ಶೀರ್ಷಿಕೆ : ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ
ಲಿಂಕ್ : ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ
ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ
ಕೊಪ್ಪಳ, ಮೇ. 25 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರದಂದು ಹಮ್ಮಿಕೊಂಡ ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಕೊಪ್ಪಳದ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಡೆಂಗ್ಯೂ ಮತ್ತು ಚಿಕನ್‍ಗುನ್ಯಾ ಜ್ವರ ಈಡಿಸ್ ಜಾತಿಯ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆ ಹಗಲು ಹೊತ್ತಿನಲ್ಲೇ ಕಚ್ಚುತ್ತದೆ. ಯಾವುದೇ ಜ್ವರವಿರಲಿ ಶೀಘ್ರ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ. ಮನೆಯ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನು ತಟೆಗಟ್ಟಿ. ನಿಂತ ನೀರು ಸೊಳ್ಳೆಯ ತವರು, ನೀರಿನ ಶೇಕರಣೆ ಸಲಕರಣೆಗಳನ್ನು ಭದ್ರವಾಗಿ ಮುಚ್ಚಿಡಿ. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಿ. ಸಮಗ್ರ ಕೀಟ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ. ಅಂತರ್ ಇಲಾಖಾ ಸಹಕಾರ – ರೋಗ ತೆಡೆಗೆ ಪರಿಹಾರ. ಕಡಿತ ಚಿಕ್ಕದು - ಕಂಟಕ ದೊಡ್ಡದು, ಸೊಳ್ಳೆಗಳಿಂದ ದೂರವಿರಿ - ಸೊಳ್ಳೆಗಳನ್ನು ದೂರವಿಡಿ. ಎಂಬ ಘೋಷಣಾ ವಾಕ್ಯಗಳೊಂದಿಗೆ ಡೆಂಗ್ಯೂ ಜ್ವರದ ಹರಡುವಿಕೆ, ನಿಯಂತ್ರಣ ಹಾಗೂ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಮುದಾಯವನ್ನು ಜಾಗೃತಿಗೊಳಿಸಲು ಡೆಂಗ್ಯೂ ಜಾಗೃತಿ ಜಾಥ ಏರ್ಪಡಿಸಲಾಯಿತು.
ಡೆಂಗ್ಯೂ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ವೆಂಕಟರಾಜಾ ಅವರು, ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಕರಪತ್ರಗಳನ್ನು ಹಚ್ಚಿಸಿ. ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ರೋಗಗಳನ್ನು ತಡೆಗಟ್ಟುವ ಬಗ್ಗೆ ಮಕ್ಕಳಲ್ಲಿ, ಹಾಗೂ ಅವರ ಪಾಲಕರಲ್ಲಿ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಮತ್ತು ಎಎನ್‍ಎಂ ಟ್ರೈನಿಂಗ್ ಸೇಂಟರ್‍ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/05/blog-post_890.html
0 Response to "ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