NEWS AND PHOTO DATE; 05---06--2017

NEWS AND PHOTO DATE; 05---06--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE; 05---06--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE; 05---06--2017
ಲಿಂಕ್ : NEWS AND PHOTO DATE; 05---06--2017

ಓದಿ


NEWS AND PHOTO DATE; 05---06--2017

ಸುಸ್ಥಿರ ಅಭಿವೃದ್ಧಿಯ ಚಿಂತನೆ ಮಾಡಲು ಕರೆ 
ಕಲಬುರಗಿ,ಜೂನ್.05.(ಕ.ವಾ.)-ಮಾನವ ಜನಾಂಗ ಪ್ರಕೃತಿ ಮತ್ತು ಪರಿಸರದ ಒಂದು ಅವಿಭಾಜ್ಯ ಅಂಗವಾಗಿದ್ದು, ಮಾನವನು ಕೈಗಾರೀಕರಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಮತ್ತು ಪರಿಸರದ ನಾಶ ಮಾಡುವ ಬದಲು ಪರಿಸರ ಸ್ನೇಹಿಯಾಗಿರುವುದರೊಂದಿಗೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಬೇಕೆಂದು ಕಲಬುರಗಿ ಕರ್ನಾಟಕ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದರು. 
ಅವರು ಸೋಮವಾರ ಕಲಬುರಗಿಯ ಹೈಕೋರ್ಟ್ ಪೀಠದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. 
ಇಂದು ನಾವೆಲ್ಲರೂ ಪರಿಸರ ಹಾಳು ಮಾಡುವಂಥ ಯಾವುದೇ ಕಾರ್ಯ ಕೈಗೊಳ್ಳದಿರುವ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಮ್ಮ ಮನೆಯಂತೆ ಕಾಪಾಡುವ ಬಗ್ಗೆ ದೃಢ ಸಂಕಲ್ಪ ಮಾಡಬೇಕು. ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಕಸ ಹಾಕುವುದು, ಉಗುಳುವುದನ್ನು ಮೊದಲು ನಿಲ್ಲಿಸಿ ಸ್ವಚ್ಛತೆ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಭಾರತೀಯ ನ್ಯಾಯಾಂಗವು ಪರಿಸರ ಸ್ವಚ್ಛತೆ ಕಾಪಾಡುವಲ್ಲಿ ಮಹತ್ತರ ಮಾತ್ರ ವಹಿಸುತ್ತಿದೆ. ದೇಶದ ಅರಣ್ಯ, ನದಿ, ವನ್ಯಜೀವಿ, ಗಣಿ ಸಂಪತ್ತಿನ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸುಪ್ರಿಂ ಕೋರ್ಟ್ ಮತ್ತು ಕರ್ನಾಟಕ  ಹೈಕೋರ್ಟ್ ಹಲವಾರು ಸೂಚನೆ, ಆದೇಶ ಮತ್ತು ಮಾರ್ಗದರ್ಶಗಳನ್ನು ನೀಡಿವೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಕೋರ್ಟುಗಳು ನೀಡಿರುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸಬೇಕೆಂದು ಹೇಳಿದರು. 
ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಬಿ. ವೀರಪ್ಪ ಮಾತನಾಡಿ, ಪರಿಸರದಲ್ಲಿ ಗಿಡಮರಗಳಿದ್ದರೆ ಎಲ್ಲ ಜೀವ ಸಂಕುಲಗಳು ಬದುಕಲು ಸಾಧ್ಯ. ಮಾನವನ ಅಧಿಕಾರ ದಾಹಕ್ಕೆ ಪರಿಸರ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಪರಿಶುದ್ಧ ಗಾಳಿ, ನೀರು, ಬೆಳಕು, ಆಹಾರ, ಗೊಬ್ಬರ, ಪೀಠೋಪಕರಣ ನೀಡುವ ಹಾಗೂ ಭೂ ಮತ್ತು ಜಲ ಸಂರಕ್ಷಣೆ ಮಾಡುವ ಮತ್ತು ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಪ್ರಮಾಣ ತಗ್ಗಿಸಲು ಸಹಾಯಕಾರಿಯಾಗಿರುವ ಗಿಡಮರಗಳು ಮಾನವನಗಿಂತ ಹೆಚ್ಚು ಪರೋಪಕಾರಿಯಾಗಿವೆ. ಗಿಡಗಳನ್ನು ಪ್ರತಿಯೊಂದು ಮನೆಯಲ್ಲಿ ಬೆಳೆಸುವ ಸಂಕಲ್ಪ ಮಾಡಬೇಕಲ್ಲದೇ ಇವುಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕೆಂದರು. 
