ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ

ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ
ಲಿಂಕ್ : ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ

ಓದಿ


ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ

MOGERAWORLD:- "ಕರ್ನಾಟಕದ ಉಡುಪಿ ಜಿಲ್ಲೆಯ ಶಿರ್ವ-ಮಂಚಕಲ್ ಸಮೀಪದ ಕುತ್ಯಾರು ಮಾಗಣೆಯ ಮೂಲದ ಬೆಟ್ಟುವಿನಲ್ಲಿದೆ ಈ ನಾಗ ಬನ. ಸಣ್ಣ ತೋಡು ಕಳೆದು ಸಿಗುವ ಗದ್ದೆಗಳ (ಬೈಲು) ಬದಿಯಲ್ಲೇ ಎತ್ತರ ಪ್ರದೇಶದಲ್ಲಿರುವ ಈ ನಾಗ ಬನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಮೊಗೇರರ ಆರಾಧ್ಯ ದೈವಗಳಾದ ಮುದ್ದ-ಕಳಲ ಹಾಗೂ ತನ್ನಿಮಾನಿಗಳು ಜನಿಸಿದ ಸ್ಥಳ ಇದೇ ಪ್ರದೇಶವಾಗಿದೆ ಎಂದು ರಾಮಕುಂಜ ಗೋವಿಂದ ಮಾಸ್ತರ್ ಸಂಗ್ರಹಿಸಿರುವ ‘ಮೊಗೇರ್ಲೆ ಪಾಡ್ದನದಲ್ಲಿ ಉಲ್ಲೇಖಗೊಂಡಿರುವುದರಿಂದ ಈ ನಾಗಬನಕ್ಕೆ ಮತ್ತೂ ವಿಶೇಷತೆ ಬರುತ್ತಿದೆ..". ಮೂಲ್ದೊಟ್ಟು ನಾಗಬನದ ಬಗ್ಗೆ ಸತೀಶ್ ಸಾಲಿಯನ್ ನೆಲ್ಲಿಕುಂಜೆ ಬರೆದಿರುವ ಲೇಖನ

ಇಡೀ ದೇಶದಲ್ಲಿ ನಾಗರ ಪಂಚಮಿ ಆಚರಿಸುವುದು ಶ್ರಾವಣ ಮಾಸದ ಶುಕ್ಲ ಪಂಚಮಿಯಂದು. ಅಂದರೆ ಮಳೆಗಾಲದ ಅಗೋಸ್ತು ತಿಂಗಳಲ್ಲಿ. ಇದು ತುಳುವರ ಶುಭ ಸಮಾರಂಭಗಳಿಗೆ ನಿಷಿದ್ಧವಾದ ಆಟಿ (ಕರ್ಕಟಕ) ತಿಂಗಳ ಕೊನೆಯ ದಿನಗಳಲ್ಲಿ ಬರುತ್ತದೆ. ವೈದಿಕ ಸಂಸ್ಕೃತಿಯ ಪ್ರಭಾವದಿಂದ ಪರಿ ವರ್ತನೆಗೊಂಡು ಬಂದ ಪದ್ಧತಿ ಯನ್ನು ತುಳುವರು ಒಪ್ಪಿಕೊಂಡು ಇಂದು ತುಳುನಾಡಿನಾದ್ಯಂತ ನಾಗರ ಪಂಚಮಿ ಆಚರಿಸುತ್ತಿದ್ದಾರೆ. ಆದರೆ ತುಳುನಾಡಿನ ಮೂಲ ನಿವಾಸಿ ಗಳೆನಿಸಿಕೊಂಡ ಮೊಗೇರ ಜನಾಂಗವು ಬೇಸಗೆ ಕಾಲದ ವೃಷಭ ಮಾಸದಲ್ಲಿ (ಮೇ ತಿಂಗಳು) ನಾಗನಿಗೆ ಹಾಲೆರೆದು ಪೂಜಿಸುವ ತನು ಹಾಕುವ ವಿಶಿಷ್ಟ ಸಂಪ್ರದಾಯ ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಮೂಲ್ದೊಟ್ಟು ನಾಗಬನದಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿದೆ.
