ಶೀರ್ಷಿಕೆ : news and photo date: 09-06-2017
ಲಿಂಕ್ : news and photo date: 09-06-2017
news and photo date: 09-06-2017
ಜೂನ್ 12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
******************************************************************
ಕಲಬುರಗಿ,ಜೂ.09.(ಕ.ವಾ.)-ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂಲನಾ ಹಾಗೂ ಪುನರ್ವಸತಿ ಸಂಘ ಮತ್ತು ಮಕ್ಕಳ ಸಹಾಯವಾಣಿ-1098 ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂನ್ 12ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವ್ಹಿ. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂಲನೆ ಹಾಗೂ ಪುನರ್ವಸತಿ ಸಂಘದ ಅಧ್ಯಕ್ಷ ಉಜ್ವಲ್‍ಕುಮಾರ ಘೋಷ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವರಾಜ ಸಜ್ಜನಶೆಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ. ಚಂದ್ರಕಾಂತ, ಕಾರ್ಖಾನೆ ಮತ್ತು ಬಾಯ್ಲರ್‍ಗಳ ಇಲಾಖಯೆ ಉಪನಿರ್ದೇಶಕ ಪಾರ್ಥಸಾರಥಿ ಅತಿಥಿಗಳಾಗಿ ಹಾಗೂ ಮತ್ತಿತರು ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಕಲಬುರಗಿ ಚೈಲ್ಡ್‍ಲೈನ್ ನೋಡಲ್ ಕೇಂದ್ರದ ನಿರ್ದೇಶಕ ಡಾ. ಲಿಂಗರಾಜ್ ಕೋಣಿನ್ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆ ಕುರಿತು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವಿಠ್ಠಲ ಚಿಕಣಿ-ಬಾಲಕಾರ್ಮಿಕತೆಯ ದುಷ್ಪರಿಣಾಮಗಳು ಮತ್ತು ಬಾಲಕಾರ್ಮಿಕರ ಪುನರ್ವಸತಿ ವ್ಯವಸ್ಥೆ ಕುರಿತು ಹಾಗೂ ಡಾನ್ ಬಾಸ್ಕೋ ನಿರ್ದೇಶಕ ಫಾದರ್ ಸಜ್ಜಿತ್ ಜಾರ್ಜ್ ಮಕ್ಕಳ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡುವರು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಜಾಥಾಕ್ಕೆ ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಚಾಲನೆ ನೀಡುವರು. ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಂದ ಜಾಥಾ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊನೆಗೊಳ್ಳಲಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
**************************************************
ಕಲಬುರಗಿ,ಜೂ.09.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಜೂನ್ 11ರಂದು ವಿಜಯಪುರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಶಿವಶರಣೆ ಅಕ್ಕಮಹಾದೇವಿ ಹಾಗೂ ಇತರ ಆರು ಶಿವಶರಣೆಯವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಸ್ತೆ ಮೂಲಕ ಕಲಬುರಗಿಗೆ ಆಗಮಿಸುವರು. ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು.
ಪ್ರವಾಸೋದ್ಯಮ ಸಚಿವರ ಪ್ರವಾಸ
**********************************
ಕಲಬುರಗಿ,ಜೂ.09.(ಕ.ವಾ.)-ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ರಾಜ್ಯ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವÀ ಪ್ರಿಯಾಂಕ ಖರ್ಗೆ ಅವರು ಬೆಂಗಳೂರಿನಿಂದ ಸೋಲಾಪುರ-ಯಶವಂತಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಜೂನ್ 10ರಂದು ಬೆಳಗಿನ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು. ಕಲಬುರಗಿಯಿಂದ ಚಿತ್ತಾಪುರಕ್ಕೆ ಪ್ರಯಾಣಿಸಿ ಬೆಳಗಿನ 11 ಗಂಟೆಗೆ ಚಿತ್ತಾಪುರದಲ್ಲಿ ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸಿ, ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜೂನ್ 11ರಂದು ಕಲಬುರಗಿಯಿಂದ ಚಿತ್ತಾಪುರಕ್ಕೆ ಪ್ರಯಾಣಿಸಿ, ಚಿತ್ತಾಪುರದಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಲಬುರರಿಗೆ ಆಗಮಿಸುವರು. ರಾತ್ರಿ 9.05 ಗಂಟೆಗೆ ಕಲಬುರಗಿಯಿಂದ ಸೋಲಾಪುರ-ಯಶವಂತಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು.
