ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ
ಲಿಂಕ್ : ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ

ಓದಿ


ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ


ಕೊಪ್ಪಳ, ಜೂ. 05 (ಕರ್ನಾಟಕ ವಾರ್ತೆ): ವಿಶ್ವ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಜೂ. 12 ರಿಂದ ಆಚರಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಪಂಚಾಯತ್/ ವಾರ್ಡ್ ಮಟ್ಟದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು “ಅರಿವು” ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
        ಬಾಲ್ಯ ಎನ್ನುವುದು ಮಾನವ ಜೀವನದ ಅಂತ್ಯಂತ ಸುಂದರವಾದ ಹಂತ.  ಸಾಮಾಜೀಕರಣವು ಈ ಹಂತದಲ್ಲೆ ಅಂತ್ಯಂತ ಹೆಚ್ಚಾಗಿ ನಡೆಯುವುದು ನಮ್ಮ ಬೌದ್ಧಿಕ, ಮಾನಸಿಕ, ಶಾರೀರಿಕ, ಸಾಮಾಜಿಕ ಮತ್ತು ಭಾಷಾ ಬೆಳವಣಿಗೆಗಳು ಅತ್ಯಂತ ವೇಗವಾಗಿ ನಡೆಯುವುದು ನಮ್ಮ ಬಾಲ್ಯದಲ್ಲೇ.  ಮನೆ, ಶಾಲೆ, ಸಮುದಾಯ ಇವುಗಳು ಮಗುವಿನ ಮೇಲೆ ಪ್ರಭಾವ ಭೀರಿ, ವ್ಯಕ್ತಿತ್ವವನ್ನು ರೂಪಿಸುತ್ತದೆ.  ಬಾಲ್ಯದಲ್ಲಿ ನಡೆಯುವ ಪ್ರತೀ ದುರ್ಘಟನೆಗಳೂ ನಮ್ಮ ಜೀವನದಲ್ಲಿ ತನ್ನ ಪ್ರಭಾವವನ್ನು ಭೀರುತ್ತದೆ.  ಇದು ಬಾಲ ಕಾರ್ಮಿಕತೆಗೂ ಹೊರತಾಗಿಲ್ಲ.  ಇಂದಿಗೂ ಸಹ ಬಾಲ ಕಾರ್ಮಿಕತೆಯ ಬಾಣೆಲೆಗೆ ಸಿಲುಕಿ ಅನೇಕ ಮಕ್ಕಳು ಬಳಲುತ್ತಿದ್ದಾರೆ.  ಮಕ್ಕಳು ಕೃಷಿ ಉತ್ಪಾದನೆಯಿಂದ ಕಟ್ಟಡ ನಿರ್ಮಾಣದಂತಹ ದೈತ್ಯ ಕಾರ್ಯಗಳಲ್ಲಿ, ದನ ಮೇಯಿಸುವ, ಕುರಿಕಾಯುವ, ಬೀಜೋತ್ಪಾದನೆ, ಕೋಳಿ ಸಾಕಾಣೆ, ಹೋಟೆಲ್, ಗ್ಯಾರೇಜ್, ಕಟ್ಟಡ ಕೆಲಸ ಮುಂತಾದ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.  ಪ್ರಾಕೃತಿವಿಕೋಪಗಳು, ಹಿಂಸೆ, ಸಂಘರ್ಷಗಳಂತಹ ಜಾಗಗಳಲ್ಲಿ ಪ್ರಪಂಚದಲ್ಲಿ 150 ಕೋಟಿ ಜನರು ವಾಸಿಸುತ್ತಿದ್ದಾರೆ.  ಇಂತಹ ವಿಪತ್ತು ಸಂದರ್ಭಗಳಿಗೆ ಅನೇಕ ಕುಟುಂಬಗಳು ಸಿಲುಕಿ ಮೂಲ ಸೌಕರ್ಯಗಳಿಂದ ವಂಚಿತರಾಗಿ ಬಳಲುತ್ತಿದ್ದು, ಇದರಿಂದ ಮಕ್ಕಳು ಹೊರತಾಗಿಲ್ಲ.  ಈ ಪೈಕಿ ಪ್ರಪಂಚದಾದ್ಯಂತ 16,80 ಕೋಟಿ ಮಕ್ಕಳು ಇಂತಹ ವಿಪತ್ತುಗಳ ಘರ್ಷಣೆಗೆ ಸಿಲುಕಿ ಬಾಲಕಾರ್ಮಿಕತೆಗೆ ಬಲಿಯಾಗುತ್ತಿದ್ದಾರೆ. 
ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ ಹಾಗೂ ವಿಶ್ವಸಂಸ್ಥೆಯು ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕುವುದರೊಂದಿಗೆ 2025ರ ಹೊತ್ತಿಗೆ ಕರ್ನಾಟಕವನ್ನು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ಮುಕ್ತ ಕರ್ನಾಟಕವನ್ನಾಗಿಸಲು ಶ್ರಮಿಸುತ್ತಿದೆ.  ಹಾಗಾಗಿ ಈ ವರ್ಷ “ವಿಪತ್ತು ಮತ್ತು ಸಂಘರ್ಷಣೆಗಳಿಂದ ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಹಾಗೂ ವಿಶ್ವಸಂಸ್ಥೆಯ ಮಾರ್ಗಸೂಚಿಯಂತೆ ಈ ಪದ್ಧತಿಯನ್ನು ಕೊನೆಗಾಣಿಸಲು ಸಮಾರೋಪಾದಿಯಲ್ಲಿ ಕ್ರಮ ಜರುಗಿಸುವುದು ಅತ್ಯಂತ ಅಗತ್ಯ.  