ಶೀರ್ಷಿಕೆ : ಕೆಂಪು ದೀಪದ ಕೆಳಗೆ
ಲಿಂಕ್ : ಕೆಂಪು ದೀಪದ ಕೆಳಗೆ
ಕೆಂಪು ದೀಪದ ಕೆಳಗೆ
| ಸಾಂದರ್ಭಿಕ ಚಿತ್ರ |
ರಘು ಮಾಗಡಿ (ನೇತೇನಹಳ್ಳಿ)
ಕಟುಕನಂಗಡಿಯ ಮುಂದೆ
ಜೋತು ಬಿದ್ದ ಪ್ರಾಣಿಯಂತೆ
ಅರೆ ನಗ್ನ ದೇಹ
ಯಾರೋ ಬಗೆದು ತಿನ್ನುವವರು
ಯಾರೋ ಜಗಿಯುವವರು
ತಿಂದು ತೇಗಿದವರು
ಬೀಸಾಡಿ ಹೋದ ನೋಟಿನ ಕಂತೆ
ಅವಳು ಕುಣಿಯಬೇಕು ಎಣಿಸುವವರ ತಾಳಕ್ಕೆ....
ರಾಜಾಜ್ನೆಯೆಂಬಂತೆ ತಲೆಬಾಗಿ
ಕರಾರುಪತ್ರದ ಆದೇಶದಂತೆ
ದೇಹದ ಹರಾಜಿಡಬೇಕು
ವ್ಯಾಪಾರದ ಸರಕು ಮಾಡಿ
ಬಲಿ ಕೊಡುವ ಶೃಂಗಾರದ
ಆ ಕುರಿಯ ಬಲಿ ಒಂದೇ ಸಲ
ನಿತ್ಯ ಶೃಂಗಾರದ ನನ್ನ ಬಲಿ
ನಿತ್ಯ ನಿರಂತರ...
ಸಾಕಾಗಿದೆ ದೀಪದಡಿಯ ಕತ್ತಲಿನ ಜೀವನ
ಅಳುವಾಗ ನಕ್ಕಂತೆ ನಗುವಾಗಲೂ ಅಳುತ್ತ
ನಲುಗುತಿದೆ ಅವಳ ಜೀವ ಬಾಡುತಿದೆ ಬದುಕು
ಸುತ್ತಲೂ ಕತ್ತಲೆ ಒಳಗೂ ಹೊರಗೂ
ನಿತ್ಯ ಸತ್ಯ ಜೀವನ...
ಹೀಗಾಗಿ ಲೇಖನಗಳು ಕೆಂಪು ದೀಪದ ಕೆಳಗೆ
ಎಲ್ಲಾ ಲೇಖನಗಳು ಆಗಿದೆ ಕೆಂಪು ದೀಪದ ಕೆಳಗೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೆಂಪು ದೀಪದ ಕೆಳಗೆ ಲಿಂಕ್ ವಿಳಾಸ https://dekalungi.blogspot.com/2017/05/blog-post_94.html
0 Response to "ಕೆಂಪು ದೀಪದ ಕೆಳಗೆ"
ಕಾಮೆಂಟ್ ಪೋಸ್ಟ್ ಮಾಡಿ