ಶೀರ್ಷಿಕೆ : ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ
ಲಿಂಕ್ : ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ
ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ
ಕೊಪ್ಪಳ, ಜೂ. 09 (ಕರ್ನಾಟಕ ವಾರ್ತೆ):ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತಿಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಭೌದ್ಧರು, ಸಿಖ್ಖರು, ಫಾರ್ಸಿ, ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆ :
******* ವಿವಿದ ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳ ಮೂಲಕ ಮತಿಯ ಅಲ್ಪಸಂಖ್ಯಾತರ ಜನರು ಕೈಗೊಳ್ಳುವ ವಿವಿಧ, ವ್ಯಾಪಾರ, ಉದ್ಯೋಗ, ಸೇವಾ ಉದ್ದಿಮೆಗಳು, ಕೈಗಾರಿಕೆಗಳು ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ಬ್ಯಾಂಕ್/ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು. ರೂ.1 ಲಕ್ಷದೊಳಗಿರುವ ಯೋಜನೆಗಳಿಗೆ ಶೇ.50% ಅಥವಾ ಗರಿಷ್ಠ 35,000/- ರೂಗಳ ಸಹಾಯಧನ. ಮತ್ತು ರೂ.1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗಳಿಗೆ ಘಟಕ ವೆಚ್ಚದ ಶೇ.33% ಅಥವಾ ಗರಿಷ್ಠ ಮಿತಿ ರೂ.2 ಲಕ್ಷಗಳ ಸಹಾಯಧನ ಸೌಲಭ್ಯ ನೀಡಲಾಗುವುದು.
ಅರಿವು ಸಾಲ ಯೋಜನೆ :
*********** ವೃತ್ತಿಪರ/ ತಾಂತ್ರಿಕ/ ಸ್ನಾತಕ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೋಮಾ ಶಿಕ್ಷಣ – ವೈದೈಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ನರ್ಸಿಂಗ್, ಬಿ.ಎ., ಬಿ.ಕಾಂ., ಬಿ.ಎಡ್, ಬಿ.ಬಿ.ಎಂ., ಬಿ.ಸಿ.ಎ., ಡಿ.ಎಡ್., ಐಟಿಐ ಹಾಗೂ ಸರ್ಕಾರದ ಸೇರ್ಪಡೆ ಆದೇಶದನ್ವಯ ಏರ್ ಕ್ರಾಫ್ಟ್ ಮೈಂಟನೆನ್ಸ್ ಇಂಜಿನಿಯರಿಂಗ್/ ಟೆಕ್ನಿಕಲ್/ ಮ್ಯಾನೆಜ್‍ಮೆಂಟ್ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಹಾಗೂ ಮುಂತಾದ ಕೋರ್ಸ್‍ನ್ನು ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ. 10,000 ದಿಂದ 75,000 ರೂಗಳವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಆಯಾ ವ್ಯಾಸಂಗದ ಅವಧಿಗೆ ಅನುಗುಣವಾಗಿ ಸಾಲ ಸೌಲಭ್ಯವನ್ನು ಒದಗಿಸಲಾಗುವುದು. ವ್ಯಾಸಂಗ ಪೂರ್ಣಗೊಳಿಸಿದ 1 ವರ್ಷದ ನಂತರ ವಿದ್ಯಾರ್ಥಿಯು ಶೇ.2ರ ಸೇವಾ ಶುಲ್ಕವನ್ನು ಮರುಪಾವತಿ ಮಾಡಬೇಕಾಗುತ್ತದೆ.