ಬಾಲ ಮತ್ತು ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ನು ಭಾರತ ಸರ್ಕಾರ 2016ರ ತಿದ್ದುಪಡಿಗಳೊಂದಿಗೆ 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ದುಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಹಾಗೂ ಕಾಯ್ದೆಯಡಿಯ 15 ರಿಂದ 18 ವರ್ಷದ ಮಕ್ಕಳನ್ನು ಅಪಾಯಕಾರಿ ಉದ್ದಿಮೆಯಲ್ಲಿ ದುಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.  ಕಾಯ್ದೆಯ ಹಾಗೂ ಶಿಕ್ಷಾರ್ಹ ಮತ್ತು ವಿಚಾರಣಾರ್ಹ ಅಪರಾಧ.  ಬಾಲ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಎಲ್ಲರೂ ಇದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕಾಗಿದೆ.  ಆದ್ದರಿಂದ ಜೂನ್. 12 ರಿಂದ ನಾವೆಲ್ಲರೂ ವಿಶ್ವ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಜಿಲ್ಲಾ ಮಟ್ಟದಿಂದ ಪ್ರತಿಯೊಂದು ಹಳ್ಳಿಗಳ ಮಟ್ಟದಲ್ಲಿ ಹಮ್ಮಿಕೊಳ್ಳಬೇಕಾಗಿದೆ. 
ಜಿಲ್ಲಾ ಮಟ್ಟದ ಕಾರ್ಯಕ್ರಮಗಳು : ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ “ಅರಿವು” ಕಾರ್ಯಕ್ರಮಗಳು ಆಯೋಜಿಸಬೇಕು. 
ತಾಲೂಕು ಮಟ್ಟದ ಕಾರ್ಯಕ್ರಮಗಳು : ಕೊಪ್ಪಳ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕು ಕೇಂದ್ರಗಳಲ್ಲಿ ತಾಲೂಕ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ತಹಶೀಲ್ದಾರರು, ತಾಲೂಕ ಪಂಚಾಯತ್, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ, ಶಿಕ್ಷಣ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ, ಡಿ.ಸಿ.ಪಿ.ಯು., ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಲೂಕು ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಿ ಆ ಮೂಲಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಅಂದಿನ ದಿನ ಶಾಲೆಗೆ ದಾಖಲಾತಿ ಮಾಡಿಸಬೇಕು. 
ಗ್ರಾ.ಪಂ./ ವಾರ್ಡ್ ಮಟ್ಟದ ಕಾರ್ಯಕ್ರಮಗಳು : ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಜೂ. 12 ರಿಂದ 18ರ ವರೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ವಿವರ ಇಂತಿವೆ.
     ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರುಗಳು ಜೂ.12 ರಂದು ಬೆಳಿಗ್ಗೆ 9-30 ಗಂಟೆಗೆ ಎಲ್ಲಾ ಮಕ್ಕಳಿಗೂ ಮತ್ತು ಅವರ ಪೋಷಕರಿಗೆ ಶಾಲೆಯಲ್ಲಿ ಸಮಾವೇಶ ಸೇರಿಸಿ, ಪ್ರತಿಜ್ಞಾ ವಿಧಿ ಭೋದಿಸುವುದು.  ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯಿಂದಾಗುವ ದುಷ್ಪರಿಣಾಮದ ಬಗ್ಗೆ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸುವ ನಿಟ್ಟಿನಿಂದ ಮಕ್ಕಳಿಂದಲೇ ಕಿರುನಾಟಕ, ಜಾಗೃತಿ ಗೀತೆಗಳನ್ನು, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. 
       ಪ್ರತೀ ಪಂಚಾಯತ್ ಮತ್ತು ವಾರ್ಡ್‍ಗಳಲ್ಲಿ “ಮಕ್ಕಳ ರಕ್ಷಣಾ ಸಮಿತಿ” ಸಭೆಯನ್ನು ಆಯೋಜಿಸಿ, ಮಕ್ಕಳ ಗ್ರಾಮ ಸಭೆಯಲ್ಲಿ, ಮಕ್ಕಳು ಮುಂದಿಟ್ಟಂತಹ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದು.  ಸಮಿತಿ ಸದಸ್ಯರಿಗೆ ತರಬೇತಿಯನ್ನು ಆಯೋಜಿಸಬೇಕು. 
       ಎಲ್ಲಾ ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಭೆಯನ್ನು ಆಯೋಜಿಸಿ 2016-17ರಲ್ಲಿ ನಡೆದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯಲ್ಲಿ ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳನ್ನು ಮರಳಿ ಶಾಲೆಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ನಿರ್ಧಾರಗಳನ್ನು ತಗೆದುಕೊಳ್ಳಬೇಕು. 
      ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಬಾಲ ವಿಕಾಸ ಸಮಿತಿ ಸಭೆಯನ್ನು ಆಯೋಜಿಸುವುದು ಮತ್ತು ಬಾಲಿಕಾ ಸಂಘದ ಸಭೆಯನ್ನು ಆಯೋಜಿಸಿ ಬಾಲ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿಯ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿ ಬಾಲಿಕೆಯರ ಹಾಗೂ ಗರ್ಭಿಣಿ ತಾಯಂದಿರು ಮತ್ತು ಬಾಣಂತಿಯರ ಮನೆಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸ್ವತಃ ಶಾಲೆಗೆ ದಾಖಲಾತಿ ಮಾಡಿಸುವಂತೆ ಸಭೆಗಳಲ್ಲಿ ಹೇಳಬೇಕು.
      ಗ್ರಾ.ಪಂ. ಸಾಮಾನ್ಯ ಸಭೆಯನ್ನು ಆಯೋಜಿಸಿ, ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಚರ್ಚಿಸುವುದು.  * ಗ್ರಾ.ಪಂ. ವತಿಯಿಂದ ಆಯೋಜಿಸುವ ಜಾಥಾ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ, ಸ್ವಸಹಾಯ ಸಂಘ, ಪೋಷಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಅರಿವು ಜಾಥಾದಲ್ಲಿ ಭಾಗವಹಿಸುವಂತೆ ಮಾಡಬೇಕು. 
      ಪ್ರತೀ ಪೊಲೀಸ್ ಠಾಣೆಯಲ್ಲಿ ಜೂನ್. 12 ರಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ನಾಗರೀಕ ಸಂಸ್ಥೆಗಳು, ರೈತರು, ಜನಪ್ರತಿನಿಧಿಗಳು, ಯುವಕ ಸಂಘ, ಮಹಿಳಾ ಸಂಘ, ವಿವಿಧ ಕಾರ್ಮಿಕ ಸಂಘಟನೆಗಳ ಮಾಲಿಕರನ್ನು ಕರೆಸಿ ಬಾಲ ಕರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಬೇಕು. 
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ “ತೆರೆದ ಮನೆ” ಕಾರ್ಯಕ್ರಮವನ್ನು ಆಯೋಜಿಸಿ, ಬಾಲ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಮಕ್ಕಳಿಗೆ ಮಾಹಿತಿ ನೀಡಬೇಕು. ಎಲ್ಲಾ ಸರಕಾರಿ ಕಛೇರಿಗಳಲ್ಲಿ ಜೂನ್. 12 ರಂದು ಪ್ರತಿಜ್ಞಾ ವಿಧಿಯನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ

ಎಲ್ಲಾ ಲೇಖನಗಳು ಆಗಿದೆ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2017/06/12.html

Subscribe to receive free email updates:

0 Response to "ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ : ಜೂ. 12 ರಿಂದ ಜಿಲ್ಲೆಯಲ್ಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ : ಎಂ. ಕನಗವಲ್ಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