news and photo Date: 18--5-2017

news and photo Date: 18--5-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo Date: 18--5-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo Date: 18--5-2017
ಲಿಂಕ್ : news and photo Date: 18--5-2017

ಓದಿ


news and photo Date: 18--5-2017

ಪ್ರವಾಸೋದ್ಯಮ ಸಚಿವರ ಪ್ರವಾಸ
*********************************
ಕಲಬುರಗಿ,ಮೇ.18.(ಕ.ವಾ.)-ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ರಾಜ್ಯ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವÀ ಪ್ರಿಯಾಂಕ ಖರ್ಗೆ ಅವರು ಬೆಂಗಳೂರಿನಿಂದ ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಮೇ 19ರಂದು ಬೆಳಗಿನ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಸಚಿವರು ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿಯಿಂದ ಚಿತ್ತಾಪುರಕ್ಕೆ ಪ್ರಯಾಣಿಸಿ, ಬೆಳಿಗ್ಗೆ 11 ಗಂಟೆಗೆ ಅಳ್ಳೊಳ್ಳಿಯ ಸರ್ಕಾರಿ ಆಸ್ಪತ್ರೆ ಹಾಗೂ ವಸತಿ ಗೃಹ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಚಿವರು ಚಿತ್ತಾಪುರದಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಮೇ 20ರಂದು ಬೆಳಿಗ್ಗೆ 8.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಯಾದಗಿರಿಗೆ ಪ್ರಯಾಣಿಸಿ, ಬೆಳಿಗ್ಗೆ 10 ಗಂಟೆಗೆ ಯಾದಗಿರಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 8 ಗಂಟೆಗೆ ಯಾದಗಿರಿಯಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ವಸತಿ ನಿಲಯದ ಬಾಡಿಗೆಗಾಗಿ ಅರ್ಜಿ ಆಹ್ವಾನ
********************************************
ಕಲಬುರಗಿ,ಮೇ.18.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಕಲಬುರಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ನಾಲ್ಕು ವಸತಿ ನಿಲಯಗಳ ಬಾಡಿಗೆ ಕಟ್ಟಡಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ನಗರದಲ್ಲಿ ಸ್ವಂತ ಮಾಲೀಕತ್ವ ಹೊಂದಿರುವ ಕಟ್ಟಡದ ಮಾಲೀಕರು 100 ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ 4 ವಸತಿ ನಿಲಯಗಳಿಗೆ ವಾಸಿಸಲು ಮೂಲಭೂತ ಸೌಲಭ್ಯಗಳಾದ ಬೋರವೇಲ್ ನೀರು ಮತ್ತು ವಿದ್ಯುತ್ ಸಂಪರ್ಕ, ತಲಾ 10 ಶೌಚಾಲಯಗಳು ಹಾಗೂ ಸ್ನಾನದ ಕೊಠಡಿಗಳು, ಸುಸಜ್ಜಿತ 25 ಕೊಠಡಿಗಳು, ಅಡುಗೆ ಮನೆ ದೊಡ್ಡ ಊಟದ ಕೋಣೆ ಹಾಗೂ ಕಂಪೌಂಡ್ ಹೊಂದಿರುವ ಕಟ್ಟಡದ ಅವಶ್ಯಕತೆ ಇರುತ್ತದೆ.
ಕಟ್ಟಡಕ್ಕೆ ಸಂಬಂಧಪಟ್ಟಂತೆ ಎಲ್ಲ ಮೂಲ ದಾಖಲಾತಿಗಳು ಹೊಂದಿರುವ ಕಟ್ಟಡಗಳ ಮಾಲೀಕರು ಬಾಡಿಗೆಯನ್ನು ಲೋಕೋಪಯೋಗಿ ಇಲಾಖೆಯಿಂದ ನಿಗದಿಪಡಿಸಿದ ಬಾಡಿಗೆ ಪಡೆಯಲು ಇಚ್ಛಿಸುವ ಮಾಲೀಕರು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಝಟ್‍ಪಟ್ ಬೀಬಿ ದರ್ಗಾ ಹಿಂದುಗಡೆ, ಸಂತ್ರಾಸವಾಡಿ ಕಲಬುರಗಿ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 9480843137ನ್ನು ಸಂಪರ್ಕಿಸಲು ಕೋರಲಾಗಿದೆ.
ವಸತಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಮೇ.18.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಕೆಳಕಂಡ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕ/ಬಾಲಕಿಯರ ವಸತಿ ನಿಲಯಗಳಲ್ಲಿ 2017-18ನೇ ಸಾಲಿನ ಪ್ರವೇಶಕ್ಕೆ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಕ್ಕೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಬಂಧಪಟ್ಟ ವಸತಿ ಶಾಲೆಗಳ ಮೇಲ್ವಿಚಾರಕರಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಮೇ 20 ರಿಂದ 31ರವರೆಗೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು 2017ರ ಜೂನ್ 5ರೊಳಗಾಗಿ ಸಂಬಂಧಿಸಿದ ವಸತಿ ನಿಲಯದ ಮೇಲ್ವಿಚಾರಕರಿಗೆ ಸಲ್ಲಿಸಬೇಕು.
ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಇಂತಿವೆ: ಬಾಲಕರ ಮೆಟ್ರಿಕ್ ಪೂರ್ವ ಸರ್ಕಾರಿ ವಸತಿ ನಿಲಯ ಸೇಡಂ, ಮಳಖೇಡ, ಕೋಲಕುಂದಾ, ಮುಧೋಳ, ಕೋಡ್ಲಾ, ಕುರಕುಂಟಾ, ರಂಜೋಳ. ಬಾಲಕಿಯರ ಸರ್ಕಾರಿ ವಸತಿ ನಿಲಯ ಸೇಡಂ ಮತ್ತು ಮಳಖೇಡ. ಹೆಚ್ಚಿನ ಮಾಹಿತಿಗಾಗಿ ಸೇಡಂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಮನವಿ
****************************************
ಕಲಬುರಗಿ,ಮೇ.18.(ಕ.ವಾ.)-ಕಲಬುರಗಿ ಜಿಲ್ಲೆಯ ಕಾಳನೂರ ಕ್ರಾಸ್ ಹತ್ತಿರದಲ್ಲಿ 2017ರ ಮೇ 13ರಂದು ಪತ್ತೆಯಾದ ಸುಮಾರು 15 ದಿನದ ಹೆಣ್ಣು ಮಗುವನ್ನು ಕಲಬುರಗಿ ಡಾನ್‍ಬಾಸ್ಕೋ ಸಂಸ್ಥೆಯವರು ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಸದರಿ ಮಗುವನ್ನು 2017ರ ಮೇ 16ರಂದು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ.
ಬಿಳಿಯ ಬಣ್ಣ ಹೊಂದಿರುವ ಈ ಹೆಣ್ಣು ಶಿಶುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶು ಗೃಹದ ಅಧೀಕ್ಷಕ ಶ್ರೀಕಾಂತ ಮೆಂಗಜಿ ತಿಳಿಸಿದ್ದಾರೆ.
ಮೇಲ್ಕಂಡ ಹೆಣ್ಣು ಶಿಶುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 60 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಹೆಣ್ಣು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂ.08472-265588 ನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ಶುಲ್ಕ ವಿನಾಯಿತಿಯ 16.36 ಕೋಟಿ ರೂ. ಹಣ ಜಮಾ
 ****************************************************
ಕಲಬುರಗಿ,ಮೇ.18.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2016-17ನೇ ಸಾಲಿನ ಶುಲ್ಕ ವಿನಾಯಿತಿ ಕಾರ್ಯಕ್ರಮದಡಿ ಸರ್ಕಾರದ ಆದೇಶದಂತೆ ಕಲಬುರಗಿ ಜಿಲ್ಲೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿರುವ 33693 ನವೀಕರಣ ಮತ್ತು ಹೆÀೂಸ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಯ 16.36 ಕೋಟಿ ರೂ.ಗಳನ್ನು ಕಾಲೇಜು ಪ್ರಾಂಶುಪಾಲರಿಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ.
ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ಇಲಾಖೆಯಿಂದ ನೀಡಿದ ಇ-ಫಾಸ್ ಯುಸರ್ ಐಡಿ ಮತ್ತು ಪಾಸ್‍ವರ್ಡ್‍ನ್ನು ಬಳಸಿ ತಮ್ಮ ಕಾಲೇಜಿಗೆ ಮಂಜೂರಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಡೌನ್‍ಲೋಡ್ ಮಾಡಿಕೊಂಡು ಕಾಲೇಜಿನ ಸೂಚನಾ ಫಲಕಕ್ಕೆ 3 ತಿಂಗಳುಗಳ ಕಾಲ ಪ್ರಕಟಿಸಿ ಶುಲ್ಕ ವಿನಾಯಿತಿ ಮಂಜೂರಾದ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಶುಲ್ಕವನ್ನು ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಬ್ಯಾಂಕ್ ಚೆಕ್/ನಿಪ್ಟ್, ಆರ್.ಟಿ.ಜಿ.ಎಸ್. ಮೂಲಕ ಶುಲ್ಕ ವಿನಾಯಿತಿ ಮೊತ್ತವನ್ನು ಹಿಂದಿರುಗಿಸಿ ವಿದ್ಯಾರ್ಥಿಗಳಿಂದ ಸ್ವೀಕೃತಿ ಪಡೆದ ಬಗ್ಗೆ ಬಟವಾಡೆ ತ:ಖ್ತೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ರೈಲ್ವೆ ಸ್ಟೇಶನ್ ಹಿಂದುಗಡೆ ತಾರಫೈಲ್ 8ನೇ ಕ್ರಾಸ್ ಡೆಂಕನಬಾವಿ ಹತ್ತಿರ ಡಿ.ದೇವರಾಜ ಅರಸು ಭವನ ಕಲಬುರಗಿ ಕಚೆÉೀರಿಗೆ ಸಲ್ಲಿಸಬೇಕು. ಇದಕ್ಕೆ ತಪ್ಪಿದಲ್ಲಿ ಕಾಲೇಜಿನ ವಿರುದ್ದ ಶಿಸ್ತು ಕ್ರಮ ಕೈಗೂಳ್ಳಲಾಗುವದೆಂದು ಅವರು ಎಚ್ಚರಿಸಿದ್ದಾರೆ.
ಚಿತ್ತಾಪುರ: ವಸತಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*********************************************************
ಕಲಬುರಗಿ,ಮೇ.18.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಚಿತ್ತಾಪುರ ತಾಲೂಕಿನಲ್ಲಿ ನಡೆಸಲಾಗುತ್ತಿರುವ ಕೆಳಕಂಡ ಸರ್ಕಾರಿ ಮೆಟ್ರಿಕ್ ನಂತರ/ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಸತಿ ನಿಲಯ ಮತ್ತು ಆಶ್ರಮ ವಸತಿ ಶಾಲೆ ನಿಲಯಗಳಿಗೆ 2017-18ನೇ ಸಾಲಿನಲ್ಲಿ ಖಾಲಿಯಿರುವ ಸ್ಥಾನಗಳ ಪ್ರವೇಶಕ್ಕಾಗಿ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಕ್ಕೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಸತಿ ನಿಲಯ ವಿವರ: ಮೆಟ್ರಿಕ್ ನಂತರ ಕಾಲೇಜು ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳು ಚಿತ್ತಾಪುರ, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಚಿತ್ತಾಪುರ, ನಾಲವಾರ, ರಾವೂರ, ವಾಡಿ(ಜಂ), ಶಹಾಬಾದ (ಹಳೆ), ಶಹಾಬಾದ (ನೂತನ), ದೇವನತೇಗನೂರ, ಗುಂಡಗುರ್ತಿ, ಪೇಠಶಿರೂರ, ಕೋರವಾರ, ಹೆಬ್ಬಾಳ, ಭೀಮನಳ್ಳಿ(ಎಸ್.ಟಿ), ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳಾದ ಚಿತ್ತಾಪುರ, ವಾಡಿ(ಜಂ) ಮತ್ತು ಭಂಕೂರ. ಆಶ್ರಮ ಶಾಲೆ ಭಂಕೂರು.
ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಆಯಾ ವಸತಿ ನಿಲಯಗಳ ಮೇಲ್ವಿಚಾರಕರಿಂದ ಅಥವಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು 2017ರ ಮೇ 30ರೊಳಗಾಗಿ ಸಂಬಂಧಿಸಿದ ನಿಲಯ ಮೇಲ್ವಿಚಾರಕರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಸೇರಿದಂತೆ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಚಿತ್ತಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 7204314724, ದೂರವಾಣಿ ಸಂಖ್ಯೆ 08474-236407ನ್ನು ಸಂಪರ್ಕಿಸಲು ಕೋರಿದೆ.
ವಿದ್ಯಾಸಿರಿ:5369 ವಿದ್ಯಾರ್ಥಿಗಳ ಖಾತೆಗೆ 4.31 ಕೋಟಿ ರೂ. ಹಣ ಜಮಾ
**********************************************************************
ಕಲಬುರಗಿ,ಮೇ.18.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2016-17ನೇ ಸಾಲಿನ “ವಿದ್ಯಾಸಿರಿ” ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ನಂತರ ಆಯ್ಕೆಯಾದ 5369 ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮುಖಾಂತರ 4.31 ಕೋಟಿ ರೂ. ಹಣವನ್ನು ಜಮಾ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿ ಹಣ ಜಮಾ ಆಗಿರುವ ಬಗ್ಗೆ ದೃಢೀಕರಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ.
