ಶೀರ್ಷಿಕೆ : news and photo Date: 8--6---2017
ಲಿಂಕ್ : news and photo Date: 8--6---2017
news and photo Date: 8--6---2017
ರಾಜ್ಯದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣದ ಶೇ.72ರಷ್ಟು ಸಾಧನೆ
******************************************************************
ಕಲಬುರಗಿ,ಜೂ.08.(ಕ.ವಾ.)-ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ವೈಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಶೇ. 35ರಷ್ಟು ಸಾಧನೆ ಇದ್ದದ್ದು ಈಗ ಶೇ. 72ರಷ್ಟು ಸಾಧನೆಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಶೇ. 30ರಷ್ಟು ಪ್ರಗತಿಯಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಅವರು ಗುರುವಾರ ಕಲಬುರಗಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕೆಲವೆಡೆ ಶೌಚಾಲಯ ನಿರ್ಮಾಣವಾಗಿದ್ದರೂ ಬಳಕೆಯಾಗುತ್ತಿಲ್ಲ. ಇವುಗಳನ್ನು ಬಳಸುವ ಬಗ್ಗೆ ಜನರನ್ನು ಮಾನಸಿಕವಾಗಿ ತಯಾರು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರ್ಕಾರ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ದೃಢಸಂಕಲ್ಪ ಮಾಡಿದ್ದು, ಇದಕ್ಕಾಗಿ ಈವರೆಗೆ ರಾಜ್ಯದಲ್ಲಿ 9000 ಶುದ್ಧ ಕುಡಿಯುವ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 8400 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ವರ್ಷ ಇನ್ನೂ 2500 ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 318 ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ವೈದ್ಯರ ವರದಿ ಪ್ರಕಾರ ಶುದ್ಧ ಕುಡಿಯುವ ನೀರಿನ ಘಟಕಗಳ ನೀರನ್ನು ಬಳಸುವುದರಿಂದ ಶೇ. 70ರಷ್ಟು ರೋಗಗಳು ಬರುತ್ತಿಲ್ಲ. ಈ ಕುರಿತು ಜನರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಕಾರ್ಯವನ್ನು ಆಂದೋಲನದ ಮಾದರಿಯಲ್ಲಿ ಕೈಗೊಳ್ಳಬೇಕು. ಈ ಘಟಕಗಳ ನಿರ್ವಹಣೆಗಾಗಿ ರಾಜ್ಯದಾದ್ಯಂತ ಒಟ್ಟು 200 ವಾಹನಗಳನ್ನು ಖರೀದಿಸಲು ಯೋಜಿಸಲಾಗಿದೆ ಎಂದರು.
ರಾಜ್ಯದಲ್ಲಿ 2008-09ರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ವಿವಿಧ ಕಾರಣಗಳಿಂದ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ವಿಷಾದನೀಯ. ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ ಮಂಜೂರಾದ 24 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ 13 ಯೋಜನೆಗಳಿಂದ ಜನರಿಗೆ ನೀರು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಈ ಯೋಜನೆಗಳ ಜಲಮೂಲ ಬತ್ತಿ ಹೋಗದಂತೆ ಮಳೆ ನೀರು ಸಂಗ್ರಹಿಸುವ ಸಣ್ಣ ಸಣ್ಣ ಕೆರೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ಮಾಡಬೇಕು. ಉಳಿದ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ನೀರು ಒದಗಿಸುವ ಕಾರ್ಯ ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಮುಖ್ಯಮಂತ್ರಿಗಳ 21 ಅಂಶಗಳ ಅನುಷ್ಠಾನದ ಬಗ್ಗೆಯೂ ತಾಲೂಕು ಪಂಚಾಯಿತಿಗಳ ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಸ್ವಚ್ಛ ಭಾರತ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿ ಪ್ರಸಕ್ತ ವರ್ಷ ಕಲಬುರಗಿ ಜಿಲ್ಲೆಯಲ್ಲಿ 60 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದ್ದು, ಈ ತಿಂಗಳ ಜೂನ್ 12ರವರೆಗೆ ಹಮ್ಮಿಕೊಂಡಿರುವ ವಿಶೇಷ ಅಭಿಯಾನದಡಿ 10000 ಶೌಚಾಲಯ ಹಾಗೂ “ಕೂಸು” ಕಾರ್ಯಕ್ರಮದಡಿ 10000 ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು. ಸಮಿತಿ ಸದಸ್ಯ ತಿಪ್ಪೆಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ
*****************************************************
ಕಲಬುರಗಿ,ಜೂ.08.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಜೂನ್ 9ರಂದು ಯಾದಗಿರಿಯಿಂದ ಗುರುಮಿಠಕಲ್‍ಗೆ ಪ್ರಯಾಣಿಸಿ, ಬೆಳಿಗ್ಗೆ 10.30 ಗಂಟೆಗೆ ಗುರುಮಿಠಕಲ್ ಗಡಿ ಗ್ರಾಮದಲ್ಲಿ ಬರುವ ಸನ್ನತಿ ಎಲ್.ಐ.ಎಸ್. ನೀರಾವರಿ ಯೋಜನೆಯ ವಿವಿಧ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಹಾಗೂ ಸ್ಥಳ ಪರಿಶೀಲಿಸುವರು. ನಂತರ ಗುರುಮಿಠಕಲ್‍ದಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಪಿಂಚಣಿದಾರರು ಆಧಾರ ಕಾರ್ಡ ಪ್ರತಿ ನೀಡಲು ಮನವಿ
****************************************************
ಕಲಬುರಗಿ,ಜೂ.08.(ಕ.ವಾ.)-ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ, ವೃದ್ಧಾಪ್ಯ, ಮೈತ್ರಿ ಮತ್ತು ಮನಸ್ವಿನಿ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಕಲಬುರಗಿ ತಾಲೂಕಿನ ಎಲ್ಲ ಫಲಾನುಭವಿಗಳು ತಮ್ಮ ಆಧಾರ ಕಾರ್ಡಿನ ಪ್ರತಿಯನ್ನು ಸಲ್ಲಿಸುವುದು ಅತ್ಯವಶ್ಯಕವಾಗಿದೆ ಎಂದು ಕಲಬುಗಿಯ ಗ್ರೇಡ್-2 ತಹಶೀಲ್ದಾರ್ ಜಗನ್ನಾಥ ಪೂಜಾರಿ ತಿಳಿಸಿದ್ದಾರೆ.
ಫಲಾನುಭವಿಗಳು ನೀಡುವ ಪಿಂಚಣಿ ಮಂಜೂರಾತಿ ಆದೇಶ, ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‍ಬುಕ್ ನಕಲು ಪ್ರತಿಗಳನ್ನು ತಹಸೀಲ್ದಾರರ ಕಾರ್ಯಾಲಯ, ಅಟಲ್‍ಜೀ ಜನಸ್ನೇಹಿ ಕೇಂದ್ರದಲ್ಲಿ ರಜೆ ದಿನದಂದು ಸಹ ಸ್ವೀಕರಿಸಲಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯ ಎಲ್ಲ ಪಿಂಚಣಿ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ಜೂನ್ 15ರೊಳಗಾಗಿ ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು. ತಪ್ಪಿದಲ್ಲಿ ಪಿಂಚಣಿಯನ್ನು ರದ್ದುಪಡಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಜೂನ್ 9ರಂದು ಎ.ಸಿ.ಬಿ.ಅಧಿಕಾರಿಗಳಿಂದ ಅಹವಾಲು ಸ್ವೀಕಾರ
************************************************************
ಕಲಬುರಗಿ,ಜೂ.08.(ಕ.ವಾ.)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ ಕಲ್ಲೆದೇವರು ಅವರು ಚಿಂಚೋಳಿ ತಾಲೂಕುಗಳಿಗೆ ಸಂಬಂಧಿಸಿದಂತೆ ಜೂನ್ 9ರಂದು ಬೆಳಗಿನ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿಂಚೋಳಿ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ. ಅವರ ಮೊಬೈಲ್ ಸಂ. 9480803610, 9448828787 ಇರುತ್ತದೆ ಎಂದು ಕಲಬುರಗಿ ಭ್ರಷ್ಟಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಉಪ ಅಧೀಕ್ಷಕರು ತಿಳಿಸಿದ್ದಾರೆ.