ಕಲಬುರಗಿ ಹೈಕೋರ್ಟ್ ಪೀಠದ ಕಾನೂನು ಸೇವಾ ಸಮಿತಿ, ಉಚ್ಛ ನ್ಯಾಯಾಲಯ ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕಲಬುರಗಿ ಹೈಕೋರ್ಟ್ ಪೀಠದ ಇನ್ನೋರ್ವ ನ್ಯಾಯಮೂರ್ತಿ ಬಿ.ಎ. ಪಾಟೀಲ  ಮಾತನಾಡಿ, ಪರಿಸರವು ಮಾನವ ಜೀವನದ ಪ್ರಮುಖ ಅಂಗವಾಗಿದೆ. ಮಾನವನ ಬದುಕು ಪರಿಸರದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಪರಿಸರ ದಿನವನ್ನು ನಿರಂತರವಾಗಿ ಆಚರಿಸುವಂತಾಗಬೇಕೆಂದರು. ಹೈಕೋರ್ಟ್ ಪೀಠದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಮಾತನಾಡಿ, ಹಸಿರೇ ಉಸಿರಾಗಿದ್ದು, ಇದರ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಬಿಸಿಲ ನಾಡೆಂದು ಖ್ಯಾತಿ ಪಡೆದ ಕಲಬುರಗಿ ನಗರ ಹಾಗೂ ಜಿಲ್ಲೆಯನ್ನು  ಹಸಿರು ನಾಡಾಗಿ ಮಾಡಲು ಪ್ರಯತ್ನಿಸಬೇಕೆಂದರು. 
ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ ಹೊಸೂರ, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಭಾವಿಕಟ್ಟಿ, ವಲಯ ಅರಣ್ಯಾಧಿಕಾರಿ ಮುನೀರ ಅಹ್ಮದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹ್ಮದ್ ಅಲಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಕಬುಲ್ ಹುಸೇನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ರರಾದ ಮಹ್ಮದ್ ಅಜೀಜುದ್ದೀನ್, ಸಿ. ಇಬ್ರಾಹಿಂ ಪಾಲ್ಗೊಂಡಿದ್ದರು. 
ಕಲಬುರಗಿ ಹೈಕೋರ್ಟ್ ಪೀಠದ ಅಪರ ಮಹಾ ವಿಲೇಖನಾಧಿಕಾರಿ ಎಸ್.ವೈ. ವಟವಟಿ ಸ್ವಾಗತಿಸಿದರು. ಕಲಬುರಗಿ ಹೈಕೋರ್ಟ್ ಪೀಠದ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ವಂದಿಸಿದರು. ಇದಕ್ಕೂ ಮುನ್ನ ಕಲಬುರಗಿ ಹೈಕೋರ್ಟ್ ಪೀಠದ ಆವರಣದಲ್ಲಿ ವಿವಿಧ ಜಾತಿಯ 250 ಸಸಿಗಳನ್ನು ನೆಡಲಾಯಿತು. 
ನೆಟ್ಟ ಸಸಿ ಕಾಪಾಡಿ ಪರಿಸರ ಶುದ್ಧವಾಗಿಡಿ 
ಕಲಬುರಗಿ,ಜೂನ್.05.(ಕ.ವಾ.)-ಪ್ರತಿಯೊಬ್ಬರೂ ನೆಟ್ಟ ಸಸಿಗಳನ್ನು ಕಾಪಾಡುವುದರೊಂದಿಗೆ ತಮ್ಮ ಸುತ್ತಮುತ್ತಲಿನ ಪರಿಸರ ಪರಿಶುದ್ಧವಾಗಿಟ್ಟುಕೊಳ್ಳಬೇಕೆಂದು ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ್ ಹೇಳಿದರು. 