ಮಧ್ಯಪ್ರದೇಶ ಕ್ರೀಡಾ ಮತ್ತು ಯುವಜನ ಸೇವಾ ಸಚಿವರ ಪ್ರವಾಸ
****************************************************************
ಕಲಬುರಗಿ,ಜೂ.09.(ಕ.ವಾ.)-ಮಧ್ಯ ಪ್ರದೇಶದ ಕ್ರೀಡಾ ಮತ್ತು ಯುವಜನ ಕಲ್ಯಾಣ, ಧಾರ್ಮಿಕ ಟ್ರಸ್ಟ್ ಮತ್ತು ದತ್ತಿ ಇಲಾಖೆಯ ಸಚಿವೆ ಯಶೋಧರಾ ರಾಜೆ ಸಿಂಧಿಯಾ ಅವರು ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಕಲಬುರಗಿಗೆ ರಸ್ತೆ ಮೂಲಕ ಜೂನ್ 10ರಂದು ರಾತ್ರಿ 8 ಗಂಟೆಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜೂನ್ 11ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಶಹಾಬಾದಿಗೆ ಪ್ರಯಾಣ ಮಾಡಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಕಲಬುರಗಿಗೆ ಆಗಮಿಸುವರು. ಸಂಜೆ 6 ಗಂಟೆಗೆ ಕಲಬುರಗಿಯಿಂದ ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಪ್ರಯಾಣ ಮಾಡುವರು.
ವಸತಿ ಸೌಲಭ್ಯಕ್ಕಾಗಿ ಮಾಜಿ ದೇವದಾಸಿಯರಿಂದ ಅರ್ಜಿ ಆಹ್ವಾನ
***************************************************************
ಕಲಬುರಗಿ,ಜೂ.09.(ಕ.ವಾ.)-ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ಮತ್ತು ಕಲಬುರಗಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಡಿ ಕಲಬುರಗಿ ಜಿಲ್ಲೆಯ ಮಾಜಿ ದೇವದಾಸಿಯರಿಂದ ವಸತಿ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗೆ ಈ ವರ್ಷ 105 ಭೌತಿಕ ಹಾಗೂ 1.57 ಕೋಟಿ ರೂ. ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 1993-94 ಹಾಗೂ 2007-08ರ ಸಮೀಕ್ಷೆ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರಬೇಕು. ತಮ್ಮ ಹೆಸರಿಗೆ ನಿವೇಶನ ಹೊಂದಿರುವ ಮತ್ತು ಇತರೆ ಯಾವುದೇ ವಸತಿ ಯೋಜನೆಯಡಿ ವಸತಿ ಸೌಲಭ್ಯವನ್ನು ಪಡೆಯದೇಯಿರುವ ಮಾಜಿ ದೇವದಾಸಿಯರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನಾ ಕಚೇರಿ. ಜೈ ಸಂತೋಷಮಾ ನಿವಾಸ ಪ್ಲಾಟ್ ನಂ. 94 ಎನ್.ಜಿ.ಒ. ಕಾಲೋನಿ, ಜೇವರ್ಗಿ ರಸ್ತೆ, ಕಲಬುರಗಿ- 585102 ಕಚೇರಿಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಆದಾಯ ಮತ್ತು ಜಾತಿ ಪ್ರಮಾಣಪತ್ರ, ವಯಸ್ಸಿನ ಧೃಢೀಕರಣ, ನಿವೇಶನದ ಕಚ್ಚಾ ನಕಾಶೆ, ಇತರೆ ವಸತಿ ಯೋಜನೆಯಡಿ ವಸತಿ ಸೌಲಭ್ಯ ಪಡೆಯದ ಬಗ್ಗೆ ಗ್ರಾಮ ಪಂಚಾಯಿತಿ ಪಿ.ಡಿ.ಓ. ಅವರಿಂದ ಧೃಢೀಕರಣ ಮತ್ತು ನಿವೇಶನದ ಕರ ಕಟ್ಟಿರುವ ಪ್ರತಿ ಹಾಗೂ ಪಡಿತರ ಅಥವಾ ಚುನಾವಣಾ ಗುರುತಿನ ಚೀಟಿಗಳೊಂದಿಗೆ 2017ರ ಜೂನ್ 30ರೊಳಗಾಗಿ ಸದರಿ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-254537, ಜಿಲ್ಲಾ ಯೋಜನಾಧಿಕಾರಿಗಳು ಮೊಬೈಲ್ ನಂ..9448225857, ಆಳಂದ, ಕಲಬುರಗಿ(ಗ್ರಾಮೀಣ) ಮೊಬೈಲ್ ಸಂ. 9482842577, ಚಿತ್ತಾಪೂರ, ಸೇಡಂ, ಜೇವರ್ಗಿ: ಮೊಬೈಲ್ ಸಂ. 9972259351 ಹಾಗೂ ಅಫಜಲಪುರ, ಚಿಂಚೋಳಿ, ಕಲಬುರಗಿ(ನಗರ) : ಮೊಬೈಲ್ ಸಂ. 7760334662ಗಳನ್ನು ಸಂಪರ್ಕಿಸಲು ಕೋರಿದೆ.
ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‍ಪಾಸ್ ವಿತರಣಾ ವ್ಯವಸ್ಥೆ
****************************************************************
ಕಲಬುರಗಿ,ಜೂ.09.(ಕ.ವಾ.)-ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ. ಕಲಬುರಗಿ ವಿಭಾಗ-1ರಿಂದ 2017-18ನೇ ಸಾಲಿನ ಶೈಕ್ಷಣಿಕ ಅವಧಿಗೆ ಶಾಲಾ/ಕಾಲೇಜಿನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‍ಪಾಸ್ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ವಿಭಾಗ-1ರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ತಿಳಿಸಿದ್ದಾರೆ.
ಸಂಸ್ಥೆಯಿಂದ ಬಸ್ ಪಾಸ್ ಅರ್ಜಿಗಳನ್ನು ಆಯಾ ಶಾಲಾ-ಕಾಲೇಜುಗಳಿಗೆ ನೀಡಲಾಗುವುದು. ಅರ್ಜಿಗಳನ್ನು ಶಾಲಾ/ಕಾಲೇಜಿನ ಅಡಳಿತ ವರ್ಗ ವಿದ್ಯಾರ್ಥಿಗಳಿಗೆ ವಿತರಿಸಿ ಭರ್ತಿ ಮಾಡಿದ ಅರ್ಜಗಳನ್ನು ಬಸ್ ಪಾಸ್ ದರದೊಂದಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿ ಸಂಸ್ಥೆಯ ಬಸ್ ವಿತರಣಾ ಕೌಂಟರಿಗೆ ನೀಡಿದಲ್ಲಿ ಕೂಡಲೇ ವಿದ್ಯಾರ್ಥಿಗಳಿಗೆ ಬಸ್‍ಪಾಸ್‍ಗಳನ್ನು ವಿತರಿಸಲಾಗುವುದು.
ಬಸ್ ಪಾಸ ದರದ ವಿವರ ಇಂತಿದೆ.7ನೇ ತರಗತಿ ವಿದ್ಯಾರ್ಥಿಗಳಿಗೆ 130ರೂ., ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ 530ರೂ., ವಿದ್ಯಾರ್ಥಿಗಳಿಗೆ 730 ರೂ., ಕಾಲೇಜು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1030 ರೂ., ಐ.ಟಿ.ಐ. ವಿದ್ಯಾರ್ಥಿನಿಯರಿಗೆ 1280 ರೂ., ವೃತ್ತಿಪರ ಕೋರ್ಸುಗಳಾದ ವೈದ್ಯಕೀಯ, ಇಂಜನಿಯರಿಂಗ್, ಇತರೆ ವಿದ್ಯಾರ್ಥಿಗಳಿಗೆ 1530 ರೂ., ಸಂಜೆ ಕಾಲೇಜು ಮತ್ತು ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ 1330 ರೂ. ಬಸ್‍ಪಾಸ್ ದರ ನಿಗದಿಪಡಿಸಲಾಗಿದೆ.
