ಶೀರ್ಷಿಕೆ : news and photo 10-5-2017
ಲಿಂಕ್ : news and photo 10-5-2017
news and photo 10-5-2017
ಶ್ರೀಶೈಲದಲ್ಲಿ 1.5 ಕೋಟಿ ರೂ.ಗಳಲ್ಲಿ ಯಾತ್ರಿ ನಿವಾಸ
ಕಲಬುರಗಿ,ಮೇ.10.(ಕ.ವಾ.)-ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲದ ಮಲ್ಲಿಕಾರ್ಜುನ ದರ್ಶನಕ್ಕೆ ರಾಜ್ಯದಿಂದ ಅನೇಕ ಭಕ್ತರು ತೆರಳುವರು. ಅವರಿಗೆ ಅನುಕೂಲ ಕಲ್ಪಿಸಲು ಶ್ರೀಶೈಲದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಿದ ಮಹಾಸಾಧ್ವಿ ಶಿರಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವÀನ್ನು ಉದ್ಘಾಟಿಸಿ ಮಾತನಾಡಿ, ಯಾತ್ರಿ ನಿವಾಸ ನಿರ್ಮಿಸಲು ಪ್ರವಾಸೋದ್ಯಮ ಸಚಿವರಾದ ಪ್ರಿಯಾಂಕ ಖರ್ಗೆ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಸಮ್ಮತಿಯನ್ನು ಸೂಚಿಸಿರುವುದಾಗಿ ತಿಳಿಸಿದರು.
12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ವಚನಗಳನ್ನು ರೂಪಿಸಲಾಯಿತು. ಅಕ್ಕಮಹಾದೇವಿಯಂತಹ ಹಲವಾರು ಮಹಿಳೆಯರು ವಚನ ಕ್ರಾಂತಿಗೆ ನೀಡಿರುವ ಕೊಡುಗೆ ಅನುಕರಣೀಯವಾಗಿದೆ. 14ನೇ ಶತಮಾನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವಚನ ಕ್ರಾಂತಿ ಮಾಡದಿದ್ದರೂ ಅವರ ಜೀವನವೇ ಮನುಕೂಲಕ್ಕೆ ಒಂದು ಸಂದೇಶವಾಗಿದೆ. ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶ ಜೀವನದ ಮಾರ್ಗಗಳನ್ನು ಎಲ್ಲ ಸಮಾಜ ಅನುಕರಣೆ ಮಾಡಬೇಕು. ರೆಡ್ಡಿ ಸಮಾಜವು ಆಂಧ್ರ ಮತ್ತು ಕರ್ನಾಟಕದಲ್ಲಿ ಪ್ರಭಾವ ಶಾಲಿಯಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಬಲಿಷ್ಠರು ಮತ್ತು ಬಡವರು ಇದ್ದಾರೆ. ಬಡವರಿಗೆ ನೆರವಾಗಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.
ಕಲಬುರಗಿ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಈಶ್ವರಯ್ಯ ಮಠ ವಿಶೇಷ ಉಪನ್ಯಾಸ ನೀಡಿ, ದಕ್ಷಿಣ ಭಾರತದಲ್ಲಿ ಮಗಳಿದ್ದರಿರಬೇಕು ಹೇಮರೆಡ್ಡಿ ಮಲ್ಲಮ್ಮನಂಗ, ಸೊಸೆಯಿದ್ದರಿರಬೇಕು ಹೇಮರೆಡ್ಡಿ ಮಲ್ಲಮ್ಮನಂಗ ಹಾಗೂ ಹೆಂಡತಿಯಿದ್ದರಿರಬೇಕು ಹೇಮರೆಡ್ಡಿ ಮಲ್ಲಮ್ಮನಂಗ ಎಂಬ ಜಾನಪದ ನಾಣ್ನುಡಿಯಂತೆ ಎಲ್ಲ ಜಾತಿ, ಮತ, ಪಂಥಗಳ ಜನರು ಬಯಸುತ್ತಾರೆ. ಅಂದರೆ ಹೇಮರೆಡ್ಡಿ ಮಲ್ಲಮ್ಮನ ಜೀವನದ ಆದರ್ಶಗಳು ಆಗಾಧವಾಗಿ ಸಮಾಜದ ಮೇಲೆ ಪರಿಣಾಮ ಬೀರಿವೆ. ಅಂದು-ಇಂದು ಮಾನವ ಜನಾಂಗಕ್ಕೆ ತನ್ನ ಬದುಕನ್ನೆ ಸಂದೇಶವನ್ನಾಗಿಸಿದ್ದಾರೆ ಎಂದರು.
