ಶೀರ್ಷಿಕೆ : News and photo Date: 24-05-2017
ಲಿಂಕ್ : News and photo Date: 24-05-2017
News and photo Date: 24-05-2017
ಪೌರಾಡಳಿತ ಸಚಿವರ ಪ್ರವಾಸ
*****************************
ಕಲಬುರಗಿ,ಮೇ.24.(ಕ.ವಾ.)-ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೋಲಾಪುರ-ಯಶವಂತಪುರ ರೈಲಿನ ಮೂಲಕ ಮೇ 25ರಂದು ಬೆಳಿಗ್ಗೆ 6.30 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಬೆಳಗಿನ 11 ಗಂಟೆಗೆ ಕಲಬುರಗಿಯಲ್ಲಿ 2017-18ನೇ ಸಾಲಿನ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ ಕಾರಿನ ಮೂಲಕ ಕಲಬುರಗಿಯಿಂದ ರಸ್ತೆ ಮೂಲಕ ಭಾಲ್ಕಿಗೆ ಪ್ರಯಾಣಿಸುವರು.
ಮುಖ್ಯಮಂತ್ರಿಗಳ ಪ್ರವಾಸ
**************************
ಕಲಬುರಗಿ,ಮೇ.24.(ಕ.ವಾ.)-ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಮೇ 27ರಂದು ಶನಿವಾರ ಬೆಳಗಿನ 11 ಗಂಟೆಗೆ ಬೀದರ್ ಏರ್‍ಬೇಸ್‍ಗೆ ಆಗಮಿಸುವರು. ಅಲ್ಲಿಂದ ಬೆಳಗಿನ 11.10 ಗಂಟೆಗೆ ಹೆಲಿಕಾಪ್ಟರ್ ಮೂಲಕ ಹೊರಟು ಬೆಳಗಿನ 11.40 ಗಂಟೆಗೆ ಕಲಬುರಗಿಯ ಡಿ.ಎ.ಆರ್. ಮೈದಾನದಲ್ಲಿರುವ ಹೆಲಿಪ್ಯಾಡಿಗೆ ಆಗಮಿಸುವರು. ಕಲಬುರಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಲೋಕಾರ್ಪಣೆ ಮತ್ತು ಇನ್ಫೋಸಿಸ್ ಸಂಸ್ಥೆಯಿಂದ ನಿರ್ಮಿಸಲಾಗುವ ಧರ್ಮಶಾಲಾ ಕಟ್ಟಡದ ಶಿಲಾನ್ಯಾಸ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 1 ಗಂಟೆಗೆ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30 ರಿಂದ ಕಾಯ್ದಿರಿಸಲಾಗಿದೆ. ಮಧ್ಯಾಹ್ನ 2.30 ಗಂಟೆಗೆ ಕಲಬುರಗಿ ಇಂದಿರಾ ಸ್ಮಾರಕ ಭವನ(ಟೌನ್ ಹಾಲಿನ) ಎದುರು ನಿರ್ಮಿಸಿದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಪುತ್ಥಳಿ ಅನಾವರಣ ಮಾಡುವರು ಹಾಗೂ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.
ನಂತರ ಸಂಜೆ 4.30 ಗಂಟೆಗೆ ಕಲಬುರಗಿಯ ಡಿ.ಎ.ಆರ್. ಮೈದಾನದಲ್ಲಿರುವ ಹೆಲಿಪ್ಯಾಡಿನಿಂದ ಹೊರಟು ಸಂಜೆ 5.05 ಗಂಟೆಗೆ ಬೀದರ ಏರ್‍ಬೇಸ್‍ಗೆ ಆಗಮಿಸುವರು. ಸಂಜೆ ಸಂಜೆ 5.15 ಗಂಟೆಗೆ ಬೀದರ ಏರ್‍ಬೇಸ್‍ದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ
ಕಲಬುರಗಿ,ಮೇ.24.(ಕ.ವಾ.)-ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಮೇ 25ರಂದು ಬೆಳಗಿನ 9.30 ಗಂಟೆಗೆ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಕಲಬುರಗಿ ಜಿಲ್ಲೆಯಲ್ಲಿನ ವಿವಿಧ ಕನ್ನಡಪರ ಸಂಘಟನೆಗಳೊಂದಿಗೆ ಸಭೆ ನಡೆಸುವರು. ಬೆಳಗಿನ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಹಾಗೂ ಬೆಳಗಿನ 11.30 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 12.30 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಕಲಬುರಗಿಯಿಂದ ರಾಯಚೂರಿಗೆ ಪ್ರಯಾಣ ಮಾಡುವರು.
