2nd Round news and photos Date: 18--05--2017

2nd Round news and photos Date: 18--05--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು 2nd Round news and photos Date: 18--05--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : 2nd Round news and photos Date: 18--05--2017
ಲಿಂಕ್ : 2nd Round news and photos Date: 18--05--2017

ಓದಿ


2nd Round news and photos Date: 18--05--2017

ಖಾತರಿ ಯೋಜನೆಯ ಎಲ್ಲ ಕುಟುಂಬಗಳಿಗೆ 100 ದಿನ ಕೆಲಸ ಕೊಡಿ




ಕಲಬುರಗಿ,ಮೇ.18.(ಕ.ವಾ.)-ಚಿಂಚೋಳಿ ತಾಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಎಲ್ಲ ಕುಟುಂಬಗಳಿಗೆ ಕಡ್ಡಾಯವಾಗಿ 100 ದಿನಗಳ ಕೆಲಸ ಕೊಡಬೇಕೆಂದು ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ತಿಳಿಸಿದರು.
ಅವರು ಗುರುವಾರ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಪಂಚಾಯಿತಿಯ ಸೇವಾನಾಯಕ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಾಗೃತಿ ಮತ್ತು ರೋಜಗಾರ ದಿವಸ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲರ ಜಾಬ್ ಕಾರ್ಡ್‍ಗಳನ್ನು ತಯಾರಿಸಿ, 100 ದಿನಗಳ ಕೂಲಿ ಕೆಲಸ ಸಿಗುವಂತೆ ಯೋಜನೆ ರೂಪಿಸಬೇಕು ಮತ್ತು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಕೆಲಸ ಪ್ರಾರಂಭಿಸಬೇಕು. ಎಲ್ಲರೂ 100 ದಿನಗಳ ಕೆಲಸ ಮಾಡಬೇಕು. ಇದರ ಕೂಲಿ ಎಲ್ಲಿಯೂ ಹೋಗುವುದಿಲ್ಲ. ಯಾರಾದರೂ ಜಾಬ್ ಕಾರ್ಡಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.  
ಚಿಂಚೋಳಿ ತಾಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಗೊಂಡಾಗಿನಿಂದ ಕೆಲಸ ಹುಡುಕುತ್ತ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ತಪ್ಪಿದೆ. ಈ ಯೋಜನೆಯಡಿ ಹೆಚ್ಚು ಹೆಚ್ಚಾಗಿ ಜಲ ಸಂವರ್ಧನೆ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಕಳೆದ ವರ್ಷ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಿಸಬಹುದಾಗಿತ್ತು. ಉದ್ಯೋಗ ಖಾತರಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಗಾಗಿ ಗುತ್ತಿಗೆ ಆಧಾರದ ಮೇಲೆ ಒಬ್ಬ ಸಿಬ್ಬಂದಿ ನೇಮಿಸುವಂತೆ ಹೆಚ್.