ಶೀರ್ಷಿಕೆ : NEWS AND PHOTO DATE: 22--05--2017
ಲಿಂಕ್ : NEWS AND PHOTO DATE: 22--05--2017
NEWS AND PHOTO DATE: 22--05--2017
ಬೆಣ್ಣೆತೋರಾ ಯೋಜನೆ ಆಧುನೀಕರಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಚಿವರ
**********************************************************************************
ಸೂಚನೆ
********
ಈ ನೀರಾವರಿ ಯೋಜನೆಯ ಬಲದಂಡೆ/ಎಡದಂಡೆ ಕಾಲುವೆಗಳಲ್ಲಿ ಬರುವ ಹೊಲಗಾಲುವೆಗಳನ್ನು ಹಂತ ಹಂತವಾಗಿ ನಿರ್ಮಿಸಲು ನೀರಾವರಿ ಯೋಜನೆಗಳ ವಲಯ ಕಾಡಾ ಆಡಳಿತಾಧಿಕಾರಿಗೆ ಸೂಚಿಸಿದರು. ಮೊದಲನೇ ಹಂತವಾಗಿ 5000 ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆಗಳ ಪುನರ್ ನಿರ್ಮಾಣ ಹಾಗೂ ಭೂಮಿ ಸಮತಟ್ಟು ಕಾಮಗಾರಿಯ ಪ್ರಸ್ತಾವನೆಯನ್ನು ತಯಾರಿಸಿ ಸಲ್ಲಿಸಲು ಸಚಿವರು ಸೂಚಿಸಿದರು. ಸಚಿವರು ಎಲ್ಲಾ ನೀರು ಬಳಕೆದಾರರ ಸಂಘದ ಅಧ್ಯಕ್ಷರನ್ನು ಉದ್ದೇಶಿಸಿ ಆಧುನೀಕರಣ ಕಾಮಗಾರಿಯ ಬಗ್ಗೆ ಚರ್ಚಿಸಿದರು ಮತ್ತು ಎಲ್ಲಾ ಅಚ್ಚುಕಟ್ಟು ರೈತರಿಗೆ ನೀರನ್ನು ಉಪಯೋಗಿಸುವಂತೆ ಕೋರಿದರು.
ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಹೊಲಗಾಲುವೆಗಳ ಪುನರ್ ನಿಮಾಣ ಮಾಡಲು ಸಚಿವರಿಗೆ ಮನವಿ ಮಾಡಿದರು. ಮುಖ್ಯ ಇಂಜಿನಿಯರ್ ಜಗನ್ನಾಥ ಹಲಿಂಗೆ ಬೆಣ್ಣೆತೋರಾ ಯೋಜನೆ ಬಲದಂಡೆ ಹಾಗೂ ಎಡದಂಡೆ ಕಾಲುವೆ ಪ್ರಗತಿ ಬಗ್ಗೆ ವಿವರಿಸಿದರು.
ಬೆಣ್ಣೆತೋರಾ ನೀರಾವರಿ ಯೋಜನೆಯಿಂದ 2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಬಲದಂಡೆ ಕಾಲುವೆಯಿಂದ 45 ಕಿ.ಮೀ. ವರೆಗೆ ಒಳಪಡುವ 9181.69 ಹೆಕ್ಟೇರ್ ಮತ್ತು ಎಡದಂಡೆ ಕಾಲುವೆಯಿಂದ 32 ಕಿ.ಮೀ.ವರೆಗೆ ಒಳಪಡುವ 2127 ಹೆಕ್ಟೇರ್ ನೀರಾವರಿ ಕ್ಷೇತ್ರಕ್ಕೆ ನೀರು ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು. ಡಿ.ಪಿ.ಆರ್. ವರದಿ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಬೆಳೆಯಬೇಕಾದ ಬೆಳೆಗಳ ವಿವರ ಇಂತಿದೆ. ತೊಗರಿ-2428 ಹೆಕ್ಟೇರ್, ದ್ವಿದಳ ಧಾನ್ಯ-6880 ಹೆಕ್ಟೇರ್, ಶೇಂಗಾ-1619 ಹೆಕ್ಟೇರ್, ಮೆಕ್ಕೆಜೋಳ-405 ಹೆಕ್ಟೇರ್ ಮತ್ತು ಜೋಳ-809 ಹೆಕ್ಟೇರ್.