ರಾಜೀವ್ ಆವಾಸ್ ಯೋಜನೆ
***************************
ಡಿ.ಡಿ. ಹಾಗೂ ದಾಖಲಾತಿ ಸಲ್ಲಿಸಲು ಮೇ 31 ಕೊನೆಯ ದಿನ
**********************************************************
ಕಲಬುರಗಿ,ಮೇ.24.(ಕ.ವಾ.)-ರಾಜೀವ ಆವಾಸ್ (ಪೈಲೇಟ್ ಪ್ರೊಜೆಕ್ಟ್) ಯೋಜನೆಯಡಿ ಆಯ್ಕೆಯಾದ 920 ಫಲಾನುಭವಿಗಳ ಪೈಕಿ 400 ಫಲಾನುಭವಿಗಳು ಡಿ.ಡಿ.ಯನ್ನು ಭರಿಸಿರುತ್ತಾರೆ. ಇನ್ನುಳಿದ 520 ಫಲಾನುಭವಿಗಳು ಡಿ.ಡಿ. ಭರಿಸಿರುವುದಿಲ್ಲ. ಡಿ.ಡಿ. ಭರಿಸದಿರುವ ಹಾಗೂ ದಾಖಲಾತಿಗಳನ್ನು ಸಲ್ಲಿಸದಿರುವ 520 ಫಲಾನುಭವಿಗಳ ಪೈಕಿ 273 ಫಲಾನುಭವಿಗಳಿಗೆ ತಮ್ಮ ವಂತಿಕೆ ಹಣ 100750ರೂ.ಗಳನ್ನು ಎರಡು ಕಂತಿನಲ್ಲಿ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲನೇ ಕಂತಿನ ಹಣ 60000 ರೂ.ಗಳ ಡಿ.ಡಿ.ಯನ್ನು 2017ರ ಮೇ 31ರೊಳಗಾಗಿ ಭರಿಸಿದ್ದಲ್ಲಿ ಮನೆಯನ್ನು ತಮ್ಮ ಹೆಸರಿಗೆ ಕಾಯ್ದಿರಿಸಲಾಗುವುದು ಹಾಗೂ ಉಳಿದ 40750 ರೂ. ಡಿ.ಡಿ.ಯನ್ನು ಮನೆ ಸ್ವಾಧೀನ ಪತ್ರ ಮತ್ತು ಹಕ್ಕು ಪತ್ರ ನೀಡುವ ಸಮಯದಲ್ಲಿ ಭರಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ. ಒಂದು ವೇಳೆ ನಿಗದಿತ ಅವಧಿಯೊಳಗಾಗಿ ಡಿ.ಡಿ. ಮತ್ತು ದಾಖಲಾತಿಗಳನ್ನು ಸಲ್ಲಿಸದೇ ಇದ್ದಲ್ಲಿ 520 ಫಲಾನುಭವಿಗಳ ಆಯ್ಕೆಯನ್ನು ರದ್ದುಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಯ್ಕೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ 40750 ರೂ.ಗಳ ಡಿ.ಡಿ. ಹಾಗೂ ಇತರೆ ಸಾಮಾನ್ಯ ವರ್ಗದ ಫಲಾನುಭವಿಗಳು ರಾಷ್ಟ್ರೀಕೃತ ಬ್ಯಾಂಕಿನಿಂದ 100750 ರೂ.ಗಳ ಡಿ.ಡಿ.ಯನ್ನು ಪಡೆದು ಇದರೊಂದಿಗೆ ಇತ್ತೀಚಿನ ಜಾತಿ, ಆದಾಯ ಪ್ರಮಾಣಪತ್ರದ ಪ್ರತಿ, ಇತ್ತೀಚಿನ 4 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು, ಮಹಾನಗರ ವ್ಯಾಪ್ತಿಯಲ್ಲಿ ಬರುವ ಬಿ.ಪಿ.ಎಲ್. ಪಡಿತರ ಚೀಟಿ ಪ್ರತಿ, ಗುರುತಿನ ಚೀಟಿ, ಆಧಾರ ಕಾರ್ಡ್, ಕಲಬುರಗಿ ನಗರದಲ್ಲಿ ಮನೆ/ನಿವೇಶನ ಇಲ್ಲ ಎಂಬುವುದರ ಬಗ್ಗೆ/ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರುವುದಿಲ್ಲ ಎಂದು 20 ರೂ.