ಶೀರ್ಷಿಕೆ : ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ
ಲಿಂಕ್ : ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ
ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ
ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಗ್ರೂಪ್’ಡಿ’ ವೃಂದದ ಅಡುಗೆ ಸಹಾಯಕ ಮತ್ತು ಕಾವಲುಗಾರರ ಹುದ್ದೆಗಳನ್ನು ನೇರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಅರ್ಹತೆಯ ಆಧಾರದ ಮೇಲೆ ಕಟ್-ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ.
ಕಾವಲುಗಾರರ ಹುದ್ದೆಗೆ ಸಂಬಂಧಿಸಿದಂತೆ ಹೈದ್ರಾಬಾದ್-ಕರ್ನಾಟಕ ವೃಂದದ ಹುದ್ದೆಗಳಲ್ಲಿ ವಿವಿಧ ಮೀಸಲಾತಿ ವರ್ಗಗಳಲ್ಲಿ ಕಟ್-ಆಫ್ ಅಂಕಗಳ ವಿವರ ಇಂತಿದೆ. 2ಎ ವರ್ಗದಲ್ಲಿ ಇತರೆ-73.28, ಮಹಿಳೆ-56.96, ಗ್ರಾಮೀಣ-73.60. 3ಎ : ಇತರೆ-60. 3ಬಿ : ಇತರೆ-73.76. ಸಿಎ: ಇತರೆ-71.84. ಸಾಮಾನ್ಯ ವರ್ಗ: ಇತರೆ-73. 92, ಮಹಿಳೆ-59.52, ಗ್ರಾಮೀಣ-74.08, ಪಿಹೆಚ್‍ಸಿ-66.56, ಮಾಜಿ ಸೈನಿಕ-45.44. ಪ.ಜಾತಿ: ಮಹಿಳೆ-55.52, ಗ್ರಾಮೀಣ-72.48, ಪಿಹೆಚ್‍ಸಿ-56.96. ಪ.ವರ್ಗ: ಇತರೆ-72.32. ಹೈದ್ರಾಬಾದ್-ಕರ್ನಾಟಕ ಉಳಿಕೆ ವೃಂದದ ಕಾವಲುಗಾರರ ಹುದ್ದೆಗೆ ವಿವಿಧ ಮೀಸಲಾತಿ ವರ್ಗದಲ್ಲಿ ಕಟ್-ಆಫ್ ಅಂಕಗಳ ವಿವರ ಇಂತಿದೆ. ಸಾಮಾನ್ಯ ವರ್ಗ: ಇತರೆ-80.96, ಪ.ಜಾತಿ: ಇತರೆ-77. ಪ.ವರ್ಗ: ಇತರೆ-71.84 ಕಾವಲುಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ 1:5 ರ ಅನುಪಾತದ ಪ್ರಕಾರ ಜೂ. 24 ರಂದು ಬೆಳಿಗ್ಗೆ 09 ಗಂಟೆಗೆ ದಾಖಲಾತಿ ಪರಿಶೀಲನೆ ಕಿನ್ನಾಳ ರಸ್ತೆಯಲ್ಲಿನ ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು www.koppal.nic.in ನಲ್ಲಿ ತಮ್ಮ ಪ್ರವೇಶ ಪತ್ರಗಳನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು. ಅರ್ಹ ಅಭ್ಯರ್ಥಿಗಳಿಗೆ ಜೂ. 29 ರಂದು ಕಿನ್ನಾಳ ರಸ್ತೆಯಲ್ಲಿನ ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ದೇಹದಾಢ್ರ್ಯತೆ ಪರೀಕ್ಷೆ ಏರ್ಪಡಿಸಲಾಗಿದೆ
ಅಡುಗೆ ಸಹಾಯಕರ ಹುದ್ದೆಗೆ ಸಂಬಂಧಿಸಿದಂತೆ ಹೈದ್ರಾಬಾದ್-ಕರ್ನಾಟಕ ವೃಂದದ ಹುದ್ದೆಗಳಲ್ಲಿ ವಿವಿಧ ಮೀಸಲಾತಿ ವರ್ಗಗಳಲ್ಲಿ ಕಟ್-ಆಫ್ ಅಂಕಗಳ ವಿವರ ಇಂತಿದೆ. 2ಎ ವರ್ಗದಲ್ಲಿ ಮಹಿಳೆ-51. 36, ಗ್ರಾಮೀಣ-57.76, ಪಿಹೆಚ್‍ಸಿ-36.16. 2ಬಿ ವರ್ಗದಲ್ಲಿ ಮಹಿಳೆ-54.72. 3ಎ ರಲ್ಲಿ ಇತರೆ-42.72. 3ಬಿರಲ್ಲಿ ಇತರೆ-61.64. ಸಿಎ ರಲ್ಲಿ ಮಹಿಳೆ-46.56. ಸಾಮಾನ್ಯ ವರ್ಗದಲ್ಲಿ ಇತರೆ-64.16, ಮಹಿಳೆ-58.08, ಗ್ರಾಮೀಣ-61.76, ಕನ್ನಡ ಮಾಧ್ಯಮ-65.12, ಪಿಡಿಪಿ- 38.72. ಪ.ಜಾತಿ : ಮಹಿಳೆ-56.80, ಗ್ರಾಮೀಣ-60.80, ಪಿಹೆಚ್‍ಸಿ-35.84. ಪ.ವರ್ಗ : ಮಹಿಳೆ-54.88. ಹೈದ್ರಾಬಾದ್-ಕರ್ನಾಟಕ ಉಳಿಕೆ ವೃಂದದ ಅಡುಗೆ ಸಹಾಯಕರ ಹುದ್ದೆಗೆ ವಿವಿಧ ಮೀಸಲಾತಿ ವರ್ಗದಲ್ಲಿ ಕಟ್-ಆಪ್ ಅಂಕಗಳ ವಿವರ ಇಂತಿದೆ. ಸಾಮಾನ್ಯ ಅಭ್ಯರ್ಥಿ: ಇತರೆ-71. 20, ಮಹಿಳೆ-73. 44. ಪ.ಜಾತಿ : ಇತರೆ-69.92. ಪ.ವರ್ಗ: ಇತರೆ-59.52. ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ಜೂ. 30 ರಂದು ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ
ಎಲ್ಲಾ ಲೇಖನಗಳು ಆಗಿದೆ ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ ಲಿಂಕ್ ವಿಳಾಸ https://dekalungi.blogspot.com/2017/06/blog-post_27.html
0 Response to "ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ"
ಕಾಮೆಂಟ್ ಪೋಸ್ಟ್ ಮಾಡಿ