ಕೆ.ಆರ್.ಡಿ.ಬಿ.ಗೆ ಮನವಿ ಸಲ್ಲಿಸುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಚಿಂಚೋಳಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ 28000 ಮಾನವ ದಿನಗಳ ಸೃಷ್ಟಿ ಮಾಡಲಾಗಿದೆ. ಸಾರ್ವಜನಿಕರು ಉದ್ಯೋಗ ಖಾತರಿ ಯೋಜನೆ ಮತ್ತು ಉದ್ದೇಶವನ್ನು ತಿಳಿದುಕೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕು. ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಹೆಚ್ಚಿನ ಮುತುವರ್ಜಿವಹಿಸಿ ಸರ್ಕಾರ ರೂಪಿಸಿರುವ ಯೋಜನೆಗಳ ಪ್ರಯೋಜನ ಸಾರ್ವಜನಿಕರಿಗೆ ಲಭಿಸುವಂತೆ ನೋಡಿಕೊಳ್ಳಬೇಕೆಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ಅಧಿಕೃತ ಕೂಲಿಕಾರರ ಕೂಲಿಯನ್ನು ಸರಾಗವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ಅವರ ಆಧಾರ ಕಾರ್ಡನ್ನು ಆಂದೋಲನದ ರೂಪದಲ್ಲಿ ಬ್ಯಾಂಕ್ ಖಾತೆಗೆ ಹೊಂದಾಣಿಕೆ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಒಂದು ವಾರದಲ್ಲಿ ಕೂಲಿ ಹಣ ಬ್ಯಾಂಕ್ ಖಾತೆಗೆ ಪಾವತಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಂದ ನೀಡುವ ಜಾಬ್ ಕಾರ್ಡನ್ನು ಬೇರೆಯವರಿಗೆ ನೀಡಬಾರದು. ಯಾರಾದರೂ ಜಾಬ್ ಕಾರ್ಡಗಳನ್ನು ಇಟ್ಟುಕೊಂಡಿದ್ದರೆ ಅಂಥವರ ಹೆಸರನ್ನು ತಾಲೂಕು ಅಥವಾ ಜಿಲ್ಲಾ ಪಂಚಾಯಿತಿಗೆ ತಿಳಿಸಬೇಕೆಂದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಸಂಘಟನೆಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಸುಮಾರು 7000ಕ್ಕಿಂತ ಹೆಚ್ಚು ಫಾರ್ಮ ನಂ. 6 ಮತ್ತು 1ನ್ನು ಭರ್ತಿ ಮಾಡಿ ಗ್ರಾಮ ಪಂಚಾಯಿತಿಗಳಿಗೆ ನೀಡಿ  ಜಾಬ್  ಕಾರ್ಡ  ಕೊಡಿಸಲಾಗಿದೆ. ಗ್ರಾಮ  ಪಂಚಾಯಿತಿಗಳಲ್ಲಿ  ಸಿಬ್ಬಂದಿಗಳ  ಕೊರತೆಯಿರುವುದರಿಂದ  ಎನ್.ಎಂ.ಆರ್.