ಅವರು ಸೋಮವಾರ ಕಲಬುರಗಿ ತಾಲೂಕಿನ ಉದನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ವಿಭಾಗ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ “ನೀರಿಗಾಗಿ ಅರಣ್ಯ” ವಿಶ್ವ ಪರಿಸರ ದಿನಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 
ಅರಣ್ಯ ಇಲಾಖೆಯ ವಿವಿಧ ಯೋಜನೆಯಡಿ ಕಲಬುರಗಿ ತಾಲೂಕಿನಲ್ಲಿ ಈ ವರ್ಷ ರಸ್ತೆ ಬದಿ ಮತ್ತು ವಿವಿಧ ಸ್ಥಳಗಳಲ್ಲಿ ಒಟ್ಟು 57300 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಉದನೂರು ಗ್ರಾಮದಲ್ಲಿ ಇಂದು ನೆಟ್ಟ ವಿವಿಧ ಜಾತಿಯ 150 ಸಸಿಗಳನ್ನು ಕಾಪಾಡುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ ಎಂದರು. 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಸಾಮಾಜಿಕ ಅರಣ್ಯ ವಿಭಾಗದಿಂದ ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ 5 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗಿಡಮರಗಳ ಸಂರಕ್ಷಣೆ ಅಗತ್ಯವಾಗಿದ್ದು, ವಿದ್ಯಾರ್ಥಿ ಸಮುದಾಯ ಗಿಡ ಮರಗಳನ್ನು ಬೆಳೆಸುವ ಮತ್ತು ಸಂರಕ್ಷಿಸುವ ಪಣ ತೊಡಗಬೇಕು. 
ಜೂನ್ 5 ರಿಂದ 12ರವರೆಗೆ ಕಲಬುರಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 40 ಶೌಚಾಲಯದಂತೆ ಒಟ್ಟು 10550 ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ. “ಕೂಸು” ಕಾರ್ಯಕ್ರಮದಡಿ ಗರ್ಭಿಣಿ ಮಹಿಳೆಯರ ಮನೆಯಲ್ಲಿ ಶೌಚಾಲಯ ನಿರ್ಮಿಸುವುದರೊಂದಿಗೆ ಪ್ರತಿ ಮನೆಗೆ 5 ಸಸಿಗಳಂತೆ 50000 ಸಸಿಗಳನ್ನು ನೀಡಲಾಗುವುದು. ಗ್ರಾಮ ಪಂಚಾಯಿತಿಯ ಎಲ್ಲ ಜನಪ್ರತಿನಿಧಿಗಳು ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದರು. ಪತ್ರಕರ್ತ ಹಾಗೂ ಸಮಾಜ ಸೇವಕ ಕೆ.ಎನ್. ರೆಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ನೆಡಲಾಗುವ ಸಸಿಗಳನ್ನು ಜೀವಂತವಾಗಿ ಉಳಿಸಿಕೊಳ್ಳವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕೆಂದರು. 
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರ್ವೀನ್ ರಿಯಾಜ್ ಪಟೇಲ್ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಸಜ್ಜನ್, ಉಪಾಧ್ಯಕ್ಷೆ ಸುಮಿತ್ರಾಬಾಯಿ ಶೆಳ್ಕೆ, ಸದಸ್ಯರುಗಳಾದ ಶ್ಯಾಮರಾವ ಪಾಟೀಲ, ಆನಂದ ಚವ್ಹಾಣ, ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ರಾಜು ವಾಡೇಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣಗೌಡ ಮೂಲಗೆ, ಗ್ರಾಮದ ಮುಖಂಡ ಶಿವರಾಜ ಪೊಲೀಸ್ ಪಾಟೀಲ, ಸಿದ್ದು ಸಿರಸಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ಖಾನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಜೇವಣಗಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹನುಮಂತ ಚವ್ಹಾಣ, ವಲಯ ಅರಣ್ಯಾಧಿಕಾರಿ ನಾಗೇಶ್, ಮತ್ತಿತರರು ಪಾಲ್ಗೊಂಡಿದ್ದರು. ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. 
ಕಾರ್ಯಕ್ರಮದ ಅಂಗವಾಗಿ ಉದನೂರ ಗ್ರಾಮದ ಪ್ರೌಢಶಾಲೆ ಮತ್ತಿತರ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಯಿತು. ಇದಲ್ಲದೇ ರೈತರಿಗೆ, ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಭಿತ್ತಿಪತ್ರ ಮಾಡಲಾಯಿತಲ್ಲದೇ  ಪ್ರೌಢಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. 
