿಗಳಾಗಿರಬೇಕು. ಆದರೆ ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹ ಅರ್ಹರು. ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಪುರುಷರ ಹೆಸರಿನಲ್ಲಿದ್ದರೆ ರೂ.20/- ಛಾಪಾ ಕಾಗದ ಮೇಲೆ ಒಪ್ಪಿಗೆ ಪತ್ರವನ್ನು ನೀಡಬೇಕು. ಇತ್ತೀಚಿನ ಪಾಸ್‍ಪೋರ್ಟ ಸೈಜಿನ 4 ಭಾವಚಿತ್ರ, ಫಾರಂ ನಂ-3/ ಖಾತಾ ನೊಂದಣಿ/ ಖಾತಾ ವರ್ಗಾವಣೆ/ ಚಾಲ್ತಿ ಸಾಲಿನ ತೆರಿಗೆ ರಶಿದಿ, ನಿವೇಶನದ (ಜಾಗ/ ಕಚ್ಚಾಮನೆ/ ಬಿದ್ದಮನೆ/ಗುಡಿಸಲು) ಪ್ರಸ್ತುತ ಸ್ಥಿತಿಯ ಭಾವಚಿತ್ರ ಇತ್ಯಾಧಿಗಳನ್ನು ಜುಲೈ. 20 ರೊಳಗಾಗಿ ಗಂಗಾವತಿ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಗಂಗಾವತಿ: ಅಂಬೇಡ್ಕರ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಗಂಗಾವತಿ: ಅಂಬೇಡ್ಕರ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಂಗಾವತಿ: ಅಂಬೇಡ್ಕರ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_30.html
0 Response to "ಗಂಗಾವತಿ: ಅಂಬೇಡ್ಕರ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