ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ

ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ
ಲಿಂಕ್ : ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ

ಓದಿ


ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ



ಕೊಪ್ಪಳ ಜೂ. 08 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಲ್ಲಿಸುವ ದೂರು ಅರ್ಜಿಗಳಿಗೆ ತಕ್ಷಣ ಸ್ಪಂದಿಸಿ, ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಗಂಗಾವತಿ ನಗರಸಭೆಯಲ್ಲಿ ಜರುಗುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ನಂತರ ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡುವ ಕಾರ್ಯಕ್ಕೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಬೇಕು.  ಕಂದಾಯ/ ಸನದು ವಸೂಲಾತಿ, ನೀರಿನ ಕರ ವಸೂಲಾತಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು.  ಪ್ರಸಕ್ತ ವರ್ಷದಿಂದಲೇ ನೀರಿನ ಕರವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ತೆರಿಗೆಯನ್ನು ಪಾವತಿಸದಿರುವ ವಾಣಿಜ್ಯ ಸಂಕೀರ್ಣ ಮಳಿಗೆಗಳಿಗೆ ಕೂಡಲೆ ನೋಟಿಸ್ ಜಾರಿ ಮಾಡಬೇಕು.  ಸಾರ್ವಜನಿಕರ ದೂರು ಅರ್ಜಿಗಳು, ಖಾತಾ ಬದಲಾವಣೆ ಇಂತಹ ಅರ್ಜಿಗಳಿಗೆ ಕೂಡಲೆ ಸ್ಪಂದಿಸಿ, ತ್ವರಿತವಾಗಿ ವಿಲೇವಾರಿ ಮಾಡಬೇಕು.  ಗಂಗಾವತಿಯಲ್ಲಿ ನೈರ್ಮಲ್ಯದ ಕುರಿತು ಪ್ರಸ್ತಾಪಿಸಿ, ವಾರ್ಡ್ ಮತ್ತು ನಗರವನ್ನು ಸ್ವಚ್ಛವಗಿಡುವ ಕುರಿತು ಪರಿಸರ ಅಭಿಯಂತರರು ಹಾಗೂ ನೈರ್ಮಲ್ಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
     ನೈರ್ಮಲ್ಯ ಕೆಲಸ ಸಮರ್ಪಕವಾಗಿ ನಡೆಯಲು ಪೌರಕಾರ್ಮಿಕರುಗಳಿಗೆ ವಾರ್ಡ್ ವಾರು ಕೆಲಸ ಹಂಚಿಕೆ ಮಾಡಿಕೊಡಬೇಕು.  ನಗರಸಭೆ ಕಾರ್ಯಾಲಯಕ್ಕೆ ಹೊಸ ಕಟ್ಟಡ ನಿರ್ಮಿಸಲು ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಇದಕ್ಕೂ ಪೂರ್ವದಲ್ಲಿ  ಗಂಗಾವತಿ ನಗರಕ್ಕೆ ಭೇಟಿ ನೀಡಿ, ಗಂಗಾವತಿ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅನುಷ್ಟಾನಗೊಂಡಿರುವ  ಆನೆಗುಂದಿ ರಸ್ತೆ, ಸೇವಾಲಾಲ್ ಸರ್ಕಲ್, ಕನಕದಾಸ ಸರ್ಕಲ್, ಜಯನಗರ ರಸ್ತೆಗಳ ಕಾಮಗಾರಿಗಳನ್ನು ವೀಕ್ಷಿಸಿದರು. 
 ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್, ತಹಸಿಲ್ದಾರ್ ಚಂದ್ರಕಾಂತ್, ಸಮುದಾಯ ಅಭಿವೃದ್ದಿ ತಜ್ಞರು, ಪೌರಾಯುಕ್ತರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ

ಎಲ್ಲಾ ಲೇಖನಗಳು ಆಗಿದೆ ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/06/blog-post_70.html

Subscribe to receive free email updates:

0 Response to "ಗಂಗಾವತಿ : ಸಾರ್ವಜನಿಕರ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿ ಕನಗವಲ್ಲಿ ಸೂಚನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