ಗಂಡನಿಗೆ ಮೋಕ್ಷ, ವಿವೇಕ ನೀಡಿದ ಧೀಮಂತ ಮಹಿಳೆ ಮಲ್ಲಮ್ಮಳಾಗಿದ್ದು, ಮೈದುನನ್ನು ಕೆಟ್ಟ ಸಂಸ್ಕಾರದಿಂದ ಹೊರ ತಂದು ಮಹಾ ಕವಿಯಾಗಿ ಪರಿವರ್ತಿಸಿದ್ದಳು. ಅತ್ತೆ, ನೆಗಣ್ಣಿಯರು ಎಷ್ಟೇ ಕಷ್ಟಗಳನ್ನು ನೀಡಿದರೂ ಅವರಿಗೆ ಕೇಡನ್ನು ಬಯಸದೇ ಕುಟುಂಬ, ಸಮಾಜವನ್ನು ಸನ್ಮಾರ್ಗದ ಕಡೆ ಪರಿವರ್ತಿಸುವಲ್ಲಿ ಹೇಮರೆಡ್ಡಿ ಮಲ್ಲಮ್ಮ ಯಶಸ್ವಿಯಾದಳು. ಸಂಸಾರದಲ್ಲಿದ್ದುಕೊಂಡು ದೇವರನ್ನು ವರಿಸಿದ ಮಹಾಸಾಧ್ವಿಯಾಗಿದ್ದಾರೆ.
ದೇಶದಲ್ಲಿ ಒಕ್ಕಲುತನ ನಶಿಸಿ ಹೋಗುತ್ತಿದೆ. ಕೃಷಿ ಸಂಸ್ಕøತಿ ಬೆಳೆಸಿಕೊಂಡು ಬಂದಿರುವ ರೆಡ್ಡಿ ಸಮಾಜ ಒಕ್ಕಲುತನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಲಾಭದಾಯಕವನ್ನಾಗಿಸಬೇಕು. ಒಳ್ಳೆಯ ಕುಟುಂಬ ಮತ್ತು ದಾಂಪತ್ಯ ಮಾನವ ಕುಲದ ಉನ್ನತಿಗೆ ಸಹಾಯವಾಗುವುದು. ಒಂಟಿ ಕುಟುಂಬದ ಭಾವನೆಗಳನ್ನು ಬಿಟ್ಟು ಅವಿಭಕ್ತ ಕುಟುಂಬಗಳಲ್ಲಿ ಜೀವಿಸಬೇಕು ಎಂದರು.
ರೆಡ್ಡಿ ಸಮಾಜದ ಚೆನ್ನಾರೆಡ್ಡಿ ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಹಳ್ಳಿಗಳಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶಗಳು ಜೀವಂತವಾಗಿವೆ. ಹೀಗಾಗಿ ಹಳ್ಳಿಗಳಲ್ಲಿ ಕುಟುಂಬಗಳು ಒಂದಾಗಿ ಬಾಳುತ್ತವೆ. ಆದರೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಅವಿಭಕ್ತ ಕುಟುಂಬ ಪದ್ಧತಿ ನಾಶವಾಗುತ್ತಿವೆ. ಕಾರಣ ಪ್ರಪಂಚಕ್ಕೆ ಮಲ್ಲಮ್ಮಳ ಆದರ್ಶಗಳು ಮಾದರಿಯಾಗಬೇಕು. ರೆಡ್ಡಿ ಸಮಾಜವು ತನ್ನ ಜೊತೆ ಎಲ್ಲ ಸಮಾಜದ ಬಡವರನ್ನು ಗುರುತಿಸಿ ಅವರನ್ನು ಮುಂದಕ್ಕೆ ತರುವಲ್ಲಿ ಪ್ರಯತ್ನಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ರೆಡ್ಡಿ ಸಮಾಜದ ವತಿಯಿಂದ ಬಸವರೆಡ್ಡಿ ಇಟಗಿ, ಭಾಗನಗೌಡ ಸಂಕನೂರ, ಬಸಲಿಂಗಪ್ಪ ಪಾಟೀಲ ರೋಟ್ನಡಗಿ, ಬಿ.ಜಿ. ದೊಡಮನಿ, ಡಾ. ನಾಗರೆಡ್ಡಿ ಪಾಟೀಲ, ಚಂದ್ರಶೇಖರ ಮದನಾ ದೇಶಮುಖ, ಬಸವರಾಜಪ್ಪ ಕಾಮರೆಡ್ಡಿ, ಡಾ|| ವೀರಭದ್ರಪ್ಪ ಹೆಚ್ ಹಾಗೂ ಡಾ. ಎಸ್.ಎಂ. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಲೇಖಕ ಪ್ರೊ. ಎಸ್.ಎಸ್. ಪಾಟೀಲ ಅವರು ರಚಿಸಿರುವ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ್ ಕಾರ್ಯಕ್ರಮದ ಅಧÀ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ರೆಡ್ಡಿ ಸಮಾಜದ ಬಿ.