ಶೀರ್ಷಿಕೆ : ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ
ಲಿಂಕ್ : ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ
ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ
ಕೊಪ್ಪಳ, ಜೂ. 09 (ಕರ್ನಾಟಕ ವಾರ್ತೆ): ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹಾಗೂ ಸಂವಿಧಾನದ 371(ಜೆ) ಕಲಂ ಅನ್ವಯ ಕಾರ್ಯ ಚಟುವಟಿಕೆಗಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸುತ್ತಿರುವ ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ನಿವೃತ್ತ ಅಧಿಕಾರಿ/ ಸಿಬ್ಬಂದಿ, ನಿವೃತ್ತ ತಾಂತ್ರಿಕ ಸಿಬ್ಬಂದಿ ಹಾಗೂ ಡಾಟಾ ಎಂಟ್ರಿ ಆಪರೇಟರಗಳನ್ನು ತಾತ್ಕಾಲಿಕವಾಗಿ ಗೌರವಧನ ಮೇರಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ವಿವಿಧ ಹುದ್ದೆಗಳ ವಿವರ ಹಾಗೂ ಅರ್ಹತೆ ಇಂತಿದೆ, ತಾಂತ್ರಿಕ ಸಲಹೆಗಾರ - ಹುದ್ದೆಗೆ ನಿವೃತ್ತ ಮುಖ್ಯ ಇಂಜಿನೀಯರ್/ ಅಧೀಕ್ಷಕ ಅಭಿಯಂತರರು ಅಥವಾ ಕನಿಷ್ಠ 15 ವರ್ಷಗಳ ಅನುಭವವುಳ್ಳ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ/ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕ ಆಗಿರಬೇಕು. ಮಾಸಿಕ ಗೌರವಧನ ರೂ.40,000/-,. ಪ್ರೊಜೆಕ್ಟ ಅನುಷ್ಠಾನ ಮತ್ತು ಸಮನ್ವಯ ಅಧಿಕಾರಿ - ಹುದ್ದೆಗೆ ನಿವೃತ್ತ ಜಿಲ್ಲಾ ಮಟ್ಟದ ಅಧಿಕಾರಿ (ಉಪ ನಿರ್ದೇಶಕರ ಹುದ್ದೇಯ ಮೇಲ್ಪಟ್ಟು), ಮಾಸಿಕ ಗೌರವಧನ ರೂ.30,000/-,. ತಾಂತ್ರಿಕ ಅಧಿಕಾರಿ - ಹುದ್ದೆಗೆ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ ಮಾಸಿಕ ಗೌರವಧನ ರೂ.30,000/- ಹಾಗೂ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಾಸಿಕ ಗೌರವಧನ ರೂ.20,000/-,. ಲೆಕ್ಕ ಅಧೀಕ್ಷಕರು - ಹುದ್ದೆಗೆ ನಿವೃತ್ತ ಲೆಕ್ಕ ಅಧೀಕ್ಷಕರು, ಮಾಸಿಕ ಗೌರವಧನ ರೂ.20,000/-,. ಡಾಟಾ ಎಂಟ್ರಿ ಆಪರೇಟರ – ಹುದ್ದೆಗೆ ಯಾವುದೇ ಪದವಿ, ಕಂಪ್ಯೂಟರ್ ಕೊರ್ಸ್/ ಸರ್ಟಿಫಿಕೇಟ್, ಮಾಸಿಕ ಗೌರವಧನ ರೂ.10,376.
ಅಭ್ಯರ್ಥಿಯ ನೇಮಕಾತಿ ಸಂಪೂರ್ಣ ತಾತ್ಕಾಲಿಕವಾಗಿ ಗುತ್ತಿಗೆ ಆಧಾರವಾಗಿದ್ದು, ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಗುತ್ತಿಗೆ ಅವಧಿಯು ಒಂದು ವರ್ಷ ಅವಧಿಯಾಗಿದ್ದು, ಅವಶ್ಯಕತೆ ಅನುಗುಣವಾಗಿ ಅಭ್ಯರ್ಥಿಗಳ ತೃಪ್ತಿಕರ ಸೇವೆ ಆಧರಿಸಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಡನೆ ಮತ್ತೊಂದು ವರ್ಷದ ಅವಧಿಗೆ ಮುಂದುವರೆಸಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಖಾಯಂಗೊಳಿಸಲಾಗುವುದಿಲ್ಲ. ನಿವೃತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸದೇ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹಾಗೂ ಅಭ್ಯರ್ಥಿಗಳ ವಿರುದ್ಧ ಇಲಾಖಾ ಅಥವಾ ನ್ಯಾಯಾಂಗ ವಿಚಾರಣೆ ಬಾಕಿ ಇರಬಾರದು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತನ ಅಥವಾ ಮೇಲಾಧಿಕಾರಿಗಳು ನೀಡುವ ಸೂಚನೆ ಸಲಹೆಗಳನ್ನು ಪಾಲಿಸದೆ ಇದ್ದಲ್ಲಿ, ಯಾವುದೇ ಮುನ್ಸೂಚನೆ ನೀಡದೆ ಕರ್ತವ್ಯದಿಂದ ತೆಗೆದುಹಾಕಲಾಗುವುದು. ಇದಕ್ಕಾಗಿ ಯಾವುದೇ ರೀತಿ ಪರಿಹಾರ ಧನ ನೀಡಲಾಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_24.html
0 Response to "ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