ಗಳ ಛಾಪಾ (ಸ್ಟ್ಯಾಂಪ್) ಕಾಗದದ ಮೇಲೆ ಬರೆದು ಕೋರ್ಟ್‍ನಿಂದ ಅಫಿಡವಿಟ್ ಮಾಡಿಸಿ ಸಲ್ಲಿಸಬೇಕು. ಮಂಜೂರಾದ ಫಲಾನುಭವಿಗಳು ಆಯ್ಕೆ ಪಟ್ಟಿಯಲ್ಲಿ ಇರುವಂತೆ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ: ಜನಸಾಮಾನ್ಯರಿಗೆ ದೂರು ನೀಡಲು ವೆಬ್‍ಸೈಟಿನಲ್ಲಿ ಅವಕಾಶ
ಕಲಬುರಗಿ,ಮೇ.24.(ಕ.ವಾ.)-ಪಿ.ಸಿ. ಆ್ಯಂಡ್ ಪಿ.ಎನ್.ಡಿ.ಟಿ. ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಹಾಗೂ ಜನಸಾಮಾನ್ಯರಿಗೆ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯಡಿ ಅನಧಿಕೃತ ಸ್ಕ್ಯಾನಿಂಗ್ ಸೆಂಟರ್‍ಗಳ ಮಾಹಿತಿ, ಪೋರ್ಟೆಬಲ್ ಸ್ಕ್ಯಾನಿಂಗ್ ಮಷಿನ್‍ನ್ನು ತಂದು ಸ್ಕ್ಯಾನಿಂಗ್ ಮಾಡುವವರ, ಪಿ.ಸಿ.ಪಿ.ಎನ್.ಡಿ.ಟಿ. ಕುರಿತು ಅನಧಿಕೃತವಾಗಿ ದಲ್ಲಾಳಿಗಳಾಗಿ ಕಾರ್ಯನಿರ್ವಹಿಸುತ್ತಿವವರ ಹಾಗೂ ಇತರೆ ಯಾವುದೇ ಪಿ.ಸಿ.ಪಿ.ಎನ್.ಡಿ.ಟಿ. ಕಾರ್ಯದಲ್ಲಿ ಕಾನೂನು ಬಾಹಿರವಾಗಿ ಭಾಗವಹಿಸಿದ ಕುರಿತು ತಿತಿತಿ.ಠಿಛಿಠಿಟಿಜಣಞಚಿಡಿ.iಟಿ/iಟಿಜex.ಠಿhಠಿ/ಛಿomಠಿಟಚಿiಟಿಣsವೆಬ್‍ಸೈಟ್‍ನಲ್ಲಿ ಅಥವಾ ಟೋಲ್ ಫ್ರೀ ಸಂಖ್ಯೆ 104ಕ್ಕೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ಸೇಡಂ: ಮೆಟ್ರಿಕ್ ಪೂರ್ವ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*************************************************************
ಕಲಬುರಗಿ,ಮೇ.24.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಕೆಳಕಂಡ ಬಾಲಕ/ಬಾಲಕಿಯರ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ 2017-18ನೇ ಸಾಲಿನ ಹೊಸದಾಗಿ ಪ್ರವೇಶ ಪಡೆಯಲು ಅರ್ಹ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 2ಬಿ, 3ಎ, 3ಬಿ, ಎಸ್ಸಿ/ಎಸ್.