ಆರ್.ಪಾಟೀಲ, ಬಸವರಾಜ ಭೀಮಳ್ಳಿ, ವಿ. ಶಾಂತರೆಡ್ಡಿ, ಪ್ರಮೋದರೆಡ್ಡಿ ಪಾಟೀಲ ಮುಂತಾದ ಗಣ್ಯರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಡಾ. ಸುಜಾತಾ ಬಂಡೇಶರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಅರುಣಾ ಪಾಟೀಲ ವಂದಿಸಿದರು.
ಕಲಬುರಗಿ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಡಾ. ಎಂ.ಎಸ್. ಪಂಡಿತ ರಂಗಮಂದಿರದವರೆಗೆ ಡೊಳ್ಳು, ಹಲಗೆ ವಾದನ, ಮಹಿಳಾ ಹಲಗೆ ಜಾನಪದ ಕಲಾ ತಂಡಗಳೊಂದಿಗೆ ಮಹಾಸಾದ್ಧಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಕವಿತಾ ಮಠಪತಿ ಮತ್ತು ಸಂಗಡಿಗರು ನಾಡಗೀತೆ ಮತ್ತು ಭಾವಗೀತೆಗಳನ್ನು ಪ್ರಸ್ತುತಪಡಿಸಿದರು.
ಬೌದ್ಧ ಧರ್ಮ ಪರಸ್ಪರ ಗೌರವಿಸುವ ಧರ್ಮ
ಕಲಬುರಗಿ,ಮೇ.10.(ಕ.ವಾ.)-ಮನುಷ್ಯರನ್ನು ಪ್ರೀತಿಯಿಂದ ನೋಡುವ, ಪರಸ್ಪರ ಗೌರವಿಸುವ ಧರ್ಮವೇ ಬೌದ್ಧ ಧರ್ಮ. ಜನರಿಂದ ಜನರ ಮೂಲಕ ಪ್ರಚಾರ ಪಡೆದ ಬೌದ್ಧ ಧರ್ಮವು ಇಂದು ಜಗತ್ತಿನಾದ್ಯಂತ ಪಸರಿಸಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಜನರು ಬೌದ್ಧ ಧರ್ಮದ ಅನುನಾಯಿಗಳಾಗಿದ್ದಾರೆ ಎಂದು ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಮಂಗಳವಾರ ಕಲಬುರಗಿಯ ಬುದ್ಧ ವಿಹಾರದಲ್ಲಿ 2561ನೇ ವೈಶಾಖ ಬುದ್ಧ ಪೂರ್ಣಿಮಾ ದಿನಾಚರಣೆಯ ಅಂಗವಾಗಿ ಕಲಬುರಗಿ ಬುದ್ಧ ವಿಹಾರದ ಧ್ಯಾನ ಮಂದಿರದಲ್ಲಿರುವ ಬುದ್ಧನ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಬಿ.ಎಂ. ಪುಟ್ಟಯ್ಯ ಮಾತನಾಡಿ, ಸನ್ನಡತೆ, ಸನ್ಮಾರ್ಗ ಮತ್ತು ಸದ್ಭಾವನೆಯಿಂದ ಬದುಕು ಸಾಗಿಸಬೇಕು ಎಂಬುದು ಬುದ್ಧನ ಆಶಯವಾಗಿತ್ತು. ಬುದ್ಧನ ಅರಾಧಕರು, ಅನುಯಾಯಿಗಳು ಜಗತ್ತಿನಾದ್ಯಂತ ಇದ್ದಾರೆ. ದ್ವೇಷ, ಅಸೂಯೆ, ಮೋಸ, ವಂಚನೆ ಮಾಡಬಾರದು. ಭೋಗ ವಸ್ತುಗಳು, ಮಾದಕ ವಸ್ತುಗಳನ್ನು ಬಳಸಬಾರದು ಎಂಬುದು ಬುದ್ಧನ ಸಂದೇಶವಾಗಿತ್ತು. ಆದರೆ ಇಂದು ಯುವಕರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಅವರನ್ನು ಬುದ್ಧನ ತತ್ಚಗಳತ್ತ ಸೆಳೆಯುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದರು.
ಬುದ್ಧ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಡಾ. ಬಿ.ಆರ್. ಅಂಬೇಡ್ಕರ ಅವರು ಬೌಧ್ಧ ಧರ್ಮವನ್ನು ಸ್ವೀಕರಿಸಿದರು. ಬುದ್ಧ ಮತ್ತು ಅಂಬೇಡ್ಕರ ಅವರು ಬೆಳಕು ತೋರಿದ ಪವಿತ್ರ ದಿನವೇ ಬೌದ್ಧ ಪೂರ್ಣಿಮೆ. ಜಗತ್ತಿನಲ್ಲಿ ಪ್ರತಿಯೊಂದು ಬದಲಾಗುತ್ತದೆ. ಗಾಳಿ, ನೀರು, ಬೆಳಕು, ಪ್ರಕೃತಿ, ಬ್ರಹ್ಮಾಂಡ ಕೂಡ ಇದರಿಂದ ಹೊರತಾಗಿಲ್ಲ. ಬದಲಾವಣೆ ಪ್ರಕೃತಿಯ ನಿಯಮ ಎಂಬುದು ಬುದ್ಧನ ಪ್ರತಿಪಾದನೆಯಾಗಿತ್ತು ಎಂದರು.
ರಾಧಾಬಾಯಿ ಖರ್ಗೆ, ಮಾಪಣ್ಣ ಗಂಜಗಿರಿ, ಸಿದ್ಧಾರ್ಥ ವಿಹಾರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಮಾರುತಿರಾವ ಮಾಲೆ ಪಾಲ್ಗೊಂಡಿದ್ದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಟಿ. ಪೋತೆ ಸ್ವಾಗತಿಸಿದರು. ಪ್ರೊ. ಈಶ್ವರ ಇಂಗನ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಚಂದ್ರಶೇಖರ ದೊಡ್ಡಮನಿ ವಂದಿಸಿದರು.
ಮೇ 11ರಂದು ವಿವಿಧ ಕಾಮಗಾರಿಗಳ ಲೋಕಾರ್ಪಣೆ
ಕಲಬುರಗಿ,ಮೇ.10.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯಿಂದ ತೆಗೆದುಕೊಂಡ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಆಶ್ರಯ ಯೋಜನೆಯ ಮನೆಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಮೇ 11ರಂದು ಗುರುವಾರ ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ಕೆಸರಟಗಿ ಗ್ರೀನ್ ಸಿಟಿ ಹತ್ತಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ್, ವಸತಿ ಸಚಿವ ಎಂ. ಕೃಷ್ಣಪ್ಪ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಮುಖ್ಯ ಅತಿಥಿಯಾಗಿ ಆಗಮಿಸುವರು. ಕಲಬುರಗಿ ಉತ್ತರ ವಿಧಾನಸಭಾ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಖಮರುಲ್ ಇಸ್ಲಾಂ ಅಧ್ಯಕ್ಷತೆ ವಹಿಸುವರು.
ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಿ.ಜಾಧವ, ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ವಿ. ಗುತ್ತೇದಾರ್, ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ದತ್ತಾತ್ರೇಯ ಸಿ. ಪಾಟೀಲ ರೇವೂರ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಾಡಾ ನೀರಾವರಿ ಯೋಜನೆಗಳ ವಲಯ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣಗೌಡ ಸಂಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಜಗರ್ ಚುಲಬುಲ್, ಉಪ ಮಹಾಪೌರ ಪುತಲಿ ಬೇಗಂ, ಮಹಾನಗರಪಾಲಿಕೆ ಆಡಳಿತ ಪಕ್ಷದ ನಾಯಕ ರಾಜೇಂದ್ರ ಕಪನೂರ, ವಿರೋಧ ಪಕ್ಷದ ನಾಯಕ ವಿಶಾಲ ಎಸ್. ಧರ್ಗಿ ಆಶ್ರಯ ಸಮಿತಿ ಸದಸ್ಯರುಗಳಾದ ಅಬ್ದುಲ್ ರಹೀಮ್ ಮಿರ್ಚಿ, ಶಿವಾಜಿ ಅಂಬರಾಯ, ಅಶೋಕ ಮಾನಸಿಂಗ್ ಹಾಗೂ ಗಂಗೂಬಾಯಿ ಶಂಕರ್ ಉಪಸ್ಥಿತರಿರುವರು.
ಲೋಕಾರ್ಪಣೆಗೊಳ್ಳುವ ಕಾಮಗಾರಿಗಳ ವಿವರ: ಅರ್.ಜಿ.ಆರ್.ಎಚ್.ಸಿ.ಎಲ್. ಸಹಾಯಧನ ಮತ್ತು ಪಾಲಿಕೆಯ ಶೇ. 24.10 ಮತ್ತು ಶೇ. 7.25 ಅನುದಾನ ಮತ್ತು ಫಲಾನುಭವಿಗಳ ವಂತಿಕೆ ಹಣ 8.45 ಕೋಟಿ ರೂ. ಮೊತ್ತದ ವಾಜಪೇಯಿ ನಗರ ವಸತಿ ಯೋಜನೆಯಡಿಯ 794 ಮನೆಗಳು ಹಾಗೂ ಆರ್.ಜಿ.ಆರ್.ಎಚ್.ಸಿ.ಎಲ್. ಸಹಾಯಧನ ಹಾಗೂ ಫಲಾನುಭವಿಗಳ ವಂತಿಕೆ ಹಣ ಮತ್ತು ಪಾಲಿಕೆಯ ಶೇ. 24.10 ಮತ್ತು ಶೇ. 7.25 ಅನುದಾನ ಹಾಗೂ ಬ್ಯಾಂಕ್ ಲೋನ್ ಅನುದಾನದಡಿ 14.82 ಕೋಟಿ ರೂ. ವೆಚ್ಚದ ವಾಜಪೇಯಿ ನಗರ ವಸತಿ ಯೋಜನೆಯಡಿಯ 780 ಮನೆಗಳು.
ಯಶಸ್ವಿನಿ ನೋಂದಣಿಗೆ ಜೂನ್ 31 ಕೊನೆಯ ದಿನ
ಕಲಬುರಗಿ,ಮೇ.10.(ಕ.ವಾ.)-ಕಲಬುರಗಿ ಜಿಲ್ಲೆಯ ಎಲ್ಲ ನಗರ/ಗ್ರಾಮೀಣ ಸಹಕಾರಿಗಳು 2017-18ನೇ ಸಾಲಿನ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆ/ನಗರ ಯೋಜನೆಯಡಿಯಲ್ಲಿ ಫಲಾನುಭವಿಗಳು ಮುಂದುವರೆಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು 2017ರ ಜೂನ್ 30 ಕೊನೆಯ ದಿನವಾಗಿದೆ ಎಂದು ಕಲಬುರಗಿ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕ ಟಿ. ಫೈರೋಜ್ ತಿಳಿಸಿದ್ದಾರೆ.