ಅಫಜಲಪುರ: ಹಾಸ್ಟೆಲ್ ಪ್ರವೇಶಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ
ಕಲಬುರಗಿ,ಜೂನ್.05.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಅಫಜಲಪುರ ತಾಲೂಕಿನಲ್ಲಿ ನಡೆಸಲಾಗುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ಹಾಗೂ ಅನುದಾನಿತ ಹಾಸ್ಟೆಲ್‍ಗಳಲ್ಲಿ ಪ್ರವೇಶ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಹ ಅಭ್ಯರ್ಥಿಗಳು ಇಲಾಖೆಯ ತಿತಿತಿ.sತಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟಿನಲ್ಲಿ ಅರ್ಜಿ ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ಅರ್ಜಿ ಪಡೆದು ಆಯ್ಕೆ ಪ್ರಕ್ರಿಯೆ ಜರುಗಿಸಲು ಆದೇಶ ನೀಡಿದ್ದರಿಂದ ದಿನಾಂಕ: 22-05-2017ರಂದು ನೀಡಿದ ಪತ್ರಿಕಾ ಪ್ರಕಟಣೆಯನ್ನು ಹಿಂಪಡೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯವನ್ನು ಹಾಗೂ ದೂರವಾಣಿ ಸಂಖ್ಯೆ 08470-282098ನ್ನು ಸಂಪರ್ಕಿಸಲು ಕೋರಿದೆ. 
ಪರ್ವತಾರೋಹಣ ತರಬೇತಿಗಾಗಿ ಅರ್ಜಿ ಆಹ್ವಾನ   
ಕಲಬುರಗಿ,ಜೂನ್.05.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2016-17ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರ್ವತಾರೋಹಣ ತರಬೇತಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮಾಳಗೆ ತಿಳಿಸಿದ್ದಾರೆ. 
ಅರ್ಜಿ ಸಲ್ಲಿಸುವ ಕ್ರೀಡಾಪಟುಗಳು ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜಾತಿ ಪ್ರಮಾಣಪತ್ರ,  ಪರ್ವತಾರೋಹಣ ಕೈಗೊಳ್ಳಲು ಸದೃಢವಾಗಿರುವ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ, ಯಾವುದೇ ಕ್ರಿಮಿನಲ್ ಮೊಕದ್ದಮೆ ಇರದಿರುವ ಬಗ್ಗೆ ಸ್ವಯಂ ದೃಢೀಕರಣ ಪತ್ರವನ್ನು ಲಗತ್ತಿಸಿ ಜೂನ್ 17ರೊಳಗಾಗಿ ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ಅಧೀಕ್ಷಕ ಖೇರು ನಾಂiÀiಕ್ ಮೊಬೈಲ್ ಸಂಖ್ಯೆ 9886854322ನ್ನು ಸಂಪರ್ಕಿಸಲು ಕೋರಲಾಗಿದೆ. 
ಜೂನ್ 10ರಂದು ಅಲ್ಪಸಂಖ್ಯಾತರ ವಸತಿ ನಿಲಯ ಪ್ರವೇಶಕ್ಕೆ ಕೌನ್ಸಿಲಿಂಗ್
ಕಲಬುರಗಿ,ಜೂನ್.05.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಲಬುರಗಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್ 6ನೇ ತರಗತಿಯ ವಿದ್ಯಾರ್ಥಿಗಳ 2017-18ನೇ ಸಾಲಿನ ಪ್ರವೇಶದ ಕೌನ್ಸಿಲಿಂಗ್ ಕಲಬುರಗಿಯ ಬಂಬು ಬಜಾರಿನ ಫಿಲ್ಟರ್ ಬೆಡ್‍ನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೂನ್ 10ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. 
