ಶೀರ್ಷಿಕೆ : ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ
ಲಿಂಕ್ : ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ
ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ
ಕೊಪ್ಪಳ ಮೇ. 20 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಅನ್ನ ಭಾಗ್ಯ ಯೋಜನೆಯಿಂದ ಬಡವರು ಮೂರೊತ್ತು ನೆಮ್ಮದಿಯಿಂದ ಊಟ ಮಾಡುವಂತಾಗಿದೆ. ಯೋಜನೆಯಡಿ ಅಕ್ಕಿ, ಗೋಧಿಯ ಜೊತೆಗೆ ಜೋಳವನ್ನೂ ನೀಡಿದರೆ ತುಂಬಾ ಒಳಿತಾಗಲಿದೆ ಎಂದು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನದಾಳದ ಮಾತನ್ನು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಇವರ ಸಹಯೋಗದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಜನ-ಮನ ಕಾರ್ಯಕ್ರಮದಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿ ಮಲಿಯವ್ವ ಮಾದರ್ ವ್ಯಕ್ತಪಡಿಸಿದ ಅಭಿಪ್ರಾಯವಿದು.
ಅನ್ನಭಾಗ್ಯ ಯೋಜನೆಯಿಂದ ಯಾರೂ ಕೂಡ ಹಸಿವಿನ ತೊಂದರೆ ಎದುರಿಸುತ್ತಿಲ್ಲ. ಬಡವರು ಅನ್ನಕ್ಕಾಗಿ ಯಾರ ಮುಂದೆಯೂ ಕೈಚಾಚದೆ ಮೂರೊತ್ತು ನೆಮ್ಮದಿಯಿಂದ ಊಟ ಮಾಡುವಂತಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಜೊತೆಗೆ ಜೋಳವನ್ನು ನೀಡಿದಲ್ಲಿ, ತುಂಬ ಅನುಕೂಲವಾಗಲಿದೆ ಎಂದು ಮಲಿಯವ್ವ ಎನ್ನುವವರು ಅಭಿಪ್ರಾಯಪ್ಟರೆ, ಇನ್ನೋರ್ವ ಫಲಾನುಭವಿ ಸಿದ್ದಪ್ಪ ಎಂಬುವವರು, ಯೋಜನೆಯಡಿ ಅಕ್ಕಿ, ಬೇಳೆ ಹಾಗೂ ಸಾಂಬಾರು ಪದಾರ್ಥಗಳನ್ನೂ ಸಹ ಸರ್ಕಾರ ನೀಡಲಿ ಎಂದಾಗ, ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು, ಫಲಾನುಭವಿಗಳ ಕೋರಿಕೆ ಸರಿಯಾಗಿಯೇ ಇದೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿದೆ ಎಂದರು.
ವಿದ್ಯಾಸಿರಿಯಿಂದ ಓದು ಮುಂದುವರೆಯಿತು :
**********ಹೃದಯ ಸಂಬಂಧಿ ರೋಗದಿಂದ ಪ್ರಾಣಾಪಾಯ ಎದುರಿಸುತ್ತಿದ್ದ ತನಗೆ,: ಹಾಸ್ಟೆಲ್ ಸೌಲಭ್ಯ ದೊರಕದ ವಿದ್ಯಾರ್ಥಿಗಳಿಗೆ, ಸರ್ಕಾರ ಪ್ರತಿ ವರ್ಷ 15000 ರೂ. ಗಳ ಸಹಾಯಧನ ನೀಡುವಂತಹ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿರುವುದು ಬಡ ಕುಟುಂಬಗಳ ಮಕ್ಕಳಿಗೆ ವರದಾನವಾಗಿದೆ. ವಿದ್ಯಾಸಿರಿ ಯೋಜನೆಯಿಂದಾಗಿಯೇ ನಮ್ಮ ಶಿಕ್ಷಣ ಇನ್ನೂ ಮುಂದುವರೆದಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಎದುರು ತಮ್ಮ ಮನದಾಳದ ಮಾತುಗಳನ್ನಾಡಿದರು. ಬಡವರು ತಮ್ಮ ಮಕ್ಕಳನ್ನು ಹಾಸ್ಟೆಲ್‍ನಲ್ಲಿರಿಸಿ ಓದಲು ಕಳುಹಿಸುವುದು ಹೆಚ್ಚು. ಹಾಸ್ಟೆಲ್ ಸೌಲಭ್ಯ ದೊರಕದಿದ್ದರೆ, ಶಾಲೆಗೆ ಕಳುಹಿಸದೆ, ದುಡಿಯಲು ಹಚ್ಚುತ್ತಾರೆ. ಇದರಿಂದ ಅಂತಹ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತದೆ. ಸರ್ಕಾರ ಪ್ರತಿ ವರ್ಷ 15000 ರೂ. ಗಳ ಸಹಾಯಧನ ನೀಡುವಂತಹ ವಿದ್ಯಾಸಿರಿ ಯೋಜನೆಯಿಂದಾಗಿಯೇ ನಮ್ಮ ಶಿಕ್ಷಣ ಇನ್ನೂ ಕೂಡ ಮುಂದುವರೆದಿದೆ. ಇಂತಹ ಮಹತ್ವದ ಯೋಜನೆ ನೀಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.