ಸದರಿ ಯೋಜನೆಯಡಿ ನೋಂದಾಯಿಸುವ/ನವೀಕರಿಸುವ ಅವಧಿಯು ಮೇ 1ರಿಂದ ಪ್ರಾರಂಭಗೊಂಡಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೆ 300ರೂ. ಮತ್ತು ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡದ ಜನರಿಗೆ 50 ರೂ ವಂತಿಗೆ ಹಾಗೂ ನಗರ ಭಾಗದಲ್ಲಿ ಸಾಮಾನ್ಯ ಜನರಿಗೆ 710 ರೂ ಮತ್ತು ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡದ ಜನರಿಗೆ 110 ರೂ. ವಂತಿಗೆ ಪಾವತಿಸಿ ಸದಸ್ಯರಾಗಬೇಕು. ಎಲ್ಲ ಅರ್ಹ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರು ಈ ಯೋಜನೆಯ ಲಾಭ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಪ್ಲಾಸ್ಟಿಕ (ಕೃತಕ) ಮೊಟ್ಟೆಯ ಪರೀಕ್ಷಾ ವಿಧಾನ
ಕಲಬುರಗಿ,ಮೇ.10.(ಕ.ವಾ.)-ಕಲಬುರಗಿಯಲ್ಲಿ ಇತ್ತೀಚಿಗೆ ಪ್ಲಾಸ್ಟಿಕ್ ಮೊಟ್ಟೆ ಮಾರಾಟ (ಕೃತಕ ಮೊಟ್ಟೆ) ಎಂದು ಸೋಶಿಯಲ್ ಮಿಡಿಯಾದಲ್ಲಿ, ಪತ್ರಿಕೆ ಮಾಧ್ಯಮದಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜೈವಿಕ ಬ್ರೇಕ್ ಥ್ರೋ ಸೈನ್ಸ್ ಸಂಸ್ಥೆಯವರು ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ಹೊಲಸೇಲ್ ಮೊಟ್ಟೆ ಇಟ್ಟಿರುವ ಮತ್ತು ಮೊಟ್ಟೆ ಮಾರಾಟ ಮಾಡುವ ಅಂಗಡಿಗಳನ್ನು ಪರಿಶೀಲನೆ ಮಾಡಿದ್ದು ಮತ್ತು ಆಹಾರ ಸಂರಕ್ಷಣಾ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಆಹಾರ ಮಾದರಿಯಾಗಿ ಪಡೆದು ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ನೀಡಲಾಗಿದೆ. ಪರೀಕ್ಷಾ ವರದಿ ಬಂದ ನಂತರ ಸದರಿ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ತಿಳಿಸಿದ್ದಾರೆ.
ಪಾಸ್ಟಿಕ್ (ಕೃತಕ) ಮೊಟ್ಟೆಯ ಪರೀಕ್ಷಾ ವಿಧಾನ ಇಂತಿದೆ. ನೀರು ತುಂಬಿದ ಗ್ಲಾಸಿನಲ್ಲಿ ಮೊಟ್ಟೆ ಹಾಕಿದರೆ ನಿಜ ಮೊಟ್ಟೆ ಪೂರ್ತಿ ನೀರಿನ ತಳಕ್ಕೆ ಮುಟ್ಟುತ್ತದೆ. ಕೃತಕ ಮೊಟ್ಟೆ ನೀರಿನಲ್ಲಿ ಸ್ವಲ್ಪ ತೆಲುತ್ತದೆ ಮತ್ತು ಕೆಟ್ಟ ಮೊಟ್ಟೆ ಸಹ ತೆಲುತ್ತದೆ. ಮೊಟ್ಟೆಯ ಮೇಲ್ಭಾಗವನ್ನು ಸವರಿ ನೋಡಿದಾಗ ನಿಜ ಮೊಟ್ಟೆಯ ತೊಗಟೆ ರಫಾಗಿ ಇರುತ್ತದೆ. ಕೃತಕ ಮೊಟ್ಟೆಯ ಮೇಲಿನ ತೊಗಟೆ ಸ್ಮೂತಾಗಿರುತ್ತದೆ. ನಿಜ ಮೊಟ್ಟೆಯು ಒಡೆದಾಗ ಮೇಲಿನ ಭಾಗ ಒಡೆದು ಹೋಗುತ್ತದೆ ಹಾಗೂ ಕೃತಕ ಮೊಟ್ಟೆ ಒಡೆದ ತೊಗಟೆ ಅಂಟಿಕೊಳ್ಳುತ್ತದೆ. ನಿಜ ಮೊಟ್ಟೆಯು ಒಡೆದಾಗ ತೊಗಟಿನಲ್ಲಿ ತಿಳುವಾದ ಪೊದರು ಕಾಣುತ್ತದೆ ಆ ಪೊದರು ಸುಟ್ಟರೆ ಬೆಂಕಿ ಹತ್ತುವುದಿಲ್ಲ ಹಾಗೂ ಕೃತಕ ಮೊಟ್ಟೆಯು ಬೆಂಕಿ ಹೊತ್ತಿಕೊಳ್ಳುತ್ತದೆ.
ನಿಜ ಮೊಟ್ಟೆ ಒಡೆದಾಗ ಮೊಟ್ಟೆಯಂತಹ ವಾಸನೆ ಬರುತ್ತದೆ ಕೃತಕ ಮೊಟ್ಟೆಯ ವಾಸನೆ ಇರುವುದಿಲ್ಲ. ಮೊಟ್ಟೆಯ ಮೇಲ್ಭಾಗವನ್ನು ಒಡೆದಾಗ ಟಕ್ ಸೌಂಡ್ ಬರುತ್ತದೆ ಕೃತಕ ಮೊಟ್ಟೆಯ ಟಕ್ ಸೌಂಡ್ ಬರುವುದಿಲ್ಲ. ನಿಜ ಮೊಟ್ಟೆ ಒಡೆದು ಪಾತ್ರೆಯಲ್ಲಿ ಹಾಕಿದಾಗ ಬಿಳಿಭಾಗ ಮತ್ತು ಹಳದಿ ಭಾಗ ತಕ್ಷಣ ಮಿಶ್ರಣವಾಗುವುದಿಲ್ಲ. ಕೃತಕ ಮೊಟ್ಟೆ ತಕ್ಷಣ ಮಿಶ್ರಣವಾಗುತ್ತದೆ. ನಿಜ ಮೊಟ್ಟೆಯ ಮೇಲ್ಭಾಗವನ್ನು ಬೆಂಕಿಯಿಂದ ಸುಟ್ಟರೆ ಸುಡುವುದಿಲ್ಲ ಮತ್ತು ಮೃದುವಾಗುವುದಿಲ್ಲ. ಕೃತಕ ಮೊಟ್ಟೆಯು ಸುಡುತ್ತದೆ ಮತ್ತು ಮೃದುವಾಗುತ್ತದೆ.
ಈ ಮೇಲ್ಕಂಡ ವಿಧಾನಗಳನ್ನು ತಾವೇ ಖುದ್ದಾಗಿ ಪರೀಕ್ಷಿಸಬಹುದಾಗಿದೆ. ಕಲಬುರಗಿ ನಗರದಲ್ಲಿ ಸಾಕಷ್ಟ ಮೊಟ್ಟೆ ಮಾರಾಟ ಮಾಡುವ ಅಂಗಡಿಗಳನ್ನು ಆಹಾರ ಸಂರಕ್ಷಣಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್. ಬಿರಾದಾರ್ ಅವರು ಪರಿಶೀಲನೆ ಮಾಡಿದ್ದಾರೆ. ಮೇಲಿನ ಪರೀಕ್ಷಾ ವಿಧಾನಗಳನ್ನು ಅಂಗಡಿಯವರಿಗೆ ಮತ್ತು ಗ್ರಾಹಕರಿಗೆ ಮನ ಮುಟ್ಟುವಂತೆ ಒಂದೊಂದಾಗಿ ತಿಳಿಸಿ ಹೇಳಿ ಒಳ್ಳೆ ಮೊಟ್ಟೆ ಮತ್ತು ಪ್ಲಾಸ್ಟಿಕ್ (ಕೃತಕ) ಮೊಟ್ಟೆಯ ಬಗ್ಗೆ ತಿಳಿಸಿಕೊಡಲಾಗಿದೆ.