ಈಗಾಗಲೇ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಆಯಾ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೆರಿಟ್ ಲಿಸ್ಟ್ ಪ್ರಕಟಿಸಲಾಗಿದೆ. ಸದರಿ ಕಾರ್ಯಲಯಕ್ಕೆ ಭೇಟಿ ನೀಡಿ  ತಮ್ಮ ಮೇರಿಟ್ ಲಿಸ್ಟ್‍ನ್ನು ಖಚಿತ ಪಡಿಸಿಕೊಂಡು ಜೂನ್ 10ರಂದು ಬೆಳಿಗ್ಗೆ 10 ಗಂಟೆಗೆ ಪರೀಕ್ಷಾ ಪ್ರವೇಶ ಪತ್ರ (ಹಾಲ್ ಟಿಕೇಟ್), ಮೂಲ ಜಾತಿ ಪ್ರಮಾಣಪತ್ರ. ಮೂಲ ಆದಾಯ ಪ್ರಮಾಣಪತ್ರ, ಅಂಗವಿಕಲರ ಪ್ರಮಾಣಪತ್ರಗಳೊಂದಿಗೆ ಕೌನ್ಸಿಲಿಂಗ್‍ಗೆ ಹಾಜರಾಗಬೇಕೆಂದು ವಿದ್ಯಾರ್ಥಿಗಳ ಪಾಲಕ ಪೋಷಕರಿಗೆ ತಿಳಿಸಲಾಗಿದೆ. 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ತಾಲೂಕಿನ ಹೆಸರು ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ. ಅಫಜಲಪುರ ಮತ್ತು ಕಲಬುರಗಿ ಮೊಬೈಲ್ ಸಂ. 9008571256/9886238765, ಅಳಂದ ಮೊಬೈಲ್ ಸಂ. 9449785047, ಚಿತ್ತಾಪುರ ಮೊಬೈಲ್ ಸಂ. 9535775141/9449438874, ಸೇಡಂ ಮೊಬೈಲ್ ಸಂ. 9972554852/9449438874, ಚಿಂಚೋಳಿ ಮೊಬೈಲ್ ಸಂ. 7026555466 ಹಾ








ಗೂ ಜೇವರ್ಗಿ ಮೊಬೈಲ್ ಸಂ. 9535775141/9972557539.
ಮಾಲೀಕರು ಉದ್ದಿಮೆಗಳ ಪರವಾನಿಗೆ ಪಡೆಯುವುದು ಕಡ್ಡಾಯ
ಕಲಬುರಗಿ,ಜೂನ್.05.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಉದ್ದಿಮೆಗಳು ಪರವಾನಿಗೆ ಇಲ್ಲದೆ/ಪರವಾನಿಗೆ ನವೀಕರಿಸದೇ ನಡೆಸುತ್ತಿರುವುದು ಕಂಡು ಬಂದಿದೆ. ಪರವಾನಿಗೆ ಇಲ್ಲದೇ ಮತ್ತು ಪರವಾನಿಗೆ ನವೀಕರಿಸದೇ ಉದ್ದಿಮೆ ನಡೆಸುವುದು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976ರ ಪ್ರಕಾರ ನೇರ ಕಾನೂನು ಉಲ್ಲಂಘನೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ಮಹಾನಗರ ಪಾಲಿಕೆಯಿಂದ ನೋಟೀಸುಗಳನ್ನು ಜಾರಿ ಮಾಡಲಾಗಿದೆ ಮತ್ತು ಸದರಿ ಕಾರ್ಯ ಪ್ರಗತಿಯಲ್ಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ. 

ಕಾನೂನು ಉಲ್ಲಂಘಿಸಿ ಉದ್ದಿಮೆ ನಡೆಸುತ್ತಿರುವ ಮಾಲೀಕರಿಗೆ ಈಗಾಗಲೇ ಜಾರಿ ಮಾಡಿರುವ ನೋಟೀಸ್ ಪ್ರಕಾರ 7 ದಿವಸಗಳ ಅವಧಿ ನೀಡಲಾಗಿದೆ. ಪರವಾನಿಗೆ/ನವೀಕರಣಕ್ಕೆ ಬೇಕಾದ ದಾಖಲೆಗಳನ್ನು ಸಲ್ಲಿಸಿ, ಪರವಾನಿಗೆ/ನವೀಕರಣ ಮಾಡಲು ಸೂಚಿಸಿದೆ. ತಪ್ಪಿದ್ದಲ್ಲಿ ಪರವಾನಿಗೆ/ನವೀಕರಣ ಇಲ್ಲದೆ ನಡೆಸುತ್ತಿರುವ ಉದ್ದಿಮೆ ಮಾಲೀಕರ ವಿರುದ್ಧ ನಿಯಮಾನುಸಾರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ. 
ಸದರಿ ಉದ್ದಿಮೆಗಳ ಮಾಲೀಕರು ಇಂತಹ ಕಠಿಣ ಕ್ರಮಕ್ಕೆ ಮತ್ತು ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅವಕಾಶ ನೀಡದೆ, ತಮ್ಮ ಉದ್ದಿಮೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ, ಉದ್ದಿಮೆ ಪರವಾನಿಗೆ/ನವೀಕರಣ ಪಡೆಯಬೇಕು. ಈ ವಿಷಯ ಕುರಿತು ಏನಾದರೂ ಸಮಸ್ಯೆಗಳಿದ್ದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಅವರನ್ನು ಸಂಪರ್ಕಿಸಲು ಕೋರಿದೆ. 
ಗೃಹರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಗೆ ಅರ್ಜಿ ಆಹ್ವಾನ
ಕಲಬುರಗಿ,ಜೂನ್.05.(ಕ.ವಾ.)-ಕಲಬುರಗಿ ನಗರದಲ್ಲಿ ಖಾಲಿಯಿರುವ ಜಿಲ್ಲೆಯ ಗೃಹರಕ್ಷಕದಳದ  ಗೌರವ ಸಮಾದೇಷ್ಟರ ಹುದ್ದೆಗೆ ಇಚ್ಛೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅರಕ್ಷಕ ಮಹಾನಿರ್ದೇಶಕರು ಹಾಗೂ ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ಪೌರರಕ್ಷಣಾ ನಿರ್ದೇಶಕರು ತಿಳಿಸಿದ್ದಾರೆ. 
ಈ ಖಾಲಿ ಹುದ್ದೆಗೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿ ಅರ್ಹತೆ ಆಧಾರದ ಮೇಲೆ ತುಂಬಬೇಕಾಗಿದೆ.  ಇಚ್ಚೆಯುಳ್ಳ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಜೂನ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಗೃಹರಕ್ಷಕದಳವು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಜಿಲ್ಲಾಮಟ್ಟದಲ್ಲಿ ಗೃಹರಕ್ಷಕ ದಳದ ಕಚೇರಿಗಳು ಎಲ್ಲ 31 ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕಾರ್ಯನಿರತವಾಗಿವೆ. ಸದರಿ ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿನ ನಿರ್ವಹಣೆಯನ್ನು ನೋಡಿಕೊಳ್ಳಲು ಸ್ಥಳೀಯ ಗೌರವಾನ್ವಿತ ವ್ಯಕ್ತಿಗಳನ್ನು ಸರ್ಕಾರವು ಗೃಹರಕ್ಷಕದಳದ ಸಮಾದೇಷ್ಟರುಗಳನ್ನಾಗಿ ನಿಯಮಾನುಸಾರ ನೇಮಕ ಮಾಡುತ್ತಿದೆ ಎಂದು ತಿಳಿಸಿದ್ದಾರೆ. 
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪೂರ್ವಭಾವಿ ಸಿದ್ಧತೆಗೆ ಮನವಿ
ಕಲಬುರಗಿ,ಜೂನ್.05.(ಕ.ವಾ.)-ಚಿಂಚೋಳಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2017-18ನೇ  ಸಾಲಿನ  ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ತಾಲೂಕಿನ ಎಲ್ಲಾ ಪ್ರಾಥಮಿಕ/ ಹಿರಿಯ ಪ್ರಾಥಮಿಕ/ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳ ಪೋಷಕರು ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಚಿಂಚೋಳಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ. 
ಹಿಂದುಳಿದ ವರ್ಗಗಳ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ 1 ರೂ. ಲಕ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ  ಹಿಂದುಳಿದ ವರ್ಗಗಳ  ವಿದ್ಯಾರ್ಥಿಗಳಿಗೆ 44500 ರೂ.ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ಮೂಲಕ ಜಮಾ ಮಾಡಲಾಗುವುದು. 
 ವಿದ್ಯಾರ್ಥಿಗಳ  ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕುಗಳಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಬ್ಯಾಂಕಿನ ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆ ಮತ್ತು ಖಾತೆ ಸಂಖ್ಯೆ ಇರುವ, ಪಾಸ್ ಪುಸ್ತಕದ ಮೊದಲ ಪುಟದ ಸ್ಪಷ್ಟ ಜಿರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿಯ ಜಾತಿ ಆದಾಯ ಪ್ರಮಾಣಪತ್ರದ ಜಿರಾಕ್ಸ್ ಪ್ರತಿಗಳನ್ನು ಶಾಲೆಗೆ ಪ್ರವೇಶ ಹೊಂದುವ ಸಮಯದಲ್ಲಿಯೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡತಕ್ಕದ್ದು. ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ  ನಮೂನೆಯಲ್ಲಿ ಸದರಿ ವಿವರಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಂದ ಪಡೆದ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ್ ಜಿರಾಕ್ಸ್ಸ್ ಪ್ರತಿ ದಾಖಲಾತಿಗಳೊಂದಿಗೆ ಜೂನ್ 30ರೊಳಗೆ ಚಿಂಚೋಳಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು.  