ನೀರಾವರಿ ಯೋಜನೆಗಳ ವಲಯ ಕಾಡಾ ನಿರ್ದೇಶಕ ದಶರಥ ಬಾಬು ಒಂಟಿ, ಮಕ್ಬೂಲ್ ಪಟೇಲ್, ಮಾರುತಿ ರಾವ, ಮಸ್ತಾನ ಸಾಬ, ಬೆಣ್ಣೆತೋರಾ ಯೋಜನೆ ನೀರು ಬಳಕೆದಾರರ ಸಹಕಾರ ಸಂಘದ, ಮಹಾಮಂಡಳಿ ಅಧ್ಯಕ್ಷರು ಮತ್ತು ಎಲ್ಲ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತು ಅಧಿಕಾರಿ ವರ್ಗದವರು ಸಭೆಯಲ್ಲಿ ಹಾಜರಿದ್ದರು.
ಮೇ 25ರಂದು ಮಹಾನಗರ ಪಾಲಿಕೆ ವಿಶೇಷ ಬಜೆಟ್ ಸಾಮಾನ್ಯ ಸಭೆ
******************************************************************
ಕಲಬುರಗಿ,ಮೇ.22.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ವಿಶೇಷ ಬಜೆಟ್ ಸಾಮಾನ್ಯ ಸಭೆಯು ಮೇ 25ರಂದು ಬೆಳಗಿನ 11.30 ಗಂಟೆಗೆ ಮೇಯರ್ ಶರಣಕುಮಾರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿಯ ಇಂದಿರಾ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಜರುಗಲಿದೆ ಎಂದು ಮಹಾನಗರ ಪಾಲಿಕೆ ಸಭಾ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಈ ಸದರಿ ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ 2016-17ನೇ ಸಾಲಿನ ಪರಿಷ್ಕøತ ಮತ್ತು 2017-18ನೇ ಸಾಲಿನ ಅಂದಾಜು ಮುಂಗಡ ಪತ್ರ ಅನುಮೋದನೆ ಕುರಿತು ಚರ್ಚಿಸಲಾಗುವ್ಯದು. ಮಹಾನಗರ ಪಾಲಿಕೆಯ ಉಪ ಮಹಾಪೌರರು ಹಾಗೂ ಎಲ್ಲ ಸದಸ್ಯರು ಸದರಿ ಸಭೆಯಲ್ಲಿ ಉಪಸ್ಥಿತರಿರಬೇಕೆಂದು ಅವರು ತಿಳಿಸಿದ್ದಾರೆ.
ಕಾಲೇಜು ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
****************************************************
ಕಲಬುರಗಿ,ಮೇ.22.(ಕ.ವಾ.)-ಕಲಬುರಗಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಕಾಲೇಜು ವಸತಿ ನಿಲಯಗಳಲ್ಲಿ 2017-18ನೇ ಸಾಲಿನ ಪ್ರವೇಶಕ್ಕೆ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕಾಲೇಜು ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿ.ಯು.ಸಿ. ಪ್ರಥಮ ವರ್ಷದಿಂದ ಅಂತಿಮ ಪದವಿಯ ತರಗತಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅರ್ಹ ವಿದ್ಯಾರ್ಥಿಗಳು ಸಂಬಂಧಪಟ್ಟ ವಸತಿ ಶಾಲೆಗಳ ವಾರ್ಡನ್‍ಗಳಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ 2017ರ ಜೂನ್ 15ರೊಳಗಾಗಿ ಸಂಬಂಧಿಸಿದ ವಸತಿ ನಿಲಯದ ವಾರ್ಡನ್‍ರವರಿಗೆ ಸಲ್ಲಿಸಬೇಕು.