ಬಸ್‍ಪಾಸ್ ವಿತರಣೆ ಮಾಡುವ ಕೌಂಟರಿನ ಸ್ಥಳಗಳ ವಿವರ: ಸುಪರ್ ಮಾರ್ಕೆಟ್ ಬಸ್‍ನಿಲ್ದಾಣ, ಸೇಡಂ ರಿಂಗ್ ರೋಡ್, ರಾಷ್ಟ್ರಪತಿ ವೃತ್ತ, ರಾಮಮಂದಿರ ಬಸ್‍ನಿಲ್ದಾಣ, ಎಸ್.ಟಿ.ಬಿ.ಟಿ. ಬಸ್‍ನಿಲ್ದಾಣ, ರೈಲ್ವೆ ಸ್ಟೇಶನ್ ಬಸ್‍ನಿಲ್ದಾಣ, ಹುಮನಾಬಾದ್ ರಿಂಗ್ ರೋಡ, ಎಂ.ಎಸ್.ಕೆ.ಮಿಲ್ ಬಸ್‍ನಿಲ್ದಾಣ, ಕಲಬುರಗಿ ವಿಶ್ವವಿದ್ಯಾಲಯ, ಮಹಾಗಾಂವ ಕ್ರಾಸ್, ಕಮಲಾಪುರ ಬಸ್‍ನಿಲ್ದಾಣ, ಸೇಡಂ ಘಟಕ, ಮುಧೋಳ, ಮಳಖೇಡ, ಚಿಂಚೋಳಿ, ಸುಲೇಪೇಟ್, ಕೊಂಚಾವರಂ, ಚಿಮ್ಮನಚೋಡ್, ಚಿತ್ತಾಪುರ, ಶಾಹಬಾದ್, ಕಾಳಗಿ ವಾಡಿ, ಬಸ್‍ನಿಲ್ದಾಣಗಳು, ಕೇಂದ್ರ ಬಸ್‍ನಿಲ್ದಾಣ, ಕೆ.ಎಂ.ಎಫ್. ನಗರ ಸಾರಿಗೆ ನಿಯಂತ್ರಣ ಸ್ಥಳ.
ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಜೂನ್ 20ಕ್ಕೆ ಮುಂದೂಡಿಕೆ
*************************************************************
ಕಲಬುರಗಿ,ಜೂ.09.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸುವ ಸಾಮಾನ್ಯ ಸಭೆಯನ್ನು 2017ರ ಜೂನ್ 20ಕ್ಕೆ ಮುಂದೂಡಲಾಗಿದೆ ಎಂದು ಅಪರ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮುಂಚೆ ಸದರಿ ಚುನಾವಣೆಯನ್ನು ಜೂನ್ 12ರಂದು ನಿಗದಿಪಡಿಸಲಾಗಿತ್ತು. ಆದರೆ ಮಹಾನಗರ ಪಾಲಿಕೆಯ ಮಹಾಪೌರರು ಚುನಾವಣೆಯನ್ನು ಜೂನ್ 20ರಂದು ನಿಗದಿಪಡಿಸುವಂತೆ ಟಿಪ್ಪಣೆ ಮೂಲಕ ಕೋರಿರುತ್ತಾರೆ. ಇದರಿಂದ ಜೂನ್ 20ರಂದು ಮುಂದೂಡಲ್ಪಟ್ಟ ಚುನಾವಣೆಯು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ (ಟೌನ್ ಹಾಲ್) ನಡೆಯಲಿದೆ ಎಂದು ಅಪರ ಪ್ರಾದೇಶಿಕ ಆಯುಕ್ತೆ ತಿಳಿಸಿದ್ದಾರೆ.
ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
************************************
ಕಲಬುರಗಿ,ಜೂ.09.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯಿಂದ ಕಲಬುರಗಿ ನಗರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಸತಿ ರಹಿತ ನಿವಾಸಿಗಳ ಬೇಡಿಕೆಗೆ ತಕ್ಕಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಡಾ. ಬಿ.ಆರ್. ಅಂಬೇಡ್ಕರ ನಿವಾಸ ಯೋಜನೆಯಡಿ 2017-18ನೇ ಸಾಲಿನ ವಸತಿ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಸದರಿ ಯೋಜನೆಯಡಿ 2017-18ನೇ ಸಾಲಿನಲ್ಲಿ 1047 ಭೌತಿಕ ಗುರಿ ಇದ್ದು, ಈ ಪೈಕಿ ಪರಿಶಿಷ್ಟ ಜಾತಿಯ 841 ಹಾಗೂ ಪರಿಶಿಷ್ಟ ಪಂಗಡದ 206 ಫಲಾನುಭವಿಗಳ ಗುರಿ ಹೊಂದಲಾಗಿದೆ. ಕಲಬುರಗಿ ನಗರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸ್ವಂತ ನಿವೇಶನ ಹೊಂದಿದ ನಿವಾಸಿಗಳು ಮಹಾನಗರ ಪಾಲಿಕೆಯ ಎಸ್.ಜೆ.ಎಸ್.ಆರ್.ವೈ. (ಡೇ-ನಲ್ಮ್ ಉತ್ತರ) ಶಾಲೆಯಲ್ಲಿ ಜೂನ್ 12ರಿಂದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 2017ರ ಜೂನ್ 30ರ ಸಂಜೆ 5 ಗಂಟೆಯೊಳಗಾಗಿ ಮಹಾನಗರ ಪಾಲಿಕೆಯ ಎಸ್.ಜೆ.ಎಸ್.ಆರ್.ವೈ. (ಡೇ-ನಲ್ಮ್ ಉತ್ತರ) ಶಾಖೆಯಲ್ಲಿ ಸಲ್ಲಿಸಬೇಕು.