ಶ್ರಮಶಕ್ತಿ ಸಾಲ ಯೋಜನೆ :
*********** ಸಾಂಪ್ರದಾಯಿಕ ಕುಶಲ ಕರ್ಮಿಗಳು ಹಾಗೂ ವೃತ್ತಿ ಕುಲಕಸಬುದಾರರು, ತಮ್ಮ ಸಂಪ್ರದಾಯಕ ಮಾರುಕಟ್ಟೆ ಹಾಗೂ ವೃತ್ತಿ ಕೌಶಲ್ಯತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಆದಾಯ ಹೆಚ್ಚಿಸುವ ಚಟುವಟಿಕೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ ಶ್ರಮಶಕ್ತಿ ಯೋಜನೆಯಡಿ, ಸಂಪ್ರದಾಯಿಕ ಕುಶಲ ಕರ್ಮಿಗಳು ವೃತ್ತಿ ಕುಲಕಸಬುದಾರರಿಗೆ ಘಟಕ ವೆಚ್ಚ ರೂ. 50,000/- ಗಳು ಇತರೆ ವೃತ್ತಿಗಳಿಗೆ ಯೋಜನೆಯ ಲಾಭದಾಯಕತೆ ಮತ್ತು ಆದಾಯಗಳಿಕೆಗೆ ಅನುಗುಣವಾಗಿ ರೂ. 25,000/- ಕ್ಕೆ ಮೀರದಂತೆ ಸಾಲವನ್ನು ಶೇ.50 ರಷ್ಟು ಸಾಲವನ್ನು ಬ್ಯಾಕ್ & ಸಹಾಯಧನವನ್ನಾಗಿ ಪರಿಗಣಿಸಲಾಗುವುದು. ಸಾಲಕ್ಕೆ ಸಾಲಿಯಾನ ಶೇ.4ರ ಬಡ್ಡಿದರ ವಿಧಿಸಲಾಗುವುದು. 3ವರ್ಷ ಅವಧಿಯೊಳಗೆ ಸಾಲ ಮರುಪಾವತಿಸಿದಾಗ ಮಾತ್ರ ಶೇ.50 ರಷ್ಟು ಸಹಾಯಧನವನ್ನು ಬ್ಯಾಕ್ & ಸಬ್ಸಿಡಿಯಾಗಿ ಸಾಲದ ಖಾತಾ ಪುಸ್ತಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ತಪ್ಪಿದಲ್ಲಿ ಪೂರ್ಣ ಮೊತ್ತವನ್ನು ಸಾಲವನ್ನಾಗಿ ಪರಿಗಣಿಸಲಾಗುವುದು.
ಮೈಕ್ರೋ ಸಣ್ಣ ಸಾಲ ಯೋಜನೆ :
*********** ನಗರ ಮತ್ತು ಗ್ರಾಮಗಳಲ್ಲಿ ವಾಸಿಸುವ ಮತಿಯ ಅಲ್ಪಸಂಖ್ಯಾತರು ಸಾಮಾನ್ಯವಾಗಿ ಅನಕ್ಷರಸ್ಥರಾಗಿದ್ದು, ಅಂತಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲ ಅಥವಾ ಕುಶಲಿಯಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಕನಿಷ್ಠ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ 10 ರಿಂದ 20 ಮಹಿಳೆಯರ ಗುಂಪನ್ನು ಹೊಂದಿರುವ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ತಲಾ ರೂ. 10,000/- ಗಳ ಸಾಲವನ್ನು ಗರಿಷ್ಠ ರೂ. 5000/- ಗಳ ಸಹಾಯಧನದೊಂದಿಗೆ ವಾರ್ಷಿಕ ಶೇ.5ರ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
ಗಂಗಾ-ಕಲ್ಯಾಣ ಯೋಜನೆ :
************ ಸೌಲಭ್ಯ ಪಡೆಯಲು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. 2 ರಿಂದ 5 ಏಕರೆ ಕೃಷಿ ಜಮೀನು ಹೊಂದಿ ವ್ಯವಸಾಯ ವೃತ್ತಿಯನ್ನು ಅವಲಂಬಿಸಿರಬೇಕು. ಅಭ್ಯರ್ಥಿಗಳ 3 ಭಾವಚಿತ್ರ, ರೇಷನ್‍ಕಾರ್ಡ ಝರಾಕ್ಸ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಮೀನಿನ ಪಹಣಿ ಪತ್ರ, ಜಮೀನು ನೀರಾವರಿ ಸೌಲಭ್ಯ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ, ಇತ್ಯಾದಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಪಶು ಸಂಗೊಪನೆ :
*********** ಈ ಯೋಜನೆಗೆ ಉತ್ತೇಜನ ನೀಡಿ ನಿರಂತರ ಆದಾಯ ಹೊಂದುವ ಸಲುವಾಗಿ ಹೈನುಗಾಗಿಕೆ, ಕೋಳಿ ಸಾಕಾಣಿಕೆ ಮುಂತಾದ ಚಟುವಟಿಕೆಗಳಿಗೆ ಶೇ.50ರ ಸಹಾಯಧನದೊಂದಿಗೆ ರೂ. 40,000/- ಘಟಕ ವೆಚ್ಚದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.
