ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ

ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ
ಲಿಂಕ್ : ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ

ಓದಿ


ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ



ಕೊಪ್ಪಳ ಮೇ. 09 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳ ನಗರದಲ್ಲಿ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ನೈಸರ್ಗಿಕವಾಗಿ ಪಕ್ವಗೊಳಿಸಿದ ಬಗೆ, ಬಗೆಯ ತಳಿಗಳ ಮಾವು ಹಣ್ಣುಗಳನ್ನು ಮುಗಿಬಿದ್ದು ಖರೀದಿಸಿದರು.


     ಕೊಪ್ಪಳ ನಗರದ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಮೇ. 09 ರಿಂದ ಹತ್ತು ದಿನಗಳ ಕಾಲ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸಾರ್ವಜನಿಕರು ಮತ್ತು ರೈತರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ.  ಮಾವು ಪ್ರದರ್ಶನ ಮೇಳದಲ್ಲಿ ಸುಮಾರು 100 ಕ್ಕೂ ಹೆಚ್ಚು ಬಗೆಯ ಮಾವು ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು, ಸಾರ್ವಜನಿಕರು ಆಸಕ್ತಿಯಿಂದ, ಪ್ರದರ್ಶನವನ್ನು ವೀಕ್ಷಿಸಿದರು.  ಹಂಪಿ ವಿರೂಪಾಕ್ಷ ದೇವಾಲಯ ಬಳಿ ಇರುವ 500 ವರ್ಷಗಳ ಹಳೆಯದೆನ್ನಲಾದ ಮಾವಿನ ಮರದ ಹಣ್ಣುಗಳನ್ನು ಸಹ ಪ್ರದರ್ಶನಕ್ಕೆ ಇರಿಸಲಾಗಿದೆ.  ಮಂಡಪ್ಪ, ಚಿನ್ನರಸಂ, ಪೆದ್ದರಸಂ, ಬಪ್ಪೆಕಾಯಿ, ಮಲ್ಲಿಕಾ, ಕೇಸರ್, ಇಮಾಂಪಸಂದ್, ಆಮಲೆಟ್, ರೋಮೇನಿಯಾ, ತೋತಾಪುರಿ, ನೀಲಂ, ಮಲ್ಲಿಕಾ, ಕಾಲಪಾಡ, ರಸಪೂರಿ, ಮಲಗೋಬ, ಕರಿ ಈಶಗಿಡ, ಕಲಮೀ, ಸುವರ್ಣರೇಖಾ, ಕ್ರಿಪ್ಲಿಂಗ, ಕರಿ ಇಶಾಡ್, ಆ್ಯಪಲ್ ಮಾವು, ತೆಂಗಿನ ಮಾವು ಸೇರಿದಂತೆ ಸುಮಾರು 100 ಕ್ಕೂ ಬಗೆ ಬಗೆಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
      ತರೇವಾರಿ ಮಾವಿನ ತಳಿಯನ್ನು ವೀಕ್ಷಿಸಿದ ಜನರು, ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಮೇಳವನ್ನು ಆಯೋಜಿಸಲಾಗಿದೆ.  ಇಷ್ಟೊಂದು ಬಗೆಯ ಮಾವು ಹಣ್ಣುಗಳ ತಳಿಗಳು ಇವೆ ಎಂಬುದೇ ತಮಗೆ ತಿಳಿದಿರಲಿಲ್ಲ.  ತೋಟಗಾರಿಕೆ ಇಲಾಖೆಯು ಇಂತಹ ನೂರಾರು ತಳಿಗಳನ್ನು ಪ್ರದರ್ಶನಕ್ಕೆ ಇಡುವ ಮೂಲಕ, ಮಾವಿನ ತಳಿಗಳ ಪರಿಚಯ ಮಾಡಿಸಿದೆ.  ರಾಸಾಯನಿಕ ಮುಕ್ತವಾಗಿ ಪಕ್ವಗೊಳಿಸಿದ ಹಣ್ಣುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ರೈತರಿಂದಲೇ ನೇರವಾಗಿ ಹಣ್ಣುಗಳನ್ನು ಖರೀದಿಸುವ ಅವಕಾಶವನ್ನು ಜನರಿಗೆ ಕಲ್ಪಿಸಲಾಗಿದೆ ಇದಕ್ಕಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
