ಶೀರ್ಷಿಕೆ : ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ಲಿಂಕ್ : ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ಕೊಪ್ಪಳ ಮೇ. 25 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಯಲಬುರ್ಗಾ ತಾಲೂಕು ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕ ದೊಡ್ಡ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಯಿತು
ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಬಿ.ಎಸ್. ಸತೀಶ್, ಮಾತನಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕುಶಲ ಕೂಲಿಕಾರರಿಗೆ ತಮ್ಮ ಗ್ರಾಮ/ಹಳ್ಳಿಗಳ ವ್ಯಾಪ್ತಿಯಲ್ಲಿ ಕೂಲಿಕೆಲಸ ಸಿಗುವಂತಾಗಲಿ ಎಂದು ಯೋಜನೆಯಲ್ಲ ಸರ್ಕಾರ ಅವಕಾಶ ಮಾಡಿದೆ. ಕೂಲಿಕಾರರು ಯೋಜನೆಯ ಕಾಮಗಾರಿಗಳಲ್ಲಿ ಕೂಲಿ ಕೆಲಸ ಮಾಡಲು ಉದ್ಯೋಗ ಖಾತ್ರಿ ಪುಸ್ತಕ, ಬ್ಯಾಂಕ್ ಖಾತೆ ಪುಸ್ತಕದ ಝರಾಕ್ಸ, ಆಧಾರ ಸಂಖ್ಯೆಯ ಝರಾಕ್ಸ ಪ್ರತಿಗಳನ್ನು ಕಡ್ಡಾಯವಾಗಿ ಕಾಮಗಾರಿಯ ಸ್ಥಳಕ್ಕೆ ಬರುವ ಮುಂಚೆ ಗ್ರಾಮ ಪಂಚಾಯತಿಯಲ್ಲಿ ಎಮ್.ಐ.ಎಸ್ ತಂತ್ರಾಂಶದಲ್ಲಿ ದಾಖಲಾತಿಗಳನ್ನು ಅಳವಡಿಸಿ ಖಾಲಿ ಎನ್.ಎಮ್.ಆರ್ ನೊಂದಿಗೆ ಕಾಮಗಾರಿ ಸ್ಥಳಕ್ಕೆ ಬರುವುದು ಸೂಕ್ತ. ಈಗಾಗಲೆ ತಾಲೂಕಿನ ಹಲವಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆರೆ ಹೂಳೆತ್ತುವ, ಕೃಷಿ ಹೊಂಡ ನಿರ್ಮಾಣ, ಚೆಕ್ ಡ್ಯಾಮ್ ಹೂಳೆತ್ತುವುದು ಸೇರಿದಂತೆ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳು ಚಾಲನೆಯಲ್ಲಿದ್ದು ಕೂಲಿಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಂಡು ಕಾಮಗಾರಿಗಳಲ್ಲಿ ಕೂಲಿ ಕೆಲಸ ಮಾಡಲು ಮನವಿ ಮಾಡಿದರು.
ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ತಾಂತ್ರಿಕ ಸಹಾಯಕ ಕನಕಪ್ಪ ಚಲುವಾದಿ, ತಾಲೂಕ ಐ.ಇ.ಸಿ ಸಂಯೋಜಕÀ ಲಕ್ಷ್ಮಣ ಕೆರಳ್ಳಿ ಮತ್ತು ಸಮುದಾಯ ತಾಂತ್ರಿಕ ಸಹಾಯಕ ಈರಣ್ಣ ಗ್ರಾಮ ಪಂಚಾಯತಿಯ ಸಿಬ್ಬಂದಿ ಶಾಮಿದ್ ಮತ್ತು 150 ಕ್ಕೂ ಹೆಚ್ಚು ಕೂಲಿಕಾರರು ಸ್ಥಳದಲ್ಲಿದ್ದರು.
ಹೀಗಾಗಿ ಲೇಖನಗಳು ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/05/blog-post_344.html
0 Response to "ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