ತಯಾರಿಸಲು ವಿಳಂಬವಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಗಾಗಿಯೇ ಒಬ್ಬ ಸಿಬ್ಬಂದಿಯನ್ನು ನೇಮಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಎನ್.ಎಂ.ಆರ್. ತೆಗೆದ ನಂತರ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಪ್ರಾರಂಭಿಸುವುದಕ್ಕಿಂತ ಮುಂಚೆ ಎನ್.ಎಂ.ಆರ್. ನಲ್ಲಿರುವ ಕೂಲಿಕಾರರ ಹೆಸರನ್ನು ತಿಳಿಸಿ ಅವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಕಾಯಕ ಬಂಧುಗಳಿಗೆ ತರಬೇತಿ ನೀಡಬೇಕು. ಪ್ರತಿ ಹಳ್ಳಿಗೆ ಒಬ್ಬ ಕ್ಷೇತ್ರ ಸಹಾಯಕರನ್ನು ನೇಮಿಸಬೇಕೆಂದು ಕೋರಿದರು.
ಚಿತ್ರನಟ ಚೇತನ ಮಾತನಾಡಿ, ಇಂದು ಜಲಾನಯನ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ. ಮಳೆ ನೀರನ್ನು ಶೇಖರಿಸಿಡಲು ಚೆಕ್ ಡ್ಯಾಂ, ಕೆರೆ, ಟ್ರೇಂಚೆಸ್, ಅರಣ್ಯೀಕರಣ ಕಾಮಗಾರಿಗಳನ್ನು ಕೈಗೊಳ್ಳಬೇಕು. ಯುವಕರು ಎಲ್ಲ ರಂಗಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು. ಹಿರಿಯರು ಇದಕ್ಕೆ ಮಾರ್ಗದರ್ಶನ ನೀಡಬೇಕೆಂದರು.
ಜಿಲ್ಲಾ ಪಂಚಾಯಿತಿ, ಚಿಂಚೋಳಿ ತಾಲೂಕು ಪಂಚಾಯಿತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕಲಬುರಗಿ ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಚಿಂಚೋಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನೀಲಕುಮಾರ ರಾಠೋಡ, ತಹಶೀಲ್ದಾರ ಡಿ. ದಯಾನಂದ ಪಾಟೀಲ, ಶಾದಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ತುಳಜಪ್ಪ, ನ್ಯಾಯವಾದಿ  ಆನಂತನಾಯಕ, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಂದಮ್ಮ ಗೋಳಾ, ಸೌಭಾಗ್ಯಮ್ಮ, ನಂದಾದೇವಿ ಮುಂಗೋಡಿ, ನಿಂಗಪ್ಪ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆಯ್ದ ಕೂಲಿಕಾರರಿಗೆ ಜಾಬ್ ಕಾರ್ಡ್ ವಿತರಿಸಲಾಯಿತು. ಶಾದಿಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಸ್ವಾಗತಿಸಿದರು. ಡಾ. ಮೀನಾಕ್ಷಿ ಬಾಳಿ ಕಾರ್ಯಕ್ರಮ ನಿರೂಪಿಸಿದರು. ಭೀಮಾಶಂಕರ ವಂದಿಸಿದರು. ಇದಕ್ಕೂ ಮುನ್ನ  ಶಾದಿಪುರ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಹೆಪ್ಸಿಬಾರಾಣಿ ಅವರು ಕೂಲಿಕಾರರೊಂದಿಗೆ ಸಮಾಲೋಚನೆ ನಡೆಸಿದರು.
ಬೇಸಿಗೆಯಲ್ಲಿ ಈ ಹಿಂದೆ ಜನರು ಕೆಲಸಕ್ಕಾಗಿ ನೆರೆ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದರು. ಚಿಂಚೋಳಿಯಲ್ಲಿ ಉದ್ಯೋಗ ಖಾತರಿ ಕೆಲಸ ಪ್ರಾರಂಭಿಸಿದ್ದರಿಂದ ಈ ವರ್ಷ ಎಲ್ಲರೂ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಬೇರೆ ಕಡೆಗೆ ಕೆಲಸ ಹುಡುಕಿಕೊಂಡು ಹೋದವರು ಮರಳಿ ಬಂದಿದ್ದಾರೆ. ಶಾದಿಪುರ ಕೆರೆ ಹೂಳೆತ್ತುವ ಕಾರ್ಯ 20 ದಿನದಿಂದ ನಡೆಯುತ್ತಿದ್ದು, ಈವರೆಗೆ ಕೂಲಿ ಹಣ ಪಾವತಿಯಾಗಿಲ್ಲ. ವಾರಕ್ಕೊಂದು ಬಾರಿ ಕೂಲಿ ಹಣ ಪಾವತಿಯಾದಲ್ಲಿ ಮನೆಗೆ ತರಕಾರಿ, ದÀವಸಧಾನ್ಯ, ಆಹಾರಧಾನ್ಯ ಕೊಂಡುಕೊಳ್ಳಲು ಹಾಗೂ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಲು ಅನುಕೂಲವಾಗುವುದು ಎಂದು ಚಿಂದಾನೂರ ತಾಂಡಾದ ಪಾರ್ವತಿ ಶಂಕರ ಪವಾರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.



ಹೀಗಾಗಿ ಲೇಖನಗಳು 2nd Round news and photos Date: 18--05--2017

ಎಲ್ಲಾ ಲೇಖನಗಳು ಆಗಿದೆ 2nd Round news and photos Date: 18--05--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ 2nd Round news and photos Date: 18--05--2017 ಲಿಂಕ್ ವಿಳಾಸ https://dekalungi.blogspot.com/2017/05/2nd-round-news-and-photos-date-18-05.html

Subscribe to receive free email updates:

0 Response to "2nd Round news and photos Date: 18--05--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