ಶೀರ್ಷಿಕೆ : ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು
ಲಿಂಕ್ : ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು
ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು
ಕೊಪ್ಪಳ, ಮೇ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ 22 ಗ್ರಾಮಗಳಲ್ಲಿನ ಪರಿಶಿಷ್ಟ ವರ್ಗದವರ ಕಾಲೋನಿಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ತಾತ್ವಿಕ ಮಂಜೂರಾತಿ ನೀಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದ್ದು, ಸಮುದಾಯ ಭವನ ಮಂಜೂರಾಗಿರುವ ಯಲಬುರ್ಗಾ ತಾಲೂಕಿನ ಗ್ರಾಮಗಳ ವಿವರ ಇಂತಿದೆ. ಶಿಡ್ಲಬಾವಿ, ಬೋದೂರು, ಚೌಡಾಪುರ, ಗುಂತಮಡವು, ಎನ್. ಜರಕುಂಟಿ, ಯಡ್ಡೋಣಿ, ಮುರಡಿ, ಬೀರಲದಿನ್ನಿ, ಮ್ಯಾದನೇರಿ, ಚಿಕ್ಕಬಿಡನಾಳ, ಮುರಡಿ, ಕೋನಸಾಗರ, ಜಿ. ಜರಕುಂಟಿ, ತಲ್ಲೂರು, ಕುಡಗುಂಟಿ, ಜೂಲಕಟ್ಟಿ, ಕರಮುಡಿ, ಹೊನ್ನುಣಸಿ, ಗಾಣಧಾಳ, ಮರಕಟ್, ತಾಳಕೇರಿ ಹಾಗೂ ಬುಡಗುಂಟಿ ಸೇರಿದಂತೆ ಒಟ್ಟು 22 ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ತಾತ್ವಿಕ ಮಂಜೂರಾತಿ ನೀಡಲಾಗಿದೆ. ಗ್ರಾಮ ಮಟ್ಟದಲ್ಲಿ 12.00 ಲಕ್ಷ ರೂ. ಹೋಬಳಿ ಮಟ್ಟದಲ್ಲಿ 50. ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು
ಎಲ್ಲಾ ಲೇಖನಗಳು ಆಗಿದೆ ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು ಲಿಂಕ್ ವಿಳಾಸ https://dekalungi.blogspot.com/2017/05/blog-post_656.html
0 Response to "ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು"
ಕಾಮೆಂಟ್ ಪೋಸ್ಟ್ ಮಾಡಿ