 ಒಂದು ವೇಳೆ ತಮ್ಮ ಖಾತೆ ಹಣ ಜಮೆಯಾಗದಿದ್ದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ರೈಲ್ವೆ ಸ್ಟೇಶನ್ ಹಿಂದುಗಡೆ ತಾರಫೈಲ್ 8ನೇ ಕ್ರಾಸ್ ಡೆಂಕನಬಾವಿ ಹತ್ತಿರ, ಡಿ.ದೇವರಾಜ ಅರಸು ಭವನ ಕಲಬುರಗಿ ಕಚೆÉೀರಿಯನ್ನು ಸಂಪರ್ಕಿಸಬೇಕೆಂದು ಅವರು ಕೋರಿದ್ದಾರೆ.
ವಿವಿಧ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸಿಗಾಗಿ ಅರ್ಜಿ ಆಹ್ವಾನ.
********************************************************************
ಕಲಬುರಗಿ,ಮೇ.18.(ಕ.ವಾ.)-ಕಲಬುರಗಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕಲಬುರಗಿ ಕೇಂದ್ರದಲ್ಲಿ 2017-18ನೇ ಸಾಲಿನ ವಿವಿಧ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಡಿಪ್ಲೋಮಾ ಕೋರ್ಸುಗಳಲ್ಲಿ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ. ಹಾಗೂ ಐ.ಟಿ.ಐ. ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿ.ಟಿ.ಟಿ.ಸಿ. ಪ್ರಾಂಶುಪಾಲ ಮೋಹನ ರಾಠೋಡ ತಿಳಿಸಿದ್ದಾರೆ.
ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್-50, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ 30 ಹಾಗೂ ಕಾಂಪಿಟೆಸ್ಸಿ ಸರ್ಟಿಫಿಕೇಟ್ ಡಿಪ್ಲೋಮಾ ಟೂಲ್ ಮ್ಯಾನುಫ್ಯಾಕ್ಚರಿಂಗ್, ಕಂಪ್ಯೂಟರ್ ಇಂಟಿಗ್ರೇಟೆಡ್ ಮ್ಯಾನುಫ್ಯಾಕ್ಚರಿಂಗ್ ತರಬೇತಿಗಳಿಗಾಗಿ ತಲಾ 25 ವಿದ್ಯಾರ್ಥಿಗಳಿಗೆ ಸೀಟುಗಳು ಲಭ್ಯವಿರುತ್ತವೆ, ಈ ಕೋರ್ಸುಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಉದ್ಯೋಗವನ್ನು ದೊರಕಿಸಲಾಗುವುದು.
ಅರ್ಜಿಯನ್ನು ಸಲ್ಲಿಸಲು ಜೂನ್ 5 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದು. ಜೂನ್ 7ರಂದು ಬೆಳಿಗ್ಗೆ 10 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮೇರಿಟ್ ಆಂಡ್ ರೋಸ್ಟರ್ ಆಧಾರದ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಂತ್ರಾಸವಾಡಿ ಜಿ.ಟಿ.ಟಿ.ಸಿ. ಕೇಂದ್ರವನ್ನು ಹಾಗೂ ದೂರವಾಣಿ ಸಂಖ್ಯೆ 08472-238084, ಮೊಬೈಲ್ ಸಂಖ್ಯೆ 9449419143/ 9141630308/ 8453327166ಗಳನ್ನು ಸಂಪರ್ಕಿಸಲು ಕೋರಿದೆ.
ಕೌಶಲ್ಯಾಭಿವೃದ್ಧಿ ಯೋಜನೆ: ಹೆಸರು ನೋಂದಣಿಗೆ ಮೇ 22 ಕೊನೆಯ ದಿನ
**********************************************************************
ಕಲಬುರಗಿ,ಮೇ.18.(ಕ.ವಾ.)-ಕೌಶಲ್ಯಾಭಿವೃದ್ಧಿ ಸಂಯೋಜನೆಯಡಿ ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಕೋರ್ಸುಗಳಲ್ಲಿ ಆಸಕ್ತಿಯಿರುವ ಟ್ರೇಡ್‍ಗಳಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ತರಬೇತಿ ಪಡೆಯಲು ಆಸಕ್ತಿಯಿರುವ 18 ರಿಂದ 35ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರು ಮೇ 22ರವರೆಗೆ ಕೆಳಕಂಡ ನೋಂದಣಿ ಕೇಂದ್ರಗಳಲ್ಲಿ ಆಧಾರ ಕಾರ್ಡಿನೊಂದಿಗೆ ಬಂದು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಗ್ರೇಡ್-1 ತಹಶೀಲ್ದಾರ್ ಅಶೋಕ ಹಿರೋಳೆ ತಿಳಿಸಿದ್ದಾರೆ.