ವಿದೇಶಿ ವ್ಯಾಸಂಗ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
******************************************************************
ಕಲಬುರಗಿ,ಜೂ.08.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್.ಡಿ., ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಇಲಾಖೆಯ ತಿತಿತಿ.bಚಿಛಿಞತಿoಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟಿನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಜುಲೈ 3ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‍ಸೈಟ್‍ನ್ನು ಹಾಗೂ ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ರಜಾ ದಿನಗಳನ್ನು ಹೊರತುಪಡಿಸಿ ದೂರವಾಣಿ ಸಂಖ್ಯೆ 080-65970004ನ್ನು ಸಂಪರ್ಕಿಸಲು ಕೋರಲಾಗಿದೆ.
ಕರ್ತವ್ಯಕ್ಕೆ ಹಾಜರಾಗಲು ಸೂಚನೆ
********************************
ಕಲಬುರಗಿ,ಜೂ.08.(ಕ.ವಾ.)-ಕಲಬುರಗಿ ವೃತ್ತದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧೀಕ್ಷಕ ಅಭಿಯಂತರರ ಕಾರ್ಯಾಲಯದಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅಂಬಾದಾಸ್ ನರಸಿಂಗ್ 2017ರ ಜನವರಿ 2ರಿಂದ ಈವರೆಗೆ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಕರ್ತವ್ಯಕ್ಕೆ ಹಾಜರಾಗುವ ಕುರಿತು ನೌಕರರ ಖಾಯಂ ವಿಳಾಸಕ್ಕೆ ಸದರಿ ಕಚೇರಿಯಿಂದ ನೋಂದಾಯಿತ ಅಂಚೆ ಮೂಲಕ ಹಲವಾರು ಬಾರಿ ನೋಟೀಸು ಕಳುಹಿಸಲಾಗಿದೆ. ಆದರೆ ಸದರಿ ನೌಕರರ ಮನೆಗೆ ಡೋರ್‍ಲಾಕ್ ಇರುವುದರಿಂದ ಅಂಚೆ ಕಚೇರಿಯಿಂದ ನೋಟೀಸು ಮರಳಿ ಬಂದಿರುತ್ತದೆ ಎಂದು ಕಲಬುರಗಿ ವೃತ್ತದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧೀಕ್ಷಕ ಅಭಿಯಂತರ ಶ್ರೀಹರಿ ಪ್ರಕಾಶ ತಿಳಿಸಿದ್ದಾರೆ.
ಸದರಿ ನೌಕರರು ಈ ಪ್ರಕಟಣೆ ಪ್ರಕಟಗೊಂಡ 15 ದಿನದೊಳಗಾಗಿ ಕಲಬುರಗಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧೀಕ್ಷಕ ಅಭಿಯಂತರರ ಕಾರ್ಯಾಲಯದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಸದರಿ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸರ್ಕಾರಿ ಕೆಲಸದ ಬಗ್ಗೆ ತಮಗೆ ಆಸಕ್ತಿ ಇರುವುದಿಲ್ಲ ಎಂದು ಹಾಗೂ ನೌಕರರ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಿ ನೌಕರರ ವಿರುದ್ಧ ಕೆ.ಸಿ.ಎಸ್.ಆರ್. ನಿಯಮ 106(ಎ) ಹಾಗೂ ಕೆ.ಸಿ.ಎಸ್. (ಸಿ.ಸಿ.ಎ.) ನಿಯಮಗಳು 1957ರ ನಿಯಮ 8ರ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ
*************************************************************
ಕಲಬುರಗಿ,ಜೂ.08.(ಕ.ವಾ.)-ಕೇಂದ್ರ ಪುರಸ್ಕøತ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಮೇಲ್ದರ್ಜೆಗೇರಿಸಿದ ಆಯುಷ್ ಇಲಾಖೆಯ ಅಫಜಲಪುರ, ಕಲಬುರಗಿ, ಚಿತ್ತಾಪುರ ಹಾಗೂ ಸೇಡಂ ಆಯುರ್ವೇದ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಮಂಜೂರಾಗಿರುವ 2018ರ ಮಾರ್ಚ್ 31ರವರೆಗೆ ಚಾಲ್ತಿಯಿರುವಂತೆ ಗುತ್ತಿಗೆ ಆಧಾರದ ಮೇಲೆ ಆಯುರ್ವೇದ ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್ (ಪಂಚಕರ್ಮ ಸಹಾಯಕರು), ಕ್ಷಾರಸೂತ್ರ ಅಟೆಂಡೆಂಟ್ ಹಾಗೂ ಸ್ತ್ರೀರೋಗ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ|| ನಾಗರತ್ನ ಚಿಮ್ಮಲಗಿ ತಿಳಿಸಿದ್ದಾರೆ.