ವಸತಿ ನಿಲಯದಲ್ಲಿ ಈ ಹಿಂದೆ ದಾಖಲಾಗಿರುವ ನವೀಕರಣ ವಿದ್ಯಾರ್ಥಿಗಳು ಸಹ ಜೂನ್ 15ರೊಳಗಾಗಿ ಅರ್ಜಿ ಸಲ್ಲಿಸಿ ವಸತಿ ನಿಲಯಕ್ಕೆ ದಾಖಲಾಗಬೇಕು. ದಾಖಲಾತಿಯಾಗದೇ ಇದ್ದಲ್ಲಿ ನವೀಕರಣ ವಿದ್ಯಾರ್ಥಿಗಳ ಸ್ಥಳವನ್ನು ಖಾಲಿ ಎಂದು ತಿಳಿದು ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಬೀದಿನಾಟಕ ಕಲಾ ತಂಡಗಳಿಂದ ಅರ್ಜಿ ಆಹ್ವಾನ
************************************************
ಕಲಬುರಗಿ,ಮೇ.22.(ಕ.ವಾ.)-ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗುವ ಗ್ರಾಮ ಸಂಪರ್ಕ ಕಾರ್ಯಕ್ರಮಕ್ಕಾಗಿ ಕಲಬುರಗಿ ಜಿಲ್ಲೆಯ ಬೀದಿ ನಾಟಕ ಕಲಾ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರತಿಯೊಂದು ಬೀದಿ ನಾಟಕ ತಂಡದಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳಾ ಕಲಾವಿದರು ಸೇರಿದಂತೆ ಒಟ್ಟು ಹತ್ತು (10) ಜನ ಕಲಾವಿದರು ಕಲಬುರಗಿ ಜಿಲ್ಲೆಯವರಾಗಿರಬೇಕು. ಬೀದಿನಾಟಕ ಕಲಾ ತಂಡಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ಮತ್ತು ಪಾನ್‍ಕಾರ್ಡ ಹಾಗೂ ಹತ್ತು ಜನ ಕಲಾವಿದರ ಬ್ಯಾಂಕ್ ಖಾತೆ ಮತ್ತು ಪಾನ್‍ಕಾರ್ಡ ಹೊಂದಿರುವುದು ಕಡ್ಡಾಯವಾಗಿದೆ. ತಂಡವು ನೋಂದಾಯಿಸಿದ ನೋಂದಣಿ ಪ್ರತಿ ಮತ್ತು ಕಳೆದ ಮೂರು ವರ್ಷದ ಅಡಿಟ್ ಪ್ರತಿ ಹಾಗೂ 10 ಜನ ಸದಸ್ಯರನ್ನೊಳಗೊಂಡ 4x6 ಆಳತೆಯ 2 ಭಾವಚಿತ್ರ ಅರ್ಜಿಯೊಂದಿಗೆ ಲಗತ್ತಿಸುವುದು ಕಡ್ಡಾಯ. ಸರ್ಕಾರದ ವಿವಿಧ ಅಭಿವೃದ್ದಿ ಯೋಜನೆಗಳ ಹಾಗೂ ಕಾರ್ಯಕ್ರಮಗಳನ್ನು ಬೀದಿನಾಟಕ ಕಲಾ ತಂಡಗಳ ತಮ್ಮ ಕಲೆಯ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ವಿವಿಧ ಅಭಿವೃದ್ದಿ ಯೋಜನೆಗಳ ಕುರಿತು ಅರಿವು ಮುಟ್ಟಿಸಬೇಕಾಗುತ್ತದೆ. ಕಾರಣ ತಂಡಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ತಂಡಗಳಿಗೆ ಪ್ರಾಶಸ್ತ್ಯ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳ ಮುಖ್ಯಸ್ಥರು ಕಲಬುರಗಿ ವಾರ್ತಾ ಮತ್ತು ಸಂಪರ್ಕ ಇಲಾಖೆ ಉಪ ನಿರ್ದೇಶಕರ ಕಚೆÉೀರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, 2017ರ ಮೇ 25 ರೊಳಗಾಗಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಬೀದಿನಾಟಕ ಕಲಾ ತಂಡಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಯ ಝರಾಕ್ಸ್ ಪ್ರತಿ ಮತ್ತು ಪಾನ್‍ಕಾರ್ಡ ಝರಾಕ್ಸ್ ಪ್ರತಿ ಹಾಗೂ ಹತ್ತು ಜನ ಕಲಾವಿದರ ಬ್ಯಾಂಕ್ ಖಾತೆ ಝರಾಕ್ಸ್ ಪ್ರತಿ ಮತ್ತು ಪಾನ್‍ಕಾರ್ಡ ಝರಾಕ್ಸ್ ಪ್ರತಿ ಹಾಗೂ ಆಧಾರ ಕಾರ್ಡ ಝರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ತಂಡಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಸಮಿತಿಯ ಮುಂದೆ ಹಾಜರಾಗಿ ಕಾರ್ಯಕ್ರಮ ನೀಡಬೇಕಾಗುತ್ತದೆ. ಆಯ್ಕೆಗಾಗಿ ಬರುವ ಸಂದರ್ಭದಲ್ಲಿ ಕಲಾವಿದರು ತಮ್ಮ ಸ್ವಂತ ಖರ್ಚಿನಲ್ಲಿಯೇ ಬರಬೇಕು ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಕಾಸ ಭವನ ಆವರಣ, ಲೋಕಸಭಾ ಸದಸ್ಯರ ಕಚೇರಿ ಹತ್ತಿರ, ಕಲಬುರಗಿ–585102 ಕಛೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-223133ನ್ನು ಸಂಪರ್ಕಿಸಲು ಕೋರಲಾಗಿದೆ.
ಚಿತ್ತಾಪುರ: ಸಾರ್ವಜನಿಕರ ದೂರು ಸ್ವೀಕರಿಸಲು ಜನಹಿತ ಆ್ಯಪ್ ಬಿಡುಗಡೆ
**********************************************************************
ಕಲಬುರಗಿ,ಮೇ.22.(ಕ.ವಾ.)-ಚಿತ್ತಾಪುರ ಪಟ್ಟಣದ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ, ಕಸ ವಿಲೇವಾರಿ, ವಿದ್ಯುತ್ ದೀಪ, ಮತ್ತಿತರ ತಮ್ಮ ಕುಂದುಕೊರತೆಗಳ ಬಗ್ಗೆ ದೂರು ದಾಖಲಿಸಲು ಹಾಗೂ ಅವುಗಳ ಸ್ಥಿತಿಯನ್ನು ಸರಳವಾಗಿ ತಿಳಿದುಕೊಳ್ಳಲು ಸರ್ಕಾರವು “ಜನಹಿತ” ಎಂಬ ಮೊಬೈಲ್ ಆ್ಯಪ್‍ನ್ನು ಬಿಡುಗಡೆಗೊಳಿಸಿದೆ ಎಂದು ಚಿತ್ತಾಪುರ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಪೌರ ಸುಧಾರಣಾ ಕೋಶದ ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಅಭಿವೃದ್ಧಿಪಡಿಸಿ “ಜನಹಿತ” ಎಂಬ ಮೊಬೈಲ್ ಆ್ಯಪ್‍ನ್ನು ರೂಪಿಸಿದೆ. ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರಿನಲ್ಲಿ ಈ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ಅಥವಾ http://ift.tt/2rtgQx1 ಈ ಲಿಂಕ್ ಮೂಲಕ ಅ್ಯಪ್ ಡೌನ್‍ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಚಿತ್ತಾಪುರ ಪಟ್ಟಣದ ಸಾರ್ವಜನಿಕರು ಇದರ ಸದುಪಯೋಗಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಮೇ 23ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