ಸದರಿ ತರಬೇತಿಯನ್ನು ಪಡೆಯುವುದರಿಂದ ದೇಶ ಮತ್ತು ವಿದೇಶಗಳಲ್ಲಿ ನೌಕರಿ ಪಡೆಯಲು ವಿಪುಲ ಅವಕಾಶಗಳಿವೆ. ನಿರುದ್ಯೋಗಿ ಯುವಕ/ಯುವತಿಯರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
ನೋಂದಣಿ ಕೇಂದ್ರಗಳ ವಿವರ ಇಂತಿದೆ. ತಹಶೀಲ್ದಾರ್ ಕಚೇರಿ ಕಲಬುರಗಿ. ಅಟಲ್ ಜೀ ಜನಸ್ನೇಹಿ ಕೇಂದ್ರ ಸರಸ್ವತಿ ಗೋದಾಮ ಹತ್ತಿರ ಕಲಬುರಗಿ. ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆ ಕಲಬುರಗಿ. ಉಪನಿರ್ದೇಶಕರ ಕಚೇರಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ರಾಷ್ಟ್ರಪತಿ ಚೌಕ್, ಬಸ್ ಡಿಪೋ ನಂ. 1 ಎದುರುಗಡೆ ಕಲಬುರಗಿ.
ರೆಡ್‍ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸಾ ತರಬೇತಿ
*************************************************
ಕಲಬುರಗಿ,ಮೇ.18.(ಕ.ವಾ.)-ಕಲಬುರಗಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸಾ ತರಬೇತಿಯನ್ನು 2017ರ ಮೇ 26 ಮತ್ತು 27ರಂದು ಕಲಬುರಗಿ ನಗರದಲ್ಲಿ ಏರ್ಪಡಿಸಲಾಗುತ್ತಿದೆ ಎಂದು ಕಲಬುರಗಿ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಶಾಬಾದಿ ತಿಳಿಸಿದ್ದಾರೆ.
ಈ ತರಬೇತಿಯಲ್ಲಿ ಬೆಂಗಳೂರಿನ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ನುರಿತ ತರಬೇತಿದಾರರಿಂದ ಶಿಬಿರವನ್ನು ನಡೆಸಲಾಗುತ್ತದೆ. ತರಬೇತಿಯಲ್ಲಿ ಭಾಗವಹಿಸಿದವರಿಗೆ ತರಬೇತಿ ಪಡೆದ ಬಗ್ಗೆ ದೆಹಲಿಯ ರೆಡ್‍ಕ್ರಾಸ್ ಸಂಸ್ಥೆ ಕೇಂದ್ರ ಕಚೇರಿಯಿಂದ ಪ್ರಮಾಣಪತ್ರ ನೀಡಲಾಗುವುದು. ಸದರಿ ಪ್ರಮಾಣಪತ್ರವು ಎಲ್ಲ ಸರ್ಕಾರಿ ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಹಾಯಕವಾಗಲಿದೆ.
 ಮಿನಿ ವಿಧಾನಸೌಧದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಜಿಲ್ಲಾ ರೆಡ್‍ಕ್ರಾಸ್ ಕಚೇರಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಮತ್ತು 300 ರೂ. ಶುಲ್ಕವನ್ನು ನೀಡಿ ಹೆಸರನ್ನು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-2255317 ಅಥವಾ ಮೊಬೈಲ್ ಸಂಖ್ಯೆ 9448204560, 9620646208, 9986064176ಗಳನ್ನು ಸಂಪರ್ಕಿಸಲು ಕೋರಿದೆ.
ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳಿಗೆ ಉಚಿತ ಸಮವಸ್ತ್ರ ವಿತರಣೆ
************************************************************
ಕಲಬುರಗಿ,ಮೇ.18.(ಕ.ವಾ.)-ಪ್ರವಾಸೋದ್ಯಮ ಇಲಾಖೆಯ 2013-14ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉಚಿತ ಸಮವಸ್ತ್ರಗಳನ್ನು ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ ಕಲಬುರಗಿ ನಗರದ ಮಯೂರ ಬಹಮನಿ ಯಾತ್ರಿ ನಿವಾಸದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳಿಗೆ ಜಿಲ್ಲಾ ಮಟ್ಟದ ವೆಬ್‍ಸೈಟ್‍ಗಳಲ್ಲಿ ಮಾಹಿತಿಯನ್ನು ಬಿತ್ತರಿಸುವ ಮೂಲಕ ಪ್ರವಾಸಿಗರಿಗೆ ಟ್ಯಾಕ್ಸಿ ಮಾಹಿತಿ ಪಡೆಯಲು ಹಾಗೂ ಟ್ಯಾಕ್ಸಿಯವರಿಗೆ ಪ್ರವಾಸಿಗರ ನೇರ ಭೇಟಿಗೆ ಒಂದು ವೇದಿಕೆ ನಿರ್ಮಿಸಿದಂತಾಗುತ್ತದೆ.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪದ್ಮಾಜಿ ಜಿ.ಎಸ್. ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳು ಬ್ಯಾಂಕ್ ಸಾಲದ ಮೊತ್ತವನ್ನು ಸಕಾಲದಲ್ಲಿ ಮರುಪಾವತಿಸಿ ಸರ್ಕಾರದ ಯೋಜನೆಯ ಲಾಭ ಪಡೆಯಬೇಕೆಂದರು.
ಆರ್.ಟಿ.ಓ.ಇನ್ಸ್‍ಪೆಕ್ಟರ್ ಪ್ರೇಮಾನಂದ ಸಜ್ಜನ್ ಅವರು ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳಿಗೆ ಸಂಚಾರಿ ನಿಯಮಗಳನ್ನು ಪಾಲಿಸುವ ಹಾಗೂ ಪ್ರವಾಸಿಗರೊಂದಿಗೆ ಟ್ಯಾಕ್ಸಿ ಚಾಲಕರ ವರ್ತನೆ ಕುರಿತು ವಿವರಿಸಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಶಿವರಾಜ ಆರ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವಾಸಿ ಅಧಿಕಾರಿ ಪ್ರಭುಲಿಂಗ ಎಸ್. ತಳಕೇರಿ ಸ್ವಾಗತಿಸಿದರು.
ಆಹಾರ ಪದಾರ್ಥಗಳಿಗಾಗಿ ನ್ಯೂಸ್ ಪೇಪರ್ ಬಳಕೆ ನಿಷೇಧ
********************************************************
ಕಲಬುರಗಿ,ಮೇ.18.(ಕ.ವಾ.)-ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಆಹಾರ ಸುರಕ್ಷತಾ ಆಯುಕ್ತರು ಈಗಾಗಲೇ ರಾಜ್ಯದಲ್ಲಿ ಆಹಾರ ಪದಾರ್ಥಗಳನ್ನು ನ್ಯೂಸ್ ಪೇಪರಲ್ಲಿ ಉಪಯೋಗಿಸುವುದು, ಸುಣ್ಣದ ಪ್ಯಾಕ್ ಮತ್ತು ಸುಣ್ಣದ ಟ್ಯೂಬ್ ಮಾರಾಟ ಮಾಡುವುದು ಹಾಗೂ ಮಶಿ ಅಳಿಸುವ ದ್ರವ ಮತ್ತು ಥಿನ್ನರ್, ಉಗುರು ಪಾಲೀಸ್ ರಾಜ್ಯದಾದ್ಯಂತ ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ. ಕಲಬುರಗಿ ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್.ಬಿರಾದಾರ ಸಹ ಜನಸಾಮಾನ್ಯರಿಗೆ ಮತ್ತು ಸಾರ್ವಜನಿಕರಿಗೆ ನ್ಯೂಸ್ ಪೇಪರಿನಲ್ಲಿ ಆಹಾರ ಪದಾರ್ಥ ತಿನ್ನಬಾರದೆಂದು ಹಾಗೂ ನ್ಯೂಸ್ ಪೇಪರಿನಲ್ಲಿ ಆಹಾರ ಪದಾರ್ಥ ಪ್ಯಾಕ್ ಮಾಡಬಾರದೆಂದು ಈಗಾಗಲೇ ಮಾಹಿತಿ ನೀಡಿದ್ದಾರೆ. ನ್ಯೂಸ್ ಪೇಪರಿನ ಮಷಿ ಮತ್ತು ಪೇಪರಿಗೆ ಅಂಟಿಕೊಂಡಿರುವ ವಿಷಕಾರಿ ಇಂಕು ಆಹಾರ ಪದಾರ್ಥಕ್ಕೆ ಅಂಟಿಕೊಂಡು ಅದರಲ್ಲಿರುವ ವಿಷವನ್ನು ತಿಂದರೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದೆಂದು ಮನ ಮುಟ್ಟುವಂತೆಯೂ ತಿಳಿಹೇಳಿದ್ದಾರೆ.