ಆಯುರ್ವೇದ ತಜ್ಞ ವೈದ್ಯರ ಎಂಟು ಹುದ್ದೆಗಳಿಗೆ ಆಯುರ್ವೇದÀಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಮಾಸಿಕ 33000ರೂ. ವೇತನ ನೀಡಲಾಗುವುದು. ಔಷಧ ವಿತರಕರ ಎಂಟು ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಔಷಧ ವಿಜ್ಞಾನದಲ್ಲಿ ಡಿಪ್ಲೋಮಾ ಪಾಸಾಗಿರಬೇಕು. ಮಾಸಿಕ ವೇತನ 14350ರೂ. ನೀಡಲಾಗುವುದು. ಮಸಾಜಿಸ್ಟ್ (ಪಂಚಕರ್ಮ ಸಹಾಯಕರ) ಎಂಟು ಹುದ್ದೆಗಳಿಗೆ ಕನಿಷ್ಠ 7ನೇ ತರಗತಿ ಪಾಸಾಗಿರುವುದಲ್ಲದೇ ಆಯುಷ್ ಆಸ್ಪತ್ರೆ ಚಿಕಿತ್ಸಾಲಯದಲ್ಲಿ ಮಸಾಜಿಸ್ಟ್‍ಗಳಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು. ಮಾಸಿಕ 10300ರೂ. ವೇತನ ನೀಡಲಾಗುವುದು. ಕ್ಷಾರಸೂತ್ರ ಅಟೆಂಡೆಂಟ್ ಹಾಗೂ ಸ್ತ್ರೀರೋಗ ಅಟೆಂಡೆಂಟ್ ತಲಾ ನಾಲ್ಕು ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ ಪಾಸಾಗಿರುವುದಲ್ಲದೇ ಆಯುಷ್ ಆಸ್ಪತ್ರೆ ಚಿಕಿತ್ಸಾಲಯಗಳಲ್ಲಿ ಕರ್ತವ್ಯದ ಅನುಭವ ಹೊಂದಿರಬೇಕು. ಮಾಸಿಕ 10300ರೂ. ವೇತನ ನೀಡಲಾಗುವುದು.
ಅಭ್ಯರ್ಥಿಗಳಿಗೆ ಅರ್ಜಿ ನಮೂನೆಗಳನ್ನು ಕಲಬುರಗಿ ಗಾಜಿಪುರದ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯದಲ್ಲಿ ಜೂನ್ 25ರ ಮಧ್ಯಾಹ್ನ 12 ಗಂಟೆಯವರೆಗೆ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 27ರ ಸಂಜೆ 5 ಗಂಟೆಯವರೆಗೆ ಸ್ವೀಕರಿಸಲಾಗುವುದು. ಮೇಲ್ಕಂಡ ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯ ಆಯ್ಕೆ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಲಾಗುವುದು. ಎಲ್ಲ ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ಸಂಪೂರ್ಣ ತಾತ್ಕಾಲಿಕವಾಗಿದ್ದು, ಗುತ್ತಿಗೆಯ ನೇಮಕಾತಿಯ ಎಲ್ಲ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತವೆ. ಪ್ರವರ್ಗವಾರು ಹುದ್ದೆಗಳ ಮೀಸಲಾತಿ, ತಾಲೂಕುವಾರು ಹುದ್ದೆಗಳ ವಿವರ ಕುರಿತು ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಹೀಗಾಗಿ ಲೇಖನಗಳು news and photo Date: 8--6---2017
ಎಲ್ಲಾ ಲೇಖನಗಳು ಆಗಿದೆ news and photo Date: 8--6---2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 8--6---2017 ಲಿಂಕ್ ವಿಳಾಸ https://dekalungi.blogspot.com/2017/06/news-and-photo-date-8-6-2017.html
0 Response to "news and photo Date: 8--6---2017"
ಕಾಮೆಂಟ್ ಪೋಸ್ಟ್ ಮಾಡಿ