************************************************
ಕಲಬುರಗಿ,ಮೇ.22.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಮಹಾವೀರ ಫೀಡರ್ ಮೇಲೆ ವ್ಯಾಪ್ತಿಯ ಮೋಹನ್ ಲಾಡ್ಜ್‍ದಿಂದ ಅಂಡರ್ ಬ್ರಿಜ್‍ವರೆಗಿನ ರಸ್ತೆ ಅಗಲೀಕರಣ ಕಾರ್ಯ ಹಾಗೂ ಕಂಬಗಳನ್ನು ಸ್ಥಳಾಂತರ ಕೈಗೊಳ್ಳುವ ಪ್ರಯುಕ್ತ ಕೈಗೊಳ್ಳುವ ಪ್ರಯುಕ್ತ ಮೇ 23ರಂದು ಮಂಗಳವಾರ ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ ಮಹಾವೀರ ನಗರ: ಮಹಾವೀರ ನಗರ, ಶಾಸ್ತ್ರಿನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶ ನಗರ. ಕೆ.ಇ.ಬಿ. ಸ್ಟೋರ್, ಕೆ.ಇ.ಬಿ. ಕ್ವಾರ್ಟರ್ಸ್, ಪಿ.ಡಬ್ಲ್ಯೂ.ಡಿ. ಕಚೆÉೀರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪÀರ್ ಲೆನ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಪ್ರವಾಸ
******************************************************
ಕಲಬುರಗಿ,ಮೇ.22.(ಕ.ವಾ.)-ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್.ಗಿರಿಮಲ್ಲಪ್ಪ ಅವರು ಕಲಬುರಗಿ ನಗರಕ್ಕೆ ಮೇ 23ರಂದು ಸಂಜೆ 6 ಗಂಟೆಗೆ ಆಗಮಿಸುವರು. ನಗರದ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಸಂಘ ಸಂಸ್ಥೆಗಳೊಂದಿಗೆ ಸಂವಾದ ನಡೆಸಿ, ನಿಗಮದ ಜಿಲ್ಲಾ ಕಚೇರಿಗೆ ಭೇಟಿ ಮಾಡುವರು ಹಾಗೂ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಮೇ 24ರಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿಯಿಂದ ಬೀದರಿಗೆ ಪ್ರಯಾಣ ಮಾಡುವರು.
ಆಸ್ಪತ್ರೆಗಳಿಗೆ ಜನನ-ಮರಣ ಪ್ರಮಾಣಪತ್ರÀ ನೋಂದಣಿ ಪಟ್ಟಿ ಸಲ್ಲಿಕೆ ಕಡ್ಡಾಯ
ಕಲಬುರಗಿ,ಮೇ.22.(ಕ.ವಾ.)-ಕಲಬುರಗಿ ನಗರದಲ್ಲಿನ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರು ತಮ್ಮಲ್ಲಿ ಲಭ್ಯವಿರುವ ಮಕ್ಕಳ ಜನನ ಮತ್ತು ಮರಣ ದಿನಾಂಕದ ಪಟ್ಟಿಯನ್ನು ಕೂಡಲೇ ಕಲಬುರಗಿ ಮಹಾನಗರ ಪಾಲಿಕೆಗೆÉ ಖುದ್ದಾಗಿ ಬಂದು ಸಲ್ಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನೋಂದಣಿ ಪಟ್ಟಿಯನ್ನು ಸಲ್ಲಿಸಲು ವಿಫಲರಾದ ಆಸ್ಪತ್ರೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುದೆಂದು ಎಂದು ಮಹಾನಗರ ಪಾಲಿಕೆಯ ಮೇಯರ್ ಶರಣಕುಮಾರ ಎಂ. ಮೋದಿ ಎಚ್ಚರಿಸಿದ್ದಾರೆ.
ನಗರದ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಆಸ್ಪತ್ರೆಗಳು ಕಲಬುರಗಿ ಮಹಾನಗರ ಪಾಲಿಕೆಗೆ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಕಳುಹಿಸದೇ ಇರುವುದರಿಂದ ಪಾಲಕರು/ಸಂಬಂಧಿಕರು ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ಪರದಾಡುತ್ತಿದ್ದಾರೆ.