ಅರ್ಜಿದಾರರು ತಮ್ಮ ಹೆಸರಿಗೆ ಸ್ವಂತ ನಿವೇಶನ ಹೊಂದಿರಬೇಕು ಮತ್ತು ಈ ಬಗ್ಗೆ ಪಾಲಿಕೆಯಿಂದ 2017-18ನೇ ಸಾಲಿನ ಖಾತಾ ಪ್ರತಿ ಹಾಗೂ ಕರ ಪಾವತಿಯ ರಸೀದಿ, ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಾಸ್‍ಪೋರ್ಟ್ ಅಳತೆಯ 4 ಭಾವಚಿತ್ರ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರೇಷನ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್‍ಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿಯಲ್ಲಿ ವಾರ್ಡ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಅರ್ಜಿದಾರರು ಈ ಹಿಂದೆ ವಸತಿಗೆ ಸಂಬಂಧಿಸಿದ ಯೋಜನೆ ಅಡಿಯಲ್ಲಿ ವಸತಿ ಸೌಲಭ್ಯ ಪಡೆದಿರುವುದಿಲ್ಲ ಎಂದು 20ರೂ. ಸ್ಟ್ಯಾಂಪ್ ಪೇಪರ್ ಮೇಲೆ ಬರೆದು ನೋಟರಿ ಮಾಡಿಸಿ, ನಗರ ಪ್ರದೇಶದಲ್ಲಿ ಮನೆ ಮತ್ತು ಸರ್ಕಾರಿ ನೌಕರಿ ಇಲ್ಲ ಎಂಬುವುದರ ಬಗ್ಗೆ 20ರೂ. ಸ್ಟ್ಯಾಂಪ್ ಪೇಪರ್ ಮೇಲೆ ಬರೆದು ನೋಟರಿ ಮಾಡಿಸಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ತೆರಿಗೆ ಪಾವತಿಗೆ ಕೇವಲ 20 ದಿನ ಬಾಕಿ
***************************************
ಕಲಬುರಗಿ,ಜೂ.09.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2017-18ನೇ ಸಾಲಿನ ದಂಡ ರಹಿತ ಆಸ್ತಿ ತೆರಿಗೆ ಪಾವತಿಸಲು ಕೇವಲ 20 ದಿನಗಳು ಮಾತ್ರ ಬಾಕಿ ಇದ್ದು, ತೆರಿಗೆ ಪಾವತಿಗೆ ಜೂನ್ 30ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ದಂಡ ರಹಿತ ಆಸ್ತಿ ತೆರಿಗೆ ಪಾವತಿ ಕುರಿತು ಇನ್ನೂ ಸಾಕಷ್ಟು ಆಸ್ತಿದಾರರಿಗೆ ಮಾಹಿತಿ ಇಲ್ಲದ ಕಾರಣ ಈವರೆಗೆ ಆಸ್ತಿ ತೆರಿಗೆ ಪಾವತಿ ಮಾಡಿರುವುದಿಲ್ಲ. ಆಸ್ತಿಗಳ ಮಾಲೀಕರು 20 ದಿನದೊಳಗಾಗಿ (ಜೂನ್ 30ರವರೆಗೆ) ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ರಜಾ ದಿನಗಳಂದು ಸಹ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಪಾಲಿಕೆಯ ವಲಯ ಕಚೇರಿ-3ರ ಆವರಣ ಹಾಗೂ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರದ ಹೌಸಿಂಗ್ ಬೋರ್ಡ್ ಕಾಂಪ್ಲೆಕ್ಸಿನಲ್ಲಿರುವ ಗುಲಬರ್ಗಾ ಒನ್‍ಗಳಲ್ಲಿ ತೆರಿಗೆ ಪಾವತಿಸಿ ಇದರ ಸದುಪಯೋಗ ಪಡೆಯಬೇಕೆಂದು ಅವರು ಕೋರಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಖುಲ್ಲಾ ನಿವೇಶನ, ಮನೆ, ಅಂಗಡಿ, ವಾಣಿಜ್ಯ ಕಟ್ಟಡ, ಕಲ್ಯಾಣ ಮಂಟಪ, ನರ್ಸಿಂಗ್ ಹೋಂ, ಬಹು ಮಹಡಿ ಕಟ್ಟಡ, ಅಪಾರ್ಟ್‍ಮೆಂಟ್, ಫಂಕ್ಷನ್ ಹಾಲ್‍ಗಳು ಮತ್ತು ಇತರೆ ಸಾಕಷ್ಟು ಆಸ್ತಿ ಹೊಂದಿರುವ ವಿವಿಧ ಆಸ್ತಿಗಳ ಮಾಲೀಕರು ಮೇ ತಿಂಗಳಿನಿಂದ ಈವರೆಗೆ ತಮ್ಮ ಆಸ್ತಿ ತೆರಿಗೆ ಪಾವತಿಸಿ ಸದರಿ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿರುವುದಕ್ಕೆ ಮಹಾನಗರ ಪಾಲಿಕೆಯಿಂದ ಅಭಿನಂದನೆ ಸಲ್ಲಿಸಿರುತ್ತಾರೆ.