ಟಿ. ವರ್ಗಕ್ಕೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಸತಿ ನಿಲಯದಲ್ಲಿ ಈಗಾಗಲೇ ಪ್ರವೇಶ ಹೊಂದಿ ಮುಂದುವರಿಯುತ್ತಿರುವ ನವೀಕರಣ ವಿದ್ಯಾರ್ಥಿಗಳು ಸಹ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕೆಂದು ಸೇಡಂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ಎಂ.ನಾರಾಯಣಕಾರ್ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಐದÀನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಪ್ರವೇಶಾವಕಾಶವಿರುತ್ತದೆ. ಈ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಬಂಧಪಟ್ಟ ವಸತಿ ಶಾಲೆಗಳ ಮೇಲ್ವಿಚಾರಕರಿಂದ ಅಥವಾ ಸೇಡಂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ 2017ರ ಜೂನ್ 10ರೊಳಗಾಗಿ ಸಂಬಂಧಿಸಿದ ವಸತಿ ನಿಲಯದ ಮೇಲ್ವಿಚಾರಕರಿಗೆ ಅಥವಾ ಸೇಡಂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ವಿದ್ಯಾರ್ಥಿಗಳು ವಸತಿ ನಿಲಯದಿಂದ ಕನಿಷ್ಠ 5 ಕಿ.ಮೀ. ದೂರ ಅಥವಾ ಅದಕ್ಕಿಂತ ಹೆಚ್ಚಿನ ದೂರದಲ್ಲಿ ವಾಸಿಸುವವರಾಗಿರಬೇಕು. ಜಾತಿ ಹಾಗು ಆದಾಯ ಪ್ರಮಾಣಪತ್ರ, ಹಿಂದಿನ ತರಗತಿಯಲ್ಲಿ ಪಾಸಾದ ಅಂಕಪಟ್ಟಿ, ಮುಖ್ಯೋಪಾದ್ಯಾಯರಿಂದ ಪ್ರವೇಶ ದೃಢೀಕೃತ ಪ್ರತಿ, ಗ್ರಾಮ ಪಂಚಾಯಿತಿಯಿಂದ ವಸತಿ ನಿಲಯದಿಂದ ವಿದ್ಯಾರ್ಥಿಯ ಸ್ವಂತ ಸ್ಥಳಕ್ಕೆ ಇರುವ ದೂರದ ಪ್ರಮಾಣಪತ್ರ, ಪಾಲಕರ/ಪೋಷಕರ ಮೊಬೈಲ ನಂಬರನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.
ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಇಂತಿವೆ: ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯ ಸೇಡಂ ಟೌನ್, ಮುಧೋಳ, ಇಟಕಾಲ ಮತ್ತು ಕುರಕುಂಟಾ ಹಾಗೂ ಬಾಲಕಿಯರ ವಸತಿ ನಿಲಯ ಸೇಡಂ ಟೌನ್. ಹೆಚ್ಚಿನ ಮಾಹಿತಿಗಾಗಿ ಸೇಡಂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08441-276115 ಹಾಗೂ ಮೊಬೈಲ್ ಸಂಖ್ಯೆ 9535834576/9972609565ಗಳನ್ನು ಸಂಪರ್ಕಿಸಲು ಕೋರಿದೆ.