ಇದಲ್ಲದೇ ಪಾಲಕರು/ಸಂಬಂಧಿಕರು ಪಿಂಚಣಿ, ಪಾಸ್‍ಪೋರ್ಟ್, ಮಕ್ಕಳ ಶಾಲಾ ಪ್ರವೇಶ ಹಾಗೂ ಬಡಮಕ್ಕಳಿಗೆ ಸರ್ಕಾರದಿಂದ ಸಿಗುವ ಭಾಗ್ಯಲಕ್ಷ್ಮೀಯಂತಹ ವಿವಿಧ ಯೋಜನೆಗಳ ಪ್ರಯೋಜನ ಪಡೆಯದೆ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರು ತಮ್ಮಲ್ಲಿ ಲಭ್ಯವಿರುವ ಮಕ್ಕಳ ಜನನ ಮತ್ತು ಮರಣ ದಿನಾಂಕದ ಪಟ್ಟಿಯನ್ನು ಕೂಡಲೇ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಗಾಗಿ ಅರ್ಜಿ ಆಹ್ವಾನ
*********************************************************************
ಕಲಬುರಗಿ,ಮೇ.22.(ಕ.ವಾ.)-ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿ 2017-18ನೇ ಸಾಲಿನಲ್ಲಿ ವಿವಿಧ ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದು ಗ್ರಾಮೀಣ ಪ್ರದೇಶದಲ್ಲಿ ಅತೀ ಸಣ್ಣ ಕೈಗಾರಿಕೆ ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶ ನಿರುದ್ಯೋಗಿ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಬ್ಯಾಂಕುಗಳಿಂದ ಕೈಗಾರಿಕಾ ಚಟುವಟಿಕೆಗಳಿಗೆ ಗರಿಷ್ಠ 25 ಲಕ್ಷ ರೂ. ಹಾಗೂ ಸೇವಾ ಚಟುವಟಿಕೆಗಳಿಗೆ ಗರಿಷ್ಠ 10 ಲಕ್ಷ ಮೊತ್ತದವರೆಗೆ ಸಾಲ ಪಡೆದು ಅತಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಇದಕ್ಕಾಗಿ ಕÀನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಠ ವಯೋಮಿತಿ 18 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ ಮಿತಿ ಇರುವುದಿಲ್ಲ.
ಸಾಲ ಪಡೆಯಲಿಚ್ಛಿಸುವ ಗ್ರಾಮೀಣ ಅಭ್ಯರ್ಥಿಗಳು www.pmegp.kar.nic.in, http://ift.tt/2iBvFbP ವೆಬ್‍ಸೈಟಿನಲ್ಲಿ ಆನ್‍ಲೈನ್ ಮೂಲಕ ಪಡೆದ ಮುದ್ರಿತ ಅರ್ಜಿಯ ಜೊತೆಗೆ ಪಾಸ್‍ಪೋರ್ಟ್ ಸೈಜ್ ಭಾವಚಿತ್ರ, ಯೋಜನಾ ವರದಿ, ಜನ್ಮ ದಿನಾಂಕ ದಾಖಲಾತಿ, ವಿದ್ಯಾರ್ಹತೆ ಪ್ರಮಾಣಪತ್ರ, ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ತರಬೇತಿ ಪಡೆದ ಪ್ರಮಾಣಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ, ಜಾತಿ, ಪ.ಜಾ./ಪ.ಪಂ./ಓ.ಬಿ.ಸಿ./ಅ.ಸಂ., ಅಂಗವಿಕಲರ ಮತ್ತು ಮಾಜಿ ಸೈನಿಕರ ಪ್ರಮಾಣಪತ್ರಗಳನ್ನು ಜೂನ್ 15ರೊಳಗಾಗಿ ಆನ್‍ಲೈನ್ ಮೂಲಕ ಅಪಲೊಡ್ ಮಾಡಬೇಕು. ಅದರ ಪ್ರತಿಯನ್ನು ಕಾಯ್ದಿರಿಸಿಕೊಳ್ಳಬೇಕು.
ಈ ಯೋಜನೆಯಲ್ಲಿ ಹೊಸದಾಗಿ ಸಾಲ ಮಂಜೂರಾತಿ ಪಡೆದು ಪ್ರಾರಂಭಿಸುವ ಹೊಸ ಘಟಕಗಳಿಗೆ ಮಾತ್ರ ಸಹಾಯಧನ ಲಭ್ಯವಿರುತ್ತದೆ. ವಿಸ್ತರಣೆ, ಆಧುನೀಕರಣ, ವೈವಿದ್ಧೀಕರಣ ಘಟಕಗಳಿಗೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ. ಪಿ.ಎಂ.ಇ.ಜಿ.ಪಿ., ಕೆ.ಎಸ್.ಇ.ಎಸ್. ಹಾಗೂ ಇತರೆ ಯೋಜನೆಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದಿದ್ದಲ್ಲಿ ಅರ್ಹತೆ ಇರುವುದಿಲ.್ಲ ಸದರಿ ಯೋಜನೆಯಡಿ ದಿನಾಂಕ: 01-10-2016ರಿಂದ ಈಗಾಗÀಲೇ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ಎಲ್-1 ಮತ್ತು ಎಲ್-2, ಇಂಡಸ್ಟ್ರೀಯಲ್ ಎಸ್ಟೇಟ್, ಜೇವರ್ಗಿ ಕ್ರಾಸ್ ಕಲಬುರಗಿ-585102 ಕಚೇರಿಯನ್ನು ಹಾಗೂ ದೂರವಾಣಿ ಸಂ. 08472-220275ನ್ನು ಸಂಪರ್ಕಿಸಲು ಕೋರಿದೆ.
ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
***********************************************
ಕಲಬುರಗಿ,ಮೇ.22.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ಕಲಬುರಗಿ ತಾಲೂಕಿನ ತಾಡತೇಗನೂರ ಗ್ರಾಮದ ಪ್ರತಿಷ್ಠಿತ ಶ್ರೀ ವಿವೇಕಾನಂದ ವಿದ್ಯಾಪೀಠ ಹಾಗೂ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಶ್ರೀ ಶಿವಾನಂದ ಶಿವಯೋಗಿ ಜನ ಕಲ್ಯಾಣ ಗ್ರಾಮೀಣ ಸಂಸ್ಥೆಯ ಶಾಲೆಗಳಲ್ಲಿ 6ನೇ ತರಗತಿಯ ಉಚಿತ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ.
ವಿದ್ಯಾರ್ಥಿಯು ಸರ್ಕಾರದ ಆದೇಶ ದಿನಾಂಕ: 01-02-1966ರನ್ವಯ ಅಲೆಮಾರಿ/ ಅರೆ ಅಲೆಮಾರಿ ಜಾತಿಗೆ ಸೇರಿದವರಾಗಿರಬೇಕು ಹಾಗೂ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ.ದೊಳಗಿರಬೇಕು. ಇಚ್ಛೆಯುಳ್ಳ ವಿದ್ಯಾರ್ಥಿಗಳು ಜೂನ್ 5ರೊಳಗಾಗಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಮತ್ತು 5ನೇ ತರಗತಿಯಲ್ಲಿ ಉತ್ತೀರ್ಣರಾದ ಅಂಕಪಟ್ಟಿಯನ್ನು ಲಗತ್ತಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ದೇವರಾಜ ಅರಸು ಭವನ ತಾರ್‍ಫೈಲ್ ಹಿಂದುಗಡೆ ಜಿ.ಡಿ.ಎ. ಲೇಔಟ್ ಕಲಬುರಗಿ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಜೂನ್ 6ರಂದು ವಾಹನಗಳ ಬಹಿರಂಗ ಹರಾಜು
**********************************************
ಕಲಬುರಗಿ,ಮೇ.22.(ಕ.ವಾ.)-ಕಲಬುರಗಿ ತಾಜ್‍ಸುಲ್ತಾನಪುರ ಕೆ.ಎಸ್.ಆರ್.ಪಿ. ಕಮಾಂಡೆಂಟ್ 6ನೇ ಪಡೆಯ ಕಲಬುರಗಿ ಘಟಕಕ್ಕೆ ಸೇರಿದ ವಿವಿಧ ಮಾದರಿಯ 18 ನಿರುಪಯುಕ್ತಗೊಳಿಸಿದ ವಾಹನಗಳನ್ನು 2017ರ ಜೂನ್ 6ರಂದು ಬೆಳಗಿನ 11.30 ಗಂಟೆಗೆ ಕೆ.ಎಸ್.ಆರ್.ಪಿ. 6ನೇ ಪಡೆಯ ತಾಜ್ ಸುಲ್ತಾನಪುರದ ಘಟಕದ ವಾಹನ ಸಾರಿಗೆ ವಿಭಾಗ ಕ್ಯಾಂಪ್ ಆವರಣದಲ್ಲಿ ಟೆಂಡರ್ ಕಂ ಬಹಿರಂಗ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಕೆ.ಎಸ್.ಆರ್.ಪಿ. ಕಮಾಂಡೆÉಂಟ್ ತಿಳಿಸಿದ್ದಾರೆ.