ಜೂನ್ 10ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಜೂ.09.(ಕ.ವಾ.)-ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಲಬುರಗಿಯ ಕಾರ್ಯನಿರ್ವಾಹಕ ಇಂಜಿನಿಯರರ ಕಚೇರಿಯಿಂದ ಹೊಸದಾಗಿ ನಿರ್ಮಿಸಲಿರುವ 110 ಕೆ.ವಿ. ಘತ್ತರಗಾ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ 2017ರ ಜೂನ್ 10 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಪ್ರಯುಕ್ತ 110 ಕೆ.ವಿ. ಮೋರಟಗಿ, 110ಕೆ.ವಿ. ಕರಜಗಿ ಮತ್ತು 110 ಕೆ.ವಿ. ಅಫಜಲಪುರ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಅಫಜಲಪುರ ನಗರ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಗ್ರಾಮಗಳ ವಿವರ ಇಂತಿದೆ.
ಅಫಜಲಪುರ ನಗರ ಮತ್ತು ಗ್ರಾಮೀಣ ಪ್ರದೇಶ, ಘತ್ತರಗಾ, ಶಿರವಾಳ, ಹಳಿಯಾಳ, ಬಳ್ಳೂರಗಿ, ಅಳಗಿ(ಬಿ), ಕುಲಾಲಿ, ಕಲ್ಲೂರ, ಚೌಡಾಪುರ, ದೇವಲಗಾಣಗಾಪುರ, ಬಂದರವಾಡ, ಧನ್ನೂರು, ಚಿಣಮಗೇರಾ, ರೇವೂರ, ಅತನೂರ, ಮಲ್ಲಾಬಾದ, ಬಡದಾಳ, ಕರಜಗಿ, ಮಣ್ಣೂರ, ಮಾಶ್ಯಾಳ, ಉಡಚಣ, ಗೌರ(ಬಿ), ಭೋಸಗಾ, ನಂದರಗಾ ಮತ್ತು ಹಸರಗುಂಡಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ತೋಟಗಾರಿಕೆ ವಿಷಯ ತಜ್ಞರ ನೇಮಕಾತಿಗಾಗಿ ಅರ್ಜಿ ಆಹ್ವಾನ
***********************************************************
ಕಲಬುರಗಿ,ಜೂ.09.(ಕ.ವಾ.)-ಕಲಬುರಗಿ ಜಿಲ್ಲೆಯ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ 2017-18ನೇ ಸಾಲಿನ ತೋಟಗಾರಿಕೆ ವಿಸ್ತರಣೆ ಕಾರ್ಯಕ್ರಮದಡಿ ಕಲಬುರಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರಕ್ಕೆ 12 ತಿಂಗಳಿಗಾಗಿ ವಿಷಯ ತಜ್ಞರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕರ್ನಾಟಕ ಪಾರದರ್ಶಕತೆ ನಿಯಾಮಾವಳಿಯನ್ವಯ ದ್ವಿ ಲಕೋಟೆ ಪದ್ಧತಿಯಲ್ಲಿ ಮಾನವ ಸಂಪನ್ಮೂಲ ಸರ್ಕಾರಿ/ನೋಂದಾಯಿತ, ಸರ್ಕಾರೇತರ ಸಂಸ್ಥೆಗಳಿಂದ ಟೆಂಡರ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ತೋಟಗಾರಿಕೆ ಉಪನಿರ್ದೇಶಕ ಮಹ್ಮದ್ ಅಲಿ ತಿಳಿಸಿದ್ದಾರೆ.