ತನುತರ್ಪಣ:- ತುಳುವಿನಲ್ಲಿ ತನು ಮಲ್ಪುನೆ ಎಂದರೆ ತಂಪು ಮಾಡುವುದು ಎಂದರ್ಥ. ತುಳುವರು ಅವೈದಿಕ ಕ್ರಮದಲ್ಲಿ ನಾಗನ ಕಲ್ಲಿಗೆ ಹಾಲಿನ ಅಭಿಷೇಕ ಮಾಡಿ ತಂಬಿಲ ನಡೆಸುವ ಕ್ರಮಕ್ಕೆ ತನುತರ್ಪಣ ಎನ್ನುತ್ತಾರೆ. ಆದಿಮ ತುಳು ಸಂಸ್ಕೃತಿಯ ದೈವಾ ರಾಧನಾ ವಿಧಾನಗಳಲ್ಲಿ ತಂಬಿಲಕ್ಕೆ ಪ್ರಥಮ ಪ್ರಾಶಸ್ತ್ಯವಿದೆ. ತುಳುವರ ಮೂಲ ದೈವಾರಾಧನೆ, ನಾಗಾರಾಧನೆ ಯಾಗಲೀ ತಂಬಿಲದ ಮೂಲಕ ಅತೀತ ಶಕ್ತಿಗಳನ್ನು ಸಂತೃಪ್ತಿ ಪಡಿಸಿ ಸಂತೋಷಗೊಳ್ಳುವುದನ್ನು ಕಾಣಬಹುದು ಎಂದು ಡಾ. ಎಸ್. ಮೋಹನ್ ತಮ್ಮ ನಾಗಾರಧನೆ ಪರಂಪರೆ-ಸ್ಥಿತ್ಯಂತರಗಳು ಕೃತಿಯಲ್ಲಿ ಬರೆದಿದ್ದಾರೆ. ಜನರ ಸಂಕಷ್ಟ ಪರಿಹಾರಕ್ಕಾಗಿ, ನಾಡಿನ ಸುಭಿಕ್ಷೆಗಾಗಿ, ದೈವಗಳ ತೃಪ್ತಿಗಾಗಿ ಮೊಗೇರರು ನಡೆಸುವ ತಂಬಿಲದಂತಹ ಮಂಜ ಕ್ರಮವನ್ನು ಮಹಾ ನಿವಾರಣ ತಂತ್ರವೆಂದು ಕಡವ ಶಂಭು ಶರ್ಮರು ತುಳುನಾಡು ದೇಶ-ಭಾಷಾ ವಿಚಾರವು ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಮಂಜ, ತನು ತರ್ಪಣದಂತಹ ತುಳುನಾಡಿನ ಮೂಲ ನಿವಾಸಿಗಳ ಆರಾಧನಾ ವಿಧಾನಗಳಿಗೆ ಸಹಸ್ರಾರು ವರ್ಷಗಳ ಐತಿಹ್ಯವಿದೆ ಎಂಬುದನ್ನು ಸಂಶೋಧಕರು ಆಧಾರ ಸಹಿತ ದಾಖಲಿಸಿದ್ದಾರೆನಾಗರ ಹಾವುಗಳು ಶೀತ ರಕ್ತ ಪ್ರಾಣಿಗಳು. ಅವು ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಮಾತ್ರ ಬದುಕುವುದನ್ನು ತುಳುನಾಡಿನ ಮಣ್ಣಿನ ಮಕ್ಕಳು ಚೆನ್ನಾಗಿ ಅರ್ಥಮಾಡಿಕೊಂಡು, ಕರಾವಳಿ ಪ್ರದೇಶವಾದ ತುಳುನಾಡಿನಲ್ಲಿ ತನುತರ್ಪಣಕ್ಕೆ ಬೇಸಗೆಯೇ ಸೂಕ್ತ ಕಾಲವೆಂದು ತಿಳಿದು ಬೇಸಗೆಯಲ್ಲೇ ನಾಗರ ಪಂಚಮಿ (?!)’ ಆಚರಿಸುತ್ತಿರುವು ದರಲ್ಲಿ ಔಚಿತ್ಯವಿದೆ ಎಂದು ಜಾನಪದ ವಿದ್ವಾಂಸ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ನಾಗ ಬೆರ್ಮೆರ್ ತುಳು ಕೃತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೃಷಭ ಮಾಸದ ಆದ್ಯ ಗುರುವಾರ ಅಭಿಷೇಕ:-ತುಳುವರ ಪ್ರಥಮ ತಿಂಗಳು ಪಗ್ಗು’ (ಎಪ್ರಿಲ್) ಕಳೆದು ಬರುವ ಎರಡನೇ ತಿಂಗಳಾದ ಬೇಸ್ಯ (ಮೇ) ಮಾಸದ ಪ್ರಥಮ ಗುರುವಾರದಂದು ಪ್ರತಿವರ್ಷ ಮೂಲ್ದೊಟ್ಟು ಬನದಲ್ಲಿ ತನುತರ್ಪಣ ಜರಗುತ್ತದೆ. ವರ್ಷದ ದಿನ ಮಾತ್ರ ನಾಗಬನಕ್ಕೆ ತನು ಹೊಯ್ಯಲು ತೆರಳುತ್ತಾರೆ. ಉಳಿದ ದಿನಗಳಲ್ಲಿ ಬನಕ್ಕೆ ಪ್ರವೇಶವಿಲ್ಲ. ಅನಾದಿ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಈಗಲೂ ಅದೇ ರೀತಿ ಪಾಲಿಸಿಕೊಂಡು ಬರುತ್ತಿದ್ದಾರೆ.
ಬನದ ಇತಿಹಾಸ:-ಕರ್ನಾಟಕದ ಉಡುಪಿ ಜಿಲ್ಲೆಯ ಶಿರ್ವ-ಮಂಚಕಲ್ ಸಮೀಪದ ಕುತ್ಯಾರು ಮಾಗಣೆಯ ಮೂಲದ ಬೆಟ್ಟುವಿನಲ್ಲಿದೆ ನಾಗ ಬನ. ಸಣ್ಣ ತೋಡು ಕಳೆದು ಸಿಗುವ ಗದ್ದೆಗಳ (ಬೈಲು) ಬದಿಯಲ್ಲೇ ಎತ್ತರ ಪ್ರದೇಶದಲ್ಲಿರುವ ನಾಗ ಬನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಮೊಗೇರರ ಆರಾಧ್ಯ ದೈವಗಳಾದ ಮುದ್ದ-ಕಳಲ ಹಾಗೂ ತನ್ನಿಮಾನಿಗಳು ಜನಿಸಿದ ಸ್ಥಳ ಇದೇ ಪ್ರದೇಶವಾಗಿದೆ ಎಂದು ರಾಮಕುಂಜ ಗೋವಿಂದ ಮಾಸ್ತರ್ ಸಂಗ್ರಹಿಸಿರುವ ಮೊಗೇರ್ಲೆ ಪಾಡ್ದನದಲ್ಲಿ ಉಲ್ಲೇಖಗೊಂಡಿರುವುದರಿಂದ ನಾಗಬನಕ್ಕೆ ಮತ್ತೂ ವಿಶೇಷತೆ ಬರುತ್ತಿದೆ. ಯುದ್ಧದಲ್ಲಿ ಹೋರಾಡಿ ಜಯವನ್ನು ತಂದಿತ್ತ ಮೊಗೇರರಿಗೆ ಕುತ್ಯಾರು ಬೈಲ ಸೂಡ ಅರಸರು ಸನ್ಮಾನ ಏರ್ಪಡಿಸಿದ್ದಾಗ, ಬೇಯಿಸಿದ ಅನ್ನದ ಕೊಪ್ಪರಿಗೆಗೆ ಮಂತ್ರಿಯು ವಿಷದ ಕಾಯಿಯನ್ನು ಬೆರೆಸಿದ ಕಾರಣ ಮೊಗೇರರ ಕುಲವೇ ವಿನಾಶದತ್ತ ಸಾಗಿದಾಗ ಮುದ್ದ, ಕಳಲ, ತನ್ನಿಮಾನಿಗ ಮೂರು ಪುಟ್ಟ ಮಕ್ಕಳು ಪವಾಡ ಸದೃಶ ಸಾವಿನಿಂದ ಪಾರಾಗಿ ಬದುಕುಳಿಯುತ್ತಾರೆ. ಇವರನ್ನು ಮೂಲ್ದೊಟ್ಟು ನಾಗಬನದ ಬಳಿ ಅರಸರು ತಂದು ಪೂರ್ವ ಕಾಲದಿಂದಲೇ ಮೊಗೇರರು ನಡೆಸುತ್ತಿದ್ದ ತನುತರ್ಪಣ ವನ್ನು ಬನದಲ್ಲಿ ಅದೇ ರೀತಿ ಮುಂದುವರೆಸಿಕೊಂಡು ಬರುತ್ತೇನೆಂದು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರಂತೆ. ಆನಂತರ ಮಕ್ಕಳು ವೀರರಾಗಿ ಮೆರೆದು, ದೈವಗಳಾಗಿ ತುಳುನಾಡಿನ ಸಾಂಸ್ಕೃತಿಕ ಪ್ರತೀಕಗಳಾಗಿ ಸ್ಥಾನ ಪಡೆದುಕೊಂಡ ಇತಿಹಾಸ. ಇದರಿಂದಾಗಿಯೂ ಮೂಲ್ದೊಟ್ಟು ಬನವು ಕಾರಣಿಕ ಶಕ್ತಿ ಕೇಂದ್ರವಾಗಿ, ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿದೆ.
ಬನದ ಆಚಾರ:-ನಾಗ-ವೃಕ್ಷ-ಜಲಸಂಬಂಧಿ- ಹೀಗೆ ಬನಗಳು ಹುಟ್ಟಿಕೊಂಡಿವೆ. ನಾಗಾರಾಧನೆಯ ಪ್ರಥಮ ಹಂತವೇ ನಾಗಬನ. ಬರೀ ನಾಗನನ್ನು ಪೂಜಿಸುವ ವೈದಿಕೇತರ ಕ್ರಮ ಆದಿಮ  ಸ್ಥಿತಿಯಾಗಿದೆ. ಮೂಲ್ದೊಟ್ಟು ಬನದಲ್ಲಿ ಕಾಂಕ್ರೀಟ್ ಕಟ್ಟೆಯಿಲ್ಲ. ಹಗ್ಗದ ಸಹಾಯದಿಂದ ಎತ್ತರದ ಬನ ಹತ್ತುತ್ತಿರುವ ಇಲ್ಲಿ ಕಾಂಕ್ರೀಟ್ ಮೆಟ್ಟಿಲು ನಿರ್ಮಿಸಲು ಯಾರೂ ಒಪ್ಪುವುದಿಲ್ಲ. ಆದಿ ಬನವನ್ನು ಮೂಲ ರೂಪದಲ್ಲಿಯೇ ನೈಸರ್ಗಿಕವಾಗಿ ಉಳಿಸಿಕೊಂಡಿದ್ದಾರೆ. ವೃಷಭ ಮಾಸದ (ಸಾಮಾನ್ಯವಾಗಿ ಮೇ ೧೪ರ ಆನಂತರ ಸಿಗುವ) ಮೊದಲ ಗುರುವಾರದಂದು ಬೆಳಿಗ್ಗೆಯೇ ಮೊಗೇರರೆಲ್ಲರೂ ಬಂದು ಮೂಲದ ಬೆಟ್ಟುಗುತ್ತು ಮನೆಯಲ್ಲಿ ಬಾಯಾರಿಕೆ ಕುಡಿದು ಬನದ ಕೆಳಗಿರುವ ಗದ್ದೆಯಲ್ಲಿ ಸೇರುತ್ತಾರೆ. ಸಾಧಾರಣ -.೩೦ಕ್ಕೆ ಮೊಗೇರ ಗುರಿಕಾರರೊಂದಿಗೆ ಕೆಲವು ಗಂಡಸರು ಬನದ ಬಳಿಗೆ ಹೋಗಿ ಗದ್ದೆಯ ಬದಿಯಲ್ಲಿ ನಿಂತು ವರ್ಷದ ಬೇಸ್ಯ ತಿಂಗಳ ತನು ತರ್ಪಣಕ್ಕೆ ಬಂದಿದ್ದೇವೆ. ನಾವು ಮಿಂದು ಬರುವ ಹೊತ್ತಿಗೆ ನಿಜ ನಾಗ ಸಂತತಿಗಳು ಬನದಿಂದ ತೆರಳಿ ತನು ತಂಬಿಲಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪ್ರಾರ್ಥಿಸುತ್ತಾರೆ. ಬಳಿಕ ಗಂಡಸರೆಲ್ಲರೂ ಸ್ನಾನಕ್ಕೆ ತೆರಳಿ ಶ್ವೇತ ವಸ್ತ್ರಧಾರಿಗಳಾಗಿ ಬಂದು ಮತ್ತೊಮ್ಮೆ ಪ್ರಾರ್ಥಿಸಿ, ಕೆಲವರು ಬನ ಪ್ರವೇಶಿಸಿ, ಅಲ್ಲಿದ್ದ ತರಗೆಲೆಗಳನ್ನು ಹೊರಹಾಕಿ, ನಾಗನ ಕಲ್ಲುಗಳನ್ನು ನೀರಿನಿಂದ ತೊಳೆಯುತ್ತಾರೆ. ಹೊತ್ತಿನಲ್ಲಿ ಹರಕೆಯಿದ್ದ ಮೂರಿ’ (ನಾಗನ ಬಿಂಬವುಳ್ಳ ಮಣ್ಣಿನ ಮಡಕೆ)ಯನ್ನು ಹೊತ್ತುಕೊಂಡು ಬಂದು ನಾಗನ ಕಲ್ಲಿನ ಬಳಿ ಇಡುತ್ತಾರೆ. ಆಗ ಇತರರೊಂದಿಗೆ ಮಹಿಳೆಯರೂ, ಮಕ್ಕಳೂ ಬನಕ್ಕೆ ಪ್ರವೇಶಿಸುತ್ತಾರೆ. ನಾಗನ ಕಲ್ಲುಗಳನ್ನು ಸ್ವಚ್ಛಗೊಳಿಸಿದ ಬಳಿಕ ಹಾಲು, ಜೇನು, ಸೀಯಾಳ ದಿಂದ ಮೊಗೇರ ಗುರಿಕ್ಕಾರರು ಅಭಿಷೇಕ ಮಾಡುತ್ತಾರೆ. ಬಳಿಕ ನಾಗನ ಎಲ್ಲಾ ಕಲ್ಲುಗಳಿಗೂ ಅರಶಿಣ ಹುಡಿಯನ್ನು ಸಿಂಪಡಿಸುತ್ತಾರೆ. ತದನಂತರ ಸಂಪಿಗೆ, ಕೇದಗೆ, ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಹಿಂಗಾರ ಮೊದಲಾದ ಹೂವುಗಳಿಂದ ಶೃಂಗರಿಸುತ್ತಾರೆ. ಇದಾದ ಮೇಲೆ ತಂಬಿಲ, ಪೂಜೆ ನೆರವೇರಿಸುತ್ತಾರೆ. ಆಮೇಲೆ ಎಲ್ಲರೂ ಸರದಿಯಲ್ಲಿ ನಾಗನ್ನು ಪ್ರಾರ್ಥಿಸಿ ಮೊಗೇರ ಗುರಿಕ್ಕಾರರಿಂದ ತೀರ್ಥ, ಪ್ರಸಾದ ಸ್ವೀಕರಿಸುತ್ತಾರೆ. ಭಕ್ತರ ಹರಕೆ ಸಂದಾಯವಾದ ಬಳಿಕ ಕೊನೆಗೆ ಗುರಿಕ್ಕಾರನು ಪ್ರಾರ್ಥಿಸಿ, ಎಲ್ಲರಿಗಿಂತ ಕೊನೆಗೆ ಗುರಿಕ್ಕಾರನು ಬನದಿಂದ ಇಳಿಯುತ್ತಾರೆ. ಗುರಿಕ್ಕಾರ ಇಳಿದ ನಂತರ ಮತ್ತೆ ಬನ ಹತ್ತಲು ಯಾರಿಗೂ ಅವಕಾಶವಿಲ್ಲ. ಅದು ಇನ್ನು ಬರುವ ವರ್ಷವೇ ಸಾಧ್ಯ.
ಗುರಿಕ್ಕಾರರು ಕಾಸರಗೋಡಿನವರು:-ನೆರೆಯ .. ಜಿಲ್ಲೆಯ ಹೆಚ್ಚಿನ ವಲಯಗಳಲ್ಲಿ ಕಾಸರಗೋಡಿನವರು ಮುಂಚೂಣಿಯಲ್ಲಿರುವಂತೆ ಇಲ್ಲೂ ಕಾಸರಗೋಡಿನವರೇ ಕಾಣುತ್ತಾರೆ. ಮೂಲ್ದೊಟ್ಟು ನಾಗ ಬನದ ಈಗಿನ ಗುರಿಕ್ಕಾರರು ಕಾಸರಗೋಡು ಮೂಲ ದವರು. ಮಂಗಳೂರು ಮಹಾನಗರ ಪಾಲಿಕೆಯ ಜಲ ಪೂರೈಕೆ ವಿಭಾಗದಲ್ಲಿ ಅಧಿವೀಕ್ಷಕರಾಗಿ ನಿವೃತ್ತರಾದ ರವೀಂದ್ರನಾಥ್. ಎಸ್. ಎಂಬವರು ಮೂಲ್ದೊಟ್ಟು ನಾಗ ಬನದಲ್ಲಿ ಗುರಿಕ್ಕಾರರಾಗಿ ಎಂಟನೇ ವರ್ಷ ಪೂರೈಸಿದ್ದಾರೆ. ಇವರ ತಾಯಿ ಮಧೂರು ಸಮೀಪದ ಉಳಿಯ ಮನೆಯ ಕಮಲಾಕ್ಷಿ. ತಂದೆ ಉಡುಪಿ ಶಿರ್ವದ ದಿ. ರಾಮ. ಇವರ ಸಂಬಂಧಿಕರು ಕಾಸರಗೋಡಿನ ನೆಲ್ಲಿಕುಂಜೆಯಲ್ಲಿದ್ದಾರೆ.