ಸುಣ್ಣದ ಪ್ಯಾಕೇಟ್ ಒಡೆದಾಗ ಕಣ್ಣಿನಲ್ಲಿ ಬೀಳುವ ಸಂಭವವಿದ್ದು, ಮಕ್ಕಳು ಮತ್ತು ಸುಣ್ಣವನ್ನು ಉಪಯೋಗಿಸುತ್ತಿರುವ ಜನಸಮಾನ್ಯರಿಗೆ ಸುಣ್ಣದ ಟ್ಯೂಬ್ ಮತ್ತು ಸುಣ್ಣದ ಪ್ಯಾಕೇಟ್ ಮಾರಾಟ ಮಾಡದಂತೆಯೂ ನಿಷೇಧಿಸಿದೆ. ಮಷಿ ಅಳಿಸುವ ದ್ರವ (iಟಿಞ eಡಿಚಿseಡಿ) ಮತ್ತು ಉಗುರು ಪಾಲೀಸ್ ರಿಮೂವರ್ (ಟಿಚಿiಟ ಠಿoಟish ಖemoveಡಿ) ಮುಂತಾದವನ್ನು ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರು ಬಳಸುವುದರಿಂದ ಮಕ್ಕಳ, ಮಹಿಳೆಯರ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷÀ್ಪರಿಣಾಮ ಬೀರುವ ಪ್ರಯುಕ್ತ ಇವುಗಳ ಬಳಕೆಯನ್ನು ಸಹ ನಿಷೇಧಿಸಲಾಗಿದೆ.
ಈ ಮೇಲಿನ ಅಂಶಗಳು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಿಷೇಧಿಸಿದ್ದು, ಜನಸಾಮಾನ್ಯರು ಈ ಅಂಶಗಳನ್ನು ಗಮನಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಮೇಲಿನ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂಕಿತ ಅಧಿಕಾರಿಗಳು ಆಹಾರ ಸುರಕ್ಷಾತಾ ಮತ್ತು ಗುಣಮಟ್ಟ ಪ್ರಾಧಿಕಾರ, ಹಳೆ ಎಸ್.ಪಿ. ಕಚೇರಿ ಹಿಂಭಾಗ ಕಲಬುರಗಿ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.
ಸೇಡಂದಲ್ಲಿ ಬೇಸಿಗೆ ಶಿಬಿರ ಪ್ರಾರಂಭ
***********************************
ಕಲಬುರಗಿ,ಮೇ.18.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 6-14 ವರ್ಷದ ಮಕ್ಕಳಿಗಾಗಿ ಹಮ್ಮಿಕೊಳ್ಳಲಾದ ಬೇಸಿಗೆ ಶಿಬಿರ ಪ್ರಾರಂಭವಾಗಿದೆ. ಮೇ 25ರವರೆಗೆ ಸೇಡಂ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಈಗಾಗಲೇ 50 ಮಕ್ಕಳು ಭಾಗವಹಿಸಿದ್ದು, ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ, ಕಸದಿಂದ ರಸ, ಸಮೂಹ ಸಂಗೀತ ಮತ್ತು ನೃತ್ಯ, ಯೋಗ, ಕರಾಟೆ ಮುಂತಾದವುಗಳನ್ನು ಕಲಿಸಲಾಗುತ್ತಿದೆ. ಶಿಬಿರದಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಪಾಲ್ಗೊಳ್ಳಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ರಾಜನ್ ಕೋರಿದ್ದಾರೆ.