ಆದ್ದರಿಂದ  ಎಲ್ಲಾ ಪೋಷಕರು ಮೇಲ್ಕಂಡ  ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಂಡು,  ದಾಖಲಾತಿಯ ಸಮಯದಲ್ಲಿ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡುವಂತೆ ತಿಳಿಸಲಾಗಿದೆ. ಸಂಬಂಧಪಟ್ಟ  ಶಾಲೆಯ ಮುಖ್ಯೋಪಾಧ್ಯಾಯರೂ ಸಹ ಅರ್ಹ ವಿದ್ಯಾರ್ಥಿಗಳ ಪೋಷಕರಿಗೆ ಈ  ಸಂಬಂಧ ತಿಳುವಳಿಕೆ ನೀಡುವ  ಕ್ರಮ ಕೈಗೊಳ್ಳಲು ಕೋರಿದೆ.  ಹೆಚ್ಚಿನ ಮಾಹಿತಿಗಾಗಿ ಚಿಂಚೋಳಿ  ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು  ಕೋರಿದೆ.
ಜೂನ್ 6 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಜೂ.05.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1ರಿಂದ 33/11 ಕೆ.ವಿ. ಹಡಗಿಲ ಹಾರೂತಿ ಹಾಗೂ 33/11 ಕೆ.ವಿ. ಗೊಬ್ಬೂರ ಉಪ ವಿತರಣಾ ಕೇಂದ್ರಗಳ ವ್ಯಾಪ್ತಿಯ ಸುಧಾರಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಜೂನ್ 6ರಂದು ಬೆಳಗಿನ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಉಪ ವಿತರಣಾಗಳ ಕೇಂದ್ರಗಳ ವ್ಯಾಪ್ತಿಯ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ವಿತರಣಾ ಕೇಂದ್ರ ಮತ್ತು ಪೀಡರುಗಳÀ ವಿವರ ಇಂತಿದೆ. 
33/11 ಕೆ.ವಿ.ಹಡಗಿಲ ಹಾರೂತಿ ವಿತರಣಾ ಕೇಂದ್ರ: ಹಡಗಿಲ ಹಾರೂತಿ, ಕಡಣಿ, ಶರಣ ಸಿರಸಗಿ, ಬಬಲಾದ ಐಪಿ, ಮೆಳಕುಂದಾ ಎನ್.ಜೆ.ವಾಯ್.
33/11 ಕೆ.ವಿ. ಗೊಬ್ಬೂರ ವಿತರಣಾ ಕೇಂದ್ರ: ಎಸ್.ಆರ್.ಕೆ., ಹಾವನೂರ, ಬೀದನೂರ,  ಗೊಬ್ಬೂರ ಎನ್.ಜೆ.ವಾಯ್.
ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಕಲಬುರಗಿ,ಜೂ.05.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ ನಗರದ ಆಂಗ್ಲ ಮಾಧ್ಯಮದ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ 2017-18ನೇ ಸಾಲಿನ ಪ್ರೌಢಶಾಲಾ ಇಂಗ್ಲೀಷ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.  
ಅತಿಥಿ ಶಿಕ್ಷಕರಿಗೆ ಮಾಹೆಯಾನ 6000ರೂ. ಗೌರವಧನ ನೀಡಲಾಗುತ್ತದೆ. ಆಸಕ್ತ ಬಿ.ಎ.,ಬಿ.ಇಡಿ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಜೂನ್ 10ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜೇವರ್ಗಿ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದ ಪ್ರಾಚಾರ್ಯರನ್ನು ಹಾಗೂ ಮೊಬೈಲ್ ಸಂಖ್ಯೆ 9880357033ನ್ನು ಸಂಪರ್ಕಿಸಲು ಕೋರಲಾಗಿದೆ. 



ಹೀಗಾಗಿ ಲೇಖನಗಳು NEWS AND PHOTO DATE; 05---06--2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE; 05---06--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE; 05---06--2017 ಲಿಂಕ್ ವಿಳಾಸ https://dekalungi.blogspot.com/2017/06/news-and-photo-date-05-06-2017.html

Subscribe to receive free email updates:

0 Response to "NEWS AND PHOTO DATE; 05---06--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