ಮೇ 28ರಿಂದ ರಾಜ್ಯಮಟ್ಟದ ಯುವ ಸಮ್ಮೇಳನ ಕಾರ್ಯಾಗಾರ
**********************************************************
ಕಲಬುರಗಿ,ಮೇ.24.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2015-16ನೇ ಸಾಲಿನ ರಾಜ್ಯಮಟ್ಟದ ಯುವ ಸಮ್ಮೇಳನ ಮತ್ತು ಕಾರ್ಯಾಗಾರವನ್ನು 2017ರ ಮೇ 28ರಿಂದ 30ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಮಾಳಗೆ ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿಯಾದ ಕಲಬುರಗಿ ಜಿಲ್ಲೆಯ ವಿವಿಧ ಯುವಕ/ಯುವತಿ ಮಂಡಳಿಗಳ 18ರಿಂದ 35ವರ್ಷದೊಳಗಿನ ಐದು ಯುವಕ/ಯುವತಿಯರು ಹಾಗೂ ಸದಸ್ಯರು ಮಾತ್ರ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿದೆ. ಜಿಲ್ಲೆಯ ಅರ್ಹ ಯುವಕ/ಯುವತಿಯರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಚಿಂಚೋಳಿ: ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
**************************************************
ಕಲಬುರಗಿ,ಮೇ.24.(ಕ.ವಾ.)-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಕೆಳಕಂಡ ಬಾಲಕ/ಬಾಲಕಿಯರ ಸರ್ಕಾರಿ ಮತ್ತು ಅನುದಾನಿತ ಮೆಟ್ರಿಕ್ ಪೂರ್ವ ಹಾಸ್ಟೆಲ್‍ಗಳಲ್ಲಿ ಹಾಗೂ ಆಶ್ರಮ ಶಾಲೆಗಳಲ್ಲಿ ಖಾಲಿಯಿರುವ ಸ್ಥಾನಗಳ 2017-18ನೇ ಸಾಲಿನ ಪ್ರವೇಶಕ್ಕೆ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಕ್ಕೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಐದÀನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮತ್ತು ಆಶ್ರಮ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿವರೆಗೆ ಪ್ರವೇಶಾವಕಾಶವಿರುತ್ತದೆ. ಈ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಬಂಧಪಟ್ಟ ವಸತಿ ಶಾಲೆಗಳ ಹಾಗೂ ಆಶ್ರಮ ಶಾಲೆಗಳ ಮೇಲ್ವಿಚಾರಕರಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಅರ್ಜಿಯೊಂದಿಗೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಅಂಕಪಟ್ಟಿ, ಆಧಾರ ಕಾರ್ಡ್, ವರ್ಗಾವಣೆ ಪ್ರಮಾಣಪತ್ರ ಹಾಗೂ ಭಾವಚಿತ್ರವನ್ನು ಲಗತ್ತಿಸಿ 2017ರ ಜೂನ್ 10ರೊಳಗಾಗಿ ಸಂಬಂಧಿಸಿದ ವಸತಿ ನಿಲಯದ ಮೇಲ್ವಿಚಾರಕರಿಗೆ ಸಲ್ಲಿಸಬೇಕು.
ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಇಂತಿವೆ: ಬಾಲಕರ ಸರ್ಕಾರಿ ವಸತಿ ನಿಲಯ ಚಿಂಚೋಳಿ, ಗಡಿಕೇಶ್ವರ, ಚಂದನಕೇರಾ, ಸುಲೇಪೆಟ್(ಎಸ್.ಸಿ.), ಸುಲೇಪೆಟ್(ಎಸ್.ಟಿ.), ಕುಂಚಾವರಂ, ಐನಾಪುರ, ಬಾಲಕಿಯರ ವಸತಿ ನಿಲಯ ಚಿಂಚೋಳಿ. ಆಶ್ರಮ ಶಾಲೆ: ಸರ್ಕಾರಿ ಆಶ್ರಮ ಶಾಲೆ ಚಿಂಚೋಳಿ ಹಾಗೂ ಪತ್ತ್ಯಾಂತಾಂಡ. ಅನುದಾನಿತ ವಸತಿ ನಿಲಯಗಳು: ರೇವಣಸಿದ್ದೇಶ್ವರ ವಸತಿ ನಿಲಯ ಚಿಂಚೋಳಿ, ಶ್ರೀ ಅಮರವಾಣಿ ವಸತಿ ನಿಲಯ ಚಿಂಚೋಳಿ, ಶ್ರೀ ಲಮಾಣಿ ವಸತಿ ನಿಲಯ ಚಿಂಚೋಳಿ, ಶ್ರೀ ರಾಮರಾವ ತಪಾಸ್ವಿನಿ ವಸತಿ ನಿಲಯ ಚಿಂಚೋಳಿ. ಹೆಚ್ಚಿನ ಮಾಹಿತಿಗಾಗಿ ಚಿಂಚೋಳಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08475-273583ನ್ನು ಸಂಪರ್ಕಿಸಲು ಕೋರಿದೆ.