     ಮಾವು ಮಾರಾಟ ಮೇಳದಲ್ಲಿ ಕೊಪ್ಪಳ ತಾಲೂಕಿನ ಕೂಕನಪಳ್ಳಿ, ಕಲ್‍ತಾವರಗೇರಾ, ಕಲಕೇರಿ, ಮೈನಳ್ಳಿ, ಇಂದರಗಿ, ಮಾದಿನೂರು ಗ್ರಾಮಗಳ ರೈತರು ಅಲ್ಲದೆ ಯಲಬುರ್ಗಾ ತಾಲೂಕಿನ ಹೊನ್ನುಣಸಿ, ತಳಕಲ್, ಭಾನಾಪುರ, ಮುರಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಆಸಕ್ತಿಯಿಂದ ಪಾಲ್ಗೊಂಡು, ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ ಸಂತಸಪಟ್ಟರು.  ಬೆಳಿಗ್ಗೆಯಿಂದಲೇ ಮಾರಾಟ ಪ್ರಕ್ರಿಯೆ ಪ್ರಾರಂಭಗೊಂಡಿದ್ದರಿಂದ, ಜನರಿಂದ ಖರೀದಿ ಭರಾಟೆ ಜೋರಾಗಿಯೇ ಇತ್ತು.  ಸಂಜೆಯ ಹೊತ್ತಿಗೆ ರೈತರ ಹಣ್ಣಿನ ಪುಟ್ಟಿಗಳು ಖಾಲಿಯಾಗಿದ್ದವು.  ಮಾವು ಮಾರಾಟ ಮೇಳಕ್ಕೆ ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದು, ಹಣ್ಣುಗಳು ಬಲುಬೇಗ ಮಾರಾಟವಾಗಿದ್ದರಿಂದ ರೈತರು ಕೂಡ ಸಂತಸಪಟ್ಟರು.  ಮಾವು ಮೇಳದಲ್ಲಿ ಕೇಸರ್ ಮತ್ತು ಮಲ್ಲಿಕಾ - ಪ್ರತಿ ಕೆ.ಜಿ.ಗೆ ರೂ. 60, ತೋತಾಪುರಿ- ರೂ. 40 ಹೀಗೆ ಕಡಿಮೆ ದರದಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಹಣ್ಣುಗಳು ದೊರೆತವು. 
     ಮಾವು ಮಾರಾಟ ಮೇಳವನ್ನು ಮೇ. 9 ರಿಂದ 18 ರವರೆಗೆ ಹತ್ತು ದಿನಗಳ ಕಾಲ ಆಯೋಜಿಸಲಾಗಿದೆ.  ಮೇಳದಲ್ಲಿ ದಿನನಿತ್ಯ ವಿವಿಧ ತಳಿಗಳ ಮಾವಿನ ಹಣ್ಣುಗಳು ಜನರಿಗೆ ಲಭ್ಯವಾಗಲಿವೆ.  ಮಾರಾಟ ದರವು ಕೂಡ ನಿತ್ಯ ಪರಿಷ್ಕರಣೆಗೊಳ್ಳುವ ಸಾಧ್ಯತೆ ಇರುತ್ತದೆ.  ಮೇಳಕ್ಕೆ ಜಿಲ್ಲೆಯ ರೈತರು ಉತ್ತಮವಾಗಿ ಸ್ಪಂದಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ.  ಜನರಿಗೂ ಕೂಡ ಕಡಿಮೆ ದರದಲ್ಲಿ ಗುಣಮಟ್ಟದ ಹಣ್ಣುಗಳು ಲಭ್ಯವಾಗುವುದರಿಂದ, ಹೆಚ್ಚು, ಹೆಚ್ಚು ಖರೀದಿಗೆ ಮುಂದಾಗುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು.


ಹೀಗಾಗಿ ಲೇಖನಗಳು ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ ಲಿಂಕ್ ವಿಳಾಸ https://dekalungi.blogspot.com/2017/05/blog-post_11.html

Subscribe to receive free email updates:

0 Response to "ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ"

ಕಾಮೆಂಟ್‌‌ ಪೋಸ್ಟ್‌ ಮಾಡಿ