ಜೂನ್ 8ರಿಂದ ಜುಲೈ 10ರ ಸಂಜೆ 5 ಗಂಟೆಯೊಳಗಾಗಿ ಟೆಂಡರ್ ಸಲ್ಲಿಸಬೇಕು. ಭರ್ತಿ ಮಾಡಿದ ತಾಂತ್ರಿಕ ಹಾಗೂ ಆರ್ಥಿಕ ಬಿಡ್‍ಗಳನ್ನು ಕ್ರಮವಾಗಿ ಜುಲೈ 11 ರಂದು ಬೆಳಿಗ್ಗೆ 11 ಗಂಟೆಗೆ ಹಾಗೂ ಜುಲೈ 12ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಐವಾನ್-ಎ-ಶಾಹಿ ರಸ್ತೆಯಲ್ಲಿರುವ (ಜಿ.ಪಂ) ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ತೆರೆಯಲಾಗುವುದು.
ತೋಟಗಾರಿಕೆ/ಕೃಷಿ ವಿಸ್ತರಣೆಯಲ್ಲಿ ಅನುಭವವುಳ್ಳ ತೋಟಗಾರಿಕೆ ಸ್ನಾತಕೋತ್ತರ ಪದವೀಧರರು (ಒSಛಿ ಊoಡಿಣi)/ ತೋಟಗಾರಿಕೆ ಪದವೀಧರರು (ಃSಛಿ ಊoಡಿಣi)/ಸ್ನಾತಕೋತ್ತರ ಕೃಷಿ-ತೋಟಗಾರಿಕೆ ಪದವೀಧರರು (ಒSಛಿ ಂgಡಿi ಊoಡಿಣi) ಪದವಿ ಪಡೆದಿರಬೇಕು. ತೋಟಗಾರಿಕೆ ವಿಸ್ತರಣೆಯಲ್ಲಿ ಕನಿಷ್ಟ 1 ವರ್ಷ ಅನುಭವ ಹಾಗೂ ಕಂಪ್ಯೂಟರ್ ಬಳಕೆ ಜ್ಞಾನ ಹೊಂದಿರಬೇಕು. ತೋಟಗಾರಿಕೆ ಕೋಯ್ಲೋತ್ತರ ನಿರ್ವಹಣೆ ಮತ್ತು ಸಂರಕ್ಷಣೆ ಮಾರುಕಟ್ಟೆ ಜ್ಞಾನ ಹಾಗೂ ಬ್ಯಾಂಕ್ ಸಾಲ ಪಡೆಯಲು, ಇಲಾಖೆಯ ಸಹಾಯಧನ ಪಡೆಯಲು ಸಲ್ಲಿಸಬೇಕಾದ ಯೋಜನಾ ಪ್ರಸ್ತಾವನೆಗಳನ್ನು ಸಿದ್ಧಪಡಿಸುವ ಅನುಭವ ಮತ್ತು ಇತರೆ ಇಲಾಖೆ ಹಾಗೂ ಅಂಗಸಂಸ್ಥೆಗಳೂಂದಿಗೆ ವ್ಯವಸ್ಥಿತ ರೀತಿಯ ಸಮನ್ವಯತೆ ರೂಪಿಸುವ ಸಾಮಥ್ರ್ಯವಿರಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-278628ನ್ನು ಸಂಪರ್ಕಿಸಲು ಕೋರಿದೆ.
ಜೂನ್ 12ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಜೂ.09.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಸಿದ್ದೇಶ್ವರ ಫೀಡರ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಜೂನ್ 12ರಂದು ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11ಕೆ.ವಿ.ಸಿದ್ದೇಶ್ವರ: ಸಂತ್ರಾಸವಾಡಿ ಜಿ.ಡಿ.ಎ, ಎಂ.ಜಿ ರೋಡ್, ದರ್ಶನಾಪುರ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ
*****************************************************************
ಕಲಬುರಗಿ,ಜೂ.09.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2017-18ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಚಿತ್ತಾಪುರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ 1 ರೂ. ಲಕ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 44500 ರೂ.ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ಮೂಲಕ ಜಮಾ ಮಾಡಲಾಗುವುದು.
ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕುಗಳಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಬ್ಯಾಂಕಿನ ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆ ಮತ್ತು ಖಾತೆ ಸಂಖ್ಯೆ ಇರುವ, ಪಾಸ್ ಪುಸ್ತಕದ ಮೊದಲ ಪುಟದ ಸ್ಪಷ್ಟ ಜಿರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿಯ ಜಾತಿ ಆದಾಯ ಪ್ರಮಾಣಪತ್ರದ ಜಿರಾಕ್ಸ್ ಪ್ರತಿಗಳನ್ನು ಶಾಲೆಗೆ ಪ್ರವೇಶ ಹೊಂದುವ ಸಮಯದಲ್ಲಿಯೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡತಕ್ಕದ್ದು.
ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ನಮೂನೆಯಲ್ಲಿ ಸದರಿ ವಿವರಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಂದ ಪಡೆದ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ್ ಜಿರಾಕ್ಸ್ಸ್ ಪ್ರತಿ ದಾಖಲಾತಿಗಳೊಂದಿಗೆ 2017ರ ಜೂನ್ 30ರೊಳಗೆ ಚಿತ್ತಾಪುರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಜೂನ್ 13ರಿಂದ ವಿಕಲಚೇತನರ ತಪಾಸಣೆ ಶಿಬಿರ
*************************************************
ಕಲಬುರಗಿ,ಜೂ.09.(ಕ.ವಾ.)-ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ, ಹೋಬಳಿ ಮತ್ತು ನಗರ ಪ್ರದೇಶಗಳಲ್ಲಿ ಅಂಗನವಾಡಿ, ಆಶಾ, ಎಮ್.ಆರ್.ಡಬ್ಲ್ಯೂ. ಅಂಗವಿಕಲ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಮಹಿಳಾ ಮತ್ತು ಪಉರುಷ ಕಿರಿಯ ಆರೋಗ್ಯ ಸಹಾಯಕರಿಂದ ಅಂಗವಿಕಲತೆ ಹೂಂದಿರುವವರನ್ನು ಈಗಾಗಲೇ ಗುರುತಿಸಲಾಗಿದೆ. ಬಾಕಿಯಿರುವ ವಿಕಲಚೇತನ ವ್ಯಕ್ತಿಗಳನ್ನು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ತಪಾಸಣೆಗಾಗಿ ಒಳಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಗುರುತಿಸಲಾದ ಅಂಗವಿಕಲ ಫಲಾನುಭವಿಗಳಿಗೆ ಸಾಧನ ಸಲಕರಣೆಗಳ ಅಗತ್ಯತೆ ಕುರಿತು ತಪಾಸಣೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಅಂಗವಿಕಲರು, ವಿಕಲಚೇತನರು ಕೆಳಕಂಡ ದಿನಾಂಕದಂದು ತಮ್ಮ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಲು ಕೋರಿದೆ. ನಂತರದ ದಿನಗಳಲ್ಲಿ ಅರ್ಹ ಅಂಗವಿಕಲ ವ್ಯಕ್ತಿಗಳಿಗೆ ಸರಕಾರದಿಂದ ಉಚಿತವಾಗಿ ಸಾಧನ-ಸಲಕರಣೆ ನೀಡಲಾಗುವುದು.
ಜೂನ್ 13ರಿಂದ 17ರವರೆಗೆ: ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು. ಜೂನ್ 14: ತಾಲೂಕು ಸಾರ್ವಜನಿಕ ಆಸ್ಪತ್ರೆ ಅಫಜಲಪುರ, ಜೂನ್ 15: ತಾಲೂಕು ಸಾರ್ವಜನಿಕ ಆಸ್ಪತ್ರೆ ಆಳಂದ. ಜೂನ್ 16: ತಾಲೂಕು ಸಾರ್ವಜನಿಕ ಆಸ್ಪತ್ರೆ ಚಿಂಚೋಳಿ. ಜೂನ್ 17: ತಾಲೂಕು ಸಾರ್ವಜನಿಕ ಆಸ್ಪತ್ರೆ ಚಿತ್ತಾಪುರ. ಜೂನ್ 19: ತಾಲೂಕು ಸಾರ್ವಜನಿಕ ಆಸ್ಪತ್ರೆ ಜೇವರ್ಗಿ. ಜೂನ್ 20: ತಾಲೂಕು ಸಾರ್ವಜನಿಕ ಆಸ್ಪತ್ರೆ ಸೇಡಂ. ಜೂನ್ 21 ಮತ್ತು 22: ಜಿಲ್ಲಾ ಆಸ್ಪತ್ರೆ ಕಲಬುರಗಿ.
ಹೀಗಾಗಿ ಲೇಖನಗಳು news and photo date: 09-06-2017
ಎಲ್ಲಾ ಲೇಖನಗಳು ಆಗಿದೆ news and photo date: 09-06-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 09-06-2017 ಲಿಂಕ್ ವಿಳಾಸ https://dekalungi.blogspot.com/2017/06/news-and-photo-date-09-06-2017.html
0 Response to "news and photo date: 09-06-2017"
ಕಾಮೆಂಟ್ ಪೋಸ್ಟ್ ಮಾಡಿ