ಬನದಿಂದ ನಿರ್ಗಮನ:-ಇಂತಹ ಒಂದು ಐತಿಹಾಸಿಕತೆ ಹೊಂದಿರುವ ಜನಪದರ ಆರಾಧನ ಕೇಂದ್ರದ ಅಧ್ಯಯನಕ್ಕಾಗಿ ಕಳೆದ ವರ್ಷ ಅಮೆರಿಕ ಮಿಚಿಗನ್ ವಿಶ್ವ ವಿದ್ಯಾಲಯದ ಜಾನಪದ ಸಂ ಶೋಧನಾ ವಿದ್ಯಾರ್ಥಿನಿ ಬಂದಿದ್ದರು. ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯರು ಬಂದು ಇಲ್ಲಿನ ನಿಸರ್ಗ ಆರಾಧನೆಯ ಕುರಿತು ಅಧ್ಯಯನ ನಡೆಸಿದ್ದಾರೆ. ಕೆಲವು ವರ್ಷಗಳಿಂದ ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯು ಮೂಲ್ದೊಟ್ಟು ನಾಗಬನಕ್ಕೆ ಪುಣ್ಯ ಯಾತ್ರೆ ಕೈಗೊಳ್ಳುತ್ತಿದೆ. ನಾಗಾ ರಾಧನೆಯ ಪ್ರಮುಖ ಉದ್ದೇಶವೆಂದರೆ ಕೃಷಿ ಸಮೃದ್ಧಿ, ಸಂತಾನ ಪ್ರಾಪ್ತಿ, ದೈಹಿಕ ವ್ಯಾಧಿಗಳ ನಿವಾರಣೆ. ಕೀಟ, ಇಲಿ ಭಕ್ಷಕವಾದ ನಾಗಗಳು ಕೃಷಿಗೆ ಸಹಕಾರಿಯಾಗಿ, ನಾಗ-ಭೂಮಿ ಸಂಬಂಧ ನಮ್ಮಲ್ಲಿ ಗಾಢವಾಗಿ ಬೇರೂರಿದೆ. ನಾಗ ಬನಗಳು ನೀರಿಂಗಿಸಿ, ಅಂತರ್ಜಲ ಮಟ್ಟವನ್ನು ಪುನಶ್ಚೇತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಮಳೆಗಾಲ ಆರಂಭವಾಗುವ ಅಲ್ಪ ಮುನ್ನ ಆಚರಿಸುವ ಮೊಗೇರರ ತನುತರ್ಪಣದಲ್ಲಿ ಹೊಯ್ಯುವ ಎಳನೀರು, ಹಾಲು, ಜೇನು, ಅರಶಿಣದ ಮೂಲಕ ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ, ಕಬ್ಬಿಣದಂಶ ಮೊದಲಾದ ನೈಸರ್ಗಿಕ ಔಷಧೀಯ ಅಂಶಗಳು ಬನದ ಮಣ್ಣನ್ನೇ ಸೇರಿ ಅಲ್ಲಿನ ಗಿಡ ಮರಗಳು ದಟ್ಟವಾಗಿ ಬೆಳೆಯಲು ಪೋಷಕಾಂಶ ನೀಡು ತ್ತಿವೆ. ಹೀಗೆ ಮಣ್ಣಿನ ಮಕ್ಕಳ ಪ್ರತಿ ಆಚರಣೆಯಲ್ಲೂ ಭೂಮಾತೆಯ ಒಳಿತಿಗಾಗಿ ಅರ್ಪಣೆ ಇದೆ ಎಂಬ ಸತ್ಯ ಮೂಲ್ದೊಟ್ಟು ನಾಗಬನದ ತನು ತರ್ಪಣೆಯಿಂದ ಅರ್ಥವಾಗುತ್ತಿದೆ.




ಹೀಗಾಗಿ ಲೇಖನಗಳು ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ

ಎಲ್ಲಾ ಲೇಖನಗಳು ಆಗಿದೆ ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ ಲಿಂಕ್ ವಿಳಾಸ https://dekalungi.blogspot.com/2017/05/blog-post_63.html

Subscribe to receive free email updates:

0 Response to "ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿರುವ ಮೂಲ್ದೊಟ್ಟು ನಾಗಬನ"

ಕಾಮೆಂಟ್‌‌ ಪೋಸ್ಟ್‌ ಮಾಡಿ