ಅನುಪಯುಕ್ತ ವಾಹನ ಖರೀದಿಗಾಗಿ ಟೆಂಡರ್ ಎಂದು ಲಕೋಟೆಯ ಮೇಲೆ ನಮೂದಿಸಿ ಸೀಲ್ಡ್ ಕವರ ಲಕೋಟೆಯನ್ನು ಕಮಾಂಡೆÉಂಟ್, 6ನೇ ಪಡೆ, ಕೆಎಸ್‍ಆರ್‍ಪಿ. ತಾಜ್ ಸುಲ್ತಾನಪುರ ಕಲಬುರಗಿ ಕಚೇರಿಗೆ ಜೂನ್ 5ರಂದು ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಮಾಂಡೆಂಟ್‍ರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಭೀಮಳ್ಳಿ ಆದರ್ಶ ವಿದ್ಯಾಲಯ:ಶೇ.94.64 ರಷ್ಟು ಫಲಿತಾಂಶ
ಕಲಬುರಗಿ,ಮೇ.22.(ಕ.ವಾ.)-ಕಲಬುರಗಿ ತಾಲೂಕಿನ ಭೀಮಳ್ಳಿ ಸರ್ಕಾರಿ ಆದರ್ಶ ವಿಶ್ವವಿದ್ಯಾಲಯವು 2016-17ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 94.64ರಷ್ಟು ಫಲಿತಾಂಶ ಪಡೆದಿದೆ. ಸದರಿ ವಸತಿ ಶಾಲೆಯ ಒಟ್ಟು 56 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 48 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 05 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಭೀಮಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಈ ಆದರ್ಶ ವಿದ್ಯಾಲಯದ ಮಕ್ಕಳ ಗಣನೀಯ ಸಾಧನೆಗಾಗಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಹಾಗೂ ಪಾಲಕ/ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಹೆಸರು, 625 ಅಂಕಗಳ ಪೈಕಿ ಒಟ್ಟು ಪಡೆದ ಅಂಕ ಹಾಗೂ ಶೇಕಡಾವಾರು ಫಲಿತಾಂಶ ವಿವರ ಇಂತಿದೆ. ಪ್ರೀತಮ ಶ್ರೀಹರಿ-582 ಅಂಕ ಮತ್ತು ಶೇ. 93.12 ರಷ್ಟು ಸಾಧನೆ ಮಾಡಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರ ಭೀಮಸಿಂಗ-564 ಅಂಕ ಪಡೆದು ಶೇ. 90.24 ರಷ್ಟು ಸಾಧನೆ ಮಾಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಕುಮಾರಿ ಐಶ್ವರ್ಯ ಮತ್ತು ಕುಮಾರಿ ಲಕ್ಷ್ಮೀ ತಲಾ ಒಟ್ಟು 560 ಅಂಕ ಪಡೆದು ಶೇ. 89.60ರಷ್ಟು ಸಾಧನೆಗೈದು ಶಾಲೆಗೆ ಮೂರನೇ ಸ್ಥಾನ ಗಳಿಸಿದ್ದಾರೆ.
ಹೀಗಾಗಿ ಲೇಖನಗಳು NEWS AND PHOTO DATE: 22--05--2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 22--05--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 22--05--2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-22-05-2017.html
0 Response to "NEWS AND PHOTO DATE: 22--05--2017"
ಕಾಮೆಂಟ್ ಪೋಸ್ಟ್ ಮಾಡಿ