ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು

ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು
ಲಿಂಕ್ : ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು

ಓದಿ


ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು



ಕೊಪ್ಪಳ  ಮೇ. 09 (ಕ.ವಾ): ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

     ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಮಾವು ಮೇಳ ಆಯೋಜಿಸಿರುವುದು ಸಂತಸವನ್ನು ತಂದಿದೆ.  ಮಾವು ಮೇಳದಲ್ಲಿ ಜಿಲ್ಲೆಯ ಹಲವೆಡೆಗಳಿಂದ ರೈತರು ಆಸಕ್ತಿಯಿಂದ ಬಂದು ಪಾಲ್ಗೊಳ್ಳುತ್ತಿದ್ದಾರೆ.  ರೈತರೇ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡುವುದರಿಂದ ಅವರಿಗೂ ಮೇಳ ಲಾಭದಾಯಕವಾಗಲಿದೆ.  ಕೊಪ್ಪಳ ಜಿಲ್ಲೆ ಪದೇ ಪದೇ ಬರಕ್ಕೆ ತುತ್ತಾಗುವ ಪ್ರದೇಶವಾಗಿದ್ದು, ಬರವನ್ನು ಎದುರಿಸುವಂತಹ ಸಾಮಥ್ರ್ಯ ಬಹಳಷ್ಟು ತೋಟಗಾರಿಕೆ ಬೆಳೆಗಳಿಗಿದೆ.  ಅದರಲ್ಲಿ ಮಾವು ಕೂಡ ಪ್ರಮುಖ ಬೆಳೆಯಾಗಿದ್ದು, ಜಿಲ್ಲೆಯಲ್ಲಿ ಮಾವು ಬೆಳೆ ವಿಸ್ತೀರ್ಣವನ್ನು ವಿಸ್ತರಿಸುವುದು ಸೂಕ್ತವೆನಿಸುತ್ತದೆ.  ಮಾವು ಮೇಳದಲ್ಲಿ ವಿವಿಧೆಡೆಗಳಿಂದ ಬರುವ ರೈತರು ಒಂದೆಡೆ ಸೇರುವುದರಿಂದ, ಮಾವಿನ ತಳಿಗಳು, ತೋಟಗಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ, ಹೆಚ್ಚು ಬೇಡಿಕೆಯಿರುವ ಮಾವು ತಳಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು, ಮಾರುಕಟ್ಟೆ, ಮೌಲ್ಯವರ್ಧನೆ ಹೀಗೆ ಅನೇಕ ವಿಷಯಗಳ ಬಗ್ಗೆ ವಿಚಾರಗಳ ವಿನಿಮಯವಾಗಲು ಸಹಕಾರಿಯಾಗಲಿದೆ.  ಇಂತಹ ಮೇಳವನ್ನು ಆಯೋಜಿಸುವ ಮೂಲಕ ಸರ್ಕಾರ ರೈತರಿಗೆ ನೈತಿಕ ಸ್ಥೈರ್ಯ ಮೂಡಿಸುವುದರ ಜೊತೆಗೆ ತೋಟಗಾರಿಕೆ ವಿಸ್ತರಣೆಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.
     ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅವರು ಮಾತನಾಡಿ, ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇದೇ ಮೊದಲ ಬಾರಿಗೆ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ.  ಮಾವು ಮೇಳದಲ್ಲಿ ಕಾರ್ಬೈಡ್ ಎಂಬ ವಿಷಯುಕ್ತ ರಾಸಾಯನಿಕದಿಂದ ಪಕ್ವಗೊಳಿಸಿದ ಹಣ್ಣುಗಳ ಮಾರಾಟಕ್ಕೆ ಅವಕಾಶವಿಲ್ಲ.  ಈ ಮೂಲಕ ಸಾರ್ವಜನಿಕರಿಗೆ ರಾಸಾಯನಿಕ ಮುಕ್ತ ಉತ್ತಮ ಗುಣಮಟ್ಟದ ಮಾವು ಹಣ್ಣುಗಳನ್ನು ಹಾಗೂ ವಿವಿಧ ತಳಿಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಿಗಮವು ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಮಾಡುತ್ತಿದೆ.  ಈಗಾಗಲೆ ಬೆಂಗಳೂರು, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಮಾವು ಮೇಳ ಆಯೋಜಿಸಿದ್ದು, ಮೇ. 15 ರಂದು ಚಾಮರಾಜನಗರ, ಮೈಸೂರು, ಮೇ. 16 ರಂದು ಹಾವೇರಿ ಜಿಲ್ಲೆಯಲ್ಲಿ ಮಾವು ಮೇಳ ನಡೆಯಲಿದೆ.  ಮಾವು ಮೇಳದಲ್ಲಿ ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಹಲವು ತಳಿಯ ಮಾವು ಹಣ್ಣು ಲಭ್ಯವಾಗಲಿದ್ದು, ರೈತರಿಗೂ ಇದರಿಂದ ಲಾಭತರಲಿದೆ.  ಮೇಳ ಆಯೋಜನೆಯಿಂದ ಮಾವು ಬೆಳೆ ವಿಸ್ತರಣೆಗೆ ಹಾಗೂ ಗುಣಮಟ್ಟದ ಬೆಳೆಗೆ ಉತ್ತೇಜನ ದೊರೆಯಲಿದೆ ಎಂದರು.
     ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ನಿರ್ದೇಶಕರುಗಳಾದ ಧಾರವಾಡದ ಜಿ.ಎಸ್. ಗೌಡರ್, ಬೆಂಗಳೂರಿನ ರವಿಕುಮಾರ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ಹಲವು ಗಣ್ಯರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡು, ವಿವಿಧ ತಳಿಯ ಮಾವಿನ ಹಣ್ಣುಗಳ ಸವಿಯನ್ನು ಸವಿದರು.


ಹೀಗಾಗಿ ಲೇಖನಗಳು ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು

ಎಲ್ಲಾ ಲೇಖನಗಳು ಆಗಿದೆ ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು ಲಿಂಕ್ ವಿಳಾಸ https://dekalungi.blogspot.com/2017/05/blog-post_93.html

Subscribe to receive free email updates:

0 Response to "ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ : ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು"

ಕಾಮೆಂಟ್‌‌ ಪೋಸ್ಟ್‌ ಮಾಡಿ