ಮೇ 19ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ,ಮೇ.18.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಗಣೇಶನಗರ ಫೀಡರ್ ಮೇಲೆ ವ್ಯಾಪ್ತಿಯ ರಸ್ತೆ ಅಗಲೀಕರಣ ಕಾರ್ಯ ಹಾಗೂ ಕಂಬಗಳನ್ನು ಸ್ಥಳಾಂತರ ಕೈಗೊಳ್ಳುವ ಪ್ರಯುಕ್ತ ಮೇ 19ರಂದು ಬೆಳಗಿನ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ 11 ಕೆ.ವಿ. ಸಿದ್ದೇಶ್ವರ, 11ಕೆ.ವಿ. ಜಯನಗರ, 11ಕೆ.ವಿ. ಶರಣ ನಗರ, 11 ಕೆ.ವಿ. ಜಿ.ಜಿ.ಹೆಚ್. ಮತ್ತು 11 ಕೆ.ವಿ. ಯೂನಿವರ್ಸಿಟಿ ಫೀಡರುಗಳ ವ್ಯಾಪ್ತಿಯ 110/11 ಕೆ.ವಿ. ಯೂನಿವರ್ಸಿಟಿ ವಿದ್ಯುತ್ ಉಪ ಕೆಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಅದೇ ದಿನದಂದು ಬೆಳಗಿನ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ ಗಣೇಶ ನಗರ: ಎಂ.ಬಿ.ನಗರ, ಬಾಕರ್ ಪಂಕ್ಷನ್ ಹಾಲ್, ಆದರ್ಶ ನಗರ ಮತ್ತು ಬಂದೇನವಾಜ್ ಕಾಲೋನಿ, ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಮನಸೂಬ್‍ದಾರ ಲೇಔಟ್, ಆದರ್ಶ ನಗರ ನ್ಯೂ ಜಿ.ಡಿ.ಎ. ಮೇಹತಾ ಲೇಔಟ್ ಮತ್ತು ವೀರೆಂದ್ರ ಪಾಟೀಲ್ ಬಡವಾಣೆ.
11ಕೆ.ವಿ. ಸಿದ್ದೇಶ್ವರ: ಸಿದ್ದೇಶ್ವರ ಕಾಲೋನಿ, ಓಂ ನಗರ, ಸ್ವಸ್ತಿಕ ನಗರ, ಕೆ.ಹೆಚ್.ಬಿ. ಕಾಂಪ್ಲೆಕ್ಸ್, ಪ್ರಗತಿ ಕಾಲೋನಿ, ಗುಬ್ಬಿ ಕಾಲೋನಿ, ಕಾರ್ಮಿಕರ ಬಡಾವಣೆ, ಎಂ.ಜಿ. ರೋಡ್, ಜಿ.ಡಿ.ಎ. ಸಂತ್ರಾಸವಾಡಿ, ಲೂಕಮನ್ ಕಾಲೇಜ್, ಬಡೆಪುರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು
11ಕೆ.ವಿ. ಜಯನಗರ: ಆರಿಹಂತ್ ನಗರ ಜಯನಗರ, ಓಕಳಿ ಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಸರಕಾರಿ ಸೂರ್ಯನಗರ, ತಿಲಕನಗರ್, ತೇಲಕರ ಲೇಔಟ್, ಪೂಜಾ ಕಾಲೋನಿ, ಜಿ.ಡಿ.ಎ.ಲೇ ಔಟ್, ವಿಶ್ವೇಶ್ವರಯ್ಯ ಕಾಲೋನಿ, ಆಂಜನೇಯ ನಗರ, ಕೆ.ಜಿ.ಬಿ. ಬ್ಯಾಂಕ್, ಪ್ರಶಾಂತ ನಗರ(ಎ), ಮತ್ತು ಡೆಂಟಲ್ ಕಾಲೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಶರಣ ನಗರ: ಇ.ಎಸ್.ಐ. ಆಸ್ಪತ್ರೆ, ಇನ್ಕಂ ಟ್ಯಾಕ್ಸ್ ಕಚೇರಿ, ಆರ್.ಟಿ.ಓ. ಆಫೀಸ್, ವಿದ್ಯಾನಗರ , ಗುಬ್ಬಿ ಕಾಲೋನಿ, ಸುಂದರ ನಗರ, ಬಾಪು ನಗರ, ಬಾಬಾ ಹೌಸ್, ಬಿಗ್ ಬಜಾರ, ಭೀಮ ನಗರ ಜಗತ್ತ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11ಕೆ.ವಿ. ಜಿ.ಜಿ.ಹೆಚ್: ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಯೂನಿವರ್ಸಿಟಿ: ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.










ಹೀಗಾಗಿ ಲೇಖನಗಳು news and photo Date: 18--5-2017

ಎಲ್ಲಾ ಲೇಖನಗಳು ಆಗಿದೆ news and photo Date: 18--5-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 18--5-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-18-5-2017.html

Subscribe to receive free email updates:

0 Response to "news and photo Date: 18--5-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