ಆರೋಪಿತರಿಗೆ 5 ವರ್ಷ ಸನ್ನಡತೆ ಕಾಪಾಡಿಕೊಳ್ಳುವ ಶಿಕ್ಷೆ
********************************************************
ಕಲಬುರಗಿ,ಮೇ.24.(ಕ.ವಾ.)-ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸುರಪುರ ಬಸ್ ಡಿಪೋ ವಾಹನ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿದ ಆರೋಪಿಗಳಾದ ದೇವದುರ್ಗದ ಮೌನೇಶ ರಾಮಚಂದ್ರ ಬಡಿಗೇರ್ ಹಾಗೂ ಕಲಬುರಗಿ ವಿಜಯನಗರದ ಮಲ್ಲಿಕಾರ್ಜುನ @ ಮಲ್ಲು ಅಂಬರಾಯ ಕುಡುಕೆನವರ್ ಅವರಿಗೆ ಐದನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಸುಭಾಷಚಂದ್ರ ರಾಠೋಡ ಅವರು ದೋಷಿತರೆಂದು ಐದು ವರ್ಷ ಅವಧಿಯಲ್ಲಿ ಸನ್ನಡತೆ ಕಾಪಾಡಿಕೊಳ್ಳುವ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇಬ್ಬರೂ ಆರೋಪಿಗಳು 2013ರ ಜೂನ್ 23ರಂದು ಸಂಜೆ 6 ಗಂಟೆಗೆ ಕಲಬುರಗಿ ಆಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುವ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ವಾಹನ ಚಾಲಕ ಮಹ್ಮದ್ ಹುಸೇನ ನಬಿಸಾಬನೊಂದಿಗೆ ಜಗಳ ತೆಗೆದು ಆವಾಚ್ಯ ಶಬ್ದಗಳಿಂದ ಬೈದಿದಲ್ಲದೇ ಹೊಡೆಬಡಿ ಮಾಡಿ ಜೀವ ಬೇದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದರು. ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣದ ತನಿಖೆ ಕೈಗೊಂಡ ಅಶೋಕ ನಗರ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಸುಭಾಷಚಂದ್ರ ರಾಠೋಡ ಅವರು ವಾದ ವಿವಾದವನ್ನು ಆಲಿಸಿ ಆರೋಪಿತರು ಅಪರಾಧ ಮಾಡಿರುವ ಬಗ್ಗೆ ರುಜುವಾತುಪಟ್ಟಿದ್ದರಿಂದ ಅಪಾದಿತರಿಗೆ 5 ವರ್ಷಗಳ ಅವಧಿಗೆ ಸನ್ನಡತೆ ಕಾಪಾಡಿಕೊಳ್ಳುವ ಶಿಕ್ಷೆ ಹಾಗೂ ತಲಾ 25000 ರೂ. ದಂಡವನ್ನು ವೈಯಕ್ತಿಕ ಜಾಮೀನಿನ ಮುಚ್ಚಳಿಕೆ ಪತ್ರ ಬರೆದು ಕೊಡಲು ಆದೇಶಿಸಿ ತೀರ್ಪು ಪ್ರಕಟಿಸಿದ್ದಾರೆ. ಐದನೇ ಸಹಾಯಕ ಸರ್ಕಾರಿ ಅಭಿಯೋಜಕರಾದ ಛಾಯಾದೇವಿ ಪಾಟೀಲ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.
ಹೀಗಾಗಿ ಲೇಖನಗಳು News and photo Date: 24-05-2017
ಎಲ್ಲಾ ಲೇಖನಗಳು ಆಗಿದೆ News and photo Date: 24-05-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 24-05-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-24-05-2017.html
0 Response to "News and photo Date: 24-05-2017"
ಕಾಮೆಂಟ್ ಪೋಸ್ಟ್ ಮಾಡಿ