ಶೀರ್ಷಿಕೆ : ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೊಗೇರರ ಪೈಪೋಟಿ :- ಬಿ ಫಾರಂ ಯಾರ ಕೈಗೆ ಒಲಿಯಲಿದೆ?
ಲಿಂಕ್ : ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೊಗೇರರ ಪೈಪೋಟಿ :- ಬಿ ಫಾರಂ ಯಾರ ಕೈಗೆ ಒಲಿಯಲಿದೆ?
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೊಗೇರರ ಪೈಪೋಟಿ :- ಬಿ ಫಾರಂ ಯಾರ ಕೈಗೆ ಒಲಿಯಲಿದೆ?
MOGERAWORLDSPECIAL STORY:- BY-VKKADABA
2018 ರ ವಿಧಾನಸಭಾ ಚುನಾವಣೆಗೆ ಕೇವಲ ಇನ್ನೊಂದು ವರ್ಷ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಎಂಬಂತೆ ಈಗಾಗಲೇ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 7 ಕಾಂಗ್ರೆಸ್ ಕೈಯಲ್ಲಿದೆ. ಆದರೆ ಮೀಸಲಾತಿ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 5 ನೇ ಬಾರಿ ಶಾಸಕ ರಾಗಿರುವ ಮೊಗೇರ ಸಮುದಾಯದ ಶ್ರೀ ಎಸ್. ಅಂಗಾರ ರವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಎಲ್ಲಾ ಸಿದ್ದತೆಯನ್ನು ಬಿಜೆಪಿ ಮಾಡುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾದ ಡಾ.ರಘು ರವರು ಬಿಜೆಪಿ ಯ ಅಭ್ಯರ್ಥಿ ಅಂಗಾರ ರ ವಿರುದ್ಧ ಕೇವಲ 1373 ಮತಗಳಿಂದ ಸೋಲನ್ನು ಅನುಭವಿಸಿದ್ದರು.
ಈ ಭಾರಿ ಮತ್ತೊಮ್ಮೆ ಅಧಿಕಾರ ಮುಂದುವರೆಸುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ 8 ಕ್ಷೇತ್ರ ಕೂಡ ತನ್ನದಾಗಿಸಲು ಈಗಾಗಲೇ ತಯಾರಿ ಆರಂಭಿಸಿದೆ ಅದರಲ್ಲೂ ಡಾ ರಘು ರವರನ್ನೇ ಕಾಂಗ್ರೆಸ್ ನಲ್ಲಿ ಸುಳ್ಯದಲ್ಲಿ ನಿಲ್ಲಿಸಿ ಗೆಲ್ಲಿಸುವ ಪ್ರಯತ್ನದಲ್ಲಿದೆ. ವಿಪರ್ಯಸವೆಂದರೆ ಆದರೆ ಅಧಿಕಾರಕ್ಕಾಗಿ ಈಗ ಹಲವು ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಒಂದು ವೇಳೆ ಡಾ ರಘು ರವರ ಬದಲಿಗೆ ಯುವ ಕಾಂಗ್ರೆಸ್ ಪದಾಧಿಕಾರಿಯಾಗಿರುವ ಬಹುತೇಕ ಎಲ್ಲ ನಾಯಕರೊಂದಿಗೆ ಒಡನಾಟ ಹೊಂದಿರುವ ಡಾ. ರಘುರವರ ಮಗ ಪ್ರಹ್ಲಾದ್ ಬೆಳ್ಳಿಪ್ಪಾಡಿ ಅವರನ್ನು ಕೂಡ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಬಂದಿದೆ. 1983ರಲ್ಲಿ ಭಾರತೀಯ ಜನತಾ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿ ಕೇವಲ 18 ತಿಂಗಳು ಸುಳ್ಯವನ್ನು ಪ್ರತಿನಿಧಿಸಿದ್ದ ಬಾಕಿಲ ಹುಕ್ರಪ್ಪರವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.
ಬಾಕಿಲ ಹುಕ್ರಪ್ಪ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕ್ಷಣ |
ಇದರ ಬೆನ್ನಲ್ಲೇ ತೆರೆಮೆರೆಯಲ್ಲಿ ಗೋಕುಲ್ದಾಸ್ ಹಾಗೂ ನಂದರಾಜ್ ಎಂಬವರು ಕೂಡ ಪ್ರಬಲ ಆಕಾಂಕ್ಷಿ ಯಾಗಿದ್ದಾರೆ. ಇಲ್ಲಿ ಜೆಡಿಎಸ್ ಪ್ರಾಭಲ್ಯವಿಲ್ಲದಿದ್ದರೂ ಯಸ್ ಡಿ ಪಿ ಯಲ್ಲಿ ಕೂಸಪ್ಪರವರು 2 ನೇ ಭಾರಿ ಅಭ್ಯರ್ಥಿಗುವ ಸಂಭವ ಇದೆ. ಮೊಗೇರರ ಈ ಪೈಪೋಟಿ ಈಗ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಅಂತಿಮವಾಗಿ ಬಿ ಫಾರಂ ಯಾರ ಕೈಗೆ ಒಲಿಯಲಿದೆ ಎಂಬುದನ್ನು ಕೂಡ ಕಾದು ನೋಡ ಬೇಕಾಗಿದೆ.
ಹೀಗಾಗಿ ಲೇಖನಗಳು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೊಗೇರರ ಪೈಪೋಟಿ :- ಬಿ ಫಾರಂ ಯಾರ ಕೈಗೆ ಒಲಿಯಲಿದೆ?
ಎಲ್ಲಾ ಲೇಖನಗಳು ಆಗಿದೆ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೊಗೇರರ ಪೈಪೋಟಿ :- ಬಿ ಫಾರಂ ಯಾರ ಕೈಗೆ ಒಲಿಯಲಿದೆ? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೊಗೇರರ ಪೈಪೋಟಿ :- ಬಿ ಫಾರಂ ಯಾರ ಕೈಗೆ ಒಲಿಯಲಿದೆ? ಲಿಂಕ್ ವಿಳಾಸ https://dekalungi.blogspot.com/2017/05/blog-post_43.html
0 Response to "ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೊಗೇರರ ಪೈಪೋಟಿ :- ಬಿ ಫಾರಂ ಯಾರ ಕೈಗೆ ಒಲಿಯಲಿದೆ?"
ಕಾಮೆಂಟ್ ಪೋಸ್ಟ್ ಮಾಡಿ