ವಾರದ 06 ದಿನವೂ ಹಾಲು ನೀಡಿ :
******** ಕ್ಷೀರಭಾಗ್ಯ ಯೋಜನೆಯ ಫಲಾನುಭವಿ ಮಕ್ಕಳು, ಸಚಿವರೊಂದಿಗೆ ಮಾತನಾಡಿ, ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಮೂರು ದಿನ ಹಾಲು ನೀಡುತ್ತಿತ್ತು. ಇದೀಗ ವಾರಕ್ಕೆ 05 ದಿನ ಹಾಲು ನೀಡಲಾಗುವುದು ಎಂದಿದ್ದಾರೆ. ಐದು ದಿನದ ಬದಲಿಗೆ ವಾರದ 06 ದಿನವೂ ಹಾಲು ನೀಡಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಈ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೂ ಯೋಜನೆ ವಿಸ್ತರಿಸಿ :
************* ಉಚಿತ ಶೂ ಮತ್ತು ಸಾಕ್ಸ್ ವಿತರಣೆ, ಉಚಿತ ಸಮವಸ್ತ್ರ ಸೇರಿದಂತೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಹಲವು ಸವಲತ್ತುಗಳನ್ನು ಅನುದಾನಿತ ಶಾಲೆ ಮಕ್ಕಳಿಗೂ ಕೂಡ ವಿಸ್ತರಿಸಬೇಕ ಎಂದು ವಿದ್ಯಾರ್ಥಿ ಶ್ರೀಹರಿ ಸುಬೇದಾರ ಸಚಿವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಬೇಕು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಸವಲತ್ತು ದೊರೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಮಾತ್ರ ಈ ಯೋಜನೆ ಜಾರಿಗೆ ತರಲಾಗಿದೆ. ಖಾಸಗಿ ಶಾಲೆಗಳಿಗೆ ಈ ಯೋಜನೆ ವಿಸ್ತರಿಸುವುದು ಕಷ್ಟಸಾಧ್ಯ ಎಂದರು.
ರಾಜೀವ್ ಆರೋಗ್ಯ ಭಾಗ್ಯ :
*********** ಹೃದಯ ಸಂಬಂಧಿ ರೋಗದಿಂದ ಪ್ರಾಣಾಪಾಯ ಎದುರಿಸುತ್ತಿದ್ದ ತನಗೆ, ರಾಜೀವ್ ಆರೋಗ್ಯ ಭಾಗ್ಯ, ಮರು ಹುಟ್ಟು ನೀಡಿದೆ. ಯೋಜನೆಯಡಿ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸುತ್ತಿದ್ದು, ಔಷಧಿಗಳ ವೆಚ್ಚ ಭರಿಸಲು ಸಹ ಸರ್ಕಾರ ನೆರವಾದಲ್ಲಿ, ಯೋಜನೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಚೆನ್ನಪ್ಪ ಎಂಬುವವರು ಮಂತ್ರಿಗಳಿಗೆ ಮನವಿ ಮಾಡಿದರು. ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂತ್ರಿಗಳು ಉತ್ತರಿಸಿದರು.
ಕೃಷಿಭಾಗ್ಯ :
****** ಕೃಷಿ ಭಾಗ್ಯ ಯೋಜನೆ ಬಗ್ಗೆ ನಡೆದ ಸಂವಾದದಲ್ಲಿ ರೈತರು ಕೃಷಿಹೊಂಡ ಯೋಜನೆಯಿಂದಾಗಿ ಅಂತರ್ಜಲ ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕೃಷಿ ಯಂತ್ರಧಾರೆ ಯೋಜನೆ ಜಾರಿಯಿಂದಾಗಿ, ಹೊಲದಲ್ಲಿ ಬಿತ್ತನೆ ಕಾರ್ಯ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳು ನೀಡುತ್ತಿರುವುದರಿಂದ, ಬಡ ರೈತರಿಗೆ ಹೆಚ್ಚು ಉಪಯೋಗವಾಗುತ್ತಿದೆ ಎಂದು ರೈತ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು. ಪಶು ಭಾಗ್ಯ ಯೋಜನೆಯಿಂದ ಹಸುಗಳನ್ನು ಸಾಕಿಕೊಂಡು ತಮ್ಮ ಕುಟುಂಬ ಹೈನುಗಾರಿಕೆ ಮಾಡುತ್ತಿದೆ. ಯೋಜನೆಯ ಕಾರಣದಿಂದ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ ಎಂದು ಫಲಾನುಭವಿ ನಾಗಮಣಿ ಅಭಿಪ್ರಾಯಪಟ್ಟರು.
ಉಳಿದಂತೆ ಮನಸ್ವಿನಿ ಹಾಗೂ ಮೈತ್ರಿ ಯೋಜನೆಯ ಫಲಾನುಭವಿಗಳು ಮಾಸಾಶನ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಬಿದಾಯಿ ಯೋಜನೆ (ಶಾದಿಭಾಗ್ಯ), ಹರೀಶ್ ಸಾಂತ್ವನ ಯೋಜನೆಯ ಫಲಾನಭವಿಗಳು ಯೋಜನೆಯಿಂದ ತಮಗಾದ ಒಳಿತಿನ ಬಗ್ಗೆ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಫಲಾನುಭವಿಗಳು ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ವ್ಯಕ್ತಪಡಿಸಿದ ಅನಿಸಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ಈಡೇರಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಹಲವು ಯೋಜನೆಗಳ ಫಲಾನುಭವಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ
ಎಲ್ಲಾ ಲೇಖನಗಳು ಆಗಿದೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ ಲಿಂಕ್ ವಿಳಾಸ https://dekalungi.blogspot.com/2017/05/blog-post_494.html
0 Response to "ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ"
ಕಾಮೆಂಟ್ ಪೋಸ್ಟ್ ಮಾಡಿ