ಸಾರ್ವಜನಿಕರು ಕೃತಕ ಮೊಟ್ಟೆ ಕಂಡುಬಂದಲ್ಲಿ ಕಲಬುರಗಿ ಎಸ್.ಪಿ. ಆಫೀಸ್ ಕಚೇರಿಯ ಹಿಂಭಾಗದಲ್ಲಿರುವ ಆಹಾರ ಸಂರಕ್ಷಣಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳು/ ಆಹಾರ ಸಂರಕ್ಷಣಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ. ಈಗಾಗಲೇ ನಗರದಲ್ಲಿ ಮೊಟ್ಟೆ ಪರಿಶೀಲನೆ ಮಾಡಿದ್ದು, ಪ್ಲಾಸ್ಟಿಕ್ (ಕೃತಕ) ಮೊಟ್ಟೆಗಳು ಕಂಡು ಬಂದಿರುವುದಿಲ್ಲ. ಸಾರ್ವಜನಿಕರು ಭಯ ಪಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಥಮ ಪಿ.ಯು.ಸಿ. ವಸತಿ ಕಾಲೇಜಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಮೇ.10.(ಕ.ವಾ.)-ಕಲಬುರಗಿ ಮದೀನಾ ಕಾಲೋನಿಯಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ 2017-18ನೇ ಸಾಲಿಗೆ ಪ್ರಥಮ ಪಿ.ಯು.ಸಿ ವಿಜ್ಞಾನ ಕೋರ್ಸಿನ (ಪಿ.ಸಿ.ಎಂ.ಬಿ.-40 ಹಾಗೂ ಪಿ.ಸಿ.ಎಂ.ಸಿಎಸ್.-40 ಸೀಟುಗಳು ಸೇರಿದಂತೆ) ಒಟ್ಟು 80 ಸೀಟುಗಳ ಪ್ರವೇಶ ಪ್ರಕ್ರಿಯೆ ಅರಂಭಗೊಂಡಿದ್ದು, ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಪಾಸಾದ ಮೇರಿಟ್ ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ ಸಮುದಾಯದ ಬಾಲಕಿಯರಿಗೆ ಶೇ.75 ಹಾಗೂ ಇತರೆ ಸಮುದಾಯದ ಬಾಲಕಿಯರಿಗೆ ಶೇ.25ರಷ್ಟು ಸೀಟು ಮೀಸಲಿದ್ದು, ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರನ್ನು ಮೊಬೈಲ್ ಸಂಖ್ಯೆ 7760260131 ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯದ ದೂರವಾಣಿ ಸಂಖ್ಯೆ 08472-247260ನ್ನು ಸಂಪರ್ಕಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 10 ಕೊನೆಯ ದಿನವಾಗಿದೆ. ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಅವರು ತಿಳಿಸಿದ್ದಾರೆ.
ಮೇ 11ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಮೇ.10.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್ ವ್ಯಾಪ್ತಿಯ ಅನ್ನಪೂರ್ಣ ಕ್ರಾಸಿನಿಂದ ಜಯದೇವ ಆಸ್ಪತ್ರೆವರೆಗಿನ ರಸ್ತೆ ಅಗಲೀಕರಣ ಮತ್ತು ಹೆಚ್.ಟಿ./ಎಲ್.ಟಿ. ಮಾರ್ಗ/ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ
ಮೇ 11ರಂದು ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್: ಪಿ.ಎಲ್.ಡಿ. ಬ್ಯಾಂಕ್, ಗೊಲ್ಲರಗಲ್ಲಿ, ಜಗತ್, ಜಗತ್ ಅಪ್ಪರ್ ಮತ್ತು ಲೋವರ್ ಲೆನ್, ಮಹಾನಗರ ಪಾಲಿಕೆಯ ಆಯುಕ್ತರ ವಸತಿ ಗೃಹ, ತಿರಂದಾಜ್ ಟಾಕೀಸ್ ಎದುರುಗಡೆ ಮೈಲಾರಲಿಂಗ ದೇವಸ್ಥಾನ, ಆದಿತ್ಯ ಹೋಟೆಲ್, ಎಸ್.ಪಿ. ಕಚೇರಿ ಪ್ರದೇಶ, ಏಷಿಯನ್ ಮಾಲ್, ಆಮಂತ್ರಣ ಹೋಟೆಲ್, ಕಕ್ಕೇರಿ ಕಾಂಪ್ಲೆಕ್ಸ್, ಪಶು ವೈದ್ಯಕೀಯ ಆಸ್ಪತ್ರೆ ಟ್ರೈನಿಂಗ್ ಸೆಂಟರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಹೀಗಾಗಿ ಲೇಖನಗಳು news and photo 10-5-2017
ಎಲ್ಲಾ ಲೇಖನಗಳು ಆಗಿದೆ news and photo 10-5-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo 10-5-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-10-5-2017.html
0 Response to "news and photo 10-5-2017"
ಕಾಮೆಂಟ್ ಪೋಸ್ಟ್ ಮಾಡಿ