ಶೀರ್ಷಿಕೆ : ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ
ಲಿಂಕ್ : ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ
ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ
ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ): ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೊಪ್ಪಳದ ಬಾಲಕಿಯರ/ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳಿಗೆ ಯೋಗಾಭ್ಯಾಸ ಶಿಕ್ಷಣ ನೀಡುವ ಮೂಲಕ ಆಚರಿಸಲಾಯಿತು.
ಯೋಗ ಶಿಕ್ಷಕರು ಹಾಗೂ ಯೋಗಪಟುಗಳಾದ ಕೃಷ್ಣ ಬಿ. ಕುಟಗನಹಳ್ಳಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಮಕ್ಕಳಿಗೆ ಯೋಗದ ಹಿನ್ನೆಲೆ, ಅದರ ಮಹತ್ವ ಮತ್ತು ಉಪಯೋಗಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಇಂದಿನ ಆಧುನಿಕ ಜೀವನ ಶೈಲಿಯಿಂದ ಅನೇಕ ದೈಹಿಕ ಮತ್ತು ಮಾನಸಿಕ ರೋಗಗಳು ಹೆಚ್ಚುತ್ತಿರುವುದರಿಂದ ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅಲ್ಲದೆ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಯೋಗದ ಪ್ರಕಾರಗಳಾದ ಆಸನ, ಧಾರಣ, ಪ್ರಾಣಾಯಾಮ ಮತ್ತು ಧ್ಯಾನವನ್ನು ಬಾಲಮಂದಿರದ ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಯೋಗಾಭ್ಯಾಸ ಮಾಡಿಸುವ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸುಮಲತಾ ಆಕಳವಾಡಿ ಸಾಂಸ್ಥಿಕ ರಕ್ಷಣಾಧಿಕಾರಿ ವಹಿಸಿದ್ದರು, ಶಿವಲೀಲಾ ವನ್ನೂರು, ಬಸವರಾಜ ವಿ., ರವಿ ಬಡಿಗೇರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ. ಮತ್ತು ಬಾಲಮಂದಿರದ ಸಿಬ್ಬಂದಿ ಗೀತಾ, ರವಿ ಗುಡ್ಡದಮೇಗಳ ಲಕ್ಷ್ಮೀ ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ ಲಿಂಕ್ ವಿಳಾಸ https://dekalungi.blogspot.com/2017/06/blog-post_173.html
0 Response to "ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ"
ಕಾಮೆಂಟ್ ಪೋಸ್ಟ್ ಮಾಡಿ