ಟ್ಯಾಕ್ಸಿ/ ಗೂಡ್ಸ್ ವಾಹನ ಖರೀದಿ :
************ ಮತಿಯ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ವಿದ್ಯಾಭ್ಯಾಸ ಪೂರೈಸಲಾಗದೆ, ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿದ್ದು, ಇಂತಹ ಆರ್ಥಿಕವಾಗಿ ಹಿಂದುಳಿದ ವಾಹನ ಚಾಲಕರ ಅಭಿವೃದ್ಧಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಕನಿಷ್ಠ ರೂ, 4 ಲಕ್ಷಗಳಿಂದ 7.50 ಲಕ್ಷಗಳವರೆಗಿನ ಟ್ಯಾಕ್ಸಿ/ ಗೂಡ್ಸ್ ವಾಹನ ಖರೀದಿಸಲು ಗರಿಷ್ಠ ರೂ, 3 ಲಕ್ಷಗಳ ಸಹಾಯಧನದೊಂದಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು, ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವಾಹನ ಚಾಲನಾ ಪರವಾನಿಗೆ ಮತ್ತು ಬ್ಯಾಡ್ಜ್ ಹೊಂದಿರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರ ಕುಟುಂಬದ ಸದಸ್ಯರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಪ್ರವಾಸಿ ಲೋನ್ ಸ್ಕೀಂ :
************* ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಗರಿಷ್ಠ ರೂ. 10 ಲಕ್ಷಗಳ ವರೆಗೆ ಶೇ.5ರ ಬಡ್ಡಿದರದಲ್ಲಿ, ಕೊಲ್ಯಾಟರ್ ಭದ್ರತೆಯೊಂದಿಗೆ ನಿಗಮದಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು, ಸಾಲವನ್ನು ಏಳು ವರ್ಷಗಳ ಒಳಗಾಗಿ ಸಮಾನಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ. ಕೊಲ್ಲಿ ರಾಷ್ಟ್ರದಿಂದ ಶಾಶ್ವತವಾಗಿ ಹಿಂದಿರುಗಿಬಂದಿರುವಂತಹ ಆಸಕ್ತರು ಪಾಸ್‍ಪೋರ್ಟ & ವಿಸಾ ಪ್ರತಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಕೊಪ್ಪಳ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ನಿಗಮದ ವೆಬ್ ಸೈಟ್ www.kmdc.kar.nic.in ದಿಂದ ಅರ್ಜಿಗಳನ್ನು ಪಡೆದು ಆಧಾರ, ಪಡಿತರ ಚೀಟಿ, ಜಾತಿ ಮತ್ತು ಆದಾಯ, ಯೋಜನಾವರದಿ, ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್, ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಜುಲೈ 15 ರೊಳಗಾಗಿ ಸಲ್ಲಿಸಬೇಕು. ಕೊಪ್ಪಳ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಝಾಕೀರಹುಸೇನ ಕುಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೀಗಾಗಿ ಲೇಖನಗಳು ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_9.html
0 